ರಸಭರಿತ ಹಣ್ಣಿನಂಥ ಕಣ್ಣುಗಳು ಹೊಳೆಯುತ್ತಿದ್ದ
ಅವನ ಅಪೂರ್ವ ರುಂಡವನ್ನು
ನೋಡಲಾರೆವು. ಆದರೂ

ಈಗಷ್ಟೆ ತುಸು ಇಳಿದ ಅವನ
ನಿಮ್ನ ನೋಟದ ದಿಟ್ಟ ಏಕಾಗ್ರತೆ
ಅವನ ಭಗ್ನ ಮುಂಡದಲ್ಲಿ
ಹೊತ್ತಿಸಿದ ಲಾಂದ್ರದ ಹಾಗೆ ಒಳಹೊಳಪಾಗಿ
ಬೆಳಗುತ್ತಿದೆಯಾಗಿ
ನೀನು ಮುಂಬಾಗಿದ ಆ ಉಬ್ಬಿದೆದೆ ಕಂಡು ಹೀಗೆ
ಅವಾಕ್ಕಾದ್ದು.

ವಿರಮಿಸಿದ ಕುಂಡೆಯಲ್ಲಿ ತೊಡೆಗಳಲ್ಲಿ ಅರಳುವ ಹರುಷ
ಪುಂಸತ್ವ ಮೆರೆಯುವ ನಿಗೂಢ ಕೇಂದ್ರಕ್ಕೆ ತುಯ್ಯುವುದರಿಂದಲೇ
ಶಕ್ತಿ ಹುಯ್ಯುತ್ತ ಇಳಿದಿರುವ ಸ್ನಗ್ಧ ಭುಜಗಳ ಕೆಳಗೆ
ಇದು ಬರಿ ಶಿಲೆ , ಮುಖಹೀನ ಎನ್ನಿಸುವುದಿಲ್ಲ.

ಸ್ವಸ್ಥ ಇದ್ದೂ
ಕಾಡು ಪ್ರಾಣಿಯ ಉಣ್ಣೆಯಂತೆ ಹೊಳೆಯುತ್ತಲೂ
ನಕ್ಷತ್ರದಂತೆ ತನ್ನ ಸೀಮೆಯ ಎಲ್ಲ ಅಂಚುಗಳಿಂದ ಸ್ಫೋಟಿಸುತ್ತಲೂ
ಇರುವ ಇಲ್ಲಿ
ನಿನ್ನನ್ನು ಕಂಡು ಬಿಡದಂಥ ಸ್ಥಳವೇ ಇಲ್ಲ

ಈಗ ನಿನ್ನ ಬದುಕೇ ಬದಲಾಗಬೇಕು.

ಇಲ್ಲಿ ಕವಿ ಮಾತ್ರ ಪ್ರತಿಮೆಯನ್ನು ನೋಡುವುದಲ್ಲ. ಭಗ್ನವಾಗಿದ್ದರೂ ತನ್ನ ಪ್ರಾಣಧಾರಣೆ ಮಾಡಿದ ಪ್ರತಿಮೆ ಕವಿಯನ್ನೇ ನೋಡುತ್ತದೆ. ಮೃಗಶಾಲೆ ಪದ್ಯ ನೆನಪಾಗುತ್ತದೆ. ಇದೊಂದು ಅಪ್ಪಟ (?) ಅದ್ವೈತಾನುಭವದಂತಿದೆ.