ಜನನ : ೧೫-೭-೧೯೬೦

ಗುರುಪರಂಪರೆ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ಪದವಿಗಳಿಕೆ. ಸ್ವಾಧ್ಯಾಯಿಯಾಗಿ ಕೀಬೋರ್ಡ್‌ವಾದನದಲ್ಲಿ ಪರಿಣತಿ.

ಸಾಧನೆ : ಸುಮಾರು ಎರಡುವರೆ ದಶಕಗಳಿಂದ ಸುಗಮ ಸಂಗೀತ ಕ್ಷೇತ್ರದಲ್ಲಿ ಕೀಬೋರ್ಡ್‌ ವಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೈಸೂರು ಅನಂತಸ್ವಾಮಿ, ಸಿ. ಅಶ್ವಥ್ ಮುಂತಾದ ಹಿರಿಯ ಗಾಯಕರುಗಳಿಂದ ಮೊದಲ್ಗೊಂಡು ಇಂದಿನ ಪ್ರತಿಭಾನ್ವಿತ ಗಾಯಕರುಗಳೆಲ್ಲರ ಕಾರ್ಯಕ್ರಮಗಳಿಗೆ ಕೀಬೋರ್ಡ್‌ವಾದಕರಾಗಿ ಸಹಕಾರ ನೀಡುತ್ತಾ ಬಂದಿದ್ದಾರೆ. ಅಲ್ಲದೆ ಅನೇಕ ಭಾವಗೀತೆಗಳಿಗೆ, ಜಾನಪದ ಹಾಗೂ ಚಲನಚಿತ್ರ ಗೀತೆಗಳಿಗೂ ರಾಗ ಸಂಯೋಜನೆ ಮಾಡಿದ್ದಾರೆ. ೧೯೯೫ ರಲ್ಲಿ ಸಿ. ಅಶ್ವಥ್ ಅವರೊಂದಿಗೆ ಅಮೆರಿಕಾ ಪ್ರವಾಸ ಮಾಡಿದ್ದಾರೆ. ಅಲ್ಲದೆ ಸಂಯುಕ್ತ ರಾಷ್ಟ್ರ (ಯು.ಕೆ.) ಹಾಗೂ ಅಮೆರಿಕಾಗಳಲ್ಲಿ ನಡೆದ ಸಹಸ್ರಮಾನ ವಿಶ್ವಕನ್ನಡ ಸಮ್ಮೇಳನದಲ್ಲಿ ಪಾಲ್ಗೊಂಡ ಸುಗಮ ಸಂಗೀತ ತಂಡದ ವಾದ್ಯಗಾರರಲ್ಲೊಬ್ಬರಾಗಿ ಪ್ರತಿನಿಧಿಸಿದ್ದರು.

ಪ್ರಶಸ್ತಿ – ಸನ್ಮಾನ : ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಇವರಿಗೆ ತನ್ನ ೨೦೦೦-೦೧ರ ಸಾಲಿನ ಕರ್ನಾಟಕ ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.