ಭಂಭಾ – ಒಂದು ಬಗೆಯ ಭೇರಿ

ಭಗಂದರ – ಮೂಲವ್ಯಾ

ಭರ್ತಾರ – ಗಂಡ

ಭಾಗಸ – ಭಾಗ್ಯ

ಭೂರಿ – ಅತಿಶಯ

ಮಂಡಗೆ – ಒಂದು ಭಕ್ಷ್ಯ

ಮಂಡೂಕ – ಕಪ್ಪೆ

ಮಂತಣ – ಮಂತ್ರಾಲೋಚನೆ

ಮಗುೞ್ದು – ತಿರುಗಿ, ಮತ್ತೆ

ಮುಟ್ಟಗೆ – ಒಂದು ಆಯುಧ

ಮಣಿಖೇಟಕ – ರತ್ನಖಚಿತವಾದ ಗುರಾಣಿ

ಮದ್ಯಾಂಗ – ಮದ್ಯವನ್ನು ಕೊಡುವ ಕಲ್ಪವೃಕ್ಷ

ಮದೆವಳ್ – ಮದುಮಗಳು, ವಿವಾಹ ಕನ್ಯೆ

ಮನ್ಯು – ದುಃಖ

ಮನೆವಾೞ್ತೆ – ಮನೆಗೆಲಸ

ಮರಮೊಗ – ಮರದ ಮೊಗವಾಡ

ಮರುಳ್ಗೊಂಡು – ಭ್ರಾಂತನಾಗಿ

ಮಱಲುಂದು – ಮೈಮರೆ, ನಿದ್ರಿಸು

ಮಱುಗು – ಕುದಿ

ಮಱುಭವ – ಪುನರ್ಜನ್ಮ

ಮಲರ್ಚು – ಮಗುಚಿ ಮಲಗಿಸು

ಮಲ್ಲರ್ – ಮಣ್ಣಿನ ಸವುಟು

ಮರಕ – (ಮಶಕ) ಗುಂಗಾರು

ಮಸಗು – ಕೆರಳು

ಮಹಾವಿಭೂತಿ – ಮಹೈಶ್ವರ್ಯ

ಮಾಂಸಾಶಿ – ಮಾಂಸ ತಿನ್ನುವವ

ಮಾಡ – ಮನೆ, ಅರಮನೆಯಂತಹದು

ಮಾಣಿ – ಬಾಹ್ಮಣರ ಹುಡುಗ

ಮಾಣಿಸು – ನಿಲ್ಲಿಸು, ತಡೆ

ಮಾದುಫಲ – ಮಾದಳದ ಹಣ್ಣು

ಮಾದೆಗಿ – ಹೊಲತಿ

ಮಾನಸ – ಮನುಷ್ಯ

ಮಾಱುಗೊಳ್ – ಬೆಲೆಗೆ ಕೊಳ್ಳು

ಮಾಱುಲಿ – ಪ್ರತಿಧ್ವನಿ

ಮಾರ್ಕೊಳ್ – ಪ್ರತಿಭಟಿಸು,ಮೀರು

ಮಿಕ್ಕ – ಶ್ರೇಷ್ಠವಾದ

ಮಿಸಿಸು – ಮೀಯಿಸು

ಮೀಂಗುಲಿಗ – ಬೆಸ್ತ

ಮುಂಗುರಿ – ಮುಂಗುಸಿ

ಮುಂಜಿಗಟ್ಟು – ಉಪನಯನ ಮಾಡು

ಮುಕುಂದ – ಮದ್ದಳೆ

ಮುಟ್ಟಿಗೆ – ಕೊಡತಿ

ಮುಟ್ಟು – ಉಪಕರಣ

ಮುಡಿಪು – ಸಾಯು

ಮುನ್ನ – ಮೊದಲು

ಮೃತಕ – ಹೆಣ

ಮೆಯ್ಗಾಪು – ಅಂಗರಕ್ಷಣೆ

ಮೇಲ್ಕೊಳ್ – ಧರಿಸು

ಮೊಟ್ಟಯಿಸು – ಎದುರಿಸು – ಪ್ರತಿಭಟಿಸು

ಮೋಹಿಸು – ಮೂರ್ಛೆಯುಂಟುಮಾಡು

ಯಮ – ಇಂದ್ರಿಯ ನಿಗ್ರಹ

ಯಮ್ಮ – ಕೋಲು, ದೊಣ್ಣೆ

ಯಾವಜ್ಜೀವ – ಜೀವವಿರುವವರೆಗೆ (ಪಾವಜ್ಜೀವ ಎಂತಲೂ ಇದೆ)

ಯೂಥ – ಹಿಂಡು

ಯೋಷಿದ್ – ಹೆಂಗುಸು

ರತಿ – ಆಸಕ್ತಿ

ರಾಗ – ಕೆಂಪು,ಪ್ರೀತಿ

ರೂಕ್ಷ – ಒರಟು

ಲಂಗಿಗ – ಡೊಂಬರಾಟದವನು

ಲಾವಣಿಗೆ – ಉಪ್ಪಿನಕಾಯಿ

ಲುಂದು – ಮಲಗು,ನಿದ್ರಿಸು

ಲೋಗಾಣಿ – ಲೋಕಾಕಾರವನ್ನು ತಿಳಿಸುವು ಗ್ರಂಥ

ಲೋಚು – ಕೂಕಲನ್ನು ಕೀಳುವಿಕೆ

ಲೆಪ್ಪ – ಮಯಣ, ಲೇಪ್ಯವಸ್ತು

ವಂಶ – ಕೊಳಲು; ಬಿದಿರು

ವಕ್ಖಾಣಿಸು – ವ್ಯಾಖ್ಯಾನಮಾಡು

ವಪು – ಶರೀರ

ವರಿಸು – ಬರಮಾಡು(ಬರಿಸು)

ವಶಗಾ – ವಶವಾಗಿರುವವಳು

ವಸುಮತಿ – ನೆಲ, ರಾಜ್ಯ

ವಾದುಗೆಯ್ – ವಾದಮಾಡು

ವಾಸಿಸು – ವಾಸನೆ ಕಟ್ಟು

ವಿಕಳ – ವ್ಯಥೆಗೊಂಡ

ವಿಗ್ರಹ – ಯುದ್ಧ

ವಿಗುರ್ವಿಸು – ಮಾಯೆಯಿಂದ ಸೃಷ್ಟಿಸು

ವಿಜಾತಿ – ಕುಲವಿಲ್ಲದವನು

ವಿದಾರಿಸು – ಸೀಳು

ವಿದ್ಯಧರಖರಣ – ವಿದ್ಯಾಧರ ವಿದ್ಯೆ

ವಿಪಾಟಿತ – ಸೀಳಿದ

ವಿಭೀಷಣ – ಅತಿಭಯಂಕರ

ವಿಭೂತಿ – ಐಶ್ವರ್ಯ

ವಿಮಾನ – ಆಕಾಶಯಾನ, ಏಳು ಅಂತಸ್ತಿನ ಅರಮನೆ,

ಮಂಟಪ (ಶವಮಂಟಪ)

ವಿಶೋ – ನೈರ್ಮಲ್ಯ

ವಿಷಯ – ದೇಶ

ವೀಚೀಮರಣ – ಕ್ಷಿಪ್ರಮರಣ

ವೈಯಾಪೃತ್ಯಉಪಚಾರ ; ಚಿಕಿತ್ಸೆ

ವ್ಯಾವರ್ಣಿಸು – ವಿಸ್ತಾರವಾಗಿ ವರ್ಣಿಸು

ವ್ಯಾಳ – ತುಂಟಾಟಮಾಡುವ

ಮೊಱೆ – ನಂಟತನ, ಸಂಬಂಧ

ಮೋದಗೆ – ಕಡುಬು

ಮೋನ – ಮೌನ

ವೇಡಿ – ಬಯಸಿ,ಉದ್ದೇಶಿಸಿ

ಶಾಕಟಿಕ – ಸರಕು ಬಂಡಿಯುಳ್ಳವನು

ಶಾಲಿಹೋತ್ರ – ಅಶ್ವಶಾಸ್ತ್ರ

ಶಿವಸುಖ – ಮಂಗಳಕರ ಸುಖ

ಶೀಕರ – ತುಂತುರುಹನಿ

ಶೂಲ – ನೋವು,ಶೂಲೆ

ಶ್ರಾವಕ – ಜೈನಗೃಹಸ್ಥ

ಶ್ರುತ – ಜ್ಞಾನ; ಶಾಸ್ತ್ರ

ಶ್ರುತಕೇವಲ – ಜೈನಾಗಮದಲ್ಲಿ ಪೂರ್ಣ ಜ್ಞಾನವುಳ್ಳವ

ಸಂಗಾಣಿ – ಸಪ್ತ ಪದಾರ್ಥಗಳ ಸ್ವರೂಪ

ನಿರೂಪಣ ಗ್ರಂಥ

ಸಘಾಂತ – ಸಮೂಹ

ಸಂಛನ್ನ – ದಟ್ಟವಾದ

ಸಂತಂ – ಶಾಂತವಾಗಿ ; ಸಮಾಧಾನವಾಗಿ

ಸಂಬಂಳ – ಬುತ್ತಿ

ಸಗರ್ಭವಚನ – ಅಂತರಾರ್ಥವುಳ್ಳ ಮಾತು

ಸಪ್ತದಳಪ್ರಸಾದ – ಏಳು ಉಪ್ಪರಿಗೆಯುಳ್ಳ ಅರಮನೆ

ಸಮನಿಸು – ಒದಗು

ಸಮಂತು – ಚೆನ್ನಾಗಿ

ಸಮಯ – ಮತಧರ್ಮ, ಸಂಪ್ರದಾಯ

ಸಮವಸರಣ – ಜಿನೇಂದ್ರರ ಉಪದೇಶ ಸಭೆ

ಸಮೆ – ಮಾಡು, ಮುಗಿಸು

ಸಮ್ಯಕ್ತ್ವ – ಜೈನತತ್ವದಲ್ಲಿ ನಂಬಿಕೆ, ತಿಳಿವಳಿಕೆ

ಮತ್ತು ಆಚರಣೆ

ಸಯಿಸತ್ತಮ – ಅತ್ಯಂತ ಶ್ರೇಷ್ಠ

ಸಯ್ದು – ನೇರವಾಗಿ

ಸರವಣ – ಜೊಂಡುಹುಲ್ಲು

ಸರುಸಪ(ಸರ್ಷಪ) – ಸಾಸವೆ

ಸರ್ವಾರ್ಥಸಿದ್ದಿ – ಒಂದು ಸ್ವರ್ಗದ ಹೆಸರು

ಸಲವಣರಸಮಂಭ – ಉಪ್ಪುನೀರು

ಸವಣ(ಶ್ರಮಣ) – ಜೈನಯತಿ

ಸಹಕಾರ – ಸಿಹಿಮಾವು

ಸಸ್ಯ (ಶಸ್ಯ) – ಒಂದು ಬಗೆಯ ರತ್ನ

ಸಾಗರ – ಒಂದು ದೊಡ್ಡ ಸಂಖ್ಯೆ (೧೦ ಕೋಟಿ

೧ ಕೋಟಿ ಪಲ್ಯಗಳು)

ಸಾರ – ಬೆಲೆ

ಸಾರೆ – ಸಮೀಪ

ಸಾರ್ಚು – ಹತ್ತಿರ ಹೋಗು, ಹತ್ತಿರಕ್ಕೆ ಸೇರಿಸು

ಸಾರ್ಥಾಪತಿ – ಬೆಲೆಬಾಳುವ ಸರಕಿನ

ಬಂಡಿಗಳ ಶ್ರೇಣಿಗೆ ಒಡೆಯ

ಸಾಲಿಗ – ನೇಕಾರ

ಸಿಗ್ಗು – ನಾಚಿಕೆ

ಸಿತಾತಪತ್ರ – ಬಿಳಿಯ ಕೊಡೆ

ಸಿದ್ಧಕೂಟ – ಸಿದ್ಧರಿರುವ ಪರ್ವತ

ಸಿದ್ಧಸೇಸೆ – ಸಿದ್ಧರನ್ನು ಅರ್ಚಿಸಿದ ಅಕ್ಷತೆ

ಸಿದ್ಧಾಯತನ – ಸಿದ್ಧರ ಕ್ಷೇತ್ರ

ಸಿದ್ಧಾರ್ಥ – ಬಿಳಿಸಾಸಿವೆ

ಸಿಬಿಗೆ, ಶಿಬಿಕೆ – ಪಲ್ಲಕ್ಕಿ

ಸೀಂಟು – ಅಳಿಸು, ಒರಸು

ಸೀಗುರಿ – ಒಚಿದು ಬಗೆಯ ಕೊಡೆ

ಸೀರ್ನಾಯ್ – ಕಾಡುನಾಯಿ, ನೀರುನಾಯಿ

ಸುಭದ್ರೆ – ಆನೆಗಳಲ್ಲಿ ಉತ್ಕಷ್ಟವಾದ ಒಂದು ತಳಿ

ಸುರಿಗೆ (ಸುರಿಕಾ) – ಕತ್ತಿ

ಸುವರ್ಣಕಾರ – ಅಕ್ಕಸಾಲಿ

ಸೂರುಳ್ – ಪ್ರತಿಜ್ಞೆ

ಸೂಳೆ – ದಾಸಿ

ಸೆಂಡು – ಚೆಂಡು

ಸೆಟ್ಟೆ – ಹೆಚಿಟೆ

ಸೆಡೆ – ಮುರುಟು

ಸೇದೆ – ಆಯಾಸ

ಸೇಸೆ – ಮಂತ್ರಾಕ್ಷತೆ

ಸೊಡರು – ದೀಪ

ಸೋಂಕಿಲ್ – ಉಡಿ

ಸೋದಿಗೆ – ಗೋಯಿಂದ ಮಾಡಿದ ಒಂದು ಭಕ್ಷ್ಯ

ಸ್ಕಂದ – ಹೆಗಲು

ಸ್ತಂಭಿನಿ – ಗತಿನಿರೋದ

ಸ್ವಾಧ್ಯಾಯ – ಅಭ್ಯಾಸ; ಓದು

ಸರ್ಣ್ವಪಾಷಾನ – ಚಿನ್ನವಿರುವ ಕಲ್ಲು, ಚಿನ್ನದ ಅದಿರು

ಸೂರ್ಜತ್ – ಪ್ರಕಾಶಮಾನ

ಹರಿಚಂದನ – ಶ್ರೀಗಂಧ

ಹಸ್ತ – ಮೊಳ

ಹಾನಿತ – ವೈದ್ಯಶಾಸ್ತ್ರ

ಹ್ರೀ – ಲಜ್ಜೆ

ಹೇಮ – ಚಿನ್ನ