ನ | ||
ನಚ್ಚು | iii ೬ | ನಂಬು |
ನಚ್ಚಣಿ | x ೭೭ | ನರ್ತಕಿ |
ನಡೆಗಱ್ತೆ | ii ೫೯ ವ | ಹೇರನ್ನು ಹೊರುವ ಕತ್ತೆ |
ನರ್ಮ | v ೫೧ | ಲೀಲೆ, ಚೆಲುವು |
ನಾಳಿಪುಣ್ಣು | v ೧೬ | ಗುಳಿಬಿದ್ದ ಹುಣ್ಣು |
ನಿಕುರುಂಬ | v ೫೧ | ಗುಂಪು |
ನಿಕ್ಕುವ | xi ೭೮ | ನಿಶ್ಚಯ, ಸತ್ಯ |
ನಿಕುಂಜ | ix ೪೦ | ಹೊದರು, ಲತಾಗೃಹ |
ನಿಗಳ | x ೩೭ | ಸಂಕೋಲೆ |
ನಿಗೋದ | xi ೫೦ ವ | ನರಕ |
ನಿಟಿಲ | x ೩೮ | ಹಣೆ |
ನಿಡಿಯ | x ೧೦೧ ವ | ಉದ್ದವಾದ |
ನಿತಾಂತ | x ೫ | ಯಾವಾಗಲೂ |
ನಿಧಾನ | x ೯೩ | ನಿಧಿ |
ನಿಪ್ಪೊಸತು | ix ೪೪ | ಹೊಚ್ಚ ಹೊಸದು |
ನಿಮಗ್ನ | ii ೩೦ | ಮುಳುಗಿದ |
ನಿಮಿತ್ತ | iii ೫ ವ | ಶಕುನ |
ನಿರಘ | xi ೭೬ | ಪಾಪವಿಲ್ಲದ |
ನಿರಯ | viii ೧೩ | ನರಕ |
ನಿರವದ್ಯ | vi ೪೮ | ದೋಷರಹಿತ |
ನಿರ್ಜರೆ | xii ೩೬ | ಕರ್ಮದ ವಿನಾಶ |
ನಿರ್ನೀತ | i ೪೯ | ನಿಶ್ಚಯಿಸಿದ |
ನಿರ್ನಿಕ್ತ | iii ೧೫ | ನಿಷ್ಕಲ್ಮಶವಾದ |
ನಿರ್ವರ್ತಿತ | iii ೪ ವ | ಮುಗಿಸಲ್ಪಟ್ಟ |
ನಿಷಾದಿ | ix ೭೭ | ಮಾವಟಿಗ |
ನಿಷ್ಕಷಾಯ | i ೨೩ | ರಾಗದ್ವೇಷಗಳಿಲ್ಲದಿರುವುದು |
ನಿಷ್ಪಂದ | xii ೪೧ | ಸ್ತಿಮಿತ |
ನಿಸ್ತಾರಕ | i ೨೨ | ದಾಟಿಸುವವನು |
ನಿಸ್ತ್ರಿಂಶ | ii ೫ ವ | ಕರುಣೆಯಿಲ್ಲದವನು |
ನಿಳಿಂಪ | ix ೩೫ | ದೇವತೆ |
ನೀಡ | x ೪೩ | ಗೂಡು, ಆಶ್ರಯ |
ನೀರದ | x ೮ ವ | ಮೋಡ |
ನೀಹಾರ | ii ೫೨ | ಮಂಜು |
ನೆಱನ್ | ii ೩೭ ವ | ಮರ್ಮಸ್ಥಾನ |
ನೆಱಪು | vii ೨೬ | ಪೂರ್ಣಮಾಡು |
ನೆರಂಬೇಱ್ | ii ೫೯ ವ | ಸಹಾಯವಾಗಿ ನೇಮಿಸು |
ನೇತ್ರ | x ೯೧ | ಒಂದು ಬಗೆಯಾದ ಬಟ್ಟೆ |
ನೇರ್ಪು | i ೩೯ | ಋಜುತ್ವ |
ನೊಚ್ಚಿದ | ii ೯ | ಹಗುರವಾದ |
ನೋಂಪಿ | ix ೧೦ ವ | ವ್ರತ |
ನ್ಯಾಸ | vi ೪೯ | ಇಡುವುದು |
ಪ | ||
ಪಂಚತ್ವ | viii ೧ ವ | ಸಾವು |
ಪಂಚವಿಂಶತಿ | vi ೪೬ | ಇಪ್ಪತ್ತೈದು |
ಪಂಚಾಸ್ಯ | vii ೪ | ಸಿಂಹ |
ಪಟ್ಟಣಿಗೆ | x ೯೧ | ರೇಷ್ಮೆ ಬಟ್ಟೆ |
ಪಡಿ | vii ೨೧ | ಬಾಗಿಲು |
ಪಡಿಗ | xi ೨೬ | ಪಾತ್ರೆ |
ಪಡಿಚಂದ | x ೫೨ | (ಸಂ) ಪ್ರತಿಚ್ಛಂದ, ಸಮಾನ |
ಪಡುವೋವರಿ | vii ೨೧ ಷ | ಮಲಗುವ ಕೋಣೆ |
ಪತ್ತುವಿಡು | iii ೪ | ಸಂಬಂಧವನ್ನು ತೊರೆ |
ಪದಪು | vi ೫೦ | ಸಂತೋಷ |
ಪದುಳಿಕೆ | ix ೧೭ | ಹದುಳತೆ |
ಪಂಥ | iii ೭ | ಮಾರ್ಗ |
ಪರತ್ರೆ | iii ೩೧ | ಪರಲೋಕ |
ಪರಡು | v ೫೧ | ಹಿಮ್ಮಡಿಯ ಗಂಟು |
ಪರದ | vii ೩೧ ವ | ವ್ಯಾಪಾರಿ |
ಪರಕಲಿಸು | x ೩೭ | ಹರಡು, ಚೆದರು |
ಪರಿಕಾಲ್ | x ೫೭ ವ | ಕಾಲುವೆ |
ಪರಿಗತ | ix ೯೬ ವ | ಹೊರಟು ಹೋದ |
ಪರಿಖಾ | x ೫೭ ವ | ಕಂದಕ |
ಪರಿಚ್ಛೇದ | ii ೫೬ ವ | ನಿರ್ಣಯ |
ಪರಿಜು | v ೫೦ | ರೂಪು |
ಪರಿಯಣ | xi ೨೯ | ತಟ್ಟೆ |
ಪರಿವಡಿ | vi ೬ | ಕ್ರಮ |
ಪಱಿಪಡು | vii ೩೨ | ಕತ್ತರಿಸಿ ಬೀಳು |
ಪರೇತವನ | vi ೨೭ | ಪ್ರೇತವನ, ಶ್ಮಶಾನ |
ಪಲಾಲ | x ೧೧೪ | ಜೊಳ್ಳು, ನಿಸ್ಸಾರ |
ಪವಣ್ | i ೫೯ | ಪ್ರಮಾಣ |
ಪಸರಂಗೊಡು | ii ೫೨ ವ | ಸಲುಗೆಯನ್ನು ಕೊಡು |
ಪೞಿ | i ೪೭ | ನಿಂದಿಸು |
ಪಾಕಶಾಸನ | i ೬೬ | ಇಂದ್ರ |
ಪಾಂಗು | vii ೪೭ | ರೀತಿ |
ಪಾದಪ | x ೫೬ | ಮರ |
ಪಾಸಟಿ | x ೫೧ | ಸಮಾನ |
ಪಾೞಿ | vii ೨೯ | ಕ್ರಮ |
ಪಿಂಗು | i ೭೫ | ಬತ್ತಿ ಹೋಗು |
ಪಿಂಜರ | ix ೫೦ | ಮಾಸಲು ಕೆಂಪು ಬಣ್ಣ |
ಪಿಧಾನ | vi ೨೨ | ಹೊದಿಕೆ |
ಪಿಶಿತ | vii ೧೫ | ಮಾಂಸ |
ಪಿಸುೞ್ | vi ೫೨ | ಹಿಂಜು |
ಪುಗಲ್ | i ೭೩ | ಪ್ರವೇಶಿಸಬೇಡ |
ಪುಟ್ಟಿಗೆ | x ೯೧ ವ | ಸೀರೆ, ವಸ್ತ್ರ |
ಪುಡಿಕೆ | x ೯೧ | ಪುಟಿಕಾ (ಸಂ); ಡಬ್ಬಿ |
ಪುಂಡ್ರೇಕ್ಷು | iv ೪೩ | ಪಟ್ಟೆ ಕಬ್ಬು (ಪುಂಡ್ರ + ಇಕ್ಷು) |
ಪುರ್ಗು | v ೭ ವ | ಬೇಯು |
ಪುದಿ | iv ೪೧ | ತುಂಬು |
ಪುದುಗೊಳ್ | v ೪೪ | ಹುದುವಾಗು, ಹಿತವಾಗು |
ಪುನರ್ಜಾತ ಕ್ಷಯತ್ರಿ | i ೬ | ಮೋಕ್ಷ ಲಕ್ಷ್ಮೀ |
ಪುೞಿಲ್ | iv ೪೦ | ತೋಪು |
ಪೂವಲಿ | x ೫೭ ವ | ಹೂವಿನ ಪೂಜೆ |
ಪೃಚ್ಛೆ | iii ೬ | ಪ್ರಶ್ನಿಸುವುದು |
ಪೆಟೆಮೆೞೆ | vii ೫ ವ | ದಿಮ್ಮಿಗೆ ಕಟ್ಟಿ ಎಳೆ |
ಪೇಂಕುಳಿಗೊಳ್ | v ೨೦ | ಹುಚ್ಚಾಗು |
ಪೊಕ್ಕರಣೆ | ix ೫೧ | (ಸಂ) ಪುಷ್ಕರಣಿ, ಕೊಳ |
ಪೊಟ್ಟಳಿಗೆ | vii ೮ ವ | ಪೊಟ್ಟಣ |
ಪೊಣರ್ | v ೫೧ | ಜೋಡಿ |
ಪೊಣರ್ಚು | x ೫೧ | ಸ್ಪರ್ಧಿಸು |
ಪೊಣ್ಮು | i ೩ | ಹೊರ ಹೊಮ್ಮು |
ಪೊದಳ್ | ii ೩೨ | ವ್ಯಾಪಿಸು |
ಪೊರ್ದು | ii ೫೨ | ಸಮೀಪಿಸು, ಸೇರು |
ಪೊಂಪುಳಿ | i ೬೭ | ಹೆಚ್ಚಳ |
ಪೊೞಲ್ | ii ೫೬ | ಪಟ್ಟಣ |
ಪ್ರಜ್ಞಪ್ತಿ | xi ೩೮ ವ | ಒಂದು ಬಗೆಯ ವಿದ್ಯೆ |
ಪ್ರತಿಕ್ರಮಣ | iii ೩೫ | ತಪ್ಪೊಪ್ಪಿಸುವುದು |
ಪ್ರತಿಪತ್ತಿ | ii ೭೩ ವ | ಕಾಣಿಕೆ |
ಪ್ರತಿಬೋಧಿಸು | xii ೧೧ | ಎಚ್ಚರಿಸು |
ಪ್ರಭಾವಿಸು | vii ೫೩ | ಮನ್ನಿಸು |
ಪ್ರಥಿತ | vii ೫೪ | ಪ್ರಸಿದ್ಧವಾದ |
ಪ್ರದೀಪಕ | iii ೧೦ | ಬೆಳಗುವವನು |
ಪ್ರವಣ | iv ೧೭ | ಆಸಕ್ತನಾದ |
ಪ್ರವ್ರಜಿತ | iii ೩೦ | ಸಂನ್ಯಾಸ |
ಪ್ರಾವೃತ | iii ೧೩ | ಬಳಸಲ್ಪಟ್ಟ |
ಪ್ರೀಣನಕರ | i ೩೯ | ಪ್ರೀತಿಯನ್ನುಂಟುಮಾಡುವ |
ಪ್ರೋತ್ತುಂಗ | x ೪೮ | ಅತ್ಯಂತ ಎತ್ತರವಾದ |
(ಪ್ರ + ಉತ್ತುಂಗ) | ||
ಬ | ||
ಬರ್ಕುಡಿಗುಟ್ಟು | iv ೪೩ | ವಾದಮಾಡು |
ಬಗ್ಗಣೆ | ii ೮ | ಗದರಿಕೆ |
ಬರ್ಚಿಸು | v ೫೬ | ಚಿತ್ರಿಸು |
ಬಟ್ಟು | ix ೫೦ | ಗುಂಡಗಿರುವ ಬಿಲ್ಲೆ |
ಬಟ್ಟೆ | i ೪ | (ಸಂ) ವರ್ತ್ಮನ್, ದಾರಿ |
ಬಣ್ಣವಣ್ಣಿಗೆ | xi ೨೯ | ವಿವಿಧ ವರ್ಣದ |
ಬಣ್ಣವಾಸಿಗ | x ೫ | ಬಣ್ಣ ಬಣ್ಣದ ಹೂ ಹಾರ |
ಬದ್ದೆ | vii ೧೩ | ಪ್ರೌಢೆ |
ಬರ್ಹಿಣ | i ೭೯ ವ | ನವಿಲು |
ಬಲವರ್ಪ | i ೬೭ | ಪ್ರದಕ್ಷಿ ಮಾಡುವ |
ಬಲ್ಲಾಳ್ತನ | vii ೪೨ | ಒತ್ತಾಯ |
ಬಲ್ಮೊಗಂ | ii ೫೨ ವ | ಗಡುಸಾದ ಮುಖ |
ಬಸನಿಗ | xi ೪೫ | ವಿಷಯಾಸಕ್ತ |
ಬಸಮೞಿ | vii ೧೩ | ಶಕ್ತಿಗುಂದು |
ಬಹಿತ್ರ | iii ೪೧ | ತೆಪ್ಪ |
ಬಳವಿ | x ೧೩ | ಬೆಳವಣಿಗೆ |
ಬಳ್ಳವಳ್ಳಿ | xi ೨೧೮ | ಆಧಿಕ್ಯ, ಅತಿಶಯ |
ಬೞಿ | ii ೨೪ | ದಾರಿ |
ಬಾದು | ii ೬ | ವಾದ, ಜೊತೆ |
ಬಾಯೞಿ | vii ೩೫ | ಕೂಗಿಕೊಳ್ಳು |
ಬಾರಿ | vii ೨೪ | ಗಸ್ತಿನ ಸರದಿ |
ಬಾರಯ್ಸು | vii ೩೬ | ತಡೆ, ನಿಲ್ಲಿಸು |
ಬಾಸೆ | x ೧೪ | ರೋಮರಾಜಿ |
ಬಾಳವಂದ | x ೩೪ | ಹುಡುಗರ ತೊಡವುಗಳು |
ಬಿಕ್ಕೆನ್ನದೆ | ii ೨೦ | ಸದ್ದುಗೈಯದೆ |
ಬಿಚ್ಚತ | ix ೪೯ | ವಿಸ್ತಾರ |
ಬಿಚ್ಚುವ | iii ೬ ವ | ಸಂನ್ಯಾಸಿ (ಭಿಕ್ಷುಕ) |
ಬಿಚ್ಚತಿಕೆ | ii ೨೬ | ವಿಸ್ತಾರ |
ಬಿನ್ನನೆ | vii ೪ ವ | ಮೌನವಾಗಿ |
ಬಿತ್ತರಿಗೆ | xi ೨೬ | ಪೀಠ |
ಬಿಯ | x ೯೨ | ವ್ಯಯ |
ಬಿರ್ದಿನ | xi ೨೩ | ಅತಿಥಿ |
ಬಿಸವಂದ | ii ೫೩ | ಆಶ್ಚರ್ಯ |
ಬೆದಂಡೆ | ii ೨೪ | ಒಂದು ಹಾಡು, ಕಾವ್ಯ ಜಾತಿ |
ಮ | ||
ಮಚ್ಚು | ix ೬೩ | ಮೆಚ್ಚಿಗೆ |
ಮಂಚಲ್ | vii ೧೮ | ವಂಚನೆ ಮಾಡುವುದು |
ಮಡ | v ೫೧ | ಕಾಲಿನ ಹರಡು |
ಮಡಂಬ | i ೭೫ | ಐನೂರು ಗ್ರಾಮಗಳಿಂದ ಬಳಸಲ್ಪಟ್ಟ ಪಟ್ಟಣ |
ಮಂಡನ | i ೭ | ಅಲಂಕಾರ |
ಮಂಡವಿಗೆ | x ೪೫ | ಮಂಟಪ |
ಮದಾಪಹ | i ೩೧ | ಗರ್ವವನ್ನು ಹೋಗಲಾಡಿಸುವ |
ಮದಾಳಿ | x ೫೮ | ಸೊಕ್ಕಿದ ದುಂಬಿ |
ಮನಕ್ಷತ | vii ೯ | ಮನಸ್ಸಿನ ಗಾಯ |
ಮನ್ಯು | iv ೬೦ | ದುಃಖ |
ಮರೀಚಿ | x ೬೩ | ಕಿರಣ |
ಮರ್ತ್ಯಾಂಗ | iv ೦೧ | ಮನುಷ್ಯದೇಹ |
ಮಸಗು | ii ೬೨ | ರೇಗು |
ಮಸುಳ್ | x ೫ | ಕಂದು |
ಮಸೃಣ | x ೫೭ ವ | ನಯವಾದ |
ಮಹೀದ್ರ | ix ೪೧ | ಬೆಟ್ಟ |
ಮಳವೆ | x ೯೧ | ಬಣಬೆ, ರಾಶಿ |
ಮಳೀಮಸ | viii ೩೭ | ಕಶ್ಮಲವಾದ, ಕೊಳಕು ಹತ್ತಿದ |
ಮಾಡ | x ೪೩ | ಮನೆ |
ಮಾಣಿ | ii ೩೭ ವ | ಹುಡುಗ, ವಟು |
ಮಾಸರ | x ೧೦೭ | ಸೊಗಸು, ಚೆಲುವು |
ಮಿಸುಪು | iii ೭ ವ | ಹೊಳೆಯು |
ಮಿಹಿರ | iii ೧೫ | ಸೂರ್ಯ |
ಮುಕುರ | i ೫೦ | ಕನ್ನಡಿ |
ಮುಕ್ಕುವೋಗು | iv ೨೬ | ಮುಕ್ಕಾಗು, ನೆಗ್ಗಿಹೋಗು |
ಮುಟ್ಟುಗೆಡು | iv ೩೦ | ನಿಶ್ಶಸ್ತ್ರನಾಗು, ನಿಸ್ಸಹಾಯನಾಗು |
ಮುಮುಕ್ಷು | viii ೪೬ | ಮೋಕ್ಷಾಪೇಕ್ಷಿ |
ಮೃಗೇಂದ್ರವಿಷ್ಟರ | ii ೧೪ ವ | ಸಿಂಹಾಸನ |
ಮೆಯ್ಗರೆ | ii ೯ | ಮಾಯಾವಾಗು |
ಮೆಲ್ಪು | ix ೭೩ | ಮೃದುತ್ವ |
ಮೆೞ್ಪಡು | vii ೧೫ | ಮೋಸಹೋಗು |
ಮೇಖಳೆ | xi ೫೯ ವ | ಡಾಬು |
ಮೇಲ್ಮಲೆಗೈ | ii ೮೨ ವ | ಮೇಲೆ ಮೇಲೆ ವಿಜೃಂಭಿಸು |
ಮೇಳಾಪಕ | iii ೨ ವ | ಹೊಂದಿಕೆಯ ಹಾಡಿಕೆ |
ಮೊಗ್ಗು | i ೫೭ | ಸಾಧ್ಯ |
ಮೊಱೆ | vii ೨೭ | ನಂಟಸ್ತಿಕೆ |
ಮೊೞ್ಗು | iv ೩೮ ವ | ನಮಸ್ಕಾರ ಮಾಡು |
ಮೋದು | v ೮ | ಗುದ್ದು |
Leave A Comment