ಅ
ಅಕರಣ-ಗಣಕ, ಲೆಕ್ಕಪತ್ರದ ಅಕಾರ
ಅಕೂಪಾರ-ಸಮುದ್ರ
ಅಕ್ಷಜ-ಇಂದ್ರಿಯಜ್ಞಾನ
ಅಕ್ಷಮಾಲೆ-ಜಪಸರ
ಅಕ್ಷೂಣ- ಬಲಿಷ್ಟ
ಅಗಿದು-ಹೆದರಿ
ಅಗ್ರಜನ್ಮ-ಬ್ರಹ್ಮಣ
ಅಜಾತಶತ್ರು- ಧರ್ಮರಾಯ
ಅಂಜನ-ಕಾಡಿಗೆ
ಅಡಗು-ಮಾಂಸ
ಅಧ್ವಾನ-ಕಷ್ಟ
ಅನವದ್ಯ-ದೊಷರಹಿತ ನಿಷ್ಕಲಂಕ
ಅನವಧಾನ-ಎಚ್ಚರಿಕೆಯಿಲ್ಲದಿರುವಿಕೆ
ಅನಾಗತವೇದಿ-ಭವಿಷಜ್ಞ
ಅನಾರತಂ-ಯಾವಾಗಲೂ
ಅನಿಮಿಷಚಾಪ-ಕಾಮನಬಿಲ್ಲು
ಅನಿಮಿಷಸಪತ್ನ-ದೇವತೆಗಳ ಶತ್ರು,
ಮೀನುಗಳ ವೈರಿ
ಅನುಜೀವಿ-ಅನುಸರಿಸಿ ಜೀವಿಸುವುದು
ಅನುಪ್ರವೇಶ-ಕೂಡಿಬಾಳುವುದು
ಅನೇಕಪ-ಆನೆ
ಅಂತರೀಪ-ದೀಪ
ಅಂತರ್ವತ್ನಿ-ಗರ್ಭಿಣಿ
ಅಂತರ್ವಾಂಶಿಕ-ವ್ಯಾಯಾಮಶಾಲಾದ್ಯಕ್ಷ
ಅನ್ಯಸ್ವಂ-ಇತರರ ಅಸ್ತಿ
ಅಪಚಾರಣ-ದುರ್ಮಾರ್ಗ
ಅಪನಯ-ಅನೀತಿ
ಅಪಸರಣ-ಓಡಿಹೋಗುವುದು,
ಹಿಂಜರಿಯುವುದು
ಅಪಾಮಾರ್ಗ-ಉತ್ತರಣೆ
ಅಪಾಸ್ತ-ರಹಿತ
ಅಭಿಭವಿಸು-ಸೋಲಿಸು
ಅಭಿಯೋಗ-ತಾಳ್ಮೆ
ಅಭ್ರಂಕಷ-ಆಕಾಶವನ್ನು ಮುಟ್ಟವ
ಅಂಭಃಕುಂಭಿ-ನೀರಾನೆ
ಅಂಸ-ಭುಜ
ಅರಮಕ್ಕಳ್-ಅರಸನಮಕ್ಕಳು
ಅರಾತಿ-ವೈರಿ
ಅರ್ಕ-ಎಕ್ಕೆ, ಸೂರ್ಯ
ಅರ್ಕಮಹಂ-ಸೂರ್ಯನಿಗೆ
ಸಂಬಂಸಿದ ಹಬ್ಬ
ಅರ್ಜುನ-ಮತ್ತಿಮರ
ಅರೆತ-ಬುದ್ಧಿ, ತಿಳಿವಳಿಕೆ
ಅಲಗೆಗಟ್ಟು-ಮಣತೊಡು
ಅವಕುಟ್ಟು-ಕಿರಿಕಿರಿಯಾಗು
ಅವತಂಸ-ಆಬರಣ
ಅವತೆ-ಅವಸ್ಥೆ
ಅವಸರ-ಸಂದರ್ಭ
ಅಶನಿ-ಸಿಡಿಲು, ವಜ್ರಾಯುಧ
ಅಸದ್ರಾಗ್ರಹಿ-ಕಟ್ಟದ್ದರಲ್ಲಿ ಅಸಕ್ತಿ
ಅಸುಹೃತ್-ವೈರಿ
ಅಸೃಕ್-ರಕ್ತ
ಅಳುರ್ಕೆ-ವ್ಯಾಪಕತೆ, ವಿಸ್ತಾರ
ಅಱ*ಗಜ್ಜ-ದುಷ್ಕಾರ್ಯ
ಅಱ*ಗಣ್ಣರ್-ಕೆಟ್ಟಕಣ್ಣಿನವರು
ಅಱ*ವಗೆ-ಕೆಟ್ಟಬುದ್ದಿ
ಆ
ಆಕೇಶಗ್ರಹಣಾಂ-ಬಲತ್ಕಾರವಾಗಿ
ಆಖಂಡಲ-ಇಂದ್ರ
ಆಖೂ-ಇಲಿ
ಆಟಿಸು-ಅಪೇಕ್ಷಿಸು
ಆತ್ತ-ಅವರಿಸಿದ
ಆತ್ಮಂಭರಿ-ತನ್ನನ್ನು ತಾನು ಸಾಕಿ ಕೊಳ್ಳವವನು
ಆದಂ-ವೀಶೆಷವಾಗಿ,ಚೆನ್ನಾಗಿ
ಆಭೀಳ-ಯಂಕರ
ಆಮಿಷ-ಮಾಂಸ, ಆಸೆ
ಆಮ್ನಾಯ-ವೇದ
ಆಯತನ-ಮನೆ
ಆಯತ್ತಂಗೆಯ್-ಅನಮಾಡು
ಆರಯ್-ವಿಚಾರಿಸು
ಆರಾವ-ಶಬ್ದ
ಆರ್ಪು-ಸಾಮರ್ಥ್ಯ
ಆಸನ್ನ ವಿನಪಾತ-ಸದ್ಯದಲ್ಲಿಯೇ ನಾಶ ಹೊಂದುವ
ಆಸುರಂ ಮಸಗು-ಅತಿಶಯವಾಗಿ ರೇಗು
ಆಹಿತಾಗ್ನಿ-ನಿತ್ಯೋಪಾಸನೆಗಾಗಿ ಅಗ್ನಿಯನ್ನು
ಇಟ್ಟಿರುವವನು, ಅಹಿತಾನಲ ಐತಾಳ
ಆಳವಾಡು-ಮೋಸಮಾಡು
ಆಳ್ತಬ-ಪೌರುಷ
ಇ
ಇಂದೀವರ-ಕನ್ನೈದಿಲೆ
ಇಂದ್ರದಂತಿ-ಐರಾವತ
ಇನ್ನನೆಂ-ಇಂಥವನಾಗಿದ್ದೇನೆ
ಇಂಬು-ಆಶ್ರಯ, ಅವಕಾಶ,
ಮನೋಹರ
ಇರ್ಕುಳಿಗೊಳ್-ಆಕರ್ಷಿಸು, ಸಿಕ್ಕಿಸಿಕೊಳ್ಳು
ಇರ್ಬಗಿ-ಎರಡುಭಾಗ
ಇಱುಂಬು-ಎರಡುಭಾಗ
ಈ
ಈಡಾಡು-ಬಿಸಾಡು
ಈಯೊರ್ಮೆ-ಇದೊಂದು ಸಾರಿ
ಉ
ಉಕ್ಕೆವ-ಮೋಸ
ಉಂಗುಟ-ಅಂಗುಷ್ಟ,ಕೈಕಾಲುಗಳ ಹೆಭ್ಬರಳು
ಉತ್ಕರ-ಸಮೂಹ
ಉತ್ಪತನ-ಜಯ
ಉತ್ಪನ್ನಮತಿ-ಬುದ್ದಿವಂತ
ಉತ್ಪಾಟಿತ-ಕಿತ್ತ
ಉದ್ದಾನಿ-ಶ್ರೇಷ್ಟ.ಶ್ರೇಷ್ಟದಾನಿ
ಉದ್ದೂತ-ಮೇಲಕ್ಕೆದ್ದ
ಉಂದುರ-ಇಲಿ
ಉನ್ನಮಿತ-ಎದ್ದುಬೀಳುವ
ಉದ್ಭಾಸಿ-ಕಾಂತಿಯುಕ್ತ
ಉದ್ಯತ್ -ಶ್ರೇಷ್ಟ
ಉಪಕಂಠ-ತಪ್ಪಲು
ಉಪಶಮ-ಶಾಂತಿ
ಉಪಸರ್ಗ-ಹಿಂಸೆ
ಉಪಾತ್ತ-ಸಂಪಾದಿಸಿದ
ಉಪಸ್ತಿ-ಸೇವೆ
ಉಪಾಸ್ಯಮಾನ-ಅಬ್ಯಾಸಮಾಡು
ಉಪೇತ- ಕೂಡಿದ
ಉಪೇಶ್ವರ-ಉಪಪತಿ ಮಿಚಿಡ
ಉಪ್ಪಯಣ-ಪ್ರಯಾಣಿಸುವುದನ್ನು ನಿಲ್ಲಿಸುವುದು,ತಂಗುವಿಕೆ
ಉಮ್ಮಾರ್ಗ-ವಿರುದ್ದಮಾರ್ಗ
ಉರ್ವರಾಜನುನಂ-ಭುಮಿಯಜನ
ಉರದೆ-ಉಪೇಕ್ಷಿಸಿ
ಉಱೆ- – (?)
ಋ
ಋಕ್ಷ-ಕರಡಿ
ಎ
ಎಚ್ಚು-ಹಚ್ಚು, ಲೇಪಿಸು
ಎಡೆವೊತ್ತು-ಅಕಾಲ
ಎನ್ನನುಂ-ಎಂಥವನೂ
ಎನ್ನರುಂ-ಎಂಥವರೂ
ಎಱವಟ್ಟು-ಅಶ್ರಯ
ಎಸಕ-ಕಾರ್ಯ
ಏ
ಏಡಿಸು-ಹಾಸ್ಯಮಾಡು
ಏಳಿಂದಗೆಯ್-ಉದಾಸೀನ ಮಾಡು
ಒ
ಒಡನೆಯವರ್- ಜತೆಯವರು
ಒಡರಿಕುಂ-ಉಂಟುಮಾಡುವುದು
ಒಡರಿಸು-ಪ್ರಾರಂಭಿಸು
ಒನಕೆವಾಡು-ಬತ್ತಕುಟ್ಟುವಾಗ ಹೇಳುವ ಹಾಡು
ಓ
ಓಪಳ್-ಪ್ರಿಯೆ
ಓವರಿ-ಕೋಣೆ
ಔ
ಔದುಂಬರ-ಅತ್ತಿ
ಕ
ಕಚ್ಚಪ-ಅಮೆ
ಕಕುದ-ಶಿಖರ, ಗೂಳಿಯ ಹಿಣಿಲು
ಕಟಕ-ಸೈನ್ಯ
ಕಟ್ಟವಂಜರ-ನಾಗವೇದಿಕೆ
ಕಟ್ಟೇಕಾಂತ-ಅತ್ಯಂತ ಏಕಾಂತ
ಕಡುಗಾಳುತನ-ತುಂಬಮೋಸ
ಕಡೆಸಲ್ಲು-ಸಾದ್ಯವಾಗು
ಕಂಡದಿಂಡೆ-ಮಾಂಸಖಂಡ
ಕತಿಪಯ-ಕೆಲವು
ಕಥಕ-ಒಂಟೆ
ಕದಂಬ-ಕಡವೆಮರ
ಕನತ್ಕನಕ-ಹೊಳೆಯುವ ಚಿನ್ನ
ಕಂಧರ-ಕುತ್ತಿಗೆ
ಕಪಿಂಜರ-ಜಾತಕಪಕ್ಷಿ
ಕಪೋಲ-ಕೆನ್ನೆ
ಕವಳಿಗೆ-ಕಡತದ ಕಟ್ಟು
ಕರ್ಣೇಜಪ-ಚಾಡಿಕೋರ
ಕರ್ತರಿ-ಕತ್ತರಿ
ಕರ್ಪಟ-ಬಟ್ಟೆ
ಕಲ್ಲಸರ-ಕಠಿಣದ್ವನಿ
ಕವರ್ದುಕೊಳ್-ವಶಪಡಿಸಿಕೊಳ್ಳು
ಕಳಕುಳ-ಅಸ್ತವ್ಯಸ್ತ
ಕಳಭ-ಅನೆಯಮರಿ
ಕಳವಳ-ಅಸ್ತವ್ಯಸ್ತ
ಕಳಭ-ಅನೆಯ ಮರಿ
ಕಳಿಂಚ-ಮೋಸ
ಕಾದ್ರವೇಯ- ಹಾವನ್ನು ಕೊಂದವನು ಗರುಡ
ಕಾಂಚಿ-ಒಡ್ಯಾಣ ನಡುಪಟ್ಟಿ
ಕಾಮಾ-ಲಕ್ಷ್ಮೀ
ಕಾರಂಡ-ಬಾತುಕೋಳಿ
ಕಿಣೀಕೃತ-ಜಿಡ್ಡುಗಟ್ಟಿದ
ಕುತ್ಕೀಲ-ಬೆಟ್ಟ
ಕುಂದ -ಮೊಲ್ಲೆ
ಕುನುಂಗು-ಕುಗ್ಗು
ಕುಭೃತ್-ಪರ್ವತ
ಕುಮುದ-ನೈದಿಲೆ
ಕುರುವಕ-ಮದರಂಗಿ
ಕುಲಟೆ-ಜಾರೆ
ಕುಲಿಶ-ವಜ್ರಯಾಧ
ಕುಳೀರ-ಏಡಿ
ಕೂರ್ಪವರ್-ಪ್ರೀತಿಪಾತ್ರರು
ಕಱೆ- ವಸ್ರ್ತದ ಹೇನು
ಕೃಷ್ಣಮಾರ್ಗ-ಅಗ್ನಿ
ಕೃತಾಂತ-ಯಮ
ಕೆಂಗೋಲ್-ಕೆಂಪಾದಬಾಣ
ಕೆಲೆ-ಗುಟುರು ಹಾಕು
ಕೈಗಣ್ಮು-ಹೆಚ್ಚಾಗು
ಕೊಣಕು-ಕಂಡು, ಹಾರು
ಕೊರಪುಳ್ಳಿ-ಒರಟುಸೌದೆ
ಕೊರಂಗು-ಗೊರಸು
ಕರಕೆ-ಕಮಂಡಲ
ಕರಂಜ-ಹುನುಗಲುಮರ
ಕರಟಿ-ಆನೆ
ಕರಟ-ಗಂಡಸ್ಥಲ ಕಪೋಲ
ಕರವಾಳ-ಕತ್ತಿ
ಕರವೀರ-ಕಣಗಿಲೆ
ಕರಿಕರೇಣು-ಅನೆಯಮರಿ
ಕರ್ಕಟಕ-ಏಡಿ
ಕರ್ಕರ-ಪರಿವಾಳ
ಕರ್ಣಿಕಾರ-ಬೆಟ್ಟದಾವರೆ
ಕರ್ಣಧಾರ-ಹಡಗಿನಚಾಲಕ
ಕರ್ಣಿಕಾರ-ಬೆಟ್ಟದಾವರೆ
ಕೋಲ್- ಬಾಣ
ಕೌಶಿಕ-ಗೂಬೆ
ಕ್ಷಮಾಧರ-ಪರ್ವತ
ಕ್ಷೀಣಾಧಾತರ್-ನಿಶ್ಯಕ್ತರು
ಕ್ಷುಪ-ಪೊದರು
ಕ್ಷುರಭಾಂಡ-ಕ್ಷೌರದ ಪೆಟ್ಟಿಗೆ
ಕ್ಷೋಣೀಧ್ರ- ಬೆಟ್ಟ
ಖ
ಖಂಜನ-ಗವ್ಯಜಿಗ ಹಕ್ಕಿ
ಖಡ್ಗಸಹಾಯ-ಯುದ್ದಸಹಾಯ
ಖಡ್ಗಿ-ಖಡ್ಗಮೃಗ
ಖದಿರ-ಕಾಚು
ಖರ-ಕ್ರೂರ; ಕತ್ತೆ
ಖರದಂಡ-ತಾವರೆ
ಖರ್ವಡ-ಸಣ್ಣ ಕೋಟೆಯಿರುವ ಊರು
ಖಲ್ವಾಯಿತ-(?)
ಖೇಡ-ಎತ್ತರವಾದ ಕೋಟೆಯಿಂದ
ಕೂಡಿದ ಊರು
ಖುರ-ಗೊರಸು
ಗ
ಗಂಡಮಂಡಲ-ಅನೆಯ ಕಪೋಲ
ಗಂಡೂಷ-ಬಾಯಿಮುಕ್ಕಳಿಸುವುದು
ಗಭಸ್ತಿಮಾಲಿ-ಸೂರ್ಯ
ಗರ್ದಭೆ-ಹೆಣ್ಣುಕತ್ತೆ
ಗರ್ಬ-ಗರ್ವ
ಗವಾಪ-ಎತ್ತು
ಗವಾಶನ-ಬೇಡ
ಗಹ್ವರ-ಗುಹೆ
ಗೞಪು-ಹರಟು
ಗಾವಸಿಂಗ-ಗ್ರಾಮಸಿಂಹ, ನಾಯಿ
ಗಾಳು-ಮೋಸ
ಗಾಳುಗುಂಟಣಿ-ಕೆಟ್ಟ ಜಾರೆ
ಗುಂಡಿಗೆ-ಕಮಂಡಲ
ಗುಂಡು-ಸಮೂಹ, ಗುಂಪು
ಗುಣ್ಪು-ಆಳ
ಗಂಕರಗರ-ಒಂದು ಜಾತಿಯ ಹೇಸರಕತ್ತೆ
ಗೊರವ-ಸನ್ಯಾಸಿ
ಗೋತ್ರಭಿತ್-ಇಂದ್ರ
ಗೋಮಾಯು-ನರಿ
ಗೋಲಾಂಗೂಲ-ಕೋತಿ
ಗೋಷ್ಠಾಗಾರ-ಹಟ್ಟಿ
ಘ
ಘಸ್ಮರ-ನಾಶಪಡಿಸಿದ
ಘಾಸ-ಹುಲ್ಲು
ಚ
ಚಕ್ರವಾಳ-ಪರ್ವತ ಪಂಕ್ತಿ
ಚಕ್ರಿ-ವಿಷ್ಣು
ಚಕ್ಷುಃಶ್ರುತಿ-ಹಾವು
ಚಂಚು-ಕೊಕ್ಕು
ಚತರುಪಧಾವಿಶುದ್ದ-ಧರ್ಮ ಅರ್ಥ.
ಕಾಮ, ಮೋಕ್ಷಗಳ ದೃಷ್ಟಿಯಿಂದ ಶುದ್ಧನಾದವನು
ಚಾಟುಕಾರ-ಸಲಿಗೆ
ಚಾಮೀಕರ-ಚಿನ್ನ
ಚಮೂರ-ಹುಲಿ
ಚಮೂರು-ಒಂದು ಜಾತಿಯ ಜಿಂಕೆ
ಚಷಕ-ಬಟ್ಟಲು, ತಟ್ಟೆ
ಚಿರಂಜೀವಿ-ಕಾಗೆ
ಚೂಚುಕ-ತುದಿ
ಚೂಡಾಪೀಡ-ತಲೆಯ ಅಭರಣ
ಚೌವಟ್ಟ-ಚತುಷ್ಪಥ, ನಾಲ್ಕು ದಾರಿ ಕೂಡುವ ಸ್ಥಳ
ಛ
ಛಾಗಲ-ಆಡು
ಛಾಂದಸ-ವೇದಜ್ಞ
ಜ
ಜಗುನೆ-ಯಮುನಾದಿ
ಜಯನಶಾಲೆ-ಆಯುಧಶಾಲೆ
ಜರತ್-ಮುದಿ
ಜವ-ವೇಗ, ಯಮ
ಜಾತಿಬರ-ಹುಟ್ಟುಕಿವುಡ
ಜೀಮೂತ-ಮೋಡ
ಜೀವಂಜೀವ-ಚಕೋರ
ಜೋಡಾಡು-ವ್ಯಭಿಚಾರಿಸು
ಜೋಡೆ-ಜಾರೆ
ಝ
ಝಷಮೀನು
ತ
ತಕ್ಕೂರ್ಮೆ-ಸಹಜಪ್ರೀತಿ
ತನ್ನಪ್ಪುದು-ತಾನಾಗುವುದು
ತಪನ-ಸೂರ್ಯ
ತಪನಕಾಂತಾಶ್ಮ-ಸೂರ್ಯಕಾಂತಶಿಲೆ
ತಮಾಲ-ಹೊಂಗೆ
ತರಕ್ಷು-ಹುಲಿ
ತರಳಸಾಟಿಕ-ಹೊಳೆಯುವ ಸಟಿಕ ಶುದ್ಧಸಟಿಕ
ತರಶಿಪೆ-ಮರದಬೀಳಲು
ತಱ*ಸಂದು-ನಿಶ್ಚಯಿಸಿ
ತವಿಲ್-ನಾಶ
ತವಿಸು-ವ್ಯಯಿಸು
ತಾಪಿ-ತಪತೀನದಿ
ತಾಪಿಂಛ-ತಮಾಲ, ಹೊಂಗೆ
ತಾಮ್ರಚೂಡ-ಕೋಳಿ
ತಾರ್ಮುಟ್ಟು-ಅಸ್ತವ್ಯಸ್ತ
ತಾಕ್ಷ್ಯ-ಗರುಡ
ತಿಣ್ಪು-ಅಕ್ಯ
ತಿತಿಕ್ಷಾನ್ವಿತ-ಸಹಿಷ್ಣು
ತಿಲಕ-ಕ್ಷುರುಕ, ಫೇನಿಲ; ಸುಂದರ
ಪುಷ್ವಗಳನ್ನು ಬಿಡುವ ಒಂದು ಜಾತಿಯ ಮರ
ತುಡುಗಣಿ-ಕದ್ದು ತಿನ್ನುವುದು
ತರುಷ್ಕ-ಸಾಂಬ್ರಾಣಿ ಮರ
ತುೞ*ಸಂದರ್-ಶಕ್ತಿಗುಂದಿದವರು
ತುೞಲಲಾಳ್-ಪರಕ್ರಾಮಿ
ತೃಣಗ್ರಾಹಿ-ಹುಲ್ಲುತಿನ್ನುವನು
ತೊಲೆ- ತಕ್ಕಡಿ
ತ್ರಯೀಮಯ-ವೇದಸ್ವರೂಪ
ತ್ರಿಸಂಧ್ಯ-ಬೆಳಗ್ಗೆ ಮಧ್ಯಾಹ್ನ ಸಂಜೆ ಹೂ ಬಿಡುವ ಮರ(?)
ದ
ದುರ್ದುರ-ಕಪ್ಪೆ
ದಾವ-ಕಾಡುಗಿಚ್ಚು
ದಿವಸಕೃತ್-ಸೂರ್ಯ
ದಿವಿಜಾಶಾ-ಪೂರ್ವದಿಕ್ಕು
ದುರ್ಧರ-ಧರಿಸಲು ಅಸಾದ್ಯವಾದ, ಅತಿಶಯವಾದ
ದುಷ್ಟೂರೆಯ-ತುಂಬಲಾಗದುದು
ದೂದವಿ-ದೂತಿ
ದೂಸರು-ಕಾರಣ
ದೋರ್-ತೋಳು, ಬಾಹು
ದ್ವೀಪಿ-ಹುಲಿ
ದ್ರೋಣಮುಖ-ಜಲಸ್ಥಮಾರ್ಗಗಳನ್ನುಳ್ಳ ಊರು
Leave A Comment