ನೀರೂಡು – ನೀರು ಕುಡಿಸು

ನೆಗಪು – ಮೇಲೆತ್ತು

ನೆಗೞ್ – ಮೊಸಳೆ

ನೆಗೞ್ತೆ – ಮಾಡಿದುದು, ಕೀರ್ತಿ

ನೆರಂ – ಸಹಾಯ

ನೆರಪು – ಕೂಡಿಹಾಕು

ನೆರವಿ – ಸಭೆ, ಸಮೂಹ

ನೆಱನೆಡೆ – ಮರ್ಮಸ್ಥಾನ

ನೆಱಪು – ಪೂರೈಸು

ನಱೆ – ತುಂಬು, ಸಮರ್ಥನಾಗು

ನೆಱೆಯೆ – ಪೂರ್ಣವಾಗಿ

ನೇತ್ರಪೞ – ನೇತ್ರವೆಂಬ ರೇಷ್ಮೆವಸ್ತ್ರ

ನೇಸಱ್ – ಸೂರ್ಯ

ನೈಮಿತ್ತಿಕ – ಜೋಯಿಸ

ನ್ಯಾಯವಿಸ್ತರ – ತರ್ಕಶಾಸ್ತ್ರ

ಪಂಗು – ಹೆಳವ

ಪಂದರ – ಚಪ್ಪರ

ಪಂದೆ – ಹೇಡಿ

ಪಂದೊವಲ್ – ಹಸಿತೊಗಲು

ಪಗರಣಿಗ – ಪಗರಣ ಎಂಬ ಆಟವಾಡುವವನು

ಪಚ್ಚುಗೊಡು – ಪಾಲು ಮಾಡಿಕೊಡು

ಪಟಹ – ತಮಟೆವಾದ್ಯ

ಪಟ್ಟವರ್ಧನ – ಪಟ್ಟದಾನೆ

ಪಡಿಯಱ – ಪ್ರತೀಹಾರಿ, ದ್ವಾರಪಾಲಕ

ಪಣ್ಣು – ಮಾಡು

ಪದಿರ್ – ಒಗಟೆ, ಗೂಢಾರ್ಥವುಳ್ಳ ಮಾತು

ಪನಸ – ಹಲಸು

ಪಯನ್ – ಹಸು

ಪರಚಕ್ರ – ಶತ್ರುಮಂಡಲ

ಪರದ – ವ್ಯಾಪಾರಿ

ಪರದಿ – ವರ್ತಕನ ಹೆಂಡತಿ

ಪರದು – ವ್ಯಾಪರ

ಪರಿಗ್ರಹ – ಸ್ವೀಕಾರ

ಪರಿನಿರ್ವಾಣ – ಮುಕ್ತಿ

ಪರಿಭವ – ತಿರಸ್ಕಾರ,ಅವಮಾನ

ಪರಿಯಣ – ತಟ್ಟೆ, ಹರಿವಾಣ

ಪರಿವಡಿಗೆ – ಅನುಕ್ರಮ

ಪರಿವೇಷ್ಟಿತ – ಬಳಸಿದ

ಪರಿವ್ರಾಜಕ – ಸಂನ್ಯಾಸಿ

ಪರಿಸುಟ – ಅತಿಸ್ಪಷ್ಟ

ಪಱ – ಕತ್ತರಿಸಿಹೋಗು

ಪರೆ – ಹರಡು

ಪಱೆವೊೞ್ತ – ಸಚಿಜೆ

ಪಱೆ – ತಂಬಟೆ, ಹರೆ ಎಂಬ ಚರ್ಮವಾದ್ಯ

ಪರ್ಚಿಗೊಡು – ಹಂಚಿಕೊಡು

ಪರ್ವ – ಹಬ್ಬ

ಪಲಾಲ – ಜೊಳ್ಳು, ನಿಸ್ಸಾರವಾದ ಮಾತು

ಪಲ್ಲಣ – ಜೀನು

ಪಲ್ಲವ – ಚಿಗುರು

ಪಲ್ಯಂಕ – ಪದ್ಮಾಸನ

ಪಸದನ – ಅಲಂಕಾರ

ಪಸರ – ಸಲಿಗೆ

ಪಸುಂಬೆ – ಹಸುಬೆ ಚೀಲ

ಪಳಿತ – ಒಂದು ಬಗೆಯ ಕಾಲಮಾನ

ಪಾಂಗು – ರೀತಿ

ಪಾಗುಡ – ಕಾಣಿಕೆ

ಪಾಟ – ಹಾಡು

ಪಾಡು – ಸ್ಥಿತಿ

ಪಾಣ್ಬ – ಜಾರ

ಪಾದರಿಗ – ಹಾದರಿಗ, ಜಾರ

ಪಾಪೆ – ಬೊಂಬೆ

ಪಾಯ್ತರು – ಹರಿದುಬರು

ಪಾರಕು – ಹಾರಕದ ಅಕ್ಕಿ

ಪಾರಾವತ – ಪಾರಿವಾಳ

ವಾರ್ವ – ಬ್ರಾಹ್ಮಣ

ಪಾರ್ವಂತಿ – ಬ್ರಾಹ್ಮಣಿತಿ

ಪಾರಾವಾರಗ – ಪ್ರವೀಣ

ಪಾರಿಸು – ಪಾರಣೆಮಾಡು

ಪಾಲ್ಮರ – ಹಾಲು ಬರುವ ಮರ

ಪಾಷಾಣ – ಕಲ್ಲು

ಪಾಳಕಾಪ್ಯ – ಗಜಶಾಸ್ತ್ರ

ಪರವಶತೆ – ಮೂರ್ಛೆ, ಮೈಮರೆಯುವಿಕೆ

ಪಿಡಿಪೆತ್ತು – ಹಿಡಿತಕ್ಕೆ ಸಿಕ್ಕೆ

ಪಿಶಿತ – ಮಾಂಸ

ಪಿೞ – ಹಿಂಡು

ಪೀಡನ – ಹಿಂಸೆ

ಪುಂಡರೀಕ – ಬಿಳಿಯ ತಾವರೆ

ಪುಗುೞ್ಒಡೆ – ಬೊಕ್ಕೆಯಾಗು

ಪುಡುಕೆ – ಪೆಟ್ಟಿಗೆ,ಸಂಪುಟ, ಭರಣಿ, ಬುಟ್ಟಿ

ಪುದ್ಗಲ – ಮೊಸರು, ಸಕ್ಕರೆ, ಬೆಲ್ಲ, ಅನ್ನ, ನೀರು

ಮುಂತಾದ ದ್ರವ್ಯಗಳು

ಪುನ್ನಾಗ – ಸರಗಿಯ ಮರ

ಉರಡು – ಸ್ಪರ್ಧೆ

ಪುರುಷವ್ರತ – ಬ್ರಹ್ಮಚರ್ಯ

ಪುರಳಿ – ಸಾರಿಕೆ, ಹೆಣ್ಣುಗಿಳಿ

ಪುಳಿನ – ಮರಳು

ಪುೞತು – ಹುಳುವಾಗಿ

ಪುಳು – ಹಕ್ಕಿ

ಪುಳ್ಳಿ – ಸೌದೆ

ಪುಳುಂಗಾಱ – ಹಕ್ಕಿಗಳನ್ನು ಹಿಡಿಯುವವನು

ಪ್ರಣ್ಕೆ – ಪ್ರತಿಜ್ಞೆ

ಪೂರ – ಪ್ರವಾಹ

ಪೂರಣ – ತುಂಬುವಿಕೆ

ಪೆಂಗರು – ಒಚಿದು ಬಗೆಯ ದೊಡ್ಡ ಬಕಹಕ್ಕಿ

ಪೆಂಡವಾಸ – ಅಂತಃಪುರ

ಪೆಟ್ಟೆ – ಹೆಂಟೆ

ಪೆಱಗು – ಹಿಂದೆ

ಪೆಱವುಳಿ – ಬೇರೆ ಎಡೆ

ಪೆಱು – ಹೆರು, ಪಡೆ

ಪೆಱುಕು – ಹೆಕ್ಕು

ಪೇಪಂದಿ – ಹೇಲು ಹಂದಿ

ಪೇಱು – ಹೇರು, ಹೊರೆ

ಪೊಟ್ಟಳಿಗೆ – ಪೊಟ್ಟಣ

ಪೊಡೆವಡು – ನಮಸ್ಕರಿಸು

ಪೊರ್ದು – ಹೊಂದು, ಪಡೆ

ಪೊಲ್ಲದು – ಕೆಟ್ಟದು

ಪೊಲ್ಲಮೆ – ದುಷ್ಟತೆ, ಕೇಡಿಗತನ, ಹೊಲಸು, ಹೇಸಿಗೆ

ಪೊಳೆಯಿಸು – ಹೊರಳಿಸು, ತಿರುಗಿಸು

ಪೊೞಲ್ – ಪಟ್ಟಣ, ಪೊಟರೆ

ಪೋೞ್ತಡೆ, ಪೊೞ್ತಱು – ಹೊತ್ತಾರೆ

ಪೊೞ್ತ – ಚಿನ್ನ, ಚಿನ್ನಡ ಪಾತ್ರೆ, ಶ್ರೇಷ್ಠ

ಪೋಡುಂಗಾಱ – ಕಾಡನ್ನು ಕತ್ತರಿಸುವವ

ಪಿಂಗು – ಹಿಂಜರಿ, ತೊಳಗು

ಪಿಡಿ – ಹೆಣ್ಣಾನೆ

ಪ್ರಚ್ಛನ್ನ – ಮರೆಯಾದ

ಪ್ರಣವ – ಓಂಕಾರ

ಪ್ರತಿಪತ್ತಿ – ಸತ್ಕಾರ

ಪ್ರತಿಬೋಸು – ಎಚ್ಚರಿಸು,ತಿಳಿಯ ಹೇಳು

ಪ್ರತಿಮಾಯೋಗ – ಪ್ರತಿಮೆಯಂತೆ ನಿಂತು ತಪಸ್ಸುಮಾಡುವುದು

ಪ್ರತಿಮುಖ – ಮೊಗವಾಡ

ಪ್ರತೀಕಾರ – ಚಿಕಿತ್ಸೆ

ಪ್ರಮಾಣ – ಅವ, ಅಳತೆ, ಕಾರಣ

ಪ್ರಸ್ತುತ – ತಾತ್ಕಾಲಿ

ಪ್ರಳಾಪ – ರೋದನ

ಪ್ರಾಣಘಾತಿ – ಜೀವಹಿಂಸಕ

ಪ್ರಾಸುಕ – ಜೀವರಹಿತ, ನಿರ್ಮಲ

ಬಂದಿಸು – ವಂದಿಸು

ಬಂಬಳಂ ಬಾಡಿ – ಬಹಳ ಬಾಡಿ

ಬಗ್ಗಿಸು – ಬೈ, ವಿಧೇಯಗೊಳಿಸು

ಬಟ್ಟಾಟ – ಬಿಲ್ಲೆಯಾಟ

ಬಡ್ಡಿಸು – ಬಡಿಸು (ರ್ವಸು)

ಬರ – ಕಿವುಡ

ಬಯ್ಗಿರುಳೀನ ಜಾವ – ಮುಂಜಾನೆ

ಬರ, ಬರವು – ಆಗಮನ

ಬಱಸಿಡಿಲ್ – ಮಳೆಯಿಲ್ಲದೆ ಬರುವ ಸಿಡಿಲು

ಬರುಂಟು – ಬೆರಳಿನಿಂದ ಚುಚ್ಚು

ಬರ್ದಿ – ನವೆದು, ಕೃಶವಾಗಿ

ಬಲಗೊಳ್ – ಪ್ರದಕ್ಷಿಣೆ ಬರು

ಬಲ್ಲಾಳ್ತನ – ಬಲಾತ್ಕಾರ

ಬಲ್ಮೆ – ಪ್ರೌಢಿಮೆ

ಬಸ – ವಶ

ಬಸಮೞ – ಬಸವಳಿ, ವಶತಪ್ಪು, ಶಕ್ತಿ ಕುಂದು

ಬೞಯನಟ್ಟು – ದೂತನನ್ನು ಹೇಳಿ ಕಳುಹಿಸು

ಬಳಾಕ – ನೀರುಹಕ್ಕಿ

ಬೞ್ಚು – ಕೆಳಗೆ ಜಾರು

ಬೞಕ್ಕಂ – ಅನಂತರ

ಬೞಯನೆ – ಹಿಂದೆಯೇ

ಬಳ್ಳಿಮಾಡ – ಲತಾಗೃಹ, ಮನೆಗಳ ಸದಲು

ಬೞದ – ಬದುಕಿದ, ಸತ್ತ

ಬಾಚಿಸು, ಬಜಿಸು – ಓದು, ಓದಿಸು

ಬಾಡು – ಕಾಯಿಪಲ್ಯ

ಬಾದಣ – ಗವಾಕ್ಷ

ಬಾರಿ – ಆನೆಗಳನ್ನು ಹಿಡಿಯಲು ಕಟ್ಟಿದ ಕೋಟೆ

ಬೋನು

ಬಾರಿಸು – ನಿವಾರಿಸು, ತಡೆ

ಬಾಲವದ್ದೆ – ಬಾಣಂತಿ

ಬಾಳ್ – ಕತ್ತಿ

ಬಾೞ್, ಬಾೞಮೆ – ಜೀವಿಕೆ – ವೃತ್ತಿ, ಕ್ಷೇತ್ರ ಜಮೀನು

ಬಾೞ್ತೆ – ಪ್ರಯೋಜನ

ಬಾಹಲ – (ಬಾಹಟ – ವಾಗ್ಭಟ) ವ್ಶೆದ್ಯಗ್ರಂಥ

ಬಿಚ್ಚಳಿಸು – ವಿಸ್ತರಿಸು, ದೊಡ್ಡದು ಮಾಡು

ಬಿಚ್ಚುವ – ಭಿಕ್ಷು, ಜೈನಯತಿ

ಬಿದಿರ – ಕೊಡವು

ಬಿನ್ನನೆ – ಶೂನ್ಯವಾಗಿ

ಬಿಯ – ವ್ಯಯ,ವೆಚ್ಚ

ಬಿರ್ದಿ – ಮುದುಕಿ

ಬಿರ್ದು – ಔತಣ

ಬೂತು – ಭೂತ, ವ್ಯಕ್ತಿ

ಬೆಂಟೆ – ಹುಲ್ಲಿನ ಹಗ್ಗ

ಬೆಸ – ಅಪ್ಪಣೆ

ಬೆಸಕೆಯ್ – ಅಪ್ಪಣೆಯಂತೆ ನಡೆ, ಸೇವೆಮಾಡು

ಬೆಸಲೆಯಾಗು – ಪ್ರಸವಿಸು

ಬೆಳ್ಕಾಡು – ನಿರ್ಜನಾರಣ್ಯ

ಬೇಗ – ಹೊತ್ತು, ಸಮಯ

ಬೇಂಟ – ಪ್ರೇಮ

ಬೈಕ – ಭಿಕ್ಷ

ಬೈಕಂಗುಳಿ – ಭಿಕ್ಷೆ ಬೇಡುವುದೇ ಶೀಲಲವಾಗಿರುವವನು

ಬೈಕಂದಿರಿ – ಭಿಕ್ಷೆಗಾಗಿ ತಿರುಗಾಡು

ಬೋನಮೆತ್ತು – ಭೋಜನ ಬಡಿಸು

ಬ್ರಹ್ಮಯ್ಮ – ಬ್ರಹ್ಮಚಾರಿ

ಬ್ಯಾದಿ – ವ್ಯಾ,ರೋಗ

ಭಂಡ – ವ್ಯಾಪಾರದ ಸರಕು