ಕ | ||
ಕಚ್ಚುಟ | iv ೩೦ | ಕೌಪೀನ |
ಕಟ್ಟುಕಡೆ | ii ೧೨ ವ | ವ್ಯಥೆಪಡು |
ಕಡಕು | xii ೧೮ | ಕಿರುಗಲ್ಲು |
ಕಡಾರ | vii ೨೮ ವ | ಪಿಂಗಳ |
ಕಡುಪು | vi ೩೮ | ಉತ್ಸಾಹ |
ಕಣಿ | i ೬೯ | ಗಣಿ, ವಾಸಸ್ಥಾನ. |
ಕಣೆ | i ೭೯ | ಬಾಣ |
ಕತಿಪಯ | ii ೪೫ ವ | ಕೆಲವು |
ಕದಂಬ (ಕ) | i ೪೨ | ಗುಂಪು |
ಕದಕ್ಕದಿಸು | xi ೧೧ | ನಡುಗು |
ಕನಲು | vii ೨ | ಕೋಪಗೊಳ್ಳು |
ಕನೀಯ | v ೨೪ | ತಮ್ಮ, ಚಿಕ್ಕಸೋದರ |
ಕಬರಿ | x ೨೪ | ತುರುಬು |
ಕಯ್ಗಣ್ಮು | vi ೫, ix ೭೩ | ಕೈತೊಳೆ |
ಕಯ್ಪಿಡಿ | v ೫೪ | ಕನ್ನಡಿ |
ಕಯ್ಮಿಗು | v ೨೧ ವ | ಹೆಚ್ಚಾಗು |
ಕರುವಿಡು | v ೫೬ | ಎರಕ ಹೊಯ್ಯಿ |
ಕರ್ಗು | x ೧೪ | ಕಪ್ಪಾಗು |
ಕರ್ದಮ | x ೫೪, ೮೯ | ಕೆಸರು |
ಕಲ್ | iii ೨೮ ವ | ಕಲಿತುಕೊ |
ಕಲ್ಪಿ | ii ೮ | ವಿದ್ಯೆ |
ಕವಡಿಕೆ | iii ೬ ವ | ಮೋಸ |
ಕವುಂಗು | i ೭೨ | ಅಡಕೆ |
ಕಳಮೆ | ix ೫೩ | ಭತ್ತ |
ಕಳಾಪಿ | ix ೫೪ | ನವಿಲು |
ಕಳಿಕೆ | x ೬೨ | ಬೆಂಕಿಯ ಜ್ವಾಲೆ |
ಕೞಲ್ | xi ೩೧ | ಬಡವಾಗು, ಮಜ್ಜಿಗೆ, ಕಾಲ್ಕಡಗ |
ಕಾರಂಡ | x ೫೩ | ಬಾತಿನ ಜಾತಿಗೆ ಸೇರಿದ ನೀರಹಕ್ಕಿ |
ಕಾಸಾರ | xi ೩೨ ವ | ಸರೋವರ |
ಕಾಳಸೆ | xi ೫೦ ವ | ಜೋಡಣೆ |
ಕಿನಿಸು | ii ೬೭ ವ | ಕೋಪಗೊಳ್ಳು |
ಕಿಸಲಯ | ix ೨೦೭ ವ | ಚಿಗುರು |
ಕಿಸು | x ೪೫ | ಕೆಂಪು |
ಕಿಸುಗುಳ | iv ೫೯ | ದುಷ್ಟ |
ಕೀಲಾರ | vii ೩೫ ವ | ಕೊಟ್ಟಿಗೆ |
ಕುಜ | xii ೨೧ | ಮರ |
ಕುಟ್ಟಿಮ | xii ೪೨ ವ | ಜಗಲಿ |
ಕುತ್ಕೀಲ(ಳ) | i ೬೮ | ಬೆಟ್ಟ |
ಕುತ್ತ | vi ೩೮ | ರೋಗ |
ಕುನುಂಗು | ii ೨೦ | ಕುಗ್ಗು |
ಕುಱಿಪು | v ೩೩ | ಗುರುತು |
ಕುಱುವಡಿ | vii ೨೭ ವ | ಸಣ್ಣ ಬಟ್ಟೆ |
ಕುಶೇಶಯ | ix ೧೮ | ಕಮಲ |
ಕುಸೃತಿ | iv ೬೧ | ಕುನೀತಿ, ಕೆಟ್ಟನಡತೆ |
ಕುಳಿಕ | ii ೧೯ | ವಿಷಸರ್ಪ |
ಕುಳಿರ್ | iv ೪೦ | ಚಳಿ |
ಕುಳಿಶ | v ೫೧ | ವಜ್ರಾಯುಧ |
ಕೂಂಕು | x ೧೦೧ ವ | ತುರುಕು |
ಕೂಪಾರ | v ೨೧ | ಸಮುದ್ರ |
ಕೂರ್ | iv ೩೭ | ಸ್ನೇಹ, ಪ್ರೀತಿ |
ಕೆತ್ತು | iv ೨೬ | ಹಾರು, ಅದುರು |
ಕೆಮ್ಮನೆ | i ೪೪ | ಸುಮ್ಮನೆ |
ಕೆಯ್ತ | vii ೧೧ | ಕಾರ್ಯ |
ಕೆಲ್ಲಯಿಸು | xi ೨೧ | ತೊಂದರೆಗೊಳ್ಳು |
ಕೇತನ | v ೫೪ | ಬಾವುಟ |
ಕೇಯೂರ | ix ೩೯ | ತೋಳ ಬಂದಿ |
ಕೈಗೆಯ್ | xi ೩೨ ವ | ಅಲಂಕರಿಸು |
ಕೈಘಟ್ಟಿ | xi ೩೨ ವ | ಅನುಲೇಪನ |
ಕೈದು | v ೫೪ | ಆಯುಧ |
ಕೈರವ | ix ೩೫ | ಕೆನ್ನೆಯ್ದಿಲೆ |
ಕೊಡಗೂಸು | vii ೨೭ ವ | ಕನ್ಯೆ |
ಕೊಡವಿ | vii ೨ | ಕನ್ಯೆ |
ಕೊಸಗು | x ೫೭ | ಬೆಟ್ಟದಾವರೆ |
ಕೋಳ್ | x ೯೩ | ಕೊಳ್ಳೆ |
ಕೌಕ್ಷೇಯಕ | i ೭೯ ವ | ಕತ್ತಿ |
ಕೌವರೆ | xi ೨೨ ವ | ಸಂಭ್ರಮ |
ಕ್ಷುರ | v ೫೧ | ಕತ್ತಿ |
ಕ್ಷ್ಮಾ | i ೭೯ ವ | ಭೂಮಿ |
ಕಂಕೆ | ii ೪೬ | ತೆನೆ |
ಕಂಬು | v ೫೧, ix ೮೯ | ಶಂಖ |
ಖ | ||
ಖನನ | vii ೧೮ | ಅಗೆಯುವಿಕೆ |
ಖಲ್ಯ | ii ೧೮ | ಒಂದು ದೊಡ್ಡ ಸಂಖ್ಯೆ |
ಖಸ | viii ೭೦ | ಇಸಬು, ಕಜ್ಜಿ |
ಖೇಡ | i ೭೫, iv ೨೦ ವ | ಹಳ್ಳಿ |
ಖೇಯ | ix ೫೭ | ತಗ್ಗು |
ಗ | ||
ಗಣಿಕೆ | vii ೮ | ವೇಶ್ಯೆ |
ಗೞಪು | x ೧೧೪ | ಅತಿಯಾಗಿ ಹರಟು |
ಗಾಡಿ | ix ೪೪ | ಸೌಂದರ್ಯ |
ಗಿಡಿಗಿಡಿಜಂತ್ರ | iv ೪ | ಗಿರಿಗಿರಿ ತಿರುಗುವ ಯಂತ್ರ |
ಗಿಣ್ಣನ್ | vi ೪೩ | ಬೆರಳುಗಳು ಉದುರಿ ಹೋಗುವ ತೊನ್ನು |
ಗುಡಿ | v ೬೧, x ೨೭ | ಬಾವುಟ |
ಗುಡ್ಡ | iv ೨೩ ವ | ಭಕ್ತ, ಶಿಷ್ಯ |
ಗುಣಣೆ | vii ೧೦ | ನಾಟಕ ಶಾಲೆ |
ಗುಪ್ತಿಗುಪ್ತ | iv ೩೯, i ೧೫ | ಮರೆಯಾಗಿರುವ ಕತ್ತಿ |
ಗೂಧ | ii ೭೧ | ಹೊಲಸು, ಅಮೇಧ್ಯ |
ಗೆಱೆವಡು | i ೬ | ತೀಟೆಯನ್ನು ಅನುಭವಿಸು |
ಗೊಟ್ಟಂಗೊಱೆ | xi ೪೭ ವ | ದೊಡ್ಡ ರಂಧ್ರವಾಗುವಂತೆ ಕೊರೆ |
ಗೊಡ್ಡ | iv ೨೬ | ತುಂಟಾಟ |
ಗೋಣ್ಮುರಿಗೊಳ್ | vii ೩೭ ವ | ಕತ್ತುಹಿಚುಕು |
ಗೋಶೀರ್ಷ | xi ೩೨ ವ | ಸುಗಂಧಯುಕ್ತ ಶ್ರೀಗಂಧ |
ಗೋಳಾಂಗೂಳ | v ೨೧ | ಕಪ್ಪುಕೋತಿ |
ಗಂಡುಗೆಡು | vii ೪೨ | ಶಕ್ತಿಹೀನನಾಗು |
ಗುಂಡಿಗೆ | v ೩೨ | ಪಾತ್ರೆ |
ಗುಂಡುಗೊಳ್ | v ೧೮ | ಗುಂಪಾಗು |
ಘ | ||
ಘರ್ಮ | x ೧೧೯ | ಸೆಖೆ, ಉಷ್ಣ, ಕಾವು |
ಚ | ||
ಚತುರಶೀತಿ | xi ೭೯ | ಎಂಬತ್ತುನಾಲ್ಕು |
ಚಿಕುರ | i ೭೯ ಬಿ | ಕೂದಲು |
ಚೀರಘಟ್ಟಿ | v ೫೬ | ದೇವಚಿತ್ರಕ |
ಚೌವಟ್ಟ | iis | ನಾಲ್ಕು ಬೀದಿಗಳು |
ಚಂಚು | iv ೬೩ | ಕೊಕ್ಕು |
ಚಂದ್ರಾಭ | v ೫೩ | ಬೆಳುದಿಂಗಳು |
ಚೆಂಗಾರೆ | iv ೫೭ | ಕೆಂಪು ಕಾರೆಹಣ್ಣು |
ಚೆಂಬೊನ್ | vi ೨೯ | ಚಿನ್ನ |
ಛ | ||
ಛವಿ | iv ೫೪ | ಕಾಂತಿ |
ಛಾಯಾಂಗಿ | i ೮ | ತೆಳುವಾದವಳು |
ಜ | ||
ಜಕ್ಕವಕ್ಕಿ | iv ೪೯ | ಚಕ್ರವಾಕಪಕ್ಷಿ |
ಜತ್ತಿಸು | ix ೬೩ | ಸ್ನೇಹಮಾಡು |
ಜರತ್ | x ೩೧ | ಮುಪ್ಪಾದ |
ಜಳೂಕ | iv ೯, v ೪೩ | ಜಿಗಣೆ |
ಜಾತರೂಪಧರ | iv ೩೮ ವ | ತೀರ್ಥಂಕರ, ದಿಗಂಬರ |
ಜೊತ್ತಿಸು | vii ೫ ವ | ವಂಚಿಸು |
ಜೊನ್ನ | xi ೫೪ | (ನಂ) ಜ್ಯೋತ್ಸ್ನಾ, ಬೆಳುದಿಂಗಳು |
ಝ | ||
ಝೂಳೆಯ | vii ೩೫ ವ, ೩೭ ವ | ಕಾಂತಿ |
ಡ | ||
ಡಂಗೆ | xi ೪೭ ವ | ಕೋಲು |
ತ | ||
ತಕ್ಕು | iii ೩೧ | ಪರಾಕ್ರಮ, ಶಕ್ತಿ |
ತಡವಡಿಸು | iv ೫೮ | ಹಿಂದು ಮುಂದೆ ನೋಡು |
ತರ್ಗು | v ೧೪ | ತಗ್ಗು, ಕೆಳಕ್ಕೆ ಇಳಿ |
ತಱಿಸಲ್ | ii ೬ | ನಿಶ್ಚಯಿಸು |
ತಂಡುಲ | x ೧೦೮ | ಅಕ್ಕಿ |
ತಲೆಯೆಱಕ | ii ೨೮ | ತಲೆ ತಗ್ಗಿಸುವುದು |
ತಲೆವಱಿ | iii ೨೯ | ತಲೆ ಬೋಳಿಸು |
ತವಿಲ್ | ii ೯ | ನಾಶ |
ತಳರ್ | vii ೧೯ | ಹೊರಡು |
ಚೞ್ಕೈಸು | vii ೭೩ | ಆಲಿಂಗಿಸು |
ತಳ್ತ | i ೬೨ | ಸೇರಿದ |
ತಳ್ಳಂಕಗುಟ್ಟು | ix ೬೩ | ತುಂಬಿ ತುಳುಕು |
ತಳ್ವು | vii ೨೧ | ನಿಧಾನಿಸು |
ತಳ್ಪೊಯ್ | vii ೧೧ | ಸಂಘಟ್ಟಿಸು, ತಗುಲಿಕೊಳ್ಳು |
ತಾಯ್ಗರು | i ೬ | ತಾಯಚ್ಚು, ಮೂಲ ಎರಕ |
ತಿಗ್ಮರುಚಿ | ii ೩೯ | ಸೂರ್ಯ |
ತೀಟ | v ೬೦ | ಸ್ಪರ್ಶ |
ತೀವು | iv ೫೭ | ತುಂಬು |
ತುಱುಗಲ್ | x ೫೨ | ಸಮೂಹ |
ತುಹಿನ | i ೫೬ | ಮಂಜು |
ತೂರ್ಯ | v ೬೧ | ಮಂಗಳವಾದ್ಯ |
ತೆಱಪು | ii ೧೧ | ಅವಕಾಶ |
ತೊಂಗಲು | i ೭೨ | ಗೊಂಚಲು |
ತೊಟ್ಟಗೆ | ii ೬೩ | ಶೀಘ್ರವಾಗಿ, ಇದ್ದಕ್ಕಿದ್ದ ಹಾಗೆ |
ತೊಡಂಕಿಕ್ಕು | iv ೨೬ | ತೊಡಕು ಹಾಕು |
ತೊಣೆ | x ೫೧ | ಜೊತೆ |
ತೊದಳ್ | vi ೫೦ | ಸುಳ್ಳು |
ತೋಟಿ | vii ೪೪ | ಜಗಳ |
ತೋಡು | x ೫೧ | ಜೊತೆ |
ತ್ರಸ | viii ೬ ವ | ಜೀವಜಂತುಗಳು |
ತ್ರಗುಪ್ತಿ | xii ೩೫ | ಮೂರು ಬಗೆಯ ನಿಗ್ರಹಗಳು |
ತ್ರಷ್ಣಾತುರ | iv ೫೭ | ಬಾಯಾರಿಕೆಯಿಂದ ಬಳಲಿದ |
ದ | ||
..ದಂದುಗ | x ೬ | ಕಷ್ಟ |
..ದಬ್ಬುಕ | vii ೬ | ದಬ್ಬಳ |
…… | xi ೪೭ ವ | ಶೂಲ |
..ದಳಿಂಬ | x ೧೦೦ ವ | ವಸ್ತ್ರ |
….ಗುಡಿ | x ೧೦೧ | ಕುಡಿ |
….. | xii ೫೧ | ದಿವ್ಯ |
….ನಾರ | x ೧೧೮ | ಒಂದು ನಾಣ್ಯ |
…… | xi ೨೧ | ಪ್ರಾಣಿಗಳನ್ನು ಆಕರ್ಷಿಸಲು ಒಡ್ಡುವ ಮೃಗ |
….ದುಮೆ | x ೧೧೭ | ಭೇರಿ, ನಗಾರಿ |
ದುಱುಂಬೆ | vii ೨೯ ವ | ಗಯ್ಯಾಳಿ |
….. | i ೩೮ | ಚೆಲುವು |
…..ಚ್ಛ್ರಿತಿ | ix ೩೩ | ದೇಹದ ಎತ್ತರ(ದೇಹ + ಉಚ್ಛ್ರಿತಿ) |
…. | i ೭೯ | ಬತ್ತಳಿಕೆ |
….ಳಿಸು | vii ೪೦ | ಸಡಗರಿಸು |
….ವೋಗು | v ೧೬ | ಹಳ್ಳವಾಗು |
….. | i ೭೭ | ಆನೆ |
ದ್ವಿಷದ್ | ix ೭೬ | ಹಗೆ |
ದ್ಯುಚರ | vii ೧೮ | ಖೇಚರ, ಗಂಧರ್ವ |
ದ್ರುಮ | ix ೪೧ | ಮರ |
ಧಮ್ಮಿಲ್ಲ | ix ೫೪ | ತುರುಬು |
ಧಿಷಣ | ix ೭೬ | ಪಂಡಿತ |
Leave A Comment