(ಡಿಸೆಂಬರ್ ೪, ೧೮೭೫ – ಡಿಸೆಂಬರ್ ೨೯, ೧೯೨೬)

ಇಪ್ಪತ್ತನೆಯ ಶತಮಾನದ ಜರ್ಮನ್‌ಭಾಷೆಯ ಶ್ರೇಷ್ಠ ಕವಿಗಳಲ್ಲಿ ರೈನರ್ ಮಾರಿಯಾ ರಿಲ್ಕೆಯೂ ಒಬ್ಬನೆಂದು ಪರಿಗಣಿಸಲಾಗಿದೆ. ರೆನೆ ಕಾರ್ಲ್ ವಿಲ್ಹೆಲ್ಮ್ ಜೋಸೆಫ್‌ಮರಿಯಾ ಇವನ ಕಾವ್ಯನಾಮ. ಪ್ರಾಗ್‌ನ ಜರ್ಮನ್‌ಮಾತೃಭಾಷೆಯ ಕುಟುಂಬದಲ್ಲಿ ಜೋಸೆಫ್‌ರಿಲ್ಕೆ ಮತ್ತು ಸೋಫಿಯಾರ ಮಗನಾಗಿ ಹುಟ್ಟಿದ. ಬಾಲ್ಯದಲ್ಲಿಯೇ ತಾಯಿ ಮತ್ತು ತಂದೆಯ ವಿಚ್ಚೇದನದಿಂದಲೂ ಅನಾರೋಗ್ಯದಿಂದಲೂ ವ್ಯವಸ್ಥಿತ ವಿದ್ಯಾಭ್ಯಾಸವನ್ನು ಪಡೆಯಲಾಗಲಿಲ್ಲದಿದ್ದರು ಆನಂತರ ಸಾಹಿತ್ಯ, ಇತಿಹಾಸ ಮತ್ತು ತತ್ವಶಾಸ್ತ್ರಗಳನ್ನು ಆಳವಾಗಿ ಅಭ್ಯಾಸ ಮಾಡಿದ. ಚಿಕ್ಕ ವಯಸ್ಸಿನಲ್ಲಿಯೇ ತಾನು ಬದುಕುವುದಾದರೆ ಕವಿಯಾಗಿ ಮಾತ್ರ ಎಂದು ನಿರ್ಧರಿಸಿದ್ದ.

೧೮೯೭ರಲ್ಲಿ ನಿಚ್ಸೆಯ ಶಿಷ್ಯೆಯಾಗಿದ್ದ, ತನಗಿಂತಲೂ ದೊಡ್ಡವಳಾದ, ವಿವಾಹಿತಳಾಗಿದ್ದಲೂ ಆಂಡಿಯಾಸ್‌ಸಲೋಮಿಯ ಪರಿಚಯವಾಗಿ ಅವಳನ್ನು ಪ್ರೀತಿಸಿತೊಡಗಿದ. ಮುಂದೆ ಮಹಾಶಿಲ್ಪಿಯೆಂದೇ ಪ್ರಖ್ಯಾತನಾದ ರೋಡಿನ್‌ನ ಪ್ರಭಾವದಿಂದ ರಿಲ್ಕೆ ತನ್ನ ದೃಷ್ಟಿಕೋನವನ್ನೇ ಬದಲಾಯಿಸಿಕೊಳ್ಳುತ್ತಾನೆ.

ಮಾಲ್ಟ ಲೌರಿಡ್ಸ್ ಬ್ರಿಗ್ಗನ ಟಿಪ್ಪಣಿ ಪುಸ್ತಕ, ಯುವಕವಿಗೆ ಬರೆದ ಪತ್ರಗಳು, ಆರ್ಪಿಯಸ್‌ಗೆ ಸಾನೆಟ್ಟುಗಳು, ದುಯಿನೋ ಎಲಿಜೀಸ್‌ಅವನ ಮುಖ್ಯ ಕೃತಿಗಳು.

ನಮ್ಮ ಕಾಲದ ಅತ್ಯುತ್ತಮ ಚಿಂತಕರೂ ಕವಿ ಹೃದಯದ ತಾಯ ಪ್ರೀತಿಯ ಅನಂತಮೂರ್ತಿಯವರು ರಿಲ್ಕನ ಜಗತ್ತಿಗೆ ಮಾಡಿರುವ ಅಪರೂಪದ ಪ್ರವೇಶ ಈ ಪುಸ್ತಕ. ಇದು ಕೇವಲ ರಿಲ್ಕೆಗೆ ಪ್ರವೇಶ ಮಾತ್ರವಾಗಿರದೆ, ಅನುವಾದ ಸಾಹಿತ್ಯ, ಆಧುನಿಕತೆ, ಪರಂಪರೆ ದಾರ್ಶನಿಕತೆಗಳಿಗೂ ಹೊಸಬಗೆಯ ಆಖ್ಯಾನ ವ್ಯಾಖ್ಯಾನವಾಗಿದೆ.