ಅಂಕಿಗಳು ಪದ್ಯವನ್ನು ಸೂಚಿಸುತ್ತವೆ

ಅಂಗೈಸು ೧೮೧ ವ ಹವಣಿಸು
ಅಕ್ಕರಿಗ ೨೬೯ ಪಂಡಿತ
ಅಗಿ ೫೬ ಹೆದರು
ಅಗ್ಗಲಿಸು ೧೦೧ ಹೆಚ್ಚಾಗು
ಅಗುರ್ವಿಸು ೧೪೯ ಭಯಪಡಿಸು
ಅಡಸು ೪೧ ಮುನ್ನುಗ್ಗು
ಅಡ್ಡಣ ೩೭ ಗುರಾಣಿ
ಅಣಿ ೨೫೪ ಸೈನ್ಯ
ಅಣ್ಣರ್ ೧೨೩ ಹೇಡಿಗಳು, ಮೈಗಳ್ಳರು
ಅತ್ತಳ ೨೭೦ ಅತಿಶಯ
ಅದಿರ್ಮುತ್ತೆ ೪೫ ವಸಂತದೂತಿಯೆಂಬ ಬಳ್ಳಿ
ಅಮರ್ಚು ೯೮ ವ ಸೇರಿಸು, ಸಮೀಪಕ್ಕೆ ತರು
ಅಮಳ್ವಕ್ಕಿ ೧೫೭ ಚಕ್ರವಾಚ ಪಕ್ಷಿ
ಅರಗೀಲ್ ೧೬೭ ಅರೆಕಾಲು
ಅರುಹ ಅರ್ಹಂತ, ಜಿನ
ಅರೆವೆಣ್ಣ ೧೫೩ ಅರ್ಧನಾರೀಶ್ವರ, ಶಿವ
ಅಱ ೧೭೪ ಧರ್ಮ
ಅಱವಟ್ಟಿಗರ್ ೨೭೨ ಧರ್ಮಮಾರ್ಗದಲ್ಲಿ
    ನಡೆಯುವವರು
ಅಱಿಕೆ ೧೨೨ ಪ್ರಸಿದ್ಧವಾದ
ಅಲಂಪು ೩೯ ಸೊಗಸು, ವೈಭವ, ಸಂತೋಷ
ಅಲರ್ವಕ್ಕಿ ೧೫೩ ವ ದುಂಬಿ
ಅವಿ ೪೮ ಮುತ್ತುಕೊಳ್ಳು
ಅಳುಂಬ ೨೧೪ ಅಧಿಕ
ಅಳುರ್ಕೆ ೧೫೧ ವ್ಯಾಪಿಸುವುದು
ಅಳ್ಳೆಗೊಂಬು ೫೩ ತೆಳುವಾದ ಕೊಂಬೆ
ಅೞಲ್ ೨೮ ದುಃಖ, ವ್ಯಥೆ, ಸಂಕಟ
ಅೞ್ದ ೬೩ ವ ಮುಳುಗಿದ
ಅೞ್ಗಿಸು ೧೫೩ ಕ್ಷೀಣಗೊಳಿಸು, ನಾಶಮಾಡು
ಆನೆರಕ್ಕಸ ೧೩೦ ವ ಗಜಾಸುರ
ಆಯ ೯೪ ಅರ್ಹತೆ, ಯೋಗ್ಯತೆ
ಆರ್ ೧೨೩ ಆರ್ಭಟಿಸು
ಆರೆಕಾಱ ೩೭ ವ ಅರೈಕೆ ಮಾಡುವವನು, ಸಾಕುವವನು
ಇಂಗದಿರ್ ೧೧೩ ವ ಚಂದ್ರ
ಇಂಬು ಆಶ್ರಯಸ್ಥಾನ, ಮನೋಹರ
ಇಟ್ಟಣ ೩೭ ವ ಶೋಭೆ, ಮನೋಹರ
ಇಟ್ಟೆಡೆ ೫೮ ವ ಇಕ್ಕಟ್ಟಾದ,
    ಜನಜಂಗುಳಿಯ ಸ್ಥಾನ
ಇರ್ಕುಳಿಗೊಳ್ ೪೭ ಸೆಳೆದುಕೊಳ್ಳು
ಇರ್ಕೆವನೆ ೪೦ ವಾಸದ ಮನೆ
ಇಱ್ಕುಳಿ ೧೫೩ ಸೆಳೆ, ಸುಲಿ
ಈಡಿಱಿ ೧೮೧ ವ ಕೊಂಬನ್ನು ತೀಡು
ಉಂಡಿಗೆ ೧೩೧ ವ ಮೊಹರು
ಉಗ್ಗಡ ೧೩೪ ಉತ್ಕಟ, ಅಧಿಕ್ಯ
ಉಚ್ಚಳಿಸು ೧೧೩ ಹೊರಗೆ ಚೆಲ್ಲು, ಮೇಲೆ ಹಾರು
ಉಡಿ ೯೮ ವ ಮಡಿಲು
ಉಪ್ಪರ ವೊಯ್ಲು ೨೧೨ ಮೇಲುಗಡೆಯ ಏಟು
ಉಬ್ಬಟೆ ೧೪೨ ಅಧಿಕವಾದ
ಉರ್ಕು ಅಧಿಕ್ಯ
ಉರ್ಕುಡಿಗಳ್ ೨೧೧ ಪರಾಕ್ರಮಶಾಲಿಗಳು
ಉರವಣೆ ೧೧೩ ವೇಗ
ಉಱಿ ೨೨ ಹೆಚ್ಚಾಗಿ
ಊಱ್ ೪೫ ವ ಧ್ವನಿಮಾಡು
ಎಕ್ಕೆಕ್ಕೆ ೧೫೯ ಒಟ್ಟೊಟ್ಟಿಗೆ
ಎಡೆಗಿಱಿ ೭೬ ಕಿಕ್ಕಿರಿದ
ಎಡ್ಡ ೧೯೮ ವ ಮನೋಹರ
ಎರಲೆ ೯೭ ವ ಜಿಂಕೆ
ಎಱಕ ೧೧೨ ಪ್ರೀತಿ
ಎಱವೆಟ್ಟು ೮೬ ದಿಣ್ಣೆ
ಎಱಿ ೫೨ ಬೇಡು
ಎಱಿಯ ೧೪೨ ಒಡೆಯ, ಪ್ರಭು
ಎಳೆ ೩೯ ಇಳಾ, ಭೂಮಿ
ಎಳೆದೇರ ೧೫೩ ಇಳೆಯನ್ನು ತೇರಾಗಿ ಮಾಡಿಕೊಂಡವನು, ಈಶ್ವರ
ಏಡಿಸು ೧೭ ಹಾಸ್ಯ ಮಾಡು
ಏಱ್ ೨೩ ವ ಗಾಯ, ಹತ್ತು
ಏೞಿಸು ೧೦೩ ಹಾಸ್ಯ ಮಾಡು
ಐಸರಲು ೧೪೫ ಪಂಚಬಾಣ, ಮನ್ಮಥ
ಒಕ್ಕಲಿಕ್ಕು ೧೮೭ ನಾಶಪಡಿಸುವ, ಧ್ವಂಸ ಮಾಡು
ಒಗುಮಿಗೆ ೧೧೮ ಅಧಿಕ್ಯ
ಒಗೆ ೧೨೫ ಹುಟ್ಟು, ಮೂಡು
ಒಟ್ಟಜೆ ೨೪೨ ಗೌರವ, ಅಧಿಕ್ಯ, ಗುಂಪು, ಪರಾಕ್ರಮ
ಒಡ್ಡು ೧೫೭ ಸೈನ್ಯ, ಮೂಹ
ಒತ್ತಂಬರಿ ೨೩೭ ಮೇಲೆ ಬೀಳು
ಒಪ್ಪಂಬೂಸು ಒಪ್ಪವಿಡು
ಒರೆಗಾಱ ೩೬ ಚಿತ್ರಕಾರ
ಒಱಲ್ ೨೭ ವ ಪ್ರೀತಿಸು
ಒಸಗೆ ೨೫೨ ಸಂತೋಷ, ಸಡಗರ
ಒಸೆ ಪ್ರೀತಿಸು
ಒಳಸೋಱು ೧೮೧ ಮೆಯ್ದೆಗೆ, ಶಕ್ತಿಗುಂದು
ಓಜೆ ೧೦೦ ಪದವಿನ್ಯಾಸ, ಬೆಡಗು
ಓರ್ಗುಡಿಸು ೧೯೬ ಒಂದು ಕಡೆ ಒಟ್ಟಾಗಿ ಬೀಳು, ಕೂಡು
ಓಳಿ ೬೩ ಗುಂಪು