ಅದೋ ಅಲ್ಲಿ ಪರಮ ಶಿವನು
ನರ್ತಿಸುವನು ಮೋದದಿ
ಡಿಮಿ ಡಿಮಿ ಡಿಮಿ ಡಮರುನಾದ
ಮೊಳಗಿದೆ ಬ್ರಹ್ಮಾಂಡದಿ !

ಕೊರಳ ಸುತ್ತ ರುಂಡಮಾಲೆ
ದಿಕ್ಕು ದೆಸೆಗೆ ತೂಗಿದೆ.
ಜಡೆಯ ಗಂಗೆ ಬುಸುಗುಟ್ಟಿದೆ,
ಉಗ್ರ ಅನಲ ಶೂಲ ದೀಪ್ತಿ
ಕಣ್ಣುಗಳನೆ ಕುಕ್ಕಿದೆ !

ಕಟಿಯ ಸುತ್ತ ಸರ್ಪರಾಜಿ
ಹೆಡೆಯಾಡಿಸಿ ಮಿರುಗಿದೆ.
ಅದೊ, ಲಲಾಟದಲ್ಲಿ ನೋಡು
ಶಶಿಕಳೆಯೂ ಜ್ವಲಿಸಿದೆ !