ಕಂಡದಿಂಡೆ ೨೨೩ ಮಾಂಸಖಂಡದ ರಾಶಿ
ಕಂಡರಿಸು ೧೮೪ ವ ಕೆತ್ತು
ಕಂದು ೯೭ ಕಪ್ಪು ಕಲೆ
ಕಜ್ಜಳ ೨೫೭ ಕಣ್ಣು ಕಪ್ಪು
ಕಡಂಗು ೧೨೦ ಉತ್ಸಾಹಿಸು
ಕಡಂದುಱು ಕಣಜದ ಹುಳು
ಕಡುಪು ೧೦೦ ಕೊಬ್ಬು, ಗರ್ವ
ಕಣ್ಣಿವಲೆ ೬೩ ವ ಹಗ್ಗದ ಬಲೆ
ಕದಿರ್ ೬೪ ಕಿರಣ
ಕನರ್ಗೊನರ್ ೮೯ ಅಪಕ್ವವಾದ ಕೊನೆ
ಕನ್ನಡವಕ್ಕಿ ೧೫೩ ವ ಗಿಳಿ
ಕವ್ಪು ೬೩ ವ ಆನೆಗುಳಿ, ದೊಡ್ಡ ಪ್ರಾಣಿಗಳನ್ನು ಕೆಡಹಲು ತೋಡಿದ ಕುಳಿ
ಕಬ್ಬ ಕಾವ್ಯ
ಕಮ್ಮಂಗೋಲ ೯೭ ವ ಮನ್ಮಥ, ಪುಷ್ಪಬಾಣ
ಕರುಮಾಡ ೨೬ ಉಪ್ಪರಿಗೆ
ಕಱಿಗೊರಲ ೧೩೧ ಶಿವ
ಕವರ್ ೫೯ ಕಸಿದುಕೊ
ಕವ್ವರೆಗೊಳ್ ೩೭ ವ ಮುತ್ತು
ಕೞವೆ ೨೨ ನೆಲ್ಲು, ಬತ್ತದ ಬೆಳೆ
ಕಾಯ್ಪು ೪೩ ವ ಪರಾಕ್ರಮ
ಕಾಲೂರ್ ೧೯ ಸಣ್ಣ ಹಳ್ಳಿ
ಕಾವ ೧೪ ಕಾಮ
ಕಾವಣ ೨೪೭ ಚಪ್ಪರ
ಕಿತ್ತಡಿ ೧೧೪ ವ ಯತಿ
ಕಿನಿಸು ೫೫ ಕೋಪಿಸು
ಕಿೞ್ಬರಿ ೪೫ ವ ಬೆಟ್ಟದ ಕಿಬ್ಬಿ
ಕೀಲಿಸು ೩೭ ವ ಸೇರಿಸು ಕಟ್ಟು
….ೞ್ ೨೩ ವ ಕಡಿವಾಣ
….ಬತಳ ೨೨೧ ಕುಂಭಸ್ಥಲ
ಕುತ್ತೆಸಳ್ ೩೫ ಕಿಱಿದು+ಎಸಳ್ = ಚಿಕ್ಕ ಎಲೆ
ಕುಳಿರ್ ೨೪೭ ಚಳಿ, ಶೀಲತವಾದ
ಕುಳಿಸ ೩೨ ವಜ್ರ
ಕೂಂಕು ೧೪೩ ಪಲಾಯನ ಮಾಡು
ಕೂರ‍್ಮೆ ೧೨೩ ಪ್ರೀತಿ
ಕೆಂಗವಕ್ಕಿ ೧೫೩ ವ ಕೋಗಿಲೆ
ಕೆತ್ತು ೨೪೩ ವ ಅದುರು, ನಡುಗು
ಕೆನ್ನೀರ್ ೨೧೫ ರಕ್ತ
ಕೆಳರ್ ೧೬೦ ಬಿರಿ, ಕೋಪಗೊಳ್ಳು
ಕೇರ್ ೧೪೨ ಗೋಡೆ
ಕೈಗೊರೆ ೧೨೯ ಕೈಗೆ + ಒರೆ = ಸಮಾನ
ಕೈಪಱಿ ೨೨೩ ಚಪ್ಪಾಳೆ
ಕೊಂಕು ವ್ಯಂಗಾರ್ಥ
ಕೊಂಚೆ ೫೬ ಕ್ರೌಂಚ ಪಕ್ಷಿ
ಕೊಕ್ಕರಿಕೆ ೨೨೩ ವ ಹೇಸಿಕೆ
ಕೊಡಕೆ ೨೫೫ ಕಿವಿ
ಕೊಂತಗಾಱ ೧೫೭ ಸಬಳಗಾರ, ಭರ್ಜಿಗಾರ
ಕೊತ್ತು ೨೨೨ ಕೊಚ್ಚಿ ಹಾಕು
ಕೊಸಗು ೭೦ ವ ಬೆಟ್ಟದಾವರೆ
ಕೊಳುಗುಳ ೨೨೪ ವ ಯುದ್ಧ ಕಣ
ಕೋಡು ೫೬ ತಣ್ಣಗಾಗು, ಶೀತವಾಗು; ಭಯಪಡು
ಕೋಡುಗೈ ೪೩ ವ ದಾನಮಾಡುವ ಕೈ
ಕೋವಣ ೨೨೬ ಕೌಪೀನ
ಕೋಳ್ ೧೫೯ ಪೆಟ್ಟು, ಘಾತ
ಕೋಱ್ಗಿಸಱ್ ೨೯೬ ವ ತಣ್ಣನೆಯ ಕೆಸರು
ಕೌಂಗು ೨೦ ಅಡಕೆ
ಗರಗರಿಕೆ ೧೭ ವ ಸೊಗಸು, ಸಂಭ್ರಮ
ಗರುವರ ೩೬ ಶ್ರೇಷ್ಠರು
ಗೞಪು ೧೩೦ ಹರಟು, ಶಬ್ದ ಮಾಡು
ಗಾಡಿ ಸೊಬಗು, ಸೌಂದರ‍್ಯ
ಗಾಳಿವಟ್ಟೆ ೨೦೬ ವಾಯುಮಾರ್ಗ, ಆಕಾಶ
ಗುಡಿ ೨೫೦ ಧ್ವಜ, ಬಾವುಟ, ದೇವಾಲಯ
ಗುಣ್ಪು ೯೭ ವ ಆಳ
ಗುೞ ೧೬೫ ಜೂಲು, ಆನೆಯ ಮೇಲಿನ ಹೊದಿಕೆ
ಗೂಡಾರ ೧೮೪ ವ ಗೂಢಗಾರ
ಗೆಂಟು ೩೭ ವ ದೂರ
ಗೆಡೆಗೊಳ್ ೧೭ (ಗೆಡೆ-ಸ್ನೇಹ), ಚೆನ್ನಾಗಿ ಹೊಂದಿಕೊಳ್ಳು
ಗೊಂಟು ೧೬೦ ದಿಕ್ಕು
ಗೊಟ್ಟ ೧೧೪ ವ ವಾಸಸ್ಥಾನ, ಗೋಷ್ಠ
ಗೊಟ್ಟಿ ೩೬ ಗೋಷ್ಠಿ
ಗೊಣೆ ೨೩೩ ಬಿಲ್ಲಿನ ಹೆದೆ
ಗೊತ್ತು ನೆಲೆ
ಗೋಣ್ ೧೨೩ ಕುತ್ತಿಗೆ, ಕಂಠ
ಗೋಸ ೩೭ ವ ಶಬ್ದ, ಘೋಷ
ಗೋಱಿಯಿಲ ೨೧೬ ಕುದುರೆ ಸವಾರ
ಚಂದವ ೧೪೪ ಚಂದ್ರ
ಚಾಗ ೧೩೮ ತ್ಯಾಗ
ಚುಂಚುಲೋವೆ ೩೭ ವ ಅಟ್ಟಕ್ಕೆ ಕಟ್ಟಿದ ಸಣ್ಣ ಇಳಿಜಾರು ಮರ
ಚುನ್ನವಾಡು ೫೭ ಹಾಸ್ಯ ಮಾಡು, ನಿಂದಿಸು
ಚೊಕ್ಕಳ ೨೬೫ ಮನೋಹರವಾದ
ಚೊಲ್ಲೆಯ ೧೦೪ ತುರುಬಿನ ಕೊನೆ
ಚೌಕಿಗೆ ೧೮೪ ವ ಚತುಷ್ಕಿಕಾ, ಚಚ್ಚೌಕ
ಚೌವಟಮಲ್ಲ ೨೨೩ ವ ನಾಲ್ಕು ದಿಕ್ಕಿನಲ್ಲಿಯೂ ಯುದ್ಧ ಮಾಡುವ ಶೂರ
ಚೌವಂದ ೧೫೩ ವ ನಾಲ್ಕು ವಿಧ
ಜಂಕಿಸು ೨೩೫ ಗದರಿಸು
ಜಂತ ೨೪೬ ವ ದಂತ
ಜನ್ನವನುಣ್ಬಣ್ಣರ್ ೧೨೩ ಯಜ್ಞ ಬಲಿಯನ್ನು ತಿನ್ನುವವರು
ಜಱುಚು ೧೪೨ ಹರಟು
ಜಾದು ೨೨೨ ಧಾತು, ಕೆಂಪುಕಲ್ಲು
ಜೇವೊಡೆ ೧೪೯ ಧನುಷ್ಟಂಕಾರ
ಜೊಂಪ ೬೮ ಗೊಂಚಲು, ಗುಚ್ಛ
ಜೊನ್ನ ೧೦೩ ಜೋತ್ಸ್ನೆ, ಬೆಳುದಿಂಗಳು
ಜೋಡೆ ೩೬ ಸ್ವೈರಿಣಿ, ಸೂಳೆ
ಟಿಕ್ಕೆಯ ೧೬೫ ಧ್ವಜ
ಡಕ್ಕೆ ೧೯೨ ವ ದೊಡ್ಡ ತಂಬಟೆ
ಡವಕೆ ೨೫೨ ವ ಕಾಳಂಜಿ, ಪೀಕದಾನಿ
ಡಾಳ ೧೭ ಕಾಂತಿ
ಡೊಂಕಣೆ ೨೦೪ ಭರ್ಜಿ, ಸಬಳ
ಡೌಡೆ ೪೬ ವಾದ್ಯ ವಿಶೇಷ
ತಂಗದಿರ ೧೮೧ ವ ಚಂದ್ರ
ತಂದಲ್ ೧೮೧ ವ ಜಲಕಣ
ತಟ್ಟು ೧೫೯ ಸಮೂಹ
ತಱಿಸಲ್ ೧೪೦ ನಿರ್ಧಾರ ಗೈ
ತಳರ್ ೧೫೭ ವ ಹೊರಡು, ಚಲಿಸು
ತಳ್ತಿಱಿ ೧೨೪ ತಳ್ತು + ಇಱಿ = ಕೊಲ್ಲು
ತಳ್ಕು ೧೧೯ ಆಲಿಂಗನ, ಚಮತ್ಕಾರ
ತಾಣಂದರ ೧೬೩ ವ ಸ್ಥಾನಾಂತರ
ತಿರಿಸುಳಿ ೧೨೬ ತ್ರಿಶೂಲಿ
ತಿವುರಿ ೧೮೪ ವ ಬುಡ, ಗುಂಪು
ತಿಸುಳಿ ೧೫೦ ತ್ರಿಶೂಲಿ, ಶಿವ
ತೀಡು ೧೪ ಬೀಸು
ತುಱಿಲಾಳ್ ೩೭೫ ವ ವೀರ, ಬಂಟ
ತುಱಿಲ್ಗೆಯ್ ೧೩೧ ವ ನಮಸ್ಕರಿಸು
ತೆಱಪು ೧೨೪ ವ ಅವಕಾಶ
ತೆಱಂಬೊಳೆ ವಿಶೇಷವಾಗಿ ಹೊಳೆ
ತೇಜಿವಾರು ೨೧೮ ಕುದುರೆಗೆ ಕಟ್ಟಿರುವ ಚರ‍್ಮದ ಬಾರು
ತೊವಲ್ ೧೨೩ ಚರ್ಮ
ತೋರ ೪೫ ವ ದಪ್ಪನಾದ
ದಟ್ಟಿ ೧೫೩ ವ ಸೊಂಟ ಪಂಚೆ
ದಪ್ಪುಗ ೧೧೯ ದರ್ಪಕ, ಮನ್ಮಥ
ದರೆ ೧೨೯ ಧರಾ
ದಾವಣ ೭೩ ವ ಗುಂಪು, ಸಾಲು, ಪಾತಿ
ದಿಮ್ಮಿದರ್ ೧೦ ಪ್ರೌಢರು, ಶ್ರೇಷ್ಠರು
ದುಗುಲ ೧೨ ಬಟ್ಟೆ, ವಸ್ತ್ರ
ದುಟ್ಟಗೊರವ ೧೧೪ ವ ಈಶ್ವರ
ದೂಸರ ೭೨ ಧೂಸರ, ಬೂದಿಬಣ್ಣ
ದೇಸೆ ೧೭ ಚೆಲುವು, ಸೌಂದರ‍್ಯ
ದೋರಿಯ ೨೦೨ ವಸ್ತ್ರವಿಶೇಷ
ನನ್ನಿ ನಿಜ, ಸತ್ಯ
ನವಿರ್ ೨೮೯ ಕೂದಲು
ನಾಲ್ಮೊಗ ೧೨೮ ಬ್ರಹ್ಮ
ನಾರಿ ೧೮೧ ಬಿಲ್ಲಿನ ಹೆದೆ
ನಿಗಳ ೨೬೬ ಸಂಕೋಲೆ
ನಿಬ್ಬರ ೨೨೪ ವ ನಿರ್ಭರ, ವೇಗ
ನಿಸ್ಸಾಳ ೧೫೧ ವ ವಾದ್ಯ ವಿಶೇಷ
ನುಗುಳ್ ೧೫೫ ಪ್ರವೇಶಿಸು, ತೆವಳು
ನುಡಿವೆಣ್ ೧೨೮ ಸರಸ್ವತಿ
ನೆಗಱ್ ೧೬೨ ಮೊಸಳೆ
ನೆಗಱ್ತಿ ಕೀರ್ತಿ
ನೆಯ್ ೧೧೮ ತುಪ್ಪ
ನೆಱಿದಿಂಗಳ್ ೧೧೫ ಪೂರ್ಣಚಂದ್ರ
ನೆಲದೆಱಿಯ ೪೪ ಭೂಮೀಶ, ರಾಜ
ನೆಲೆವಾಡ ೨೩ ವ ಉಪ್ಪರಿಗೆ ಮನೆ
ನೇವಾಳ ೧೧೪ ವ ಹಾರ
ನೇವುರ ೯೭ ವ ನೂಪುರ, ಅಂದುಗೆ
ನೇರ್ಪಡು ೧೬೯ ಸರಿಯಾಗಿರು
ನೇಸಱ್ ೧೧೯ ಸೂರ‍್ಯ
ನೊಣೆ ೧೯೫ ನುಂಗು
ಪಂದರ ೫೭ ವ ಚಪ್ಪರ
ಪಗಲಾಣ್ಮ ೪೫ ಸೂರ‍್ಯ
ಪಚ್ಚ ೨೬೨ ಆಭರಣ
ಪಚ್ಚೆಲೆ ೧೩೪ ಹಸುರೆಲೆ
ಪಟ್ಟವಣೆ ೧೬೫ ವ ಗದ್ದುಗೆ, ಸಿಂಹಪೀಠ
ಪಡಿಯಱ ೧೦೦ ದ್ವಾರಪಾಲಕ
ಪಡೆವಳ್ಳ ೨೫೧ ಸೇನಾಧಿಪತಿ
ಪಡ್ಡಳಿ ೭೯ ವ ಕಣಿಗಿಲೆ
ಪಣಿದರ ೨೩೯ ಫಣಿಧರ, ಶಿವ
ಪರಿಗೆ ೨೦೪ ಗುರಾಣಿ
ಪರಿವಿಡಿ ೮೮ ವ ಕ್ರಮ
ಪಱಮೆ ತುಂಬಿ
ಪಲ್ಲಣ ೧೫೯ ಕುದುರೆಯ ಜೀನು
ಪಸರ ೩೪ ಅಂಗಡಿ
ಪಸಾಯ್ತ ೫೮ ವ ಅಲಂಕಾರ ಮಾಡುವವನು
ಪಸುಂಬ ೨೧೧ ಹಸುರು ಹಕ್ಕಿ
ಪಳಂಚು ೧೪೯ ಮುಟ್ಟು, ಬಡಿ, ತಾಗು
ಪೞವಿಗೆ ೯೩ ವ ಧ್ವಜ
ಪೞಿ ೨೪೮ ನಿಂದೆ
ಪೞಿಯ ೩೫ ಪಟ್ಟೆಯ ದಟ್ಟಿ, ನಡುವಿಗೆ ಕಟ್ಟುವ ಪಟ್ಟೆಯ ವಸ್ತ್ರ
ಪಾಂಗು ೬೫ ರೀತಿ
ಪಾಡೞಿ ೧೬೦ ಶಕ್ತಿ ಗುಂದು
ಪಾಡಿ ೧೬೨ ವ ಸೈನ್ಯ, ಹಳ್ಳಿ
ಪಾದರಿಗ ೨೩೪ ವಿಟ
ಪಾರಿವ ೩೭ ವ ಪಾರಿವಾಳ
ಪಾಱುಬೊಜಗ ೪೫ ವ ಚಂಚಲನಾದ ವಿಟ
ಪಾಱುಂಬಳೆ ೧೧೨ ಚಕ್ರ
ಪಾಸ ೧೩೦ ವ ಪಾಶ, ಹಗ್ಗ
ಪಿಡಿ ೨೭ ವ ಹೆಣ್ಣಾನೆ
ಪೀಲಿಗದಱಿ ೧೯೪ ನವಿಲುಗರಿಯ ಕೊಡೆ
ಪುತ್ತೞಿ ೬೫ ಬೊಂಬೆ
ಪುದಿ ೯೯ ತುಂಬು
ಪುರುಳ್ ಅರ್ಥಗಾಂಭೀರ‍್ಯ, ತಿರುಳು
ಪುರುಳಿ ೨೪೯ ಗಿಳಿ
ಪುಲ್ಲವಡಿಗಿತಿ ೩೫ ವ ಹೂವಾಡಗಿತ್ತಿ
ಪುಲ್ಲಿ ೨೦೨ ವಸ್ತ್ರ ವಿಶೇಷ
ಪುಸಿವಡೆ ೧೫೩ ವ ಮಾಯಾಸೈನ್ಯ
ಪೂಲಿ ೩೪ ವಸ್ತ್ರ ವಿಶೇಷ
ಪೂಸು ೧೩೦ ವ ಲೇಪಿಸು
ಪೆಂಪು ೧೫ ಉನ್ನತಿ, ಹಿರಿಮೆ
ಪೆರ್ಕಳ ೯೭ ವ ಅಧಿಕ್ಯ
ಪೆಱಿ ೧೦೩ ವ ಚಂದ್ರ
ಪೆಳರ್ ೨೩೮ ಹೆದರು
ಪೊಂಬೆಸ ೩೭ ವ ಚಿನ್ನದ ಕೆಲಸ ಮಾಡಿದ
ಪೊಡೆ ೨೩ ವ ಹೊಟ್ಟೆ, ಹೊಡೆ
ಪೊಡೆಯಲರ ೪೩ ವ ಪದ್ಮನಾಭ, ವಿಷ್ಣು
ಪೊಣರ್ ೧೩೬ ಹೋರಾಡು, ಜೋಡಿ
ಪೊಣರ್ವಕ್ಕಿ ೧೫೩ ವ ಚಕ್ರವಾಕ
ಪೊದಱ್ ೧೩೪ ಪೊದೆ
ಪೊದೞ್ ೧೭ ವ್ಯಾಪಿಸು, ಪ್ರಖ್ಯಾತವಾಗು
ಪೊಮ್ಮಿದರ್ ೧೦ ಅಧಿಕವಾದವರು, ಶ್ರೇಷ್ಠರು
ಪೊರೆ ರಕ್ಷಿಸು, ಕಾಪಾಡು
ಪೊರೆದೋಱು ೨೯ ಅರಳು
ಪೊಱವಾಱ್ ೬೩ ವ ನಿತಂಬ
ಪೊಲಂಬು ೨೨೪ ವ ದಾರಿ
ಪೊೞಲ್ ೨೫ ಪಟ್ಟಣ