ಜನನ : ೧೯೪೭ – ಬಿಜಾಪುರ ಜಿಲ್ಲೆಯ ಲಚ್ಯಾಣದಲ್ಲಿ

ಮನೆತನ : ಸಂಗೀತ ಕಲಾವಿದರ ಮನೆತನ.

ಗುರುಪರಂಪರೆ : ಕುಷ್ಟಗಿಯ ಗವಾಯಿ ಅಡಿವ್ಯಾಚಾರ್ಯರಲ್ಲಿ ಶಾಸ್ತ್ರೀಯ ಸಂಗೀತ ಕಲಿಕೆ. ಬೆಂಗಳೂರಿಗೆ ಬಂದ ನಂತರ ಪಂ. ರಾಮರಾವ್ ನಾಯಕ್ ಅವರಲ್ಲಿ ಆಗ್ರಾ ಘರಾಣೆ ಶೈಲಿಯಲ್ಲಿ ಸತತ ಶಿಕ್ಷಣ. ತಬಲಾ ವಾದನದಲ್ಲೂ ಪರಿಶ್ರಮ.

ಸಾಧನೆ : ಮೂರನೇ ವಯಸ್ಸಿನಿಂದಲೇ ಹಾಡುವ ಗೀಳು. ತಮ್ಮ ಹನ್ನೊಂದನೆ ವಯಸ್ಸಿನಲ್ಲಿ ವೀ. ಸೀ. ರವರ ’ಕಾದಿರುವಳು ಶಬರಿ’ ಗೀತೆಗೆ ರಾಗ ಸಂಯೋಜಿಸಿ ಹಾಡಿದ ಹೆಗ್ಗಳಿಕೆ. ಅದೇ ಅವರ ಪ್ರಥಮ ರಾಗ ಸಂಯೋಜನೆ ಎಂಬ ಹೆಮ್ಮೆ. ಭಾರತ ಸರ್ಕಾರದ ಸಂಗೀತ ನಾಟಕ ವಿಭಾಗದಲ್ಲಿ ಗಾಯಕಿಯಾಗಿ ನೇಮಕ. ೧೯೭೧ ರಲ್ಲಿ ದೇಶದ ಉತ್ತರ – ಪಶ್ಚಿಮದ ಹಿಮಚ್ಛಾದಿತ ಗಡಿಯ ಸೇನಾ ನೆಲೆಗಳಲ್ಲಿ ಗಡಿ ಕಾಯುವ ಯೋಧರ ಸೇವೆ. ಮುಂದೆ ಅಂದರೆ ೧೯೭೬ ರಲ್ಲಿ ಬೆಂಗಳೂರು ಆಕಾಶವಾಣಿ ಕೇಂದ್ರದ ನಿಲಯ ಕಲಾವಿದೆಯಾಗಿ ನೇಮಕ. ಅನಂತರ ಸಂಗೀತ ಸಂಯೋಜಕಿಯಾಗಿ ಬಡ್ತಿ. ಸುಗಮ, ಶಾಸ್ತ್ರೀಯ, ಜಾನಪದ, ರೇಡಿಯೋ ನಾಟಕಗಳಲ್ಲಿ ಸಂಗೀತ ಸಂಯೋಜಕಿಯಾಗಿ ಅವಿರತ ದುಡಿಮೆ. ಸುಗಮ ಸಂಗೀತದ ಜೊತೆಗೆ, ಶಾಸ್ತ್ರೀಯ ಸಂಗೀತದಲ್ಲೂ ಸಾಕಷ್ಟು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಆಕಾಶವಾಣಿಯಲ್ಲಿ ಸುಮಾರು ೩೦ ವರ್ಷಗಳ ಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿದ್ದಾರೆ.

ಪ್ರಶಸ್ತಿ – ಸನ್ಮಾನ : ಮೈಸೂರಿನ ಗುರುಕೃಪಾ ಸಂಗೀತ ಕೇಂದ್ರದಿಂದ ಗೌರವ ಸನ್ಮಾನ, ೨೦೦೪-೦೫ರ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಪ್ರಶಸ್ತಿ ಇವರಿಗೆ ಸಂದಿದೆ.