ಅ | ||
ಅಕಿಂಚನ | i-೨೬; | ಬಡವ |
ಅಖಲ್ಯ | ii-೧೮ | ಹೇಡಿ |
ಆಗುರ್ವು | ix-೪೭ | ಹೆದರಿಕೆ |
ಅಚ್ಚರೆ | x-೨೨ | ಅಪ್ಸರೆ. |
ಅಚ್ಚಿಗ | iii-೬ ವ | ವ್ಯಥೆ, ಉದ್ವೇಗ |
ಅಚ್ಚುಳಾಯ್ತ | xi-೨೫ | ಪರಿಚಾರಕ |
ಅಟ್ಟ | v-೫೪ | ಅಂಗಡಿ |
ಅಟ್ಟು | xi-೪೧ ವ | ಅಟ್ಟ, ಅಟ್ಟಣೆ. |
ಅಡಗು | xi-೪೨ | ಮಾಂಸ |
ಅಡಪವಳ್ಳ | xi-೩೨ ವ | ತಾಂಬೂಲವಾಹಕ; ಎಲೆ ಅಡಕೆಯ ಚೀಲವನ್ನು ತರುವ ಆಳು. |
ಅಡಸು | v-೧೨, ವ, ೧೮ | ಪ್ರಾಪ್ತವಾಗು, ಮೇಲೆ ಬೀಳು. |
ಅಡಹಡಿಸು | iv-೧೦, vii-೧೯ | ಸಡಗರ ಪಡು |
ಅಣ್ಮು | vii-೩೩ (ವ) | ಪ್ರಯತ್ನಿಸು |
ಅತ್ತಳಗ | i-೭೯ | ಅಸಾಧ್ಯ. |
ಅದಟು | iv ೪೨ | ಪರಾಕ್ರಮ. |
ಅನೀಕ | ಸೈನ್ಯ | |
ಅನೋಕಹ | viii ೫೮ | ಮರ. |
ಅಪಗತ | ix ೨ | ಕಳೆದು ಹೋದ; |
ನಿವಾರಣೆಯಾದ | ||
ಅಪ್ಪಯಿಸು | vii ೩೦ ವ | ಒಪ್ಪಿಸು |
ಅಪ್ಪುಕೆಯ್ | ix ೯ | ಸ್ವೀಕರಿಸು |
ಅಮಳ್ | iv ೫ | ಅವಳಿಜವಳಿ |
ಅಮೃತಾವಾಸ | i ೧ | ಮೋಕ್ಷ. |
ಅಯಸ | vii ೩೨ | ಕಬ್ಬಿಣ |
ಅಯ್ಕಿಲ್ | iv ೧೨ | ಚಳಿ, ಮಂಜು |
ಅರಾತಿ | i ೩೯ ವ; | ಶತ್ರು |
ಅರಿಯಿಸು | x ೧೨೦ ವ | ಕತ್ತರಿಸು |
ಅಸುಕೆ | ix ೪೮ | ಅಶೋಕ ವೃಕ್ಷ |
ಅಳಂಕೆವೆತ್ತಿರು | x ೬೨ | ಚಿತ್ರಿತವಾಗಿರು |
ಅಳವು | vii ೨೪, x ೩೩ | ಪ್ರಮಾಣ, ಅಳತೆ |
ಅಳಿಪು | xi ೧೯ ವ | ಅತ್ಯಾಶೆ. |
ಅಳುರ್ | iii ೪೦ v ೭ ವ | ವ್ಯಾಪಿಸು |
ಅಳುಂಬಂ | ii ೩೭, iv ೫೯ | ಅತಿಶಯ. |
ಅಳ್ಕುಱು | vii ೩೬ | |
ಅಳ್ಳಿಱಿ | v ೫೧ | ನಡುಗಿಸು, ಸ್ಪಂದಿಸು. |
ಅೞ್ತಿ | ii ೪೭ ವ, iv ೨೩, | ಪ್ರೀತಿ. |
ಅೞ್ವು | v ೨೭, xii ೪೦ | ವಿಶೇಷವಾಗಿ ಸುಡು, ದಹಿಸು. |
ಅಂಗಚಿತ್ತ | vii ೫ ವ, ೪೭ | ಬಹುಮಾನ |
ಅಂಚಿರ | viii ೬೫ | ಅಸ್ಪಷ್ಟ, ಅಶಾಶ್ವತ |
ಆ | ||
ಆಟಿಸು | vii ೨೭ ವ | ಅಪೇಕ್ಷಿಸು |
ಆಭ | xi ೪೧ | ಕಾಂತಿ. |
ಆಭೀಳ | ii ೫೨, i | ಭಯಂಕರ |
ಆಭೋಗ | viii ೬೪ | ವಿಸ್ತಾರ |
ಆರ್ಜಿಕೆ | viii ೬೯ | ಜೈನತಪಸ್ವಿನಿ. |
ಆರ್ಮ | i ೬, ೫೫; | ಆಶ್ರಯ. |
ಆಲಿವರಲ್ | x ೫೭ ವ | ಆಲಿಕಲ್ಲು. |
ಆಲೀಢ | i ೭೯ ವ | ಹೀರಿದ; ನುಂಗಿದ. |
ಅವಹ | i ೬೮ | ಉಂಟು ಮಾಡುವ |
ಆವಿದ್ಧ | viii ೬೪ | ಕೊರೆದ; ರಂಧ್ರಗೈದ. |
ಆಸಾರ | ix ೨೦ | ಜಡಿ ಮಳೆ |
ಆಳಿಸು | xi ೮೩ ವ | ಸೇರಿಸು, ಕೂಡಿಸು |
ಆಳ್ವೆರಿ | x ೫೨ | ಕೋಟೆ ಬುರುಜು |
ಇ | ||
ಇಕ್ಕುೞೆಸು | ix ೪೪ | ಇಕ್ಕಳದಲ್ಲಿ ಸಿಕ್ಕಿಸು; ಕಷ್ಟದಲ್ಲಿ ಸಿಕ್ಕಿಸು |
ಇಭ್ಯಕುಲ | x ೪ | ಶ್ರೀಮಂತ ಜಾತಿ; ವೈಶ್ಯ |
ಇಂದೋಳ, (ಇಂದೊಳ) | i ೭೧, v ೫೧ | ಹಿಂದೋಲ ರಾಗ |
ಇಂಬುಕೈ | ix ೩೭ | ಮನೋಹರವಾಗು |
ಈ | ||
ಈಳೆ | xi ೨೦ | ಒಂದು ಜಾತಿಯ ಮರ |
ಈಱ್ಕೊಳ್ | x ೫೬ | ಸೆಳೆದುಕೊ |
ಉ | ||
ಉಕ್ಕೆವತನ | ii ೬೨ ವ | ಕಪಟ; ಮೋಸ |
ಉಗಿ | i ೪೨, ii ೧೬ | ಆಕರ್ಷಿಸು |
ಉಗಿಬಗಿ | xi ೪೨ | ತುಂಡುಮಾಡು, ಕದಡು |
ಉಚ್ಚು | i ೬೫ | ನಿಮಿರಿ ನೆಟ್ಟಗೆ ನಿಲ್ಲು |
ಉಣ್ಮು | i ೭೨ | ಹೊಮ್ಮು, ಉಬ್ಬು, ಹೆಚ್ಚಾಗು |
ಉತ್ಸೇಧ | xi ೪೧ ವ | ಎತ್ತರ |
ಉದ್ದಂಬರು | i ೮೦ | ಗರ್ವಿಷ್ಠನಾಗು |
ಉದ್ಧುರ | viii ೬೩ | ಸ್ಪಷ್ಟವಾಗಿ ಕೇಳಿಸಿದ |
ಉದ್ಧೂತ | i ೨೦, ix ೬೯ | ತೊಳೆಯಲ್ಪಟ್ಟ |
ಉದ್ಭಾಸೆ | i ೮ | ಬೆಳಗುವವಳು |
ಉದ್ಭೂತ | iv ೧೩ | ಹುಟ್ಟಿದ |
ಉಪಕಂಠ | ii ೪೮ ವ, iv ೩೮ ವ | ಸಮೀಪ |
ಉಪಗತ | ii ೭, ೧೮ | ಸಮೀಪಿಸಿದ; ಸಹವಾಸಮಾಡಿದ |
ಉಪದಂಶ | xi ೨೯, ೩೨ ವ | ನಂಜಿಕೊಳ್ಳುವುದು, ಉಪ್ಪಿನಕಾಯಿ |
ಉಮ್ಮಚ್ಚ | iii ೬ ವ, ೨೬ | ಕ್ರೋಧ |
ಊ | ||
ಊಡು | ii ೬೩ | ಊಟಮಾಡಿಸು; ತಿನ್ನಿಸು |
ಊಳ್ | vii ೪೦ | (ನರಿಯಂತೆ) ಕೂಗು |
ಎ | ||
ಎಕ್ಕಸಿರ್ಕು | ii ೧೦ | ರೋಷ, ಉದ್ರೇಕ |
ಎಚ್ಚು | xii ೧೮ | ಬಳಿ, ಲೇಪಿಸು |
ಎಡಂಬಡು | iv ೩೨ | ಅಸಮಾಧಾನ, ಎಡವಟ್ಟು |
ಎಡೆಮಡಗು | v ೧೪ | ಅವಕಾಶಕೊಡು |
ಎಡೆವಟ್ಟಲ್ | xi ೨೬ | ಊಟದ ಬಟ್ಟಲು |
ಎಣಿಲ್ | vii ೨೭ ವ | ಸುಂದರಿ |
ಎಱಕ | ii ೨೮ | ಪ್ರೀತಿ |
ಎಱಿವಟ್ಟು | ii ೬, | ಶ್ರೇಷ್ಠಸ್ಥಾನ, ಮುಖ್ಯಸ್ಥಳ |
ಎಸಕ | vii ೧೧ | ಕಾರ್ಯ |
ಎಳೆ | ix ೬೯ | ಇಳೆ, ಭೂಮಿ |
ಏ | ||
ಏಗೊಳ್ | xi ೩೮ ವ | ಅಂಗೀಕಾರಮಾಡು |
ಏವ | ii ೩೨ ವ | ಅಪಮಾನ |
ಏಳಿಸು | vi ೫೫ | ಅವಹೇಳನ ಮಾಡು |
ಒ | ||
ಒಕ್ಕಲ್ | ii ೧೦ | ಸಂಸಾರ |
ಒಚ್ಚತ | iii ೬ ವ | ಹೊಂದಿಕೆ, ಸಂತೋಷ |
ಒಟ್ಟಜೆ | i ೪೪ | ಗುಂಪು, ರಾಶಿ |
ಒಡರ್ಚು | v ೫೬, vii ೩ | ಮಾಡು |
ಒಡವೞ್ದು | v ೧೨ | ಜೊತೆಗೆ ಬಾಳಿ |
ಒಡ್ಡಯ್ಸು | iv ೨೬ | ಸೋಲಿಸು; ಪ್ರತೀಕಾರ ಮಾಡು |
ಒಯ್ಕನೆ | iv ೧೮ | ಕ್ರಮವಾಗಿ |
ಒಱಿ | iv ೫೮ | ಜಿನುಗು |
ಒಳ್ಪು | i ೬, ೬೬, ೭೧ | ಒಳ್ಳೆಯತನ |
ಓ | ||
ಓಗರ | xi ೩೫ ವ | ಅನ್ನ |
ಓಜೆಗೊಳ್ | x ೨೨ | ಕ್ರಮವನ್ನು ಅನುಸರಿಸು; ಅನುಕ್ರಮವಾಗಿರು |
ಓವು | i ೪೭ | ಸಂರಕ್ಷಿಸು |
ಓಸರಿಸು | i ೭೪ | ಜಾರು |
ಔ | ||
ಔದುಂಬರ ಕುಷ್ಠ | v ೧೧, ೨೭ | ಅತ್ತಿಯ ಹಣ್ಣಿನಂತೆ ಹುಳುಬಿದ್ದ ಕುಷ್ಠ ರೋಗ |
ಔರ್ವಾನಲ | ix ೭೬ | ಬಡಬಾಗ್ನಿ |
Leave A Comment