ನಾನು ನಡೆಯುವ ರಸ್ತೆಯ ಈ ಬಾಂದಿನಿಂದಲೇ ದೂರದ ಆ ತುದಿಯಾಚೆಯ ಆಚೆ
ಹರಿಯುವ ಕಣ್ಣೆ ತಾನಾಗಿ ಗುರುತಿಸುವ ಸೂರ್ಯ ಬೆಳಗುವ ಬೆಟ್ಟ
ನನ್ನ ಹಿಡಿತಕ್ಕೆ ಸಿಗದು; ಆದರೆ ನಾನೇ ಅದಕ್ಕೆ ಸಿಕ್ಕಿರುವೆ
ಅಂತರ್ಯಾಮಿಯಾದ ಅದರ ಒಳಬೆಳಕ ಪ್ರಭೆಗೆ.

ದೂರದ ಸವಿತೃ ಎಟುಕದಿದ್ದರು ಕೂಡ, ಇರುವಂತೆಯೇ ಇನ್ನೊಂದಾಗಿಬಿಡುವಂತೆ
ನಮ್ಮನ್ನು ಹೊರಳಿಸಿ, ಬದಲಾಗಿಬಿಟ್ಟ ನಮ್ಮ ಅಜ್ಞಾತದಲ್ಲಿ
ನಮ್ಮಿಂದೇಳುವ ಅಲೆ ಅಲೆ ಸೆಳೆಯ ಸನ್ನೆಗೆ
ಅಲ್ಲಿಂದಲೂ ಅಲೆ ಅಲೆ ಎದ್ದು ಸೆಳೆಯುವ ಸನ್ನೆ

ಗೊತ್ತಾಗುವುದು ಮಾತ್ರ ಮುಖದ ಮೇಲೆ
ಬೀಸುವ ಗಾಳಿ

(ಇದನ್ನು ಅನುವಾದಿಸುವಾಗ ನನಗೆ ಗೋಪಾಲಕೃಷ್ಣ ಅಡಿಗರ ‘ಮೋಹನ ಮುರಳಿ’ ಪದ್ಯ ನೆನಪಾಯಿತು. ಇದೊಂದು ಅಕಸ್ಮಿಕ. ನಾನು ಬಲ್ಲಂತೆ ರಿಲ್ಕೆ ಕವಿ ಆ ಕಾಲದಲ್ಲಿ ಯಾರಿಗೂ ಗೊತ್ತಿದ್ದಂತೆ ತೋರುವುದಿಲ್ಲ)