ಸೆಪ್ಟೆಂಬರ್

ಶ್ರೀ ವೀರರಾಜ್‌ ಅರಸುರವರು ಐವತ್ತು ರೂ. ಕೊಟ್ಟು ಹೋದರು. ಶಿವಮೊಗ್ಗಾದಿಂದ ಶ್ರೀಗಳಾದ ವೈ. ರಾಮಕೃಷ್ಣ ಮತ್ತು ಭಾ. ಕೃಷ್ಣಮೂರ್ತಿ ಬಂದಿದ್ದರು. ಶ್ರೀ ಶಿವರಾಮ ಪೊದುವಾಳರು ಬಂದಿದ್ದಾರೆ.

ಸೆಪ್ಟೆಂಬರ್

ಶ್ರೀ ನಂದಾ ಬೆಳಿಗ್ಗೆ ಬಂದು ಹೋದರು. (ಪ್ರಭಾಕರ ಭಟ್ಟ) ಶ್ರೀ ಕಣ್ಣನ್‌, ಮೆನನ್‌ ಹೆಸರಿಗೆ ಒಂದು ಶುಭಾಶಯ ಮತ್ತು ಶ್ರೀ ಪುಟ್ಟಸ್ವಾಮಯ್ಯನವರಿಗೊಂದು ಉತ್ತರ ಕಳಸಿದೆ.

ಸೆಪ್ಟೆಂಬರ್

ಬೆಳಿಗ್ಗೆ ಶ್ರೀ ನಂಜುಂಡಸ್ವಾಮಿಯವರು ಬಂದಿದ್ದರು. ೧೧, ೧೨, ೧೩ ರಂದು ತೀರ್ಥಹಳ್ಳಿಯಲ್ಲಿ ಕಾರ್ಯಕ್ರಮವಿದೆ ಎಂದು ತಿಳಿಸಿದರು. ಲಕ್ಷ್ಮೀದೇವಿ ಪತ್ರ, ಡಾ. ಪ್ರಕಾಶ್‌ಗೆ ಒಂದು ಉತ್ತರ.

ಸೆಪ್ಟೆಂಬರ್

ಶೀತವಿದೆ. ರಾತ್ರಿ ನಿದ್ರೆ ಬಂದಿತು. ಶ್ರೀ ಪಂಡಿತರು ಬರಲಿಲ್ಲ.

ಸೆಪ್ಟೆಂಬರ್

ಬೆಳಿಗ್ಗೆ ಫಣಿ, ಮನೆಯವರು, ಮಕ್ಕಳು ಮಾರ್ಕೆಟೆಂಗ್‌ಗೆ ಹೋಗಿ ಬಂದರು. ರಾತ್ರಿ ಬಹಳ ಹೊತ್ತು ನಿದ್ರೆ ಬರಲಿಲ್ಲ; ಪಂಡಿತರಿಗೂ ನಿದ್ರೆ ಕೊಡಲಿಲ್ಲ. ಸೈಕಲ್‌ರಿಪೇರಿ ರೂ ೧೩/- ಕೃಷ್ಣಮೂರ್ತಿ.

ಸೆಪ್ಟೆಂಬರ್

ತಾಯಿಯವರು ಹೊರಗಡೆ ಹೋಗಿ ಬಂದು ಬಾಗಿಲಿಗೆ ತಲೆ ಬಡಿದು ಬಿದ್ದು ರಕ್ತಸ್ರಾವವಾಗಿ ಶ್ರೀ ಗೋಪಾಲ ನಾಯ್ಕರು ಮತ್ತಿತರರು ಸೇವೆ ಮಾಡಿದರು ಎಂದು ಅಣ್ಣನವರ ಪತ್ರ – ಉತ್ತರಿಸಿದೆ. ತೀರ್ಥಹಳ್ಳಿಗೆ ಹೋದಾಗ ನೋಡಿ ಬರುವುದಾಗಿ ಬರೆದೆ. ಪಂಡಿತರು ಇದ್ದಾರೆ. ಫಣಿ ಬೆಳಿಗ್ಗೆ ಬಂದಿದ್ದರು. ಅಣ್ಣಪ್ಪ ಬಂದಿದ್ದರು. ಶ್ರೀ ಬಿ.ವಿ. ಮೂರ್ತಿಗಳು ದೊಡ್ಡ ಪ್ರಮಾಣದಲ್ಲಿ ನಿಧಿ ಅರ್ಪಿಸಬೇಕೆಂದರು. ಕುವೆಂಪು, ರಾಮಕೃಷ್ಣ ಹೆಗಡೆ ಗೌರವ ಕಾರ್ಯದರ್ಶಿಯಾಗಿರಬೇಕೆಂದರು.

ಸೆಪ್ಟೆಂಬರ್

ಎಂ. ಪಿ. ರಾಮಪ್ಪನವರ ಪತ್ರ ಬಂದಿದೆ ತಾಯಿಯವರು ಆರೋಗ್ಯವಾಗಿದ್ದಾರೆಂದು. ೧೧ನೇ ತಾರೀಖು ಶನಿವಾರ ರಾತ್ರಿ ರೈಲಿಗೆ ಪ್ರಯಾಣ ಮಾಡಲು ತೀರ್ಮಾನಿಸಿದೆ ಊರಿಗೆ. ಬೆಳಿಗ್ಗೆ ಲವಲವಿಕೆ ಇರಲಿಲ್ಲ. ಸಂಜೆ ಫಣಿರಾಜ್‌ ಬಂದಿದ್ದ. ಗೆ|| ರಮೇಶ್‌ ಬಂದು ಹೋದರು.

ಸೆಪ್ಟೆಂಬರ್

ಶ್ರೀ ಫಣಿರಾಜ್‌ ಮಧ್ಯಾಹ್ನ ಬಂದು ಸಂಜೆಯವರೆಗಿದ್ದು ಸಹಾಯ ಮಾಡಿದರು ಅಪೋಲೋಗೆ ಹೋಗಿ ನಾನು, ಇಳಾಗೀತಾ, ರಾಮಮನೋಹರ್ ಸಂಜೆ ಕೂದಲನ್ನು ಸರಿಮಾಡಿಕೊಂಡು ಬಂದೆವು.

ಶ್ರೀ ರಾಮಪ್ಪನಿಗೊಂದು ಪತ್ರ ಬರೆದೆ. ಅಂಚೆಗೆ ಹಾಕಲು ಫಣಿ ಹತ್ತಿರ ಕೊಟ್ಟೆ.

ಸೆಪ್ಟೆಂಬರ್ ೧೦

Canara Bank – self 100/-

ಸಂಜೆ ಡಾ. ಮುರುಡಪ್ಪ ಮತ್ತು ಅವರ ಪತ್ನಿ ಮೈಸೂರಿಗೆ ತೆರಳಿದರು. ಅವರ ಕೆಲಸ ಆಗಿಲ್ಲ.

ಶ್ರೀ ಗುರಪ್ಪನಾಯ್ಕರು ಅವರ ತಮ್ಮ ಇಂಜಿನಿಯರ್ ಬಂದಿದ್ದರು. ಡಾ. ಜೆಟ್ಕಾ ನಾಯ್ಕರನ್ನು ಚೀಣ್ಯಾದಿಂದ ಮಾಳೂರಿಗೆ ವರ್ಗಮಾಡಿಸಲು. ಬೆಂಗಳೂರು ವಿಶ್ವವಿದ್ಯಾಲಯ ವ್ಯವಹಾರ ನ್ಯಾಯಾಂಗ ವಿಚಾರಣೆ ಆಗಬೇಕೆಂದು ರಾಜ್ಯಪಾಲರನ್ನು ಒತ್ತಾಯಮಾಡಿ ಹೇಳಿಕೆ.

ಸೆಪ್ಟೆಂಬರ್ ೧೧

ರಾತ್ರಿ ರೈಲಿಗೆ ಶಿವಮೊಗ್ಗಾ ಹೋದೆವು. ಹೆಂಡತಿ ಮಕ್ಕಳ ಜೊತೆಯಲ್ಲಿ. ಶ್ರೀ ಕೃಷ್ಣ ಪಟ್ನಾಯಕ್‌ ಮದ್ರಾಸಿನಿಂದ ಬಂದು ಸೇರಿಕೊಂಡರು. ಫಣಿರಾಜ್‌, ವೆಂಕಟೇಶ್‌ ಹೆಗ್ಗಡೆ ಕಳಿಸಿ ಹೋದರು.

ಸೆಪ್ಟೆಂಬರ್ ೧೨

ಯುವಜನ ಸಭಾ. ತೀರ್ಥಹಳ್ಳಿಯಲ್ಲಿ ವಿಚಾರ ವಿಮರ್ಶೆ.

ಬೆಳಿಗ್ಗೆ ಶಿವಮೊಗ್ಗಾ ಸೇರಿ ತೀರ್ಥಹಳ್ಳಿಯನ್ನು ಮಧ್ಯಾಹ್ನ ಸೇರಿದೆವು.

ಸೆಪ್ಟೆಂಬರ್ ೧೩

ತೀರ್ಥಹಳ್ಳಿ ಕಾರ್ಯಕ್ರಮ.

ತಾಯಿಯವರು ಆರೋಗ್ಯವಾಗಿದ್ದಾರೆ. ೧೦.೩೦ಕ್ಕೆ ಆರಗಕ್ಕೆ ಹೋಗಿ ಹೆಂಡತಿ ಮಕ್ಕಳನ್ನು ಕರೆದುಕೊಂಡು ಬಂದು ಕಲ್ಲುಗುಂಡಿಗೆ ಹೊಗಿ ತೀರ್ಥಹಳ್ಳಿಗೆ ಬಂದೆವು. ರಾಮಪ್ಪನ ಮನೆಯಲ್ಲಿ ಊಟ. ಬೆಟ್ಟಮಕ್ಕಿ, ಕೃಷ್ಣಪ್ಪನವರು, ತಿಮ್ಮಣ್ಣ, ಐತಾಳರು, ಸದಾಶಿವರಾಯರು ಇವರ ಮನೆಗೆ ಹೋಗಿ ಬಂದೆವು. ೩ ಗಂಟೆಗೆ ಡಾ. ಲೋಹಿಯಾ ಪುಸ್ತಕ ಬಿಡುಗಡೆ ಮಾಡಿದೆ. ಕಾಗೋಡು ತಿಮ್ಮಪ್ಪನವರು ನನ್ನ ವಿಧಾನಸಭಾ ಭಾಷಣ ಪುಸ್ತಕ ‘ಶಾನಸಭೆಯಲ್ಲಿ ಶಾಂತವೇರಿ’.

ಸೆಪ್ಟೆಂಬರ್ ೧೪

೪.೩೦ ತೀರ್ಥಹಳ್ಳಿ ಬಿಟ್ಟೆವು. ಶಿವಮೊಗ್ಗಾದಲ್ಲಿ ಶ್ರೀ ಜೆ. ಹೆಚ್‌. ಪಟೇಲ್‌ಕಂಡಿದ್ದೆವು. ಶ್ರೀ ಭಟ್ಟರ ತಾಯಿಯನ್ನು ನೋಡಿದೆ. ಶ್ರೀ ಹೆಚ್‌. ಎಲ್‌. ಚಿನ್ನಪ್ಪನವರಲ್ಲಿ ಊಟ. ಅಣ್ಣನವರಲ್ಲಿ ಮನೆ ವಿಷಯ ಮಾತನಾಡಿದೆ. ರೈಲಿನಲ್ಲಿ ಬೆಂಗಳೂರು. ಶ್ರೀ ಚಿನ್ನಪ್ಪನವರು ಅಕ್ಕಿ ಕಳಿಸಿದರು.

ಅಕ್ಟೋಬರ್ ೨೩

ಕಂ. ಸಂ. ಸೋ. ಯುವ ಸಭಾ ಲೋಹಿಯಾ ಶಿಬಿರ ಉದ್ಘಾಟನೆ. ಪಡುವಗೋಡು. ಶ್ರೀಮತಿ ಸ್ನೇಹಲತಾ ರೆಡ್ಡಿಯವರಿಂದ. ಗೆ|| ವೆಂಕಟ್ಟರಾಂ. ಕೆ. ಜಿ. ಮಹೇಶ್ವರಪ್ಪ, ಕಾಗೋಡು ತಿಮ್ಮಪ್ಪ ಜಾಧವ್‌.

ಅಕ್ಟೋಬರ್ ೨೪

ಗೆಳೆಯರೊಂದಿಗೆ ಪಡವಗೋಡು.

ಅಕ್ಟೋಬರ್ ೨೫

ಶ್ರೀ ಲಂಕೇಶ್‌ ಬದಲು ಡಾ. ಅನಂತಮೂರ್ತಿಗಳ ಉಪನ್ಯಾಸ. ಭಗವಾನ್‌ ಬುದ್ಧನ ಬಿಂಬಸಾರನ ವಾಗ್ವಾದ. ‘ಆಶಾ ನಿಮೂಲನವೇ ದುಃಖ ನಿರ್ಮೂಲನ’ – ನಾನು ವಿಧಾನ ಸಭೆ ಚುನಾವಣಾ ಕ್ಷೇತ್ರಕ್ಕೆ ಸ್ಪರ್ಧೆ ಮಾಡದಿರುವುದನ್ನು ಅನಂತು ಸ್ವಾಗತಿಸುತ್ತಾನೆ.

ಅಕ್ಟೋಬರ್ ೨೬

ತಾಯಿಯವರ ಆರೋಗ್ಯ ತೀವ್ರ ಕೆಟ್ಟಿದೆ ಎಂಬ ತಂತಿ. ಆರಗಕ್ಕೆ ಬಾ, ಶ್ರೀ ಅಬೂಬೇಕರ್ ಕಾರಿನಲ್ಲಿ. ಗೆ|| ವೀರಣ್ಣ ಹೊಸನಗರ ಮಾರ್ಗ ಆರಗ ಕರೆತಂದ. ಗೆ|| ಸ್ವಾಮಿರಾವ್‌, ಕೋಡೂರು ಬಂದರು. ಸ್ವಾಮಿರಾವ್‌ ೧೦೦/- ಆರಗ ಮನೆಯಲ್ಲಿ ರಾತ್ರಿ ಕಳೆದೆ.

ಅಕ್ಟೋಬರ್ ೨೭

ಮನೆಯಲ್ಲಿ ರಾತ್ರಿ ಸುತ್ತಾ ಇರುವೆ.

ಅಕ್ಟೋಬರ್ ೨೮

ಮಧ್ಯಾಹ್ನ ತೀರ್ಥಹಳ್ಳಿಗೆ. ದೊಡ್ಡಮನೆ ಕೇರಿ ನಾಗೇಂದ್ರನಾಥರ ಮನೆಗೆ ಹೋದೆ. ರಾತ್ರಿ ನಿದ್ರೆ ಬಂದಿತು. ಹೋಯಿತು. ಸೋನು ಪತ್ರ. ಆರಗದಿಂದ ಅಣ್ಣ ಕಳಿಸಿದ್ದು.

ಅಕ್ಟೋಬರ್ ೨೯

ತಾಯಿಯವರು ಯಥಾಸ್ಥಿತಿ ಎಂದು ಗೋಪಾಲಣ್ಣ ಸುದ್ದಿ ತಂದರು. ಅಂತೆಯೇ ಸೋನುಗೆ ಪತ್ರ ಬರೆದೆ. ಖಚಿತ ವರ್ತಮಾನ ನಾವು ಕೊಡುವತನಕ ಸೋಮವಾರ ಬೆಂಗಳೂರಿನಿಂದ ಹೊರಡುವುದು ಬೇಡ ಎಂದು ಶ್ರೀಗಳಾದ ವೈ. ವಾಸಪ್ಪನವರು ಶ್ರೀ ಜೋಯಿಸ್‌, ಪುರುಷ, ದಿನೇಶ್‌, ಸಾಹೇಬರು ಅ. ಚನ್ನಪ್ಪ. ಕಿ. ಗೋ. ಕೃಷ್ಣ ಬಂದಿದ್ದರು.

ಅಕ್ಟೋಬರ್ ೩೦

ತಾಯಿಯವರಿಗೆ ಮತ್ತೆ ಚಳಿ-ಜ್ವರ. ರಾಮಪ್ಪ ಸಂಜೆ ತಂದ ಸುದ್ದಿಯ ಪ್ರಕಾರ ಇಂದು ವಾಸಪ್ಪ ಕಲ್ಲುಗುಂಡಿ, ಪುರುಷೋತ್ತಮ, ದಿನೇಶ್‌, ತಾ.ಬೋ. ಸದಸ್ಯರಾದ ಸುರೇಂದ್ರ ಭಟ್ಟರು, ನಾರಾಯಣಗೌಡರು, ಸು. ಭಟ್ಟರು, ಪುಟ್ಟಯ್ಯಗೌಡರು, ಜೋಯಿಸ್‌ ಭಾರತೀಪುರ.

ನವೆಂಬರ್

ಆರಗದಿಂದ ಅಣ್ಣ ಶಿವಮೊಗ್ಗಾ ಹೋಗುತ್ತಾ ಅವ್ವ ಸಹರಿಸುತ್ತಾಯಿಲ್ಲ. ಮನೆಯಲ್ಲಿ ಅತ್ತಿಗೆ ಆರೋಗ್ಯ ಕೆಟ್ಟಿದೆ ಎಂದು ಹೇಳಿ ಶಿವಮೊಗ್ಗಾ ಹೋದರು.

ನವೆಂಬರ್ ೧೦

ಕ್ಷೇತ್ರ ಸಮಿತಿ ಸಭೆ ನಡೆಯಿತು. ಗೆ|| ವೈ. ಆರ್. ಪ. ನವರ ಅಧ್ಯಕ್ಷತೆ. ಬಿ. ಎಸ್‌. ಚಂದ್ರಶೇಖರ್, ಶಂ. ನಾ. ಭಟ್ಟರು, ಗುಂಡಯ್ಯ ಹೆಗ್ಗಡೆಯವರ ಪತ್ರ ಬೆಂಬಲ ಸುರೇಂದ್ರ, ಚೂಡಯ್ಯ ಸಂಕದಹೊಳೆ, ಅಂಬಳಿಕೆ ಗುಂಡಪ್ಪ, ಜೋಗಪ್ಪ ಭಂಡಾರಿ, ಯಡೂರು ರಾಮಪ್ಪ ಹೆಗ್ಗಡೆ, ಭಾಸ್ಕರ ಭಟ್ಟರು, ಕಡಿದಾಳ್‌ ಜಯದೇವ, ಮಹಾಬಲ ಹೆಗಡೆ, ಈಶ್ವರಪ್ಪ ಶೆಟ್ಟಿ, ಎಂ. ಡಿ. ಶೇಷಪ್ಪ ಹೆಗ್ಗಡೆ.

ನವೆಂಬರ್ ೧೧

ಆರಗ ವರ್ತಮಾನ ಗೆಳೆಯ ನಾರಾಯಣಶೆಟ್ಟಿ ತಂದುಕೊಟ್ಟರು. ನಾಳೆಯಿಂದ ಪ್ರತಿದಿನ ಆರಗದಿಂದ ಬರುವಾಗ ವರದಿ ತರುವುದಾಗಿ ಹೇಳಿಹೋದರು. ರಾತ್ರಿ ಲೇಪನ ಹಾಕಿಕೊಂಡು ಮಲಗಿದೆ.

ನವೆಂಬರ್ ೧೨

ಅಣ್ಣ ಇಲ್ಲಿ ಬಂದು, ಅವರು ಆರಗದಲ್ಲಿ ೨-೩ ದಿನಗಳಿಂದ ಇದ್ದುದನ್ನು ತಿಳಿಸಿ, ಶಿವಮೊಗ್ಗಾ ಹೋದರು. ವಾಸು ನಿನ್ನೆ ಬಂದಿದ್ದನಂತೆ. ತಾಯಿಯವರ ಆರೋಗ್ಯ ಉತ್ತಮವಾಗಿಲ್ಲ. ಹಟ. ಗೆ. ನಾ ಶೆಟ್ಟಿ ವರದಿ ತಂದರು. ಡಾ. ಚಾರ್ಲ್ಸ್, ಗೆ|| ಸಿನ್ಹಾ, ಕಾಮತರು, ದಿನೇಶ್‌ ಪ್ರಕಾಶ್‌.

ನವೆಂಬರ್ ೧೩

ಇಂದು ಆರಗ ಹೋಗಿ ಬರುವ ಯೋಚನೆಯಲ್ಲಿದ್ದೆ. ಆಗಲಿಲ್ಲ. ತಾಯಿಯವರ ಆರೋಗ್ಯ ಯಥಾಸ್ಥಿತಿ ಇದೆ ಎಂದು ಗೆ|| ಕೃಷ್ಣ ವರದಿ ಮಾಡಿದರು. ರಾತ್ರಿ ೧೨.೩೦ ಎಚ್ಚರವಾಯಿತು. ಈಗ ೩.೩೦ ಬೆಳಗಿನ ಝಾವ. ನಿದ್ರೆ ಬರಲಿಲ್ಲ. ಮಲಗಲು ಪ್ರಯತ್ನಿಸುತ್ತಿದ್ದೇನೆ. ಶ್ರೀ ಚೌಂದಪ್ಪ ರೆಡ್ಡಿಯವರು ನಂಬಿಕೆ.

ನವೆಂಬರ್ ೧೪

ಈ ಮಧ್ಯಾಹ್ನ ರಾಮಪ್ಪ, ಭಾ. ಕೃಷ್ಣಮೂರ್ತಿ ಕಾರಿನಲ್ಲಿ ಆರಗ ಹೋಗಿ ತಾಯಿಯವರನ್ನು ನೋಡಿ ಸಮಾಧಾನ ಮಾಡಿಕೊಂಡು ಬಂದೆ. ಅಣ್ಣ ತಮ್ಮಗಳನ್ನು ಬೈಯುತ್ತಿದ್ದರು.

ನವೆಂಬರ್ ೧೫

ಶ್ರೀಮತಿ ಸಾವಿತ್ರಮ್ಮನವರು – ಮಗಳು ಅಂಬಮ್ಮನ ವಿವಾಹದ ಸೂಚನೆ ಕೊಟ್ಟು ಮುಂದಿನ ತಿಂಗಳು ೧೦ ತಾರೀಖಿಗೆ ನಿಶ್ಚಯ ಮಾಡುವುದಾಗಿ ತಿಳಿಸಿದರು. ನಿನ್ನೆ ಬೆಳಿಗ್ಗೆ ಶಾಸ್ತ್ರಿಗಳು ಹೇಳಿದ್ದರು. ಪಂಡಿತರು ಮಧ್ಯಾಹ್ನ ಮಾತನಾಡಿದ್ದರು.

ನವೆಂಬರ್ ೧೬

ನನ್ನ ಹೆಂಡತಿ ಮಕ್ಕಳ ಸುದ್ದಿ ತಿಳಿಯಲಿಲ್ಲ. ಬೆಳಿಗ್ಗೆಯಿಂದ Diabetes ಭಯ. ಮಧ್ಯಾಹ್ನ ನಿದ್ರೆ ಇಲ್ಲಾ. ಊಟ ಮಾಡಿ ಹೊರಳಾದಿದೆ. ಅವಿಶ್ರಾಂತ. ಸಂಜೆ ಶ್ರೀ ವೈ. ವಾಸಪ್ಪನವರು ಡಾ. ಚಾರ್ಲ್ಸ್, ಸಿನ್ಹಾ ಬಂದಿದ್ದರು. ಶ್ರೀ ಸಿಂಧುವಾಡಿ ನಾಗರಾಜ ೫೦/- ರೂ ಕೊಟ್ಟು ಹೋದರು. ಕಾಂತ ಭಟ್ಟರು ಬಹಳ ದಿನಗಳ ನಂತರ ಬಂದಿದ್ದರು.

ನವೆಂಬರ್ ೧೭

ರಾತ್ರಿ ೧.೩೦ ಎಚ್ಚರವಾಯಿತು. ಈ ಕ್ಷೇತ್ರಕ್ಕೆ ಅರ್ಹರು ಯಾರು ಯರನ್ನು ನಾಮಕರಣ ಮಾಡಬೇಕು? ಈ ಪ್ರಶ್ನೆಗೆ ನೇರ ಉತ್ತರ ಹೊಳೆಯಿತು : ಡಾ. ಲೋಹಿಯಾ, ಕುವೆಂಪುರವರ ಆಶೋತ್ತರಗಳನ್ನು ಪೂರೈಸುವ ಒಬ್ಬ ವ್ಯಕ್ತಿ ಪೂ. ಚಂ. ತೇಜಸ್ವಿಯವರನ್ನು ನಾಮಕರಣ ಮಾಡಲು ನಿರ್ಧರಿಸಿದೆ. ನಿನ್ನೆ ಸಂಜೆ ಶ್ರೀ ವೈ. ವಾಸಪ್ಪನವರು ಸೂಚಿಸಿದಂತೆ ಈಗಿಂದ ಕಾರ್ಯಾರಂಭ ರಾತ್ರಿ ೨.೩೦.

ನವೆಂಬರ್ ೧೮

ಡಾ. ತೇಜ ಪ್ರಕಾಶ್‌ ಬಂದು ರಕ್ತ ಒತ್ತಡ ನೋಡಿದರು. ೨೨೫/೧೫೦ ಮಾತ್ರೆ ತೆಗೆದುಕೊಳ್ಳಲು ಹೇಳಿದರು. ಮಧ್ಯಾಹ್ನ ಕೆಲವು ಕಾಲ ನಿದ್ರೆ ಮಾಡಿದೆ. ಡಾ. ರಾಂಭಟ್‌, ರಾಮಯ್ಯ ಬಂದಿದ್ದರು. ಅಣ್ಣ ಬಂದಿದ್ದರು. ಹೆಚ್‌. ಡಿ. ಸುರೇಂದ್ರ ೧೦೦/- ಚಿಕಿತ್ಸೆಗೆ ಹಣ ಜಮಾ ಮಾಡಿದರು.

ನವೆಂಬರ್ ೨೨

ಗೆ|| ನಾರಾಯಣರು ಕರೆದಿದ್ದ ಕಾರ್ಯಕರ್ತರ ಸಭೆ. ನನ್ನನ್ನು ಚುನಾವಣೆಗೆ ನಿಲ್ಲಿಸಬೇಕು ಎಂಬ ತೀರ್ಮಾನ. ಗೆ|| ಲಿಂಗಪ್ಪ ಬಂದಿದ್ದರು.

ನವೆಂಬರ್ ೨೩

  1. W. Board Meeting ಬಾಬ್ತು ೧೧.೮ ಜಮಾ. ಗೆ|| ಸದಾಶಿವರಾಯರು ಬಂದಿದ್ದರು! B. D. O. ಜೊತೆ.

* * *