ದಾರಿಬಿಟ್ಟು ಹೋಗುತಿಯಲ್ಲೊ ಬರಿ ಮಾತಿನಲ್ಲಿ
ನೂರು ವರುಷ ಕಾಲ ಕಳೆದಲ್ಲೊ |

ನೂರು ವರಷ ಕಾಲ ಕಳೆದೆ ಯಾರು ಬರುವರು
ನಿನ್ನ ಹಿಂದೆ
ಮಾರಹರನ ಮನೆಯ ಮಾಡದೇ
ಹಾರಿ ಹೋಯಿತು ನಿನ್ನ ಜೀವ || ದಾರಿ ||

ಜಾರಿಬಿದ್ದೆ ನಾರಿಮಣಿಗೆ
ಗರುವ ಯಾತಕೆ ಪ್ರಾಯದೊಳಗೆ
ಸರ್ವಸಾಕ್ಷಿ ಮೂರ್ಖನೆಡೆಗೆ
ಶರಣು ಎನ್ನುತ ಮಣ್ಣಿಗೆ ಹೋದೆ

ವೇದಶಾಸ್ತ್ರ ಪುರಾಣಗಳನು
ಕ್ರೋದಾದಿಂದ ಸುಳ್ಳು ಎಂದೆ
ಸಾದು ಸಜ್ಜನ ಶರಣರೊಂದಿಗೆ
ತರ್ಕಮಾಡುತ ಮೂರ್ಖನಾದೆ

ಭಜನೆ ಮಾಡೋ ಭಕ್ತರ ನೋಡಿ
ಅರಸು ಮುನೇಂದ್ರ ನೆನಿದೆ
ಸುಜನ ಸಂಘವ ದೂರ ಮಾಡಿ
ಯಮನ ಹಿಂಸೆಗೆ ಪಾತ್ರನಾದೆ

ಕಳವಿಬಾವಿ ರಂಗಸ್ವಾಮಿ
ಭಕ್ತರೊಂದಿಗೆ ಜಗಳವಾಡಿ
ಸುಳಿದ ಬಾಳೆಯ ಸಿಪ್ಪೆಯು ತೆರದಿ
ಕೊಳತು ನಾರುತ ಮಣ್ಣಿಗೆ ಹೋದೆ