ಶ್ರೀಮತ್ಪರಮಗಂಭೀರ ಸ್ಯಾದ್ವಾದಾಮೋಘಲಾಂಛನಂ |
ಜೀಯಾತ್ರೈಳೋಕ್ಯನಾಥಸ್ಯ ಶಾಸ (ನಂ ಜಿನ ಶಾ) ಸನಂ ||

ಸ್ವಸ್ತಿ ಸಮಸ್ತ ಭುವನಾಶ್ರಯ ಶ್ರೀ ಪೃಥ್ವೀವಲ್ಲಭಮಹಾರಾಜ ಪರಮೇಶ್ವರ (ಪರಮ) ಭಟ್ಟಾರಕಂ ಸತ್ಯಾಶ್ರಯಕುಳತಿಳಕಂ ಚಾಳುಕ್ಯಾಭರಣಂ ಶ್ರೀಮತ್ರ್ತೈಳೋಕ್ಯಮಲ್ಲನಾಹಮಮ(ಲ್ಲದೇ)ವಂ ಸುಖಸಂಕಥಾವಿನೋದದಿಂ ರಾಜ್ಯಂಗೆಯ್ಯುತ್ತ ಮಿರೆಯಿರೆ

*ಮಲೆಪರ್ಮ್ಮಾಱಾಂಪರಿಲ್ಲಕ್ರಮದಿಂ (ನಧಟ) ರಾಟರ್ಪ್ಪರಿಲ್ಲುರ್ಕ್ಕಿ ದರ್ಕುಂ
ದಲೆವಾಯ್ವುದ್ವೃತ್ತರಿಲ್ಲೊಟ್ಟಜೆವೆರಸು ಕುಱುಂಬರ್ತ್ತಂಱುಂಬಿರ್ಪ್ಪರಿಲ್ಲೆ |
ತ್ತಲುಮುದ್ದಂಬರ್ಪ್ಪ ದಳ್ಳೆಂದುರಿವ ರಿಪುಗಳಿಲ್ಲೆಂಬಿನಂ ಕುನ್ತಳೋರ್ವ್ವೀ
ತಿಳಕಂ ತ್ರೈಳೋಕ್ಯಮಲ್ಲಕ್ಷಿತಿಪತಿಗೆ ಧರಾಚಕ್ರದೊ……ಕಚಕ್ರಂ (೦) ||

* ಲಾಟ ಕಳಿಂಗ ಗಂಗ ಕರಹಾಟ ತುರುಷ್ಕ ವರಾಳ ಚೋಳಕ
ರ್ಣ್ನಾಟ ಸುರಾಷ್ಟ್ರ ಮಾಳವ ದಶಾರ್ಣ್ನ ಸುಕೋಶಳ ಕೇರಳಾದಿ ದೇ |
ಶಾಟವಿಕಾಧಿಪರ್ಮ್ಮಲೆದು ನಿಲ್ಲದೆ ಕಪ್ಪಮನಿತ್ತು ನಿರ್ಮಿತಾ
ಘಾಟದೊಳಿರ್ಪ್ಪ…. ಯಳವೀ ದೊರೆತಾಹವಮಲ್ಲದೇವನ ||

ಇಂತು ಚತುರಂತ ಧಾತ್ರೀ
ಕಾಂತೆಯನಳವಡಿಸಿ ಚಕ್ರವರ್ತ್ತಿ ಶ್ರೀಯಂ |
ತಾಂ ತಳೆದು ಸುಖದೆ ಪಲಕಾ
ಲಂ ತವೆ ತವನಿಧಿಗಧೀಶನಾಹವ ಮಲ್ಲಂ ||

ಮ(ಗ ಧಾಂ) ದ್ರಾವನ್ತಿ ವಂಗದ್ರವಿಳಕುರುಖಸಾಭೀರ ಪಾಂಚಾಳಲಾಳಾ
ದಿಗಳಂ ಪೇಸೇಳೆ ಕೊನ್ದುಂ ಕವರ್ದುಮಸದಳಂ ಕೊಟ್ಟಜಂಗೊಣ್ಡುಮಾಳೋ

ಳಿಗೆದಂದುಂತೋಳನುಂ ಮನದ ತವಕಮುಂ ಪೋಗದೆಂದಿನ್ದ್ರನಂ ಕಾ
ದಿ ಗೆಲಲ್ಕಪ್ಪಂಗೊಡಲ್ಪರಿಸಿ ತಳರ್ದನೇಕಾಂಗದಿಂ ಸಾರ್ವಭೌಮಂ ||

ಗಗನ ನವಾಂಕ ಸಂಖ್ಯೆ ಸಕಕಾಳದೊಳಾಗಿರೆ ಕೀಳಕಾಬ್ದಕಂ
ನೆಗಳೆ ತದೀಯ ಚೈತ್ರಬಹುಳಾಷ್ಟಮಿಯೊಳ್ ರವಿವಾರದೊಳ್ ಜಸಂ |
ಮಿಗೆ ಕುಱುವರ್ತ್ತಿಯೊಳ್ಪರಮಯೋಗನಿಯೋಗದೆ ತುಂ (ಗ ಭ) ದ್ರೆಯೊ
ಳ್ಜಗದಧಿಪಂ ತ್ರಿವಿಷ್ಟಪಮನೇಱಿದನಾಹವಮಲ್ಲ ವಲ್ಲಭಂ ||

ಆ ಚಾಳುಕ್ಯಲಲಾಮ ಮ
ಹಾಚಕ್ರಿಯ ಪೆರ್ಮ್ಮಗಂ ಧರಾತಳಮಂ ಗೋ |
ತ್ರಾಚಳ ಜಳಧಿಪರೀತಮ
ನಾಚಂದ್ರಸ್ಥಾಯಿಯಾಗಲಾಳ್ವ ಮಹಾತ್ಮಂ ||

ಉದಿತವ್ಯೋಮಂ ನವಾಂಕ ಸಂಖ್ಯೆಸಕಕಾಳಂ ವರ್ತ್ತಿಸಲ್ಕೀಳಕಾ
ಬ್ದದ ವೈಶಾಖದ ಶುದ್ಧ ಸಪ್ರಮಿಯೊಳಿಜ್ಯಜ್ಯೋತಿಯೊಳ್ ಶುಕ್ರವಾ |
ರದೊಳತ್ಯಂತ ಕುಳೀರ ಲಗ್ನದೊಳಿಭಾಶ್ವವ್ರಾತರತ್ನಾತಪ
ಚ್ಛದ ಸಿಂಹಾಸನ ಪೂಜ್ಯರಾಜ್ಯಪದಮಂ ಸೋ (ಮೇ) ಶ್ವರಂ ತಾಳ್ದಿದಂ ||

ಜಯಮಂ ಧರ್ಮ್ಮಕ್ಕೆ ಧರ್ಮ್ಮಾನ್ವಯಮನಸದಳಂ ಸಾಧುವರ್ಗ್ಗಕ್ಕೆ ವರ್ಗ್ಗ |
ತ್ರಯಮಂ ತನ್ನಂತರಂಗಕ್ಕೊದವಿಸಿ ಧರೆಯಂ ಕೂಡೆ ಸನ್ಮಾನ ದಾನ |
ಬ್ರಯದಿಂ ಸನ್ತಯ್ಸೆ ಕಾಳಂ ಕೃತಯುಗಮಯಮಾಯ್ತೆಂಬಿನಂ ತನ್ನ ರಾಜ್ಯೋ
ದಯದೊಳ್ ಲೋಕಕ್ಕೆ ರಾಗೋದಯಮೊದವಿದುದೇಂ ಧನ್ಯನೋ ಸರ್ವಭೌಮಂ ||

ಆ ಪ್ರಸ್ತಾವದೊಳ್
ನವರಾಜ್ಯಂ ವೀರಭೋಜ್ಯಂ ಪುಗಲಿದವಸರಂ ಸುತ್ತುವೆಂ ಗುತ್ತಿಯಂ ಮು ತ್ತುವೆನೆಂಬೀ
ಗರ್ಬಂದಿಂ ಚೋಳಿಕನಧಿಕಬಳಂ ಮುತ್ತಿ ಮಾರ್ಗ್ಗುತ್ತಿಯಂ ಪ |
ಣ್ಣುವುದಂ ಕೇಳ್ದೆತ್ತೆನುತ್ತೆತ್ತಿದ ತುರಗದಳನ್ತಾಗೆ ಸಯ್ತಾಗದು ಗ್ರಾ
ಹವದೊಳ್ ಬೆಂಗೊಟ್ಟು ಸೋಮೇಶ್ವರ ನೃಪನ ಬಳಕ್ಕೋಡಿದಂ ವೀರಚೋಳಂ ||

* ಪೆಸರಂ ಕೇಳ್ದಳ್ಕಿ ಬೆಳ್ಕುರ್ತುದು ಪರಧರಣೀಮಣ್ಡಳಂ ಗಣ್ಡುಗೆಟ್ಟಾ
ಳ್ವೆಸನಂ ಪೂಣ್ದತ್ತು ಶೌರ್ಯೋನ್ನತಿಗಗಿದಸುಹೃನ್ನಂಡಲಂ ಮೆಲ್ಪನಾವ |
ರ್ಜ್ಜಿಸಿದೊಂದಾಜ್ಞಾ ವಿಶೇಷಕ್ಕೆಳಸಿದುದು ಸುಹೃನ್ಮಂಡಲಂ ಸಂತಮಿನ್ತಾ
ದೆಸಕಂ ಕೈಗಣ್ಮೆ ಸೋಮೇಶ್ವರನೃಪತಿ ಮಹೀಚಕ್ರಮಂ ಪಾಳಿಸುತ್ತುಂ ||

ಅನ್ತಃಕಂಟಕರಂ ಪಡಲ್ವಡಿಸಿ ದುರ್ಗ್ಗಾಧೀಶರಂ ದುಷ್ಟ ಸಾ
ಮನ್ತ ದ್ರೋಹರನುದ್ಧತಾಟವಿಕರಂ ನಿರ್ಮ್ಮೂಳನಂಗೆಯ್ದು ವಿ |
ಕ್ರಾನ್ತಾರಾತಿಗಳಂ ಕಳಲ್ಚಿ ಧರೆಯುಂ ನಿಷ್ಕಂಟಕಂ ಮಾಡಿ ನಿ
ಶ್ಚಿನ್ತಂ ಶ್ರೀ ಭುವನೈಕಮಲ್ಲಮಹಿಪಂ ರಾಜ್ಯಂಗೆಯುತ್ತಿರ್ಪ್ಪಿನಂ ||

ತತ್ಪಾದಪದ್ಮೋಪಜೀವಿ ಸಮದಿಗತ ಪಂಚಮಹಾಶಬ್ದ ಮಹಾಮಣ್ಡಳಶೇಶ್ವರನುದಾರಮಹೇಶ್ವರಂ ಚಲಕೆ ಬಲ್ಗಣ್ಡಂ ಶೌರ್ಯ್ಯ ಮಾರ್ತ್ತಣ್ಡಂ ಪತಿಗೇ ಕದಾ(ಸಂ) ಸಂಗ್ರಾಮಗರುಡಂ ಮನುಜಮಾನ್ಧಾತಂ ಕೀರ್ತಿವಿಖ್ಯಾತಂ ಗೋತ್ರ ಮಾಣಿಕ್ಯಂ ವಿವೇಕ ಚಾಣಿಕ್ಯಂ ಪರನಾರೀ ಸಹೋದರಂ ವೀರವೃಕೋದರಂ ಕೋದಣ್ಡಪಾರ್ತ್ಥಂ ಮಣ್ಡಳಿಕಕಂಠೀರವಂ ಪರಚಕ್ರಭೈರವಂ ರಾಯದಣ್ಡಗೋಪಾಲಂ ಮಲಯ ಮಣ್ಡಳಿಕಮೃಗಶಾರ್ದ್ದೂಳ ಶ್ರೀ ಮತ್ತ್ರೈಳೋಕ್ಯಮಲ್ಲದೇವಪಾದಪಂಕಜಭ್ರಮರಂ ಶ್ರೀ ಭುವನೈಕಮಲ್ಲವಲ್ಲಭರಾಜ್ಯ ಸಮುದ್ಧರಣಂ ಪತಿಹಿತಾಭರಣಂ ಮಣ್ಡಳಿಕಮಕರಧ್ವಜಂ ವಿಜಯಕೀರ್ತ್ತಿಧ್ವಜಂ ಮಣ್ಡಳಿಕತ್ರಿಣೇತ್ರಂ ರಿಪುರಾಯಮಣ್ಡಳಿಕಯಮದಣ್ಡಂ ಜಯಾಂಗನಾಲಿಂಗಿತದೋರ್ದ್ದಣ್ಡಂ ವಿಸುಳರ ಗಣ್ಡಂ ಗಣ್ಡಭೂರಿಶ್ರವನೆಂಬಿವು ಮೊದಲಾಗೆ ಪಲವು ಮನ್ವರ್ತ್ಥಾಂಕಮಾಳೆಗಳಿನಳಂಕರಿಸಿ

ತ್ರೈಳೋಕ್ಯಮಲ್ಲವಲ್ಲಭ
ನಾಳೆನಿಸಿದರೊಳಗೆ ಮಿಕ್ಕ ಪಸಯಿತನುಂ ಮಿ |
ಕ್ಕಾಳುಂ ಮಿಕ್ಕಣ್ಮಿನ ಬ
ಲ್ಲಾಳು ಲಕ್ಷ್ಮಣನೆ ಪೆಱರನಱಿವರುಮೊಳರೇ ||

ಭುವನೈಕಮಲ್ಲ ದೇವನ
ಭವನದೊಳಂ ತಾನೆ ಮಾನಸಂ ತಾನೆ ಮಹಾ |
ವ್ಯವಸಾಯಿ ತಾನೆ ವಿಜಯ
ಪ್ರವರ್ದ್ಧಕನ್ತಾನೆ ಪಸಯಿತಂ ಲಕ್ಷ್ಮನೃಪಂ ||

ಅನ್ತೆನಿಸಿ
ಅಣುಗಾಳ್‌ಕಾರ್ಯ್ಯದ ಶೌರ್ಯ್ಯದಾಳ್‌ವಿಜಯದಾಳ್ ಚಾಳುಕ್ಯ ರಾಜ್ಯಕ್ಕೆ ಕಾ
ರಣಮಾದಾಳ್ ತುಳಿಲಾಳ್ತನಕ್ಕೆ ನೆಱೆದಾಳ್ ಕಟ್ಟಾಯದಾಳ್ ಮಿಕ್ಕಮ |
ನ್ನಣೆಯಾಳ್ ಮಾಂತನದಾಳ್‌ನೆಗೞ್ತಿವಡೆದಾಳ್ ವಿಕ್ರಾಂತದಾಳ್ ಮೇಳದಾಳ್
ರಣದಾಳಾಲ್ದನನಚ್ಚುವಾವೆಡೆಯೊಳಂ ವಿಶ್ವಾಸದಾಳ್ ಲಕ್ಷ್ಮಣಂ ||

ಎರಡು ರಾಜ್ಯದೊಳಂ ಪ್ರಜಾಪರಿಜನಂ ಕೊಣ್ಡಾಡೆ ಚಕ್ರೇಶರಿ
ರ್ಬ್ಬರುಮೋರಂದದ ಕೂರ್ಮ್ಮೆಯಿಂದೆ ವನವಾಸೀದೇಶಮಂ ಶಾಸನಂ |
ಬರೆದಶ್ವದ್ವಿಪ ಪಟ್ಟ ಸಾಧನಸಮೇತಂ ಕೊಟ್ಟಕಾರುಣ್ಯದಿಂ
ಪೊರೆಯಲ್ಮಣ್ಡಳಿಕತ್ರಿಣೇತ್ರನೆಸೆದಂ ಭೂಭಾಗದೊಳ್ ಲಕ್ಷ್ಮಣಂ ||

ಕಿಱೆಯಂ ವಿಕ್ರಮಗಂಗಭೂಪನೆನಗಾ ಪೆರ್ಮಾಡಿ ದೇವಂಗೆ ನೇ
ರ್ಗ್ಗಿಱಿಯಂ ವೀರನೊಳಂಬದೇವನೆನಗಂ ಪೆರ್ಮಾಡಿಗಂ ಸಿಂಗಿಗಂ |
ಕಿಱಿಯೈ ನೀಂ ನಿನಗೆಲ್ಲರುಂ ಕಿಱಯರೆನ್ದಗ್ಗಯ್ಸಿ ಕಾರುಣ್ಯದಿಂ
ನೆಱೆಕೊಟ್ಟಂ ಪ್ರತಿಪತ್ತಿ ವೃತ್ತಿ ಪದಮಂ ಲಕ್ಷ್ಮಂಗೆ ಸೋಮೇಶ್ವರಂ ||

ಮಿಗೆ ಬನವಾಸೆನಾೞ್ಕೆ ವಿಭು ಲಕ್ಷ್ಮಣನಾಗೆ ನೊಳಂಬಸಿಂದವಾ
ಡಿಗೆ ವಿಭುವಾಗೆ ವಿಕ್ರಮ ನೊಳಂಬನಳಂಪುರಮಾದಿಯಾದ ಭೂ |
ಮಿಗೆ ವಿಭು ಗಂಗಮಣ್ಣಳಿಕನಾಗೆ ಯಮಾಶೆಗೆ ನೀಳ ಲಾಳವಿ
ಣ್ಡೆಗೆಯೆನೆ ಕಣ್ಡುಕೊಟ್ಟನವರ್ಗಾ ನೆಲನಂ ಭುವನೈಕವಲ್ಲಭಂ ||

ಮದವದ್ವೈರಿ ನರೇಂದ್ರ ಮಣ್ಡಳಿಕ ಸೇನಾಭಂಜನಂ ವೀರನೀ
ರದ ದುರ್ವ್ವಾರ ಸಮೀರಣಂ ವಿತರಣ ಕ್ರೀಡಾವಿನೋದಂ ಪ್ರತಾ |
ಪದಿಳೀಪಂ ರಿಪು ಪುಂಜಕಂಜವನಕೇಳೀ ಕುಂಜರಂ ಲಂಜಿಕಾ
ಮದನಾಸ್ತ್ರಂ ಚಲದಂಕರಾಮ ನೃಪ ಲಕ್ಷ್ಮೀಲಕ್ಷ್ಮಣಂ ಲಕ್ಷ್ಮಣಂ ||

ಬಲಿವಲೆವ ಮಲೆವ ಕೆಲೆವದ
ಟಲೆವ ಪಳಂಚಲೆವ ಮಲೆಪರೆಲ್ವಂ ಮುಱಿದಂ |
ಮಲೆಯದ ಕೆಲೆಯದ ಬಲಿಯದ
ಮಲೆಪರನಿಸುವೆಸಕೆ ಬೆಸಸಿದಂ ಲಕ್ಷ್ಮನೃಪಂ ||

ದಾಳಿಯನಿಟ್ಟು ಕೊಂಕಣಮನಂಕಣಿಯೊಕ್ಕಿದಪಂ ತಗುಳ್ದು ಕೊಂ
ಬೇಳುಮನಟ್ಟಿ ಮುಟ್ಟಿ ಮಲೆಯೇಳುಮನಾಗೆ ಮುರ್ಚ್ಚಿ ಮುಕ್ಕಿ ನಿ |
ರ್ಮೂಳಿಸಿದಪ್ಪನೆಂದು ಮಲೆಪರ್ತ್ತಲೆದೋಱದೆ ರಾಯದಣ್ಡಗೋ
ಪಾಳನೃಪಂಗೆ ಮುಂದುವರಿದೆಂದುದನೆಂದಪರೇಂ ಪ್ರತಾಪಿಯೋ ||

ಆಳ್ವಲಮುಳ್ಳಡಶ್ವ ಬಲಮಿಲ್ಲ ಭಟಾಶ್ವ ಬಲಂಗಳುಳ್ಳಡಂ
ತೋಳ್ವಲಮಿಲ್ಲ ಭೃತ್ಯಹಯ ದೋರ್ಬ್ಬಲಮುಳ್ಳಡಮೇರ್ವ್ವಲಂಗಳಿ |
ಲ್ಲಾಳ್ವೆಸಗೆಯ್ಯದೇಕೆ ಬಲಿವರ್ಮ್ಮಲೆಪರ್ಮ್ಮಲೆಯಂಬುದೇನದಂ
ಬೆಳ್ವಲಮಾಗೆ ಮುಂತುಲಿದನಲ್ಲನೆ ಲಕ್ಷ್ಮಣನೆಂಬ ರಾವಣಂ ||

ಕವಿದುರ್ಗ್ಗಂ ಚಾತುರಂಗಂ ಬವಸೆದಳವುಳಂಧಾಳಿ ಸೂಳೇಱೆನಿಪ್ಪಾ
ಹವದೊಳ್ಚಾಳುಕ್ಯರಾಮಂ ಬೆಸಸೆ ರಿಪುಬಳಕ್ಕೆನ್ನನಿಂದ್ರಾರಿಯನ್ನಂ |
ಭವನನ್ನಂ ಭದ್ರನನ್ನಂ ಸಿಡಿಲಬಳಗದನ್ನಂ ಜ್ವಳಜ್ವಾಳಿಯನ್ನಂ
ಜವನನ್ನಂ ಮಾರಿಯನ್ನಂ ಸಮರ ಸಮಯದೊಳ್ ಲಕ್ಷ್ಮಣಂ ರಾಮನನ್ನಂ ||

ಕುದುರೆಯಮೇಲೆ ಬಿಲ್ಪರಸು ಸೂಲಿಗೆ ತೀರಿಕೆ ಭಿಣ್ಡಿವಾಳಮೆ
ತ್ತಿದ ಕರವಾಳು ಮಾಟಿಡುವ ಕರ್ಕ್ಕಡೆ ಪಾಱುವ ಚಕ್ರಮೆಂದೊಡೆಂ |
ತೊದಱುವರೆಂತು ಪಾಯಿಸುವರೆಂತು ತಱುಂಬುವರೆನ್ತು ನಿಲ್ವರೆಂ
ತೊದವುವರೆಂತು ಲಕ್ಷ್ಮಣನೊಳಾಂತು ಬರ್ದುಂಕುವರನ್ಯ ಭೂಭುಜರ್ ||

ಈಯಲ್ಬಂದಡೆ ಕಲ್ಪವೃಕ್ಷಮಿದಿರಂ ಬಂದಾನ್ತ ವಿದ್ವಿಷ್ಟರಂ
ಸೋಯಲ್ಬಂದಡೆ ಕಾಳಮೃತ್ಯು ಶರಣಾಯಾತಾವನೀಪಾಳರಂ |
ಕಾಯಲ್ಬಂದಡೆ ವಜ್ರಶೈಳ ಕೃತದುರ್ಗ್ಗಂ ಲೌಲ್ಯಭಾವಂ ಪರ
ಸ್ತ್ರೀಯಲ್ಬಂದಡೆ ರಾವಣಾತ್ಮಜ ಚಮೂವಿದ್ರಾವಣಂ ಲಕ್ಷ್ಮಣಂ ||

ಬಿಸುಪಳಿದರ್ಕ್ಕನುರ್ಕ್ಕುಡಿಗುಮಿಂದುವ ಕಾಂತಿ ಕಳಲ್ಗುಮಾಗಸಂ
ಕುಸಿಗುಮಿಳಾತಳಂ ತಳರ್ಗುಮಂಬುಧಿ ಬತ್ತುಗುಮಿಲ್ಲಿ ಲಕ್ಷ್ಮಣಂ |
ಪುಸಿದೊಡಮಾರ್ಗ್ಗಟೆಪ್ಪರಮನೊದ್ದಿದೊಡಂ ಮನಮೊಲ್ದು ಕೂಡಿ ಚಿ
ದ್ರಿಸಿದೊಡಮನ್ಯ ನಾರಿಗೆ ಮರುಳ್ದೊಡಮಾಹವದೊಳ್ಮರಲ್ದಡಂ ||

ಶತ್ರುಘ್ನಹರಿಶೌರ್ಯ್ಯನಂಗದಭುಜಂ ಸುಗ್ರೀವನಾತ್ಮೇಶಸೌ
ಮಿತ್ರಂ ರಾಮನಪಾಮರಂ ನರವರಂ ದುರ್ಯ್ಯೋಧನಂ ಭೀಮಗಾ |
(ತ್ರ)ತ್ರಂ ಭೀಷ್ಮ ಯುಧಿಷ್ಠಿರಂ ಗುರುಕೃಪಂ ಸತ್ಕರ್ಣ್ಣನೆಂದಂದೆ ದ
ಲ್ಚಿತ್ರಂ ಭಾವಿಸೆ ಲಕ್ಷ್ಮಭೂಪ ಚರಿತಂ ರಾಮಾಯಣಂ ಭಾರತಂ ||

ಕಲಿತನಮಿಲ್ಲ ಜಾಗಿಗೆ ವದಾನ್ಯತೆ ಮೆಯ್ಗಲಿಗಿಲ್ಲ ಚಾಗಿ ಮೆ
ಯ್ಗಲಿಯೆನಿಪಂಗೆ ಶೌಚಗುಣಮಿಲ್ಲ ಕರಂ ಕಲಿಚಾಗಿ ಶೌಚಿಗಂ |
ನಿಲೆ ನುಡಿವೋಜೆಯಿಲ್ಲ ಕಲಿಚಾಗಿ ಮಹಾಶುಚಿ ಸತ್ಯವಾದಿ ಮ
ಣ್ಡಳಿಕರೋಳೀತನೆಂದು ಪೊಗಳ್ದು ಬುಧಮಣ್ಡಲಿ ಲಕ್ಷ್ಮಭೂಪನಂ ||

ಮುನಿಯಿಂ ಕಿಸುಕಣ್ಚುವರೊಸೆ
ದು ನಗುವರಿನ್ತಿನಿತೆ ಪೆಱರ ಮುನಿಸುಂ ಮೆಚ್ಚುಂ |
ಮುನಿಯಿಸೆ ಮುನಿದ ಜವಂ ಹ
ರ್ಷನಾಗೆ ಹರ್ಷಂಗವೃಷಭಲಕ್ಷ್ಮಂ ಲಕ್ಷ್ಮಂ ||

ಎನೆ ನೆಗೞ್ದ ಲಕ್ಷ್ಮಭೂಪಂ
ವಿನಮಿತ ರಿಪುನೃಪತಿ ಮಕುಟ ಘಟ್ಟಿತ ಚರಣಂ |
ಬನವಸೆ ಪನ್ನಿರ್ಚ್ಛಾಸಿರ
ಮನಾಳುತುಂ ಸುಖದಿನರಸುಗೆಯ್ಯುತ್ತಿರ್ದಂ ||

ಇರೆ ಬನವಸೆ ಪನ್ನಿರ್ಚ್ಛಾ
ಸಿರಕ್ಕಮರ್ತ್ಥಾಧಿಕಾರಿಯುಂ ಕಾರ್ಯ್ಯ ಧುರ |
ನ್ಧರನುಂ ತದ್ರಾಜ್ಯಸಮು
ದ್ಧರಣನುಮೆನೆ ನೆಗೞ್ದ ಮಂತ್ರಿ ಮಂತ್ರಿನಿಧಾನಂ ||

ಕವಿತಾಚೂತಾಂಕುರ ಶ್ರೀಮದಕಳಕಳಕಣ್ಠೋಪಮಂ ಕಾವ್ಯ ಸೌಧಾ
ರ್ಣ್ನವವೇಳಾಪೂರ್ಣಚಂದ್ರಂ ಸಮವಿಷಯ ಮಹಾಕಾವ್ಯವಲ್ಲೀ ಲತಾಂತೋ |
ತ್ಸವ ಚಂಚಚ್ಚಂಚರೀಕಂ ವಸುಧೆಗೆಸದನುರ್ವ್ವೀನುತಂ ದಣ್ದನಾಥ
ಪ್ರವರಂ ಶ್ರೀ ಶಾನ್ತಿನಾಥಂ ಪರಮಜಿನಮತಾಂಭೋಜಿನೀ ರಾಜಹಂಸಂ ||

ಕುನಯಂಗಳ್ ಜೈನಮಾರ್ಗ್ಗಾಮೃತದೊಳಿರೆ ಜಲಕ್ಷ್ಮೀರದನ್ತಲ್ಲಿ ಸದ್ವಾ
ಕ್ಯ ನಿಶಾತೋಚ್ಚಂಚುವಿನ್ದಂ ಕುಮತಕಲುಷಪಾನೀಯಮಂ ತೂಳ್ದಿ ಜೈನಾ |
ನನನಿರ್ಯ್ಯತ್ತತ್ವ ದುಗ್ಧಾಮೃತಮನಖಿಳ ಭವ್ಯೋತ್ಕರಂ ಮೆಚ್ಚಲಾಸ್ವಾ
ದನೆಗೆಯ್ವೊಳ್ವಿಂದಮಾದಂ ಪರಮಜಿನಮತಾಂಭೋಜಿನೀರಾಜಹಂಸಂ ||

* ಪರಮಾತ್ಮಂ ನಿಷ್ಟಿತಾತ್ಮಂ ಜನಪತಿ ಪರಮಸ್ವಾಮಿ ತದ್ಧರ್ಮಮಾರ್ಮ್ಮಂ
ಗುರುವಂದ್ಯಂ ವರ್ದ್ಧಮಾನ ಬ್ರತಿಪತಿ ಜನಕಂ ಸಂದ ಗೋವಿನ್ದರಾಜಂ |
ಪಿರಿಯಣ್ಣಂ ಕನ್ನಪಾರ್ಯ್ಯಂ ತನಗಧಿಪತಿ ಲಕ್ಷ್ಮಕ್ಷ್ಮಾಮಾಪಾಳನಾತ್ಮಾ
ವರಜಂ ವಾಗ್ಭೂಷಣಂ ರೇವಣನೆನೆ ನೆಗೞ್ದಂ ಧಾತ್ರಿಯೊಳ್ ಶಾನ್ತಿನಾಥಂ ||

* ಸಹಜಕವಿ ಚತುರಕವಿ ನಿ
ಸ್ಸಹಾಯಕವಿ ಸುಕವಿ ಸುಕರಕವಿ ಮಿಥ್ಯಾತ್ವಾ |
ಪಹರಕವಿ ಸುಭಗಕವಿ ನುತ
ಮಹಾಕವೀನ್ದ್ರಂ ಸರಸ್ವತೀ ಮುಕಮುಕುರಂ ||

* ಸುಕರರಸಭಾವದಿಂ ವ
ರ್ನ್ನಕದಿಂ ತತ್ವಾರ್ತ್ಥ ನಿಚಯದಿಂ ಸೂಕ್ತಮೆನ |
ಲ್ಸುಕುಮಾರಚರಿತಮಂ ಪೇ
ಳ್ದ ಕವೀನ್ದ್ರಾಗ್ರಣಿ ಸರಸ್ವತೀ ಮುಖಮುಕುರಂ ||

* ಅಸಹಾಯನಾಗಿಯುಂ ಸುಜ
ನಸಹಾಯಂ ಮದವಿಹೀನನಾಗಿಯುಮರ್ತ್ಥಿ |
ಪ್ರಸರೋತ್ಕಟದಾನಿ (ಯ)ಧಿಕ
ನಸದೃಶ ವಿಭವಂ ಸರಸ್ವತೀ ಮುಖಮುಕುರುಂ ||

ಹರಹಾಸಾಕಾಶಗಂಗಾಜಳಜಳರುಹ ನೀಹಾರ ನೀಹಾರ ಧಾತ್ರೀ
ಧರ ನೀಹಾರಾಂಶು ತಾರಾವನಿಧರ ಶರದಂಭೋದರ ಕ್ಷೀರ ನೀರಾ |
ಕರ ತಾರಾ ಭಾರತೀ ದಿಗ್ರದನಿರದನ ಪೀಯೂಷಡಿಣ್ಡೀರಮುಕ್ತಾ
ಕರಕುಂದೇನ್ದ್ರೇ ಭ ಹಂಸೋಜ್ವಳ ವಿಶದ ಯಶೋವಲ್ಲಭಂ ಶಾನ್ತಿನಾಥಂ ||

ಒಡವೆಯನೊಳ್ಪಿನಿಂ ಪಡೆದು ಪುಂಜಿಸಿ ಪೂಜಿಸಿ ಕೋಣ ತಾಣದೊ
ಳ್ಮಡಗದೆ ಶಿಷ್ಟರಿಟ್ಟೆಡೆಗೆ ಬನ್ಧುಗಳಿಲ್ಲಮೆಗಪ್ಪುದೆಂದುಮೆ |
ನ್ನೊಡಮೆ ಶರೀರಮೆನ್ನದು ನಿಯೋಗದ ಪರ್ವ್ವಮಿದೆನ್ನದೆಂದು ಮೇ
ಳ್ವಡದಿರಿಮೆಂದು ಗೋಸನೆ ತೊಳಲ್ವುದುದೆ… ಶಾನ್ತಿನಾಥನ ||

ಎನೆ ನೆಗೞ್ದ ಶಾನ್ತಿನಾಥಂ
ಜಿನಶಾಸನ ಸತ್ಸರೋಜಿನೀ ಕಳಹಂಸಂ |
ವಿನಯದೆ ನಿಜಾಧಿಪತಿ ಲ
ಕ್ಷ್ಮನೃಪಂಗೆ ಸುಧರ್ಮ್ಮ ಕಾರ್ಯ್ಯಮಂ ಬಿನ್ನವಿಪಂ ||

ಚಂಚಚ್ಚಾಮೀಕರ ರ
ತ್ನಾಂಚಿತ ಜಿನರುದ್ರ ಬುದ್ಧ ಹರಿ ವಿಪ್ರಕುಳೋ |
………………. ಹಸಂಕುಳದಿಂ
ಪಂಞ್ಚಮಠಸ್ಥಾನಮೆನಿಸುಗುಂ ಬಳಿನಗರಂ ||

ಅನ್ತು ಸಮಸ್ತ ದೇವತಾ ನಿವಾಸ ಪವಿತ್ರೀಭೂತಮಪ್ಪ ರಾಜಧಾನಿಯೊಳಾದಜಿನಧರ್ಮ್ಮ ಪ್ರಭಾವಮಂ ಪೇಳ್ವಡೆ

ಸಲೆ ಜಂಬೂದ್ವೀಪಮೊಳ್ಪನ್ತಳೆದುದು ಪಲವುಂ…. ಭಾರತೋರ್ವ್ವೀ
ವಳಯಂ ತದ್ವೀಪದೊಳ್ ರಂಜಿಸುಗುಮೆಸೆಗುಮಾ ಕ್ಷೇತ್ರದೊಳ್ಕುಂತಳಂಕು |
ನ್ತಳದೊಳ್ಸನ್ತಂ ಬಸನ್ತಂ ಬನವಸೆ ವನವಾಸೋರ್ವ್ವಿಯೊಳ್ ಭವ್ಯಸೇವ್ಯಂ
ಬಳಿನಾಮಂ ಗ್ರಾಮಾಮಾ ಗ್ರಾಮದೊಳಮರನುತಂ ಶಾನ್ತಿತೀರ್ತ್ಥೇಶ ವಾಸಂ ||

ಆ……ರ್ಮ್ಮ ನಿರ್ಮ್ಮಿತ
ಮದಂ ಶಿಳಾಕರ್ಮ್ಮಮಾಗೆ ಮಾಡಿಸು ಕೋಳ್ವೋ |
ದುದು ನಿನಗೆ ಧರ್ಮ್ಮಮೆಂಬದು
ಮದರ್ಕ್ಕೆ ಬಗೆದಂದು ಧರ್ಮ್ಮ ನಿರ್ಮ್ಮಳ ಚಿತ್ತಂ ||

ಜಿನನಾಥಾವಾಸಮಂ ವಾಸವಕೃತಮೆನೆ ಮುನ್ನಂ ಶಿಳಾಕರ್ಮ್ಮದಿಂ ಶಾ
ಸನಮಪ್ಪಂತಾಗಿರಲ್ಮಾಡಿಸಿ ಬಳಿಕೆ ಶಿ…… ಸ್ತಂಭಮಂ ತ
ಜ್ಜಿನಗೇಹದ್ವಾರದೊಳ್ನಿರ್ಮಿಸಿ ವಿಲಿಖಿತನಾಮಾಂಕ ಮಾಳಾವಳೀ ಶಾ
ಸನಮಂ ಚಂದ್ರಾರ್ಕ್ಕತಾರಂ ನಿಲೆ ನಿಲಿಸಿದನೇಂ ಧನ್ಯನೋ ಲಕ್ಷ್ಮಭೂಪಂ ||

* ಮಿಗೆ ಮೂಳ ಸಂಘದೊಳ್ದೇ
ಸಿಗ ಗಣದೊಲ್ಸಂದ ಕೊಣ್ಡಕುನ್ದಾನ್ವಯಮಂ |
ಜಗತೀತ …… ನ್ತಿರೆ
ನೆಗಳ್ಚಿದರ್ನೆಗೞ್ದ ವರ್ದ್ಧಮಾನ ಮುನೀನ್ದ್ರರ್ ||

ವೃ | ಪಡೆದಡೆ ಪೆಂಪನೆಯ್ದೆವಡೆಯರ್ಶ್ರುತಮಂ ಶ್ರುತದೊಂದು ಮಯ್ಮೆಯಂ
ಪಡೆದಡೆ ದಿವ್ಯಮಪ್ಪ ತಪಮಂ ಪಡೆಯರ್ತ್ತಪಮಂ ನಿರನ್ತರಂ
ಪಡೆದಡೆಕೀರ್ತ್ತಿಯಂ ಪಡೆಯರೀಕ (ಮನೀಯ) ಗುಣಂಗಳ |
ಮ್ಪಡೆವಡೆ ವರ್ದ್ಧಮಾನಮುನಿಪುಂಗವರನ್ತಿರೆ ಮುನ್ನೆನೋಂತ (ರಾರ್) ||

ಸಂತತಮೊದಿ ನಿನ್ದ ತಪದೊಳ್ ಶ್ರುತದೊಳ್ಗುಣದೊಳ್ವಿಶೇಷರಿ |
ನ್ನಿಂತಿವರೆಲ್ಲರಿಂ ಪಿರಿಯರಿನ್ತಿವರಗ್ಗಳದಗ್ರಗಣ್ಯರೋ |
ರನ್ತಿವರೆಂದು ಕೀರ್ತಿಪುದು ಕೂರ್ತು (ದಿವಾಕರ) ದೇವಸಿ |
ದ್ಧಾನ್ತ ಮುನೀಂದ್ರರಂ ನತನರೇಂದ್ರರನಬ್ಧಿಪರಿತಭೂತಳಂ ||

ಮು(ನಿ) ಸಣಮಾಗಲಾಗಮುನಿಸಿಂ ಮುನಿಯುಂ ಮುನಿವಂದ್ಯನಾಗನಾ |
ಮುನಿಸು ಮಮತ್ವದಿಂ ಮಮತೆ ಮಾಯೆಯಿನನ್ತದು ಲೋಭದಿಂ ಪ್ರವ
ರ್ದ್ಧನಕರಮೆಂದು….ವೀತಕಷಾಯರಾದ ಸ |
ನ್ಮುನಿ ಮುನಿಚಂದ್ರ ದೇವರೆ ಧರಿತ್ರಿಗೆ ದೇವರ(ರ) ದೇವರಲ್ಲರೇ ||

* ಸಾರಕಳಾಪ್ರಬೋದಿತ ಸುದಾಕರರೂರ್ಜ್ಜಿತ ಸಾಧುಸಂಘನಿ |
ಸ್ತಾರಕರಂ(ಗ) ಜಾತಮಹಿಜಾತವಿದಾರಕರುಗ್ರ ಕರ್ಮ್ಮ ಸಂ |
ಹಾರಕರತ್ಯುದಾರ (ತರನೂತನ ಗುಣಾನ್ವಿ)ತ ಸರ್ವ್ವಣನ್ಖಿ ಭ |
ಟ್ಟಾರಕರಲ್ತೆ ಭವ್ಯಸುಕುಮಾರಕ ಕೈರವತಾ….. ಧಿಪರ್ ||

ಉರಗಪಿಶಾಚಭೂತವಿಹಗೋಗ್ರ ನವಗ್ರಹಶಾಕಿನೀ ನಿಶಾ |
ಚರ ಭಯವಿ-ಶಾಚರದೊಳದ್ಭುತದಿಂ ವಿಪರೀತಮಾದಡಂ |
ಬರೆದುದು ಯಂತ್ರಮೊಲ್ದುದೆ ತಂತ್ರಮೆಂ………… ಜಿತಕುಸುಮಾ
ಸ್ತ್ರ ರೂರ್ಜ್ಜಿತ ಯಶೋಧನರಾರ್ಜ್ಜಿತ ಪುಣ್ಯಕರ್ಮ್ಮರನ್ವಿತ ಬಹುಶಾಸ್ತ್ರರಾದೃ

ತಸುಶೀಳರಧ್ಷ್ತಃಕೃತಕಿಋಳ್ಬಿಜಶರ್ಪ್ರಬೋಧಿತ ಬುಧ……
…………………………………………………………………………………ಪಕರಭವಿನು
ತರ್ ಶ್ರೀ ಮಾಘನನ್ದಿದೇವರ್ಪ್ಪಲವುಂ ಜಿನನಿಳಯಂಗಳನಖಿಳಾವನಿ ಬಣ್ಣೆಸೆ
ಬಳ್ಳಿಗಾ………………

……………………………………………………………..ಜಿನಪೂಜಾಭಿ………………………
ರ್ಚ್ಚನಾನಿರತನಾಹಾರಾದಿ ದಾನಪ್ರವರ್ದ್ಧನಶೀಳಂ ನುತಭವ್ಯ………………………….
………………………………………………………..ಹಾಮಂಡಳೇಶ್ವರ ಲಕ್ಷ್ಮರಸಂ ಶ್ರೀ
ಮಲ್ಲಿಕಾಮೋದ ಶಾನ್ತಿನಾಥಜಿ……………………..

…………………………………………………………..ಕೀಲಕ ಸಂವತ್ಸರದ ಭಾದ್ರ
ಪದದ ಪುಣ್ನಮೆ ಸೋಮವಾರದ

…………………………………………………………………ದದೇಸಿಗಗಣದ ತಾಳಕೋ
ಲಾನ್ವಯದ ಮಾಘಣನ್ದಿ ಭಟ್ಟಾರ

…………………………………………………………………ರ್ಗೆ ಮುನ್ನಂ ಶ್ರೀಮಜ್ಜಗ
ದೇಕಮಲ್ಲ ದೇವರ್ಬ್ಬಳ್ಳಿಗಾವೆಯ ತಾ

……………………………………………………………………ೞ್ದಿಮತ್ತರ್ಪ್ಪನ್ನೆ ರಡ
ಆಲ್ಲಿಯ ಗೊಳಪಯ್ಯನ ಬಸದಿಗೆ

……………………………………………………………………………….ಶ್ರೀಮಚ್ಚಾಳುಕ್ಯಗಂಗ
ಪೆರ್ಮ್ಮಾನಡಿ ವಿಕ್ರಮಾದಿತ್ಯ ದೇವರ್

……………………………………………………………ಮುಮಂ ನನ್ದನ ವನದ ಬಸದಿಗೆ
ಪೂರ್ವದಿನ್ನಡೆವ

…………………………………………………………………ಭೂಪಂ ಸಮುಚಿತವಿನಯಂ
ಬಿನ್ನಪಂ ಗೆಯ್ಯೆ………………

…………………………………………………………………..ದರ್ಪ್ಪದೇವಂ || ಅನಘ
ಶ್ರೀಶಾನ್ತಿ ತೀರ್ತ್ಥೇಶ್ವರಪದ…………………

…………………………………………………………………….. ಸೋದಕ ವಿಧಿಸಹಿತಂ
ಶಾಸನಂ ಮಾಡಿಕೊಟ್ಟ …………………………… ಇನ್ತೀ ಧರ್ಮ್ಮಮನಾವನೋರ್ಬ್ಬಂ
ಪ್ರತಿಪಾಳಿಸಿ

……………………………………………………………..ಮಿದನಳಿದನನಿಬರ್ಬ್ರಾಹ್ಮ
ಣರುಮನನಿತು ಕವಿಲೆಯುವನಾ ಪುಣ್ಯ ತೀರ್ತ್ಥಂಗಳೊ

…………………………………………………………..ಸ್ತಂತೇಷಾಂ ಮಯಾ ವಿರಚಿ
ತೋಂಜಳಿರೇಫ ಮೂರ್ದ್ಧ್ನಾ || ಸಾಮಾನ್ಯೋಯಂ ಧರ್ಮ್ಮಸೇತುರ್ನೃ

………………………………………………………………………….ಸುನ್ಧರಾಷಷ್ಟರ್ವ್ವರ್ಷಸಹ
ಸ್ರಾಣಿ ವಿಷ್ಠಾಯಾಂ ಜಾಯತೇ ಕ್ರಿಮಿ : || ಬಹುಭಿ

………………………………………………..ವುಗ್ರಾಣದ ……………….. ವಭೋಗದ
ಸದಾಯಾಮಾತ್ಯರೂರೊಳ್ಕುಳ

…………………………………………………………………………….ಳಾತ್ಮಕುಳದ್ವಿಜವೂ
ಗವ ಗೋಕುಳಮನಳಿದ

…………………………………………………………………ಪೊಂಜಿಡ್ಡುಳಿಗೆಗುೞಿದ ನಾಲ್ಕೂಱು
ಪೊಂಮಾನಿಗರ್ದ್ಧಂ

………………………………………………………………… || ಎರಡಕ್ಕು ಕೃಷ್ಣಭೂಮಕ್ಕರಱರೆ
ಕಿಸು

……………………………………………………………..ಮದಱರೆಯುಂ ನೋಡಿ ಸಿದ್ಧಾಯ
ಮಕ್ಕುಂ ||

…………………………………………………………………ಗ ದಾಸೋಜಂ ಖಣ್ಡರಿಸಿದಂ
ಮಂಗಳಮಹಾಶ್ರೀ ||

 

* ಈಚಿಹ್ನೆಯಿರುವಪದ್ಯಗಳು ‘ಸುಕುಮಾರಚರಿತಂ’ನಲ್ಲಿದೊರೆಯುತ್ತವೆ.