ಕುವಳಯ – ಕನೈದಿಲೆ

ಕುಶಲಿಕೆ – ನೈಪುಣ್ಯ

ಕೂಪ – ಬಾವಿ

ಕೂರಿತು – ಹರಿತವಾದ

ಕೂರ್ಮೆ – ಪ್ರೀತಿ

ಕೂಸು – ಮಗು,ಮಗಳು, ವಿವಾಹಕನ್ಯೆ

ಕೃತ್ನ – ಪೂರ್ಣವಾಗಿ

ಕೆಂದು – ಮಲಗು

ಕೆತ್ತು – ಅಲುಗು, ನಡುಗು

ಕೆವ್ಮ್ಮಗೆ, ಕೆಮ್ಮನೆ – ಸುಮ್ಮನೆ

ಕೆಯ್ – ಹೊಲ, ಬತ್ತದ Uದ್ದೆ

ಕೆಯ್ಯಿಗು – ಮಿತಿಮೀರು

ಕೆರಕು – ತುರಿ, ಚರ್ಮರೋಗ

ಕೆಳದಿ – ಗೆಳತಿ

ಕೇರ್ – ಗೋಡೆ

ಕೈಗೆಯ್ – ಸಿಂಗರಿಸು

ಕೊಂಕು – ವಕ್ರತೆ

ಕೊತಂ – ಒನಗೆ, ಬರ್ಚಿ

ಕೊರಸು – ಒಂದು ಬಗೆಯ ಹಕ್ಕಿ

ಕೊಳ್ಗುಳ – ಯುದ್ಧ, ಯುದ್ಧಭೂಮಿ

ಕೋಡು – ಶೀತವಾಗು, ಕೊಂಬೆ

ಕೋಣ್ – ಮೂಲೆ

ಕೋರಕಿತ – ಟಿಸಿಲೊಡೆದ

ಕೋವಣ – ಕೌಪೀನ

ಕೋೞ್ಕಳ್ – ಕೊಂಬುಗಳು

ಕೋಳ್ಪಡು – ಸುಲಿಗೆಗೆ ಒಳಗಾಗು

ಕ್ರಕಚ – ಗರಗಸ

ಕ್ರಮುಕ – ಅಡಕೆ

ಕ್ಷಪಣಕ – ಜೈನಸಂನ್ಯಾಸಿ

ಖನನ – ತೋಡುವುದು

ಖಳಾಂತಕ – ದುಷ್ಟನಾದ ಯಮ

ಖಾಸ – ಕೆಮ್ಮು

ಗಂಡ – ಗಂಡಮಾಲೆ

ಗಂಡಗುಣ – ಪೌರುಷ

ಗಂಧಹಸ್ತಿ – ಸೊಕ್ಕದ ಆನೆ

ಗಳಂತಿಗೆ – ನೀರು ತುಂಬುವ ಕಳಶ; ಹೂಜಿ

ಗಾಡಿ – ಸೌಂದರ್ಯ

ಗಾಮುಂಡ – ಗೌಡ

ಗಾವುಂಡಿ – ಗೌಡಿ

ಗಾಲಿಗೊಳ್ – ಗಾಳಿಯ ಮೂಲಕ ವಾಸನೆ ತಿಳಿ

ಗಿಣ್ಣ – ಗಿಣ್ಣಿನ ಹಾಲು ; ಹಸು ಈದ

ಹೊಸದರಲ್ಲಿ ಕೊಡುವ ಹಾಲು

ಗುಂಡಿಗೆ – ಕಮಂಡಲ

ಗುಂಡಿತು – ಆಳವಾ

ಗುಜ್ಜಿ – ಕುಳ್ಳಿ

ಗುಡ್ಡ – ಶಿಷ್ಯ

ಗೃಧ್ರ – ಹದ್ದು

ಗೆಂಟಱ್ – ದೂರ

ಗೊಟ್ಟಿ – ಗೋಷ್ಠಿ ; ಜೊತೆ

ಗೊಡ್ಡ – ಚೇಷ್ಟೆ

ಗೋಮಂಡಳ – ಹಸುಗಳ ಮಂದೆ

ಗೋಶೀರ್ಷ – ಒಂದು ಬಗೆಯ ಶ್ರೀಗಂಧ

ಗೋಸಣೆ – ಡಂಗುರ (ಘೋಷಣೆ)

ಗ್ರೈವೇಯಕ – ಕೊರಳ ಮಾಲೆ; ಆನೆಯ ಕೊರಳ ಸರಪಳ

ಕೆರ್ಪು – ಎಕ್ಕಡ

ಘನರವ – ಗುಡುಗಿನ ಶಬ್ದ

ಘುಟಿಕಾ – ಗುಳಿಗೆ

ಘೃತ – ತುಪ್ಪ

ಚದುರಸಿಗೆ – ನಾಲ್ಕು ಮೂಲೆಯುಳ್ಳ ವಸ್ತ್ರ (ಚತುರಶ್ರಕ)

ಚರಪುರಷ – ದೂತ

ಚರಮಪಾಳಿ – ಕೊನೆಯ ಕರ್ಮಬಂಧ

ಚರಿಗೆ – ಭಿಕ್ಷೆ

ಚೌಕಿ – ಅಂಗಳ

ಚಾತುರ್ದಂತಬಳ – ಚತುರಂಗಸೇನೆ

ಚಾರು – ಮನೋಹರ

ಚಿಕ್ಕುಟ – ಚಿಗಟ, ಸೊಳ್ಳೆ

ಚೋಳಂಗಿ – ರವಿಕೆ ; ರವಿಕೆ ಶಾಸ್ತ್ರ

ಛದ – ಹೊದಿಕೆ

ಛರ್ದಿ – ವಾಂತಿ; ಭೇದಿ

ಛಿದ್ರ – ರಂಧ್ರ

ಛಿದ್ರಿಸು – ವಂಚಿಸು

ಛೇದನ – ಕತ್ತರಿಸುವಿಕೆ

ಜಂಬೀರ – ನಿಂಬೆ

ಜಡಿ – Uದರಿಸು

ಜಯನಶಾಲೆ – ಆಯುಧಾಗಾರ

ಜಾತಿ – ಜನ್ಮ

ಜಾವ – ಯಾಮ ; ೭ ಳಿ ಗಳಿಗೆ ಕಾಲ

ಜೀವವಿದ್ಧ – ಜೀವಂತ ಶಿಲ್ಪಪ್ರತಿಮೆ

ಜೀರ್ಕೊಳವಿ – ಪಿಚಕಾರಿ

ಜೂದು – ಜೂಜು

ಜೃಂಭಿನಿ – ಪ್ರತ್ಯಕ್ಷವಾಗುವುದು ಮತ್ತು ಮಾಯವಾಗುವುದು

ಜೋಗು – ಯೋಗ

ಝಣಂಬ – ಮೇಲುಹೊದಿಕೆ

ಝಲ್ಲರಿ – ಒಂದು ವಾದ್ಯ

ಡಂಬಿಸು – ಮೋಸಮಾಡು

ಡಿಂಡೀರ – ನೊರೆ

ತಗುಳ್ – ಆರಂಬಿಸು; ಒತ್ತಾಯಪಡಿಸು ;

ಅನುಸರಿಸು; ಸೇರಿಸು

ತಡಿ – ದಡ

ತಣಿಪು – ತೃಪ್ತಿಪಡಿಸು

ತನ್ನನಿಕ್ಕು – ತನ್ನನ್ನು ಬೀಳಿಸು ; ವಂದಿಸು

ತಮಾಳ – ಹೊಂಗೆಮರ

ತಮ್ಮಿಮ್ಮರ್ವ್ವರ್ – ತಾವಿಬ್ಬರೂ

ತಱಸಲ್ – ನಿಶ್ಚಯಿಸು

ತವಸು – ನಾಶಮಾಡು

ತವು – ಕ್ಷಯವಾಗು; ನಾಶವಾಗು

ತವನಿ – ಅಕ್ಷಯವಾದ ನಿ

ತಸ್ಕರ – ಚೋರ

ತಳಾಱ – ನಗರದ ರಕ್ಷಕ ; ಕೊತವಾಲ

ತಳಿ – ಚಿಮುಕಿಸು

ತಳಿಗೆ – ತಟ್ಟೆ

ತೞ್ಕೈಸು – ಅಪ್ಪು

ತಾಂಗು – ಆಧಾರವಾಗು; ತಡೆ

ತಾಳೋದ್ಘಾಟಿನಿ ವಿದ್ಯಾ – ಬೀಗ ತೆಗೆಯಲು

ಉಪಯೋಗಿಸುವ ಮಂತ್ರವಿದ್ಯೆ

ತಿಂಬಂಡಂ – ತಿನ್ನುವ ಪದಾರ್ಥ

ತಿರಿ – ತೊಳಲು

ತಿರುಡು – ಕದಿ

ತಿರುವಾಯು – ಹೆದೆಯ ಬಾಯಿ

ತಿಳಕ – ಒಂದು ಬಗೆಯ ಹೂವಿನ ಮರ

ತೀವು – ತುಂತು

ತುಂಗ – ಎತ್ತರ

ತುಡುಗೆ – ಆಭರಣ

ತುಯ್ಯಲ್ – ಪಾಯಸ

ತುರಗಾಶ್ವ – ವೇಗವಾಗಿ ಓಡುವ ಕುದುರೆ

ತುರಿಪ – ತ್ವರೆ

ತುಱುಪಟ್ಟಿ – ದನಗಳ ಹಟ್ಟಿ

ತುೞಲ್ – ನಮಸ್ಕಾರ

ತೂಂಕಡು – ನಿದ್ದೆ

ತಂತು – ತೂಬು; ರಂಧ್ರ

ತೂರ್ಯಾಂಗ – ವಾದ್ಯಗಳನ್ನು ಕೊಡುವ ಕಲ್ಪವೃಕ್ಷ

ತೆಕ್ಕನೆ ತೀವಿ – ಭರ್ತಿಯಾಗಿ ತುಂಬಿ

ತೆಗಲೆ – ಎದೆ

ತೇನತೇನ – ಮೇಲೆ ಮೇಲೆ

ತೊಟ್ಟನೆ – ಬೇಗನೆ

ತೊಟ್ಟು – ಪ್ರರಂಭವಾಗಿ, ಮೊದಲಾಗಿ

ತೊಡಂಗು – ತೊಡಗು

ತೊವಲ್ – ತೊಗಲು ; ಚಿಗುರು

ತೊೞಲ್ – ಸುತ್ತಾಡು

ತೊೞ್ತು – ಸೇವಕ ; ಸೇವಕಿ

ತೋರ – ದಪ್ಪ

ತ್ರಸ – ಚಲನವಿರುವ

ತ್ರಸ್ತಾಭಿಭೂತ – ಭಯವಶ

ತ್ರಿಕಾಲಪ್ರಜ್ಞಪ್ತಿ – ಲೋಕಾಕಾರಾದಿಗಳನ್ನು ನಿರೂಪಿಸುವ ಶಾಸಗ್ರಂಥ

ದಂಶ – ಸೊಳ್ಳೆ

ದಾಯ – ಬಹುಮಾನ; ಸಲುಗೆ;ಅವಕಾಶ

ದಾಯಿಗಂ – ದಾಯಾದಿ

ದಾರ – ಹೆಂಡತಿ

ದಾಷ್ಟಿಕ – ಕಚ್ಚಲ್ಪಟ್ಟವ

ದೀವನೀಯ – ಸುಡುವ

ದುರ್ಭಗತ್ವ – ಹೀನಭಾಗ್ಯ

ದುರ್ಧರ – ತಾಳಲಾದಗ

ದುಷ್ಸೈತಂ – ಕೇಡಿಗ

ದೇಸಿಗ – ದಿಕ್ಕಲ್ಲದವನು; ನಿUತಿಕ

ದೇಹಾರ – ದೇವರ ಕೋಣೆ

ದೋರ್ದಂಡ – ಭುಜಾದಂಡ

ದ್ರ್ರವ್ಯ – ಒಂದು ಬಗೆಯ ನಾಣ್ಯ

ದ್ರ್ರವ್ಯ ತಪ – ಕಪಟ ತಪಸ್ಸು

ದ್ರುಮಷಂಡ – ಮರಗಳ ಸಮೂಹ

ಧನದ – ಕುಬೇರ

ಧೃತಿ – ಧೈರ್ಯ – ಸ್ಥಿರತೆ

ನಡಪಾಡು – ಅಡ್ಡಾಡು

ನಡಪು – ಸಾಕು

ನನ್ನಿ – ಸತ್ಯ

ನವಿರು – ಕೂದಲು

ನಾಗ – ಆನೆ; ಹಾವು

ನಾಗ ಠಾಣ – ನಾಗರ ಸ್ಥಾನ

ನಾಗವಲ್ಲಿ – ಮೀಳೆಯದೆಲೆ

ನಾಣಿಲಿ – ಲಜ್ಜೆಯಿಲ್ಲದ

ನಾರಕ – ನರಕಜೀವಿ

ನಾಲಿಬಿರ್ದು – ಉದ್ದನೆಯ ಹಳ್ಳವಾಗಿ

ನಿಗ್ರಹ – ದಂಡನೆ – ಶಿಕ್ಷೆ

ನಿಚ್ಚ – ನಿತ್ಯ

ನಿಟ್ಟೆಲ್ವು – ಉದ್ದವಾದ ಮೂಳೆ

ನಿದಾನ – ಸಂಕಲ್ಪ, ಪ್ರತಿಜ್ಞೆ

ನಿಪಾತಿಸು – ಕೊಲ್ಲು

ನಿಮಿರ್ – ನೆಟ್ಟಗಾಗು

ನಿಯೋಗಿ – ಅಕಾರಿ

ನಿರುತ – ದಿಟ, ನಿಜ

ನಿಱಸು – ಊಟಕ್ಕೆ ನಿಲ್ಲಸು

ನಿUಂಥಯತಿ – ದಿಗಂಬರ ಯತಿ

ನಿರ್ವಾಣ, ನಿರ್ವೃತಿ – ಮೋಕ್ಷ

ನಿರ್ವ್ಭೆಗ – ವಿರಕ್ತಿ

ನಿಶ್ಯಲ್ಯ – ಪಾಪಾಚರಣೆಯಿಲ್ಲದ

ನಿಶ್ರಾವ – ಅನ್ನದ ಗಂಜಿನ ಕೆನೆ

ನಿಷಣ್ಣ – ಕುಳಿತ

ನಿಸ್ಧಿ, ನಿಸಿದಿಗೆ – ಸಮಾ

ನಿಃಶ್ರೇಯಸ – ಮೋಕ್ಷ

ನೀಡಱಂ – ದೀರ್ಘಕಾಲದಿಂದ

ನೀಡುಂ – ಬಹಳ

ನೀರೞ್ಕೆ – ಬಾಯಾರಿಕೆ

ನೀರಿೞ – ಸ್ನಾನಮಾಡು