ಬಂಡಣ ೧೮೭ ಕಾಳಗ
ಬಂಡು ೧೦೭ ಮಕರಂದ
ಬಂದ ೫೨ ಫಲಬಿಟ್ಟ
ಬಂಬಲ್ ೧೪ ಸಮೂಹ, ಗುಂಪು
ಬಗರಿಗೆ ೧೪೮ ಪಾತ್ರೆ
ಬಗ್ಗಿಸು ೧೫೨ ಕೂಗು, ಧ್ವನಿಗೈ
ಬಚ್ಚಣೆ ೨೦೪ ಬಣ್ಣ ಹಾಕುವುದು
ಬಚ್ಚಿಸು ೬೬ ವ ಬಣ್ಣ ಹಾಕು
ಬಟ್ಟ ೪೫ ವ ಗುಂಡಗಿರುವ
ಬನ್ನ ೧೪೬ ಭಗ್ನ
ಬರ್ದು ಪ್ರೌಢಿಮೆ
ಬರ್ದುನುಡಿ ಪ್ರೌಢೋಕ್ತಿ
ಬರ್ದುವೆಂಡಿರ್ ೪೭ ಪ್ರೌಢ ಸ್ತ್ರೀಯರು
ಬಲ್ಲಣಿ ೧೬೧ ದೊಡ್ಡ ಸೈನ್ಯ
ಬಲ್ಲಹ ೯೭ ವ ವಲ್ಲಭ, ಒಡೆಯ
ಬಳಿಯ ೧೭೯ ಬಲಿಷ್ಠ
ಬಳ್ಳಿವಾಲ ೧೮೧ ವ ಬಳ್ಳಿಯಂತಿರುವ ಬಾಲ
ಬೞಿ ೧೮ ಮಾರ್ಗ, ಹತ್ತಿರ
ಬಾಂದೊಱಿ ೨೦೧ ಗಂಗಾನದಿ
ಬಾಂಬೊೞಲ್ ೧೨೩ ಆಕಾಶದಲ್ಲಿನ ಪಟ್ಟಣ
ಬಾಡ ೧೫೩ ವ ವಾಟ, ಸಾಲು, ಊರು
ಬಾಸಣ ೨೭೧ ಭಾಷಣ
ಬಾಸುಗಿ ೧೧೯ ವಾಸುಕಿ, ಆದಿಶೇಷ
ಬಾಳ್ ೭೦ ವ ಕತ್ತಿ
ಬಾೞಿ ೧೧೬ ವ ಒಂದು ವಿಧವಾದ ಮೀನು
ಬಾೞ್ಗಂಬ ೯೭ ವ ಆನೆಯನ್ನು ಕಟ್ಟುವ ಕಂಬ, ಜೀವಂತವಾದ ಕಂಬ
ಬಾೞ್ದಲೆವಿಡಿ ೧೧೭ ಜೀವದೊಡನೆ ಸೆರೆಹಿಡಿ
ಬಿಂಜಮಾಣಿಕ ೨೨೩ ವ ಒಂದು ಬಿರುದು, (ಬಿಂಜ = ವಿಂಧ್ಯ)
ಬಿಜ್ಜೆ ೧೫೩ ವ ವಿದ್ಯೆ
ಬಿಜ್ಜೆವಳ ೨೭೨ ವಿದ್ಯಾಬಲ, ಪಾಂಡಿತ್ಯ
ಬಿಜ್ಜೋದರಿ ೨೭ ವ ವಿದ್ಯಾಧರ ಸ್ತ್ರೀ
ಬಿಣ್ಪು ೫೩ ಭಾರ, ಹೊರೆ
ಬಿದಿವೆಡಂಗ ೨೨೩ ವ ಹೊಯ್ಸಳ ಸೈನ್ಯದ ಆನೆಗಳ ಬಿರುದು
ಬಿದುಗಲ್ ೬೫ ಚಂದ್ರಕಾಂತ ಶಿಲೆ
ಬಿಱುವರಿ ೨೧೩ ವೇಗವಾಗಿ ಓಡು
ಬಿೞ್ತು ೮೩ ಬೀಜ
ಬಿಸವಂದ ೩೭ ವ ಸೋಜಿಗ, ಆಶ್ಚರ‍್ಯ
ಬಿಸುಗದಿರ ೪೩ ವ ಸೂರ‍್ಯ
ಬೀಯ ೩೭ ವ ವ್ಯಯ
ಬೀರವಸದನ ೧೫೩ ವ ವೀರರಿಗೆ ಉಚಿತವಾದ ಆಭರಣ
ಬೆಂಚೆ ೧೭ ವ ಕೊಳ, ಹೊಂಡ
…. ೧೧೬ ವ ವೈದಂಡಿಕಾ, ಕಾವ್ಯಜಾತಿ
…..ಲೆವೆಣ್ ೨೪ ಸೂಳೆ
…ಸನ ೧೪೮ ವ್ಯಸನ; ಚಿಂತೆ
….ಲ್ ೧೯೮ ವ ಹೆರಿಗೆ
…ಳೆಗೆಯ್ ೧೭ ವ ಪೈರುಳ್ಳ ಹೊಲ
….ಳ್ಮಾಡು ೧೦೬ ಮರುಳುಮಾಡು
…..ಬ್ಬುಲಿ ೪೫ ವ ಗೊಬ್ಬಳಿ ಮರ
ಮಂಜಿಟಿಗೆ ೨೦೨ ಮಂಜಿಷ್ಠಾ (ತ್ಸ) ನಸುಹಳದಿ ಹೂ ಬಿಡುವ ಒಂದು ಜಾತಿಯ ಬಳ್ಳಿ ನಸುಹಳದಿ ಬಣ್ಣ
ಮಂಡವ ೨೪೭ ಮಂಟಪ
ಮಂಡವಿ ೧೮೪ ವ ಮಂಟಪಿಕಾ, ಸಣ್ಣ ಮಂಟಪ
ಮಗರಿ ೩೪ ವಸ್ತ್ರ ವಿಶೇಷ, ಮಕರಿಕಾ (ತ್ಸ)
ಮಡ ೪೩ ವ ಮಠ, ಕಡಾಣಿ
ಮಡಲ್‌ಗೊಳ್ ೧೮೪ ವ ಹಬ್ಬು
ಮರವಡು ೧೪೪ ಸ್ತಬ್ಧವಾಗು, ಮರದಂತೆ ಬಿದ್ದಿರು
ಮಲೆ ೧೧೦ ಗರ್ವಿಸು
ಮಲ್ಲೞಿಗೊಳ್ ೨೪೪ ಸುತ್ತಾಡು, ತಳಮಳಗೊಳ್ಳು
ಮಸಕ ೨೭೨ ವ ವೇಗ
ಮೞಿಗೆ ೩೪ ಮಠಿಕಾ, ಅಂಗಡಿ
ಮಾಣಿಕವರಿಗೆ ೨೦೦ ಮಾಣಿಕ್ಯದ ಗುರಾಣಿ
ಮಿಗ ೯೮ ವ ಮೃಗ ಜಿಂಕೆ
ಮಿಡಿವಿಲ್ ೧೮೧ ವ ಸಣ್ಣ ಹಿಂಟೆಗಳನ್ನು ಹೊಡೆಯುವ ಬಿಲ್ಲು
ಮಿಡುಕು ೧೩೦ ಚಲಿಸು
ಮಿಸು ೨೭ ಹೊಳೆ
ಮಿೞ್ತು ೧೬೧ ಮೃತ್ಯು
ಮೀನ್ ೪೩ ವ ನಕ್ಷತ್ರ, ಮೀನು
ಮುಂಗುಡಿ ೧೫೩ ವ ಅಗ್ರಭಾಗ
ಮುಂಗುಲಿ ೧೮೧ ವ ಮೊಲ
ಮುನ್ನೀರ್ ೧೯೫ ಸಮುದ್ರ, ಕಡಲು (ಮೂರು ನೀರು : ಧ್ರುವಜಲ, ನದೀಜಲ, ಆಕಾಶಜಲ)
ಮೂಂಕು ೧೬೭ ಮೂಕಿ
ಮೆಯ್ಗಣ್ಣ ೧೦೬ ಇಂದ್ರ, ಮೈಯ್ಯೆಲ್ಲ ಕಣ್ಣಾದವನು
ಮೆಯ್ಗರೆ ೧೩೪ ಮೈಮರೆಸಿಕೊಳ್ಳು
ಮೇಲುದು ೨೬೧ ಸೆರಗು
ಮೇಲೂರ್ ೧೮ ಸ್ವರ್ಗ
ಮೊಗಸಾಲೆ ೧೫೬ ಮುಖಶಾಲಾ
ಮೊಗ್ಗರ ೧೯೩ ಸಮೂಹ, ಗುಂಪು
ಮೊಗ್ಗೆಗ ೧೨೩ ಶೂರ
ಮೊನೆ ೧೨೨ ಯುದ್ಧ
ಮೊಱಿ ೨೩ ವ ನಂಟು, ಗೋಳಾಟ
ಮೊೞಗು ೨೦೬ ಗುಡುಗು, ಗರ್ಜನೆ
ಮೋಹರ ೧೫೭ ಸೈನ್ಯ, ಗುಂಪು
ರನ್ನ ವಸರ ೩೨ ರತ್ನಗಳ ಅಂಗಡಿ
ರಯ್ಯ ೨೭ ವ ರಮ್ಯ, ಮನೋಹರ
ಱಿಂಚೆ ೨೦೩ ಆನೆಯ ಗವುಸು, ಸಜ್ಜು
ಲಾಗುಳ ೧೪೮ ಯೋಗದಂಡ, ದೊಣ್ಣೆ
ಲೆಂಕ ೧೮೭ ಸೇವಕ
ಲೆಕ್ಕಿಗ ವಿದ್ವಾಂಸ, ಜೋಯಿಸ
ಲೋವೆ ೯೯ ಸೂರು
ವಂಗಡ ೧೦೧ ಗುಂಪು, ಸಾಲು
ವಾರುವ ೩೭ ವ ಕುದುರೆ
ವಿಸಟಂಬರಿ ೩೭ ವ ಸ್ವೇಚ್ಛೆಯಾಗಿ ಓಡಾಡು
ಸಂಕಲೆ ೩೭ ವ ಶೃಂಖಲೆ
ಸಂಕು ೨೨೮ ಶಂಖ
ಸಂವರಣೆ ೧೫೭ ಸಿದ್ಧವಾಗಿರುವಿಕೆ
ಸಕ್ಕದ ೨೭೦ ಸಂಸ್ಕೃತ
ಸನ್ನಣ ೧೫೩ ವ ಸನ್ನಾಹ
ಸಬರಿ ೧೭ ಶಬರಿ, ಬೇಡಿತಿ
ಸಮ್ಮ ೧೩೦ ವ ಚರ್ಮ
ಸರಿ ೧೧೬ ವ ಪ್ರವಾಹ
ಸಱಿ ೮೮ ಕಲ್ಲುಚಪ್ಪಡಿ
ಸವ ೧೭೮ ಸಮ
ಸವಣ ೧೭೫ ಶ್ರಮಣ
ಸಸಿ ೧೦೬ ಚಂದ್ರ
ಸಾಸಿಗ ೧೯೮ ಸಾಹಿಸಿಗ
ಸಿಡಿಮಿಡಿಗೊಳ್ ೨೨೪ ವ ಹೆದರು, ಚಡಪಡಿಸು
ಸಿರಿಕಂಡ ೪೫ ವ ಶ್ರೀಗಂಧ
ಸೀಕರಿವೋಗು ೨೪೬ ಕಪ್ಪಾಗು, ಸೀದುಹೋಗು
ಸೀಗುರಿ ೭೨ ಚಾಮರ
ಸೀರೆವರದ ೩೪ ಸೀರೆಯ ವ್ಯಾಪಾರಿ
ಸೀರ್ಪನಿ ೨೩ ತುಂತುರು, ಸಣ್ಣ ಸಣ್ಣ ಹನಿ
ಸೀಸಕ ೨೧೮ ಶೀರ್ಷಕ, ಕಲೆಗೆ ಧರಿಸುವ ರಕ್ಷೆ
ಸುಗಿ ೨೬೮ ಹೆದರು
ಸೂಡು ೧೧೬ ಮುಡಿದುಕೊಳ್ಳು
ಸೂನಿಗೆ ೧೮೭ ಕತ್ತಿ
ಸೂಳೈಸು ೧೫೧ ವ ಶಬ್ದಮಾಡು
ಸೆಲವು ೧೫೩ ವ ಅನುಮತಿ
ಸೆಳ್ಳುಗುರ್ ೬೪ ಚೆಲುವಾದ (ಸೂಕ್ಷ್ಮವಾದ) ಉಗುರು
ಸೇದೆ ೩೦ ಆಯಾಸ, ಶ್ರಮ
ಸೇಸೆ ೨೬೬ ಶೇಷೆ, ಅಕ್ಷತೆ
ಸೈಗಱಿ ೨೧೪ ನೇರವಾಗಿ ಸುರಿ
ಸೊಂದಿಗೋಡಗ ೨೭ ವ ದೊಡ್ಡ ಅಳಿಲು, ಒಂದು ಜಾತಿಯ ಕೋತಿ ಇರಬಹುದೆ?
ಸೊದೆ ೯೩ ವ ಸುಧಾ, ಸುಣ್ಣ, ಬಿಳುಪು
ಸೊವಡು ೩೭ ವ ಸೊಗಡು, ಕಟುವಾದ ವಾಸನೆ
ಸೋಗೆ ೯೭ ವ ನವಿಲು, ಗರಿ
ಸೋವು ೧೭ ವ ಅಟ್ಟು, ಓಡಿಸು
ಹಂತಿ ೧೬೨ ಪಙ್ತಿ, ಸಾಲು
ಹತ್ತ ೧೫೮ ಹಸ್ತ, ಕೈ
ಹಮ್ಮದ ೨೫೯ ಮೂರ್ಛೆ
ಹಿವಗದಿರ ೯೭ ಚಂದ್ರ