ಧರಾಧರ-ಪರ್ವತ

ಧರಾಧರಧರ-ಕೃಷ್ಣ

ಧರ್ಮಾಕರಣ-ನ್ಯಾಯಾಪತಿ

ಷಣ-ಬುದ್ಧಿವಂತ

ದ್ವಸ್ತ-ನಾಶಪಡಿಸಿದವನು

ಧ್ವಾಂತ-ಕತ್ತಲೆ

ಧ್ರುವ-ಸ್ಥಿರ, ಶಾಶ್ವತ

ನಕುಲ-ಮುಂಗುಸಿ

ನಕ್ರ-ಮೊಸಳೆ

ನಖರಶಾಲಿ-ಉಗುರುಳ್ಳವನು

ನಂದ್ಯಾವರ್ತ-ನಂದಿಬಟ್ಟಲು

ನಮೇರು-ಸುರಹೊನ್ನೆ

ನಯಶಾಸ್ತ್ರ-ನೀತಿಶಾಸ್ತ್ರ

ನವಿರ್-ಕೂದಲು

ನಾಗಸಂಘ-ಅನೆಗಳ ಗುಂಪು

ನಾಗಿ-ಹೆಣ್ಣುಹಾವು

ನಾಭೇಯ-ನಾಭಿಯಲ್ಲಿಹುಟ್ಟಿದವ, ಬ್ರಹ್ಮ

ನಾವಿದ-ಕ್ಷೌರಿಕ

ನಿಕಾಯ-ಸಮೂಹ

ನಿಘೃಷ್ಟ-ಉಜ್ಜಿದ

ಕುರುಂಬ-ಸಮೂಹ

ನಿಚುಳ-ತೊರೆಗಣಿಗಿಲೆ ಮರ

ನಿಚ್ಚ-ನಿತ್ಯ

ನಿಚ್ಚಟಗಲಿ-ಸಹಜಶೂರ

ನಿಚ್ಚಲವಕ್ಕಿ-ಗೂಬೆ

ನಿಜಮಹತ್ತರ-ತನ್ನ ಮಂತ್ರಿ

ನಿತಂಬ-ತಪ್ಪಲು

ನಿತ್ತರಿಸು-ದಾಟು

ನಿದಾಘ-ಬೇಸುಗೆ

ನಿಮಿರ್ಚು-ವ್ಯಾಪಿಸು

ನಿರಾಕುಲ-ಬಾದೆಯಿಲ್ಲದ

ನಿರ್ಘಾತ-ಹೊಡೆತ

ನಿರ್ಘೋಷ-ದೊಡ್ಡಶಬ್ದ

ನಿರ್ಯದ್-ಹರಿಯುವ, ಸುರಿಯುವ

ನಿರ್ವಾತ-ಗಾಳಿಯಿಂದ,ರಕ್ಷಿಸುವುದು

ನಿಸ್ತಂಭ-ಕಂಬವಿಲ್ಲದಿರುವುಕೆ

ನಿಸ್ರಾವ-ಹೊರಚೆಲ್ಲುವಿಕೆ

ನಿಳಿಂಪ-ದೇವತೆ

ನಿಳಿಂಬ ಬೂಪ ಮನೋಜಂ(?)

ನೀಪ-ಕದಂಬವೃಕ್ಷ

ನೀರ್ಮಾನಸ-ನೀರು ಮನುಷ್ಯ

ನೀವಾರ-ಕಾಡಬತ್ತ

ನೆಗೞ್ತೆ-ಕೀರ್ತಿ

ನೆಗೞ್-ಮೊಸಳೆ

ನೇರಾಣಿ-ಒಂದು ಜಾತಿಯ ಚಿನ್ನ

ನ್ಯಗ್ಭೂತ-ಕೀಳುಮಾಡಿ

ನ್ಯಗ್ರೋಧ-ಆಲ

ನ್ಯಸ್ತ-ಇಟ್ಟ

ಪಚ್ಚಡಿಕೆ-ಹೊದಿಕೆ

ಪಂಚಾನನ-ಸಿಂಹ

ಪಟಲ-ಪರೆ

ಪಡೆವಳ-ಸೇನಾಪತಿ

ಪಡಿಯರ-ಪ್ರತೀಹಾರಿ,ದ್ವಾರಪಾಲಕ

ಪತಂಗ-ಪಕ್ಚಿ

ಪತತ್ರಿ-ಪಕ್ಷಿ

ಪತ್ತುವಿಡು-ಬಿಟ್ಟುಹೋಗು, ದೂರವಾಗು

ಪದವಳೆ-ಹದಮಳೆ

ಪದರಿಕ್ಕು-ವ್ಯಂಗವಾಗಿಕೂಗು ಶ್ಲೇಷೆಯಿಂದ ಮಾತಾಡು

ಪಂದೆ-ಹೇಡಿ

ಪಯನಾವು-ಕರೆಯುವ ಹಸು

ಪಯೋಷಿಣಿ-ನರ್ಮದಾನದಿ

ಪರದ-ವ್ಯಾಪಾರಿ

ಪರಿಗ್ರಹ-ಪರಿವಾರ

ಪರಿಚ್ಚೇದ-ಕತ್ತರಿಸುವುದ

ಪರಿದಾನ-ಉತ್ತರಿಯ

ಪರಿಯಷ್ಟಿ-ಶಶ್ರೂಷೆ

ಪತಿವೃಢ-ಶ್ರೇಷ್ಟ

ಪರ್ಚು-ಕಿವಿಮಾತು

ಪರ್ಬ-ಹಬ್ಬ

ಪಸದನ-ಪ್ರಸಾಧನ ಅಲಂಕಾರ

ಪಸಯಿಸು-ವಾಸಮಾಡು

ಪಸಾಯಿತ-ಪ್ರಸಾದಿತ ಅಪ್ತ

ಪೞ್ಕೆ-ಹಾಸಿಗೆ

ಪಾಟಲ-ಕೆಂಪುಬಣ್ಣ

ಪಾಟಲಿ-ಪಾದರಿ

ಪಾಟಲಿತ-ಕೆಂಪಾದ

ಪಾಣ್ಬ-ವ್ಯಭಿಚಾರಿ

ಪಾದಜ-ಶೂದ್ರ

ಪಾನಬೂರಂಗ-ಪಾನಭೂಮಿ

ಪಾಲಾಶ-ಮುತ್ತುಗ

ಪಾಸ-ಪಾಶ,ಹಗ್ಗ

ಪಾಳಿ-ಕ್ರಮ

ಪಠರೀ-ಮಡಕೆ

ಪಿಶಿತ-ಮಾಂಸ

ಪಿಶುಣ-ಚಾಡಿ, ಚಾಡಿಕೋರ

ಪುಡಿಕೆ-ಪೆಟ್ಟಿಗೆ

ಪಂಡರೀಕ-ಹುಲಿ, ಬೆಳ್ದಾವರೆ

ಪುದುವಿನೊಳ್-ಜೊತೆಯಾಗಿ

ಪುನ್ನಾಗ-ಸುರಹೊನ್ನೆ

ಪುಂಶ್ಚಲಿ-ಗಂಡುಬಿರಿ

ಪುಂಸ್ಕೇಸರಿ-ನರಸಿಂಹ

ಪುರಂಧರ-ಇಂದ್ರ

ಪುಳಿಮದ-ಬೇಡ

ಪುಷ್ಕರ-ಜಾರ

ಪೞುವಗೆ-ಕೆಟ್ಟ ಯೋಚನೆ

ಪೃಥು-ದೊಡ್ಡ

ಪೆಪ್ಪಳಿಸು-ಹೆದರು

ಪೆಱಗು-ಹಿಂಭಾಗ

ಪಱದೆಗೆ-ಹಿಮ್ಮಟ್ಟು

ಪೆಳಱು-ಹೆದರು

ಪೇಳಿಗೆ-ಪೆಟ್ಟಿಗೆ ಬುಟ್ಟಿ

ಪೊಡರ್ಪು-ಕಾಂತಿ

ಪೊರಸು-ಕಾಡು ಪಾರಿವಾಳ

ಪೊರಮಡು-ಹೊರ ಹೊರಡು

ಪೊಲಂಬು-ದಾರಿ

ಪೊಲ್ಲಗೆಯ್-ಕೆಡಕುಮಾಡು

ಪೊಲ್ಲಮೆ-ನೀಚತನ,ಹೊಲಸು,ಕೇಡು

ಪೊಸಂಬ-ಹೊಸಬ

ಪೋರಿ-ಹೋರಿ

ಪೋರ್ಕುಳಿ-ಹೋರಾಟ

ಪ್ರಕೃಷ್ಟ-ಅತಿಶಯ

ಪ್ತತತಿ-ಸಮೂಹ

ಪ್ರತಿಪತ್ತಿ-ಗೌರವ, ಜ್ಞಾನ

ಪ್ರತ್ಯರ್ಥಿ-ಪ್ರತಿವಾದಿ

ಪ್ರವರ-ಶ್ರೇಷ್ಟ

ಪ್ರಾವೃಟ್-ಮಳೆಗಾಲ

ಪ್ರೋತ್ಕಲಿತ-ಕಲಕಿದ

ಪ್ಲಕ್ಷ-ಬಸರಿಮರ

ಪ್ಲುಷ್ಟ-ಸುಟ್ಟ

ಬರಿತ-ಕಿವುಡಾದ

ಬಡವು-ದುರ್ಬಲ

ಬಂಧೂಕ-ಬಂದುಗೆ ಕೆಂಪು ಹೂ

ಒಂದು ಜಾತಿಯ ಮರ

ಬಲವೈರಿ-ಇಂದ್ರ

ಬಲಿಪುಷ್ಟ-ಕಾಗೆ

ಬಲಿಭುಕ್-ಕಾಗೆ

ಬಹುದ್ವಿಷ ಅನೇಕ ಶತ್ರಗಳುಳ್ಳವರು

ಬಲಾರಿ-ಮಹಾಕಾಳಿ

ಬಳ್ಳು-ನರಿ

ಬೞೆಯುಟ್ಟು-ಕರೆಕಳುಹಿಸು

ಬಾಣಸ-ಅಡುಗೆ

ಬಾಯ್ಕೇಳಿಸು-ವಶಪಡಿಸು,ಜಯಿಸು

ಬಾರ್ತೆ-ಪ್ರಯೋಜನ, ಲಾಭ

ಬಾಱ*-ಸರದಿ

ಬಾಳ್ತ-ಪ್ರಯೋಜನ, ಲಾಭ

ಬಿಕ್ಕೆ-ಬಿಕ್ಷೆ

ಬಿಣ್ಪು-ಭಾರ

ಬಿನ್ನಣಿಗ-ವಿಜ್ಞಾನಿ, ಕುಶಲಿ

ಬಿಲ್ಲ ಬಿನ್ನಣಿ-ಧನುರ್ವಿಜ್ಞಾನಿ

ಬಿಲ್ಲುಂಬೆಱಗು-ಅಶ್ಚರ್ಯ

ಬಿೞ್ತು-ಬೀಜ

ಬೀಯ-ವ್ಯಯ

ಬೀಸರ-ನಾಶ

ಬುಭುಕ್ಷಿತ-ಹಸಿದವನು

ಬೂತ-ಭೂತ

ಬೆಲ್ಲವಾತು-ಮುಖಸ್ತುತಿ ಮಾಡಿ ಕಾರ್ಯ

ಸಾಸುವವನು

ಬಸನ-ಕಾರ್ಯ

ಬೆಳ್ಳ-ದಡ್ಡ

ಬೆಳ್ಳಾಳ್-ದಡ್ಡ, ಹೆಡ್ಡ

ಬ್ರೆಜಗ-ವಿಟ

ಬ್ರಹ್ಮಸ್ವಂ-ಬ್ರಾಹ್ಮಣನಿಗೆ ಸೇರಿದ ವಸ್ತು

ಭಗಣ

ಭಣಿತೆ-ಹೇಳಿಕೆ

ಭಲ್ಲೂಕ-ಕರಡಿ

ಭಿದು-ಕುಂಭಸ್ಥಳ

ಭೀರು-ಹೆದರುವವನು

ದವನಕ ಎಂಬ ನರಿ

ಭೇಕ-ಕಪ್ಪೆ

ಭೃಕ್ಷೆ-ಭಿಕ್ಷೆ

ಭ್ರಾಜಿಷ್ಣು-ಪ್ರಕಾಶಮಾನ

ಮಕ್ಷಿಕಾ-ಸೊಳ್ಳೆ, ನೊಣ

ಮಖ-ಯಜ್ಞ

ಮಟ್ಟವಿರು-ಸುಮ್ಮನಿರು

ಮಡಂಬ-ಗಡಿನಾಡು ಎಂಬವನು

ಮತ್ಕುಣ-ತಿಗಣೆ

ಮನೆವಾೞದಮ್ಮ-ಗೃಹಸ್ಥಧರ್ಮ

ಮನೆಸನಿಗೊಂಡಿರು-ಮನೆಯನ್ನು

ಶನಿಯಂತೆ ಬಿಟ್ಟುಹೋಗದಿರು

ಮಂತಣ-ಮಂತ್ರಾಲೋಚನೆ      

ಮಂದರ-ಕುದುರೆಯ ಲಾಯ

ಮರದುಱುಗಲ್-ಮರದ ತೋಪು

ಮರುತ-ದೇವತೆ

ಮಱಗುತ್ತ-ಮರುಕಳಿಸಿದ ರೋಗ

ಮಸ್ತಿಷ್ಕ-ಮೆದುಳು

ಮಹಾಹಿ-ದೊಡ್ಡಹಾವು

ಮಹಿಭೃತ್-ರಾಜ

ಮಹೀಧ್ರ-ಬೆಟ್ಟ

ಮಾತುಲಂಗ-ಮಾದಳ

ಮಾತ್ರಾಭಾಂಡಾ-ಹಣದ ಪೆಟ್ಟಿಗೆ

ಮಾದ್ಯತ್-ಮದಿಸಿದ, ಸೊಕ್ಕಿದ

ಮಾದ್ವೀಕ-ವಧುವಿಗೆ ಸಂಬಂಸಿದ

ಮಾಯಿ-ಮೋಸಿಗ

ಮಾರ್ಕೊಳ್ಳು-ಎದುರಿಸು

ಮಾರ್ಬಟ್ಟೆ-ಬೇರೆದಾರಿ

ಮಾಲಾಮಂತ್ರ-ದುರ್ವ್ಮಂತ್ರ

ಮುಚುಕುಂದ-ನಿತ್ಯಮಲ್ಲಿಗೆ

ಮುಱೆವು-ಸಂಕೋಚ

ಮುಸು-ಕಪ್ಪುಮುಖದ ಕಪಿ

ಮೃಗಧೂರ್ತ-ಪ್ರಾಣಿಗಳಲ್ಲಿ ದುಷ್ಟ,

ಮೃಗಯಾ-ಬೇಟೆ

ಮೆಳ್ಪಡು-ಹೆದರು

ಮೇಕು-ಸ್ಪರ್ದೆ

ಮೇಚಕ-ಪಚ್ಚೆ

ಮೊಱೆ-ಕ್ರಮ,ಸಂಬಂಧ

ಮೌರ್ವೀ-ಬಿಲ್ಲಿನಹಗ್ಗ

ಯಕ್ಷೇಶ್ವರ-ಕುಬೇರ

ಯದ್ಭವಿಷ್ಯ-ಬಂದದ್ದು ಬರಳಿ

ಯಷ್ಟಿ-ದೊಣ್ಣೆ

ಯಾದಶ್ವರ-ಜಲಚರ

ಯಾನಪಾತ್ರ-ನೌಕೆ

ಯೂಥ-ಸಮೂಹ

ರಥಾಂಗ-ಚಕ್ರವಾಕಪಕ್ಷಿ

ರಂಭೆ-ಬಾಳೆ

ರಯ್ಯ-ರಮ್ಯ

ರವಿಸುತಾ-ಯಮುನಾನದಿ

ರಾಗರಸ-ಕಾಮ

ರಾಜಜಂಬೂ-ಅರನೇರಿಳೆ

ರಾತ್ರಿಂಚರ-ಗೂಬೆ

ರಾಸಭೀ-ಹೆಣ್ಣುಕತ್ತೆ ನೀರು

ರುಟ್-ರೋಗ

ರುರು-ಬಿಳಿಯಪಟ್ಟೆಗಳುಳ್ಳ ಸಾರಂಗ

ರುಸಿವಳ್ಳಿ-ಋಷಿಗಳ ಹಳ್ಳಿ

ಛೋಡಾಡು-ಹಿಂಸಿಸು

ಲಕುಟ-ದೊಣ್ಣೆ

ಲುಬ್ದ-ಜಿಪುಣ

ಲೋಹಿತ-ರಕ್ತ

ಲೌಲ್ಯ-ದುರಾಶೆ

ವಕುಳ-ಬಕುಳ

ವಟವಿಟಪಿ-ಅಲದಮರ

ವಜ್ರಾಯುತ-ವಜ್ರದ ಹಾಗಿರುವ

ವಹಿತ್ರ-ಹಡಗು, ದೋಣ, ತೆಪ್ಪ

ವಾಃಕಣಿಕಾ-ನೀರಿನ ಹನಿ

ವಾನರೀ-ಹೆಣ್ಣುಕೋತಿ

ವಾರ-ಸಮೂಹ

ವಾನೇಚರ-ಬೇಡ

ವಾಸಯಷ್ಟಿ-ಹಕ್ಕಿಗಳು ಕುಳಿತುಕೊಳ್ಳುವ ಕೋಲು

ವಿಕರಾಳ-ಅತಿಭಯಂಕರ

ವಿಕಳ ಶೂನ್ಯ

ವಿಜಿಗೀಷು-ಜಯಪೇಕ್ಷಿ

ವಿತಾನ-ಮೇಲ್ಕಟ್ಟು

ವಿತ್ರಸ್ತ-ನಾಶಮಾಡಿದ

ವಿದಳಿತ-ಅರಳಿದ

ವಿದ್ರಾವಣ-ಸೀಳಿದವನು,ನಾಶಮಾಡಿದವನು

ವಿದ್ವಸ್ತ-ನಾಶಪಡಿಸಿದ

ವಿನಿರ್ಜಿತ-ಗೆದ್ದ

ವಿಪಶ್ಚಿತ್-ವಿದ್ವಾಂಸ

ವಿಷಾಣ-ಕೊಂಬು

ವಿಸಟಂಬರಿ-ಅಲೆದಾಡು

ವಿಹಾಯಸರಿದಂಬು-ಆಕಾಶಗಂಗೆಯ

ವೀರುದ-ಪೊದರು

ವೃಕ-ತೋಳ

ವೃಂದಾರಕ-ಸಮೂಹ

ವೇಹಾರ-ವ್ಯವಹಾರ

ವ್ಯವಹಿತ-ತಡೆದ

ವ್ಯಾಕೀರ್ಣ-ತುಂಬಿರುವುದು

ಶಕುನಿ-ಪಕ್ಷಿ

ಶಕ್ತಧರ-ಸ್ಕಂದ, ಕುಮಾರಸ್ವಾಮಿ

ಶತಧೃತಿ-ಬ್ರಹಂ

ಶತಪತ್ರ-ತಾವರೆ

ಶಫರ-ಮೀನು

ಶಮಿ-ಬನ್ನಿ

ಶಂಭಾಯುದ-ಇಂದ್ರ

ಶರಾಸನ-ಬಿಲ್ಲು

ಶರ್ಕರಾ-ಮುಳ್ಳು

ಶಲ್ಯ-ಮೂಳೆ

ಶಲ್ಯಕ-ಮುಳ್ಳುಹಂದಿ

ಶಶ-ಮೊಲ

ಶಾಹ್ವರ-ಗೂಳಿ

ಶಾರದನೀರದ-ಶರತ್ಕಲದ ಮೋಡ

ಶಾರ್ದೂಲ-ಹುಲಿ

ಶಿಂಶುಮಾರ-ಮೊಸಳೆ

ಶುಂಡಾಲ-ಆನೆ

ಶೌಚ-ಸದಾಚಾರ

ಶ್ವಾಪದ-ಪ್ರಾಣಿ

ಶ್ಯೇನ-ಗಿಡುಗ

ಷಟ್ಚರಣಿ-ತುಂಬಿ

ಷಂಡ-ಸಮೂಹ

ಷಾಡ್ಗುಣ್ಯ-ಸಂ ವಿಗ್ರಹ ಯಾನ ಆಸನ

ಸಂಶ್ರಯ ದ್ವೈಭಾವ ಎಂಬ ಆರು

ಗುಣಗಳು

ಸಂಕ್ರಂದನ-ಇಂದ್ರ

ಸಂಗತಿ-ಸಹವಾಸ

ಸಜ್ಜುಕ-ಎಳೆಯ, ಹೊಸ

ಸಟಾಜಾಳ-ಕೇಸರಗಳ ಸಮೂಹ

ಸತ್ವ-ಹಿಟ್ಟು, ಶಕ್ತಿ, ಸತ್ವಗುಣ

ಸತ್ತುಗ-ಹುರಿಹಿಟ್ಟು

ಸದ್ಗ್ರಹ-ಒಳ್ಳೆಯ ಗ್ರಹ, ಶಭಗ್ರಹ

ಸದಾಗ್ರಹ-ಒಳ್ಳೆಯ ವಿಷಚಿiದಲ್ಲಿ ಹಟ

ಸಂತಮಿರು-ಸಮಾಧಾನದಿಂದಿರು

ಸಂತಂಬರು-ಸುಖವಾಗಿ ಬರು

ಸನ್ಯಂಗ-ಕದ್ದ ವಸ್ತು

ಸಪ್ತಸಪ್ತಿ-ಸೂರ್ಯ

ಸಭಾಜನ-ಸಹಭಾಗ

ಸಮಕಟ್ಟು-ವ್ಯವಸ್ಥೆ

ಸಮದ-ಸೊಕ್ಕಿದ  ಸಾರ-ಘನ

ಸಮಂತು-ಪೂರ್ಣವಾಗಿ

ಸಮಯಬಾಹ್ಯ-ಜಾತಿಯ ಹೊರಗು

-ಹವಿಸ್ಸನ್ನು ಅರ್ಪಿಸುವ ಸೌಟು

ಸಂಯುಗ-ಯುದ್ಧ

ಸವಣ-ಜೈನ ಸಂನ್ಯಾಸಿ    

ಸಾಮಜ-ಆನೆ    ಹಮ್ಮದ-ಮೂರ್ಚೆ

ಸಾಮಜಘಟೆ-ಆನೆಗಳ ಹಿಂಡು

ಸರಭಾಂಡ-ವಸ್ತು ಸಮೂಹ

ಸಾರಮೇಯ-ನಾಯಿ

ಸಿತ-ಸಕ್ಕರೆ, ಬಿಳಿಯ

ಸಿತಗತನ-ವ್ಯಭಿಚಾರ

ಸಿತಗಳ್-ವ್ಯಭಿಚಾರಿಣಿ

ಸಿದ್ದಿಗೆ-ಚರ್ಮದ ಚೀಲ

ಸಿಂಧುರಘಟೆ-ಆನೆಗಳ ಹಿಂಡು

ಸಿಂಧುವಾರ-ಸಣ್ಣಜಾತಿಯ ಒಂದು ಮರ (?)

ಸೀರಪಾಣಿ-ಬಲರಾಮ

ಸೀಱುಂಬುಳಾಡು-ಸೀರುವಂತೆ ಚೆಲ್ಲು

ಸುಗಂಡ-ಬಹಳ ಬಲಿಷ್ಠ

ಸುಪ್ತಪ್ರಲಾಪ-ಕನವರಿಕೆ

ಸುಯ್ದಾನ-ಸಂರಕ್ಷಣೆ

ಸುರದ್ವಿಟ್-ಅಸುರ

ಸುರಾಜೀವರಜಃ -(?)

ಸೂಕರ-ಹಂದಿ

ಸೂಕಳ-ತುಂಟು

ಸೂಳುಗಾಳೆ-ಕಾಲವನ್ನು ಸೂಚಿಸುವ ಕಹಳೆ

ಸೃಗಾಲ-ನರಿ

ಸೈತು-ಸಮಾಧಾನ

ಸೋವತ-ಆಹರ

ಸ್ವರು-ಸಿಡಿಲು, ಬಾಣ

ಸ್ಥಿತಿಸಾರ-ಸ್ಥಿರಬುದ್ಧಿಯವನು

ಸ್ರುಕ್

ಸ್ಮೇರ-ಮುಗುಳ್ನಗೆ

ಹರಿ-ಸಿಂಹ, ಕಪ್ಪೆ, ವಿಷ್ಣು

ಹಲ್ಲಣ-ಜೀನು

ಹ್ರದ-ಮಡು