ಅ | |
ಅಕ್ಸತ | ಅಕ್ಷತೆ |
ಅಗ್ಲಡ್ಚಿ | ಬಿಗಿದು |
ಅಚಗಯ್ನ | ಆಚೆ ಕೈಯಿನ |
ಅಟ್ | ಅಷ್ಟು |
ಅಡ್ಡನೇ | ತತ್ ಕ್ಷಣ |
ಅಡಿ | ತಳ, ಬಾಗಿಲು |
ಅಡಿಗರ | ರಂಗೋಲಿ |
ಅಡಿಗಾರ | ಸೇವಕ, ತಳಾರ |
ಅತ್ತೆ | ಆ ಕಡೆ |
ಅದಕಿಟ್ಟು | ಅದಕ್ಕಿಷ್ಟು |
ಅನೂವದ | ಸಿದ್ಧವಿದೆ |
ಅರ್ಜಿನ | ಅರ್ಜುನ |
ಅರ್ಜೇರು | ? |
ಅರ್ದಿಕಾರರು | ಓಲೆಗಾರರು ? |
ಅರ್ಮನೆ | ಅರಮನೆ |
ಅರಗೂವೊ | ಅರ್ಪಿಸುವೆವು |
ಅರಸಾನೆ | ಹರಸಿದನು |
ಅರಿಯೇನೋ | ತಿಳಿಯೆಯೇನೋ |
ಅಲರೀಗೆ | ಹಲವರಿಗೆ |
ಅಸಗೂತಿ | ಅಗಸಗಿತ್ತಿ |
ಅಸ್ಮಾನ | ಅಸಮಾನ |
ಅಸೋರಿಸು | ಪಸರಿಸು, ವಿಸ್ತರಿಸು |
ಅಳಗಾನೆ | ಎಳೆದನು |
ಅಳ್ಳಿಕಣ್ಣಿ | ಕಿಪ್ಪೊಟ್ಟೆ |
ಅಂಬುತ್ನು | ಅಂದಕೂಡಲೇ |
ಆ | |
ಆಗೂರೊಟ್ಗೆ | ಆಗುವಷ್ಟರಲ್ಲಿ |
ಆದಗಲೇ | ಜಗುಲಿ |
ಆದೂಗಿ | ಜಗುಲಿ |
ಆದಾವೇ | ಹಾದವು |
ಆಯಕಿ | ರುಚಿಗೆ |
ಆಯಾ | ನೆವ |
ಆರ್ಗೆಯ್ದ್ರೆ | ಏನು ಮಾಡಿದರೆ |
ಆರ್ನ | ಯಾರನ್ನಾದರೂ |
ಆರೂಣಿ | ಅರಣ್ಯ |
ಇ | |
ಇಚ್ಚಮಗ್ಚಿ | ಈಚೆಮಗುಚಿ |
ಇಟ್ | ಇಷ್ಟು |
ಇಡಗೀದೆ | ಎಡವಿದೆ |
ಇಡಲೂಗಿ | ಒಂದು ಬಗೆಯ ನೆರಿಗೆ |
ಇಮದಿಂದ | ಸಿಟಿನಿಂದ |
ಇರುಗು | ಇರುತ್ತದೆ |
ಇಸ್ಕನ್ನಿ | ವಿಷಕನ್ಯೆ |
ಇಳಲಿಟ್ಟ | ಇಳಿಬಿಟ್ಟು |
ಇಳ್ಳಿ | ಅರಳೆ, ಅಶ್ವತ್ಥ |
ಇಳುಕೀಸಿ | ಇಳಿಸಿ |
ಇಂಗಾಳಿ | ಉರಿಗಾಳಿ |
ಉ | |
ಉಗೂರಾಡೇ | ಉದ್ದು, ತಿಕ್ಕು |
ಉದೋರಿಸೇ | ಉದುರಿಸಿ |
ಉರದಾವೇ | ಹುರಿದವು, ಮಗಿದವು |
ಉಳಗಾವಾ | ಉಳಿಗವನ್ನು |
ಎ | |
ಎಡಗೀದ | ಎಡವಿದ |
ಎಡ್ಕೋತ್ತೇ | ಎಡಕ್ಕೋತ್ತಿ |
ಎತ್ತನ | ಎಲ್ಲಿಯೂ |
ಎತ್ತೊಡಲೆ | ಎತ್ತು ಹೂಡಲಿ |
ಎರೆ | ಆಹಾರ |
ಎಲೆವಸ್ತ್ರ | ರುಮಾಲು |
ಎಲಿಮೆರಾ | ಎಲಿಯ, ಮೆಲೋಗರ |
ಎಳಗ್ವಾನೆ | ಎಳೆಯುವನು |
ಒ | |
ಒತ್ತಗೆ | ಹೊತ್ತಗೆ |
ಒರಿಯಾಲೊದೆ | ಹೇಳ ಹೋದೆ |
ಒಲಿಬಂದಿ | ಮೂತ್ರ ಮಾಡಿ ಬಂದು |
ಒಂದಾಸಾ | ಒಂದು ಹಾಸಿಗೆ |
ಒಂದೇ | ಜೊತೆಯಲ್ಲಿ |
ಓ | |
ಓಯ್ಗುಣ್ಣು | ಓಯೆನ್ನು |
ಓಯ್ಗುಂಡೇ | ಓಯೆಂದು |
ಓಲೆ | ಓಲೆಗರಿ |
ಕ | |
ಕಟ್ ಕಣೋ | ಕಟ್ಟಿ ಕೊಳ್ಳೋ |
ಕಡಚಕ್ರ | ಕೊನೆಯ ಕಾಳಗ |
ಕಡಚಕ್ರ ಕೋವಿ | ಆಯುಧ ವಿಶೇಷ |
ಕಡ, ಕಡಿ | ಕಾಯಿಯ ಅರ್ಧ ಭಾಗ |
ಕಟ್ಕ್ನ, ಕಣಕೀನ | ಕಡೆಗಿನ |
ಕದ್ರಾ, ಕದೋರಾ ಕರ್ದಾನೆ, ಕರೀದಾನೆ ಕರೀದಾನೆ | ತಗೆದನು |
ಕರ್ದೊಂದು | ಕರಿದೊಂದು |
ಕಲಿ | ಗಾಯ, ಕಲಂಕ |
ಕಲ್ತಿಪ್ಪು | ಕಲಿತಿರುವರು |
ಕಸದಾನೆ, ಕಸಿದಾನೆ | ಹಚ್ಚಿದನು |
ಕಳ್ಳಿಲ್ಲ | ಕಣ್ಣಿಲ್ಲ |
ಕಂತಗೆ | ಜೋಳಿಗೆ |
ಕಂದ್ಸೀದ | ಮುಳುಗಿಸಿದ |
ಕಾವಲ್ಗೆ | ಕಾವಲಿ , ಹಂಚು |
ಕಾಳಕ್ಕೆ | ಕಾಳಗಕ್ಕೆ |
ಕಿಟ್ಟಿ | ಮುಟ್ಟಿ |
ಕಿರಳು | ತಳಿರು |
ಕಿರಿದಾಣಿಯ | ಸಣ್ಣ ಟೊಂಗೆಯನ್ನು |
ಕುಕ್ಕ | ಕುಕ್ಕನ ಹಕ್ಕಿ |
ಕುಳುವುದ್ನು | ಕುಳಿತ ಮೇಲೆ |
ಕುಂದೀ ಅರಗಾಲಿ | ಮುರುಟಿ ಹೋಗಲಿ |
ಕೂಗಿಲ | ಪಕ್ಷಿ ವಿಶೇಷ |
ಕೂದು | ಕೂಡ್ರು |
ಕೆನೂಳಿ | ಒಂದು ಬಗೆಯ ತರಕಾರಿ |
ಕೆಮಿ | ಕಿವಿ |
ಕೆಯ್ ಗೆದ್ದಿ | ಕೆಯ್ವೋಲ |
ಕೆಸಕ್ಕಿ | ಕೆಂಪಕ್ಕಿ |
ಕೆಂದೋಳ | ಕೆಂಜೋಳ, ಕೆಂಪುಳ್ಳ ? |
ಕೇಸ್ | ಕೂದಲು |
ಕೊಟ್ಟಂಕು | ಕೊಟ್ಟ ಹೊರತು |
ಕೊಡ್ಪನ | ತಾಮ್ರದ ಕೊಡ |
ಕೊಡಲ್ಲಿ | ಕೊಡೆಯಲ್ಲಿ |
ಕೊಣಕು | ಕದಡು |
ಕೊಮ್ಮಣಿ | ಮೋಜು, ರಸಿಕ |
ಗ | |
ಗಟ್ಟೂ | ಗಟ್ಟಿಯಾದ |
ಗಡಿಯಿಲ್ಲ | ಮೇರೆಯಿಲ್ಲ |
ಗರುಡ | ಅಲಂಕಾರ ವಿಶೇಷ |
ಗವಣ | ವಸ್ತ್ರೊಗೆ |
ಗವ್ಡಿ | ದಾಸಿ |
ಗಂಟೆ | ದನ |
ಗೀಳಾ | ಮೀಡ, ಲಗಳಿ |
ಗುರುರಾಯ | ಕುರುರಾಯ , ಕೌರವ |
ಗೂಟೆ | ಗೋಂಟೆ |
ಗೂಟೆ | ಬದಿ, ಮೊಲೆ |
ಗೋಣೊಳು | ಗೊಬ್ಬರ, ಹುಳ |
ಗೋಪಳರ | ಗೋಪಾಲರ |
ಗೊ-ಬಿ | ವ್ಯಥ್ಯೆ ದುಃಖ |
ಗೋವ್ ಕಟ್ನವ್ರು | ಗೋವಳ, ವಂಶಜರು |
ಗೋಳಿ | ಸೈನ್ಯ ? |
ಚ | |
ಚಕ್ರಪಳಿ | ಪದ್ಮಾಸನ |
ಚಂಡಾ, ಚಿಂಡ | ಚಂಡಿಕೆ |
ಚಂದ್ರಸ್ತ | ಚಂದ್ರಹಸ್ತ |
ಚಂಬಗಲೆ, ಚಂಬುಗಲೆ | ತಂಬಿಗೆಯಲ್ಲಿ |
ಚಿಗುರು | ಮಲ್ಲಿಗೆ ಅರೆದು ತಯ್ಯಾರಿಸಿದ ಕಮ್ಮೆಣ್ಣೆ |
ಚಿನ್ನೋಲೆ | ಚಿನ್ನದ ಓಲೆ |
ಚೇಜಿ | ಕುದುರೆ |
ಜ | |
ಜಜ್ಜರಿಯೂತ | ತುಳಿಯೂತ್ತ |
ಜಬ್ಬೆಕ್ಕು | ಜಬ್ಬು + ಹೆಕ್ಕು, ಸಣ್ಣ ಮೀನ ಹೆಕ್ಕು |
ಜಂತರ ಸೀತೆ | ನಡಗಿಸುತ್ತ |
ಜಿಗಟಿ | ರಾಸಿ |
ಜವಂತೀರು | ಯುವತಿಯರು |
ಜುತ್ವ, ಜುತುವ : | |
ಜುಳ್ಳುಳ್ಳಿ | ಗಟ್ಟಿ |
ಜೊನಗ | ಸಿಂಪಿ, ಜಾಡಗ |
ಜೋಡಲ | ಜೋಡಿ |
ತ | |
ತಗರೀಗೆ, ತೊಗರೀಗೆ | ತವರಿಗೆ |
ತಡಕಂಡು | ತೆಗೆದುಕೊಂಡು |
ತಡದಾನೆ | ಹಿಡಿದನು |
ತತ್ತಗೆ | ಜೊತೆಯಲ್ಲಿ |
ತಪ್ಪಸಗಂಡೇ | ತಪ್ಪಿಸಿಕೊಂಡು |
ತರಕ | ದರುಕ, ಒಣ ಎಲೆ |
ತಳಿಬಂದಿ | ಮಂಗಲ ಸೂತ್ರ |
ತಂಡಿಲ | ತೊಂಡಿಲ |
ತಾಳೀದ | ಸಾಕಿದ ? |
ತಿರುವಕ್ಕು | ಸ್ಥಿರವಾಗುವದು |
ತಿರವಾಲಿ | ಸ್ಥಿರವಾಗಲಿ |
ತಿರ್ಗರೊಟ್ಗೆ | ತಿರುಗುವಷ್ಟರಲ್ಲಿ |
ತಿಂಬೂಕೆ | ತಿನ್ನಲಿಕ್ಕೆ |
ತೀರ್ತ | ತೀರ್ಥ |
ತೀರೀಗೆ | ಮುಗಿಯುವದು |
ತುಪ್ಪೋಗುರ | ತುಪ್ಪ ಅನ್ನ |
ತುಳಚಿ, ತೊಳಚಿ | ತುಲಸಿ |
ತೆಗಂಡು, | ತೆಗೆದುಕೊಂಡ |
ತೆಣಿಮೆ-ನೆ | ಜರುಲಿಯ ಮೇಲೆ |
ತೆರಣು | ಕಾರಣ, ತೆರಳು ಬಿಡುವು |
ತೆಳ್ದಬಾರೆ | ತಿಳಿದು ಬಾ |
ತೆಳಗೂವೆ | ತಿಳಿದುಕೊಳ್ಳುವೆ |
ತೆಳಿ | ತಿಳಿದುಕೋ |
ತೇಗೀತೇ | ತೇಗುತ್ತ |
ತೊಲಗೂಗು | ಹೋಗುತ್ತದೆ |
ತೋಲು | ಬಹಳ |
ದ | |
ದರವಿ | ದರ್ವಿ, ಸೌಟು ? |
ದಳಲಿಗೆ | ಬೇಗೆ ? |
ದಳವಳ | ತಾಂಬೂಲ |
ದಂಗುಲ | ಡಂಗೂರ |
ದಾರಂದ್ರ | ಬಾಗಿಲು ಮೇಲ್ಬಾಗ |
ದ್ಯಾಮಟಿ | ಧ್ವನಿಗುಂಟೆ ? |
ದಿಂಡಾ | ಗಂಟನ್ನು |
ದುಟ್ಟಿ, ದೂಟಿ | ದೃಷ್ಟಿ |
ದುರ್ವಿ | ದರ್ಭೆ |
ದಡಿ | ಅಂಚು |
Leave A Comment