ಶ್ರೀಮಜ್ಜಿನನಿಳಯಮನು
ದ್ದಾಮಗುಣಂ ತ್ರಿಃಪ್ರದಕ್ಷಿಣಂ ಗೆಯ್ದು ಜಿನ
ಶ್ರೀಮುಖಮಂ ಕಂಡಂ ಲ
ಕ್ಷ್ಮೀಮುಖಮುಕುರಂ ಸರಸ್ವತೀ ಮುಖಮುಕುರಂ         || ೧ ||

ವ || ಅಂ……………ವಿನತಮಸ್ತಕನ್ಯಸ್ತಹಸ್ತಯುಗನಾಗಿ ವಿಶುದ್ಧಪರಿಣಾಮದಿಂ ಭಗವದರ್ಹತ್ಪರಮೇಶ್ವರಶ್ರೀಮುಖಕ್ಕಭಿಮುಖನಾಗಿ

ಜಯಕರ್ಮಾರಾತಿನಿರ್ಮೂಲನಕರ ಜಯದೇವಾದಿಸಂಸ್ತುತ್ಯಪಾದ
ದ್ವಯಲೋಕಾಲೋಕವಸ್ತುಪ್ರಕಟನಕರ ಮಾಂಗಲ್ಯಕೈವಲ್ಯಬೋಧೋ
ದಯ ಮುಕ್ತಿಶ್ರೀವಧೂವಲ್ಲಭ ಜಯಜಯ ಸರ್ವಸಮ್ಯಕ್ತ್ವಸಂಶು
ದ್ಧಿಯನೀಗಳ್ ಶಾಶ್ವತಂಮಾಡೆನಗೆ ಕರುಣದಿಂದಂ ತ್ರಿಲೋಕಾಧಿನಾಥಾ       || ೨ ||

ಭ್ರಮೆಯಿಂ ದುರ್ಮಾರ್ಗಬಂಧಪ್ರಕೃತಿಯ ವಶದಿಂದಿನ್ನೆಗಂ ಘೋರಸಂಸಾ
ರಮಹೋಗ್ರಾರಣ್ಯದೊಳ್ ತಿಟ್ಟನೆ ತಿರಿದು ಕರಂ ಸೇದೆಗೆಟ್ಟಿರ್ದುಸನ್ಮಾ
ರ್ಗಮನಾನೆಂತಾಗಿಯುಂ ಪೊರ್ದಿದೆನಭವ ಶರಣ್ ನೀನೆ ನಿರ್ವ್ಯಾಕುಲಂ ಬೋ
ಧಮನವ್ಯಾಬಾಧಮಂ ಮಾಡೆನಗೆ ಕರುಣದಿಂದಂ ತ್ರಿಲೋಕಾಧಿನಾಥಾ          || ೩ ||

ಮುನ್ನೆಂದುಂ ನಿನ್ನನೇನೆಂದಱಿಯದೆ ಮತಿಗೆಟ್ಟಿರ್ದು ದಿಙ್ಮೂಢನಾದೆಂ
ನಿನ್ನಂ ಕಂಡೀಗಳೀಗಳ್ ತಿಳಿದು ತಿಳಿವನಾಂ ಕಂಡು ಕೈಕೊಂಡೆನೆನ್ನಂ
ನಿನ್ನನ್ನಂ ಮಾಡುವನ್ನಂ ಪರಮಜಿನಪತೀ ಚಾರುಚಾರಿತ್ರಮಂ ನಿ
ಚ್ಚನ್ನಿಚ್ಚಂ ನಿಶ್ಚಲಂ ಮಾಡೆನಗೆ ಕರುಣದಿಂದಂ ತ್ರಿಲೋಕಾಧಿನಾಥಾ           || ೪ ||

ವ || ಎಂದಿಂತನೇಕಸ್ತುತಿಗಳಿಂ ತ್ರಿಲೋಕಸ್ತುತನಂ ಸ್ತುತಿಯಿಸಿ ಪರಮತಪಃ ಶ್ರೀಪದಕ್ಕೆಱಗುವುದನನುಕರಿಸುವಂತೆ ತನ್ಮುನೀಶ್ವರನ ಶ್ರೀಪಾದಪದ್ಮಕ್ಕೆ ಸಾಷ್ಟಾಂಗಮೆಱಗಿ ಪೊಡೆವಟ್ಟು

ಶುಭಭಾವನೆಯಿಂ ಸಂಸಾ
ರಭೋಗನಿರ್ವೇಗವಾದ ದೆಸೆಯಿಂದಂತಃ
ಪ್ರಭೆ ಬೆಳೆಗೆ ದೀಕ್ಷೆಯಿಚ್ಛಾ
ಮಿ ಭಟಾರಾಯೆಂದು ತತ್ಕುಮಾರಂ ನುಡಿದಂ   || ೫ ||

ಅದಿರಿದೆ ಪೆಱತೆಗೆಯದೆ ಬೆ
ಚ್ಚದೆ ಬೆದಱದೆ ಸುಗಿಯದಗಿಯದೆಡೆಯಿಂ ಕೋಲೊ
ಡ್ಡಿದ ಬಿರುದಿನಂಕದಂದದಿ
ನದೇಂ ಪರಿಚ್ಛೇದಮಾತನೊಳ್ ಕೂಡಿದುದೋ || ೬ ||

ಅವನತನಾಗಲೊಂಡಂ ಧ
ರ್ಮವೃದ್ಧಿಯಕ್ಕೆಂದು ಪರಸಿ ಪರಮಾಶೀರ್ವಾ
ದವಿಶೇಷವಚನದಿಂ ತ್ರೈ
ಭುವನಸ್ತುತಚರಣನಳಿನನತಿನಿರ್ಮಳನಂ          || ೭ ||

ಮುನಿನಾಥನವಧಿಯಿಂ ಬಗೆ
ದು ನೋಡಿ ನಿನಗಾಯುರವಧಿ ಮೂಱುದಿನಂ ನೀ
ನನುನಯದಿ ನೋಡೊಳ್ಳಿತ್ತಂ
ವಿನಯದೆ ಬಗೆದುದನೆ ಬಗೆಗೆ ಭವ್ಯಸಮೂಹಂ   || ೮ ||

ವ || ಎಂದು ಸುಕುಮಾರಸ್ವಾಮಿಯ ಪರಿಚ್ಛೇದಕ್ಕೆ ಯಶೋಭದ್ರಸ್ವಾಮಿಗಳ್ ಮೆಚ್ಚಿ ಬಿಚ್ಚಳಿಸಿ [ದೀಕ್ಷಾ] ಪ್ರಸಾದಂಗೆಯ್ವುದುಂ

ಅಪರಿಮಿತಶ್ರೀಯಂ ಕೊಳೆ
ದ ಪುಲ್ಲನೀಡಾಡುವಂತೀರಾಡಿ ಮಹಾ
ತಪಮಂ ಕೈಕೊಂಡಂ ಪು
ಣ್ಯಪದವಿಯಂ ನೆಱೆಯೆ ಸೂಱೆಗೊಳ್ಳಂತಾಗಳ್           || ೯ ||

ವ || ಅಂತು ಬಾಹ್ಯಾಭ್ಯಂತರಪರಿಗ್ರಹಪರಿತ್ಯಾಗಂಗೆಯ್ದು ರೂಪವಿದ್ಯಾಧರಂ ಸಂಜಾತಕಾಲಲಬ್ಧಿಯಿಂ ಜಾತರೂಪಧರನಾಗಿ ಗುರುಗಳಂ ಗುರುಭಕ್ತಿಪೂರ್ವಕಂ ವಂದಿಸಿ ದೀಕ್ಷಾಕಾಲಮೆ ತನಗಾ[ತ್ಮ] ಸಂಸ್ಕಾರಕಾಲಮಾಗಿರ್ದುದಱಿಂ ತಪಂ ಗೆಯ್ಯಲ್ ಕಾಲಮಿಲ್ಲೆಂದು ತ್ರಿಕರಣಶುದ್ಧಿಯಿಂ ಸಂನ್ಯಸನಮಂ ದಯಂಗೆಯ್ಯಿಮೆಂಬುದುಂ ತ್ರಿಸಾಕ್ಷಿಯಿಂ ಚತುರ್ವಿಧಾಹಾರಶರೀರನಿವೃತ್ತಿಶಾಸನಮಪ್ಪ ಸಂನ್ಯಸನಪ್ರತ್ಯಾನಮಂ ದಯಂಗೆಯ್ದು

ಪ್ರಾಯೋಪಗಮನಮಂ ಗೆ
ಯ್ದಾ ಯತಿಪತಿ ನೀಂ ಸರ್ಪರ್ಯೆಗೆಯ್ಯಲ್ವೇಡೆಂ
ದಾ ಯತಿಪತಿ ತನ್ನೊಳ್ಬಗೆ
ದಾ ಯತಿಗಾಯತಿಯನುಂಟುಮಾಡಲ್ ನುಡಿದಂ          || ೧೦ ||

ನಿನ್ನಂ ಪ್ರತಿಭೋಧಿಸಲೆಂ
ದಿನ್ನೆಗಮಿಲ್ಲಿರ್ದೆಮಿದುವೆ ತಾತ್ಪರ್ಯದಿನೀ
ನಿನ್ನ ಬಗೆ ಕೂಡಿದುದುಱಿಂ
ನಿನ್ನನೆ ನೀಂ ಬಗೆವುದಿನಿತೆ ಬಗೆ ಬಗೆವಾಗಳ್      || ೧೧ ||

ಮುನ್ನಾದ ಮುನೀಶ್ವರರುಂ
ನಿನ್ನನೆ ನೆನೆಯುತ್ತಮಿರ್ದರಿನ್ನಪ್ಪವರುಂ
ನಿನ್ನನೆ ನೆನೆವರ್ ನೀನುಂ
ನಿನ್ನನೆ ನೆನೆ ಜಿನಪದಂಗಳಂ ನೆರೆಯುತ್ತಂ          || ೧೨ ||

ಉಪಸರ್ಗಂಗಳ್ ಪುಟ್ಟಿದೊ
ಡೆ ಪರೀಷಹವಿಜಯಿಯಾಗಿ ನಿಶ್ಚಿಂತಂ ಸ್ಮ
ರಿಪುದಿನಿತೆ ಬೞಿಕೆ ನಿಶ್ಚಿತಂ
ತ ಪರಮಸೌಖ್ಯಾಸ್ಪದಕ್ಕೆ ಭಾಜನನಪ್ಪೈ        || ೧೩ ||

ವ || ಎಂದು ಪರಿ…… ಮಪಥ್ಯಮುಂ ತಥ್ಯಮುಮಾಗೆ ನುಡಿದು ಸಂಬೋಧಿಸಿದ ಗುರುಗಳ ವಚೋವಿಸ್ತರಮಂ ಸುಕುಮಾರಮುನೀಶ್ವರನವದಾರಿಸಿ

ಮುನಿಪತಿ ನಿಮ್ಮಿಂ ಪ್ರತಿಬೋ
ಧನಿಮಿಂದಾದತ್ತು ನಿ ಮ್ಮ ದಯೆಯಿಂದೆ ಕೃತ
ರ್ಥನೆನಾನ ದಲ್ಲದಿರ್ದಂ
ದೆನಗೆ ಜಿನೇಶ್ವರ ತಪಃಪ್ರಭಾವವಭಾವಂ         || ೧೪ ||

ಅವಿವೇಕಾತ್ಮತೆಯಿಂದೆ ಮೆಯ್ಯಱಿಯದಾಂ ದಿಙ್ಮೂಢನಾಗಿರ್ದೆನಿ
ನ್ನವೆರಂ ನಿಮ್ಮಡಿ ನಿಮ್ಮನುಗ್ರಹದಿನೀಗಳ್ ನಿಶ್ಚಯಂ ನಿಮ್ಮನ
ವ್ಯವಚೋವೃತ್ತಿಯನೀ ನಿವೃತ್ತಿ ದೊರೆಕೊಂಡತ್ತಲ್ಲದಿರ್ದಾಗಳೀ
ಭವವಾರಾಶಿಯೊಳರ್ದೊಡೆತ್ತು ವವರಾರೆನ್ನಂ ಮುನೀಂದ್ರೋತ್ತಮಾ          || ೧೫ ||

ವ || ಎಂದು ನುಡಿಯುತ್ತುಮಿರೆಯಿರೆ

ಪುದಿದೊಂದಿರ್ದಂಧಕಾರಂ ಬೆದಱಿ ಪರೆಯೆ ನೀರ್ವಕ್ಕಿಗಳ್ ಕೂಡಿ ತೋಡಾ
ಗೆ ದಿಗಂತಗಳ್ ನಿತಾಂತಂ ತೊಳಗಿ ಬೆಳಗೆ ಪಂಕೇಜಷಂಡಂಗಳೆಲ್ಲಂ
ಮುದದಿಂದೆತ್ತೆತ್ತಲೋರಂತಲರ್ದೆಸೆದಿರೆ ಪೂರ್ವಾಚಳೇಂದ್ರಾಗ್ರದೊಳ್ ಬಂ
ದುದಯಂಗೆಯ್ಧತ್ತು ಶೋಭಾರುಣಕಿರಣಗಣಾಳಂಬಮಾದಿತ್ಯಬಿಂಬಂ         || ೧೬ ||

ವ || ಅಂತು ಮಾರ್ತಾಂಡೋದಯಮಪ್ಪುದುಂ ಭವ್ಯವರಪುಂಡರೀಕ ಮಾರ್ತಡಂ ನಿತ್ಯಮಂಡಿತಜಿನಾಲಯಮಂ ತ್ರಿಃಪ್ರದಕ್ಷಿಣಂಗೆಯ್ದು ದಕ್ಷಿಣಾಭಿಮುಖವಾಗಿ ತತ್ಪುರಬಹಿರುಪವನಮಧ್ಯಪ್ರದೇಶದೊಳ್ ಮುಕ್ತಿಶ್ರೀಕಾಮಿನೀತಿಲಕಮೆಂಬಂತಿರ್ದ ತ್ರಿಭುವನತಿಲಕವೆಂಬ ಚೈತ್ಯಾಲಯಕ್ಕೆ ವಂದಿರ್ದರಿತ್ತಲಾ ಮುನೀಶ್ವರನಾ ವನಾಂತರಾಳದಿಂ ಪೊಱಮಟ್ಟುತ್ತರೋತ್ತರಸುಖಾಭಿಮುಖನಪ್ಪುದನಭಿನಯಿಸುವಂತುತ್ತರದಿಶಾಭಿಮುಖನಾಗಿ

ಈರ್ಯಾಶುದ್ಧಿ ತಪೋಗುಣ
ಪರ್ಯಾಯವಿಶುದ್ಧಿಯೆಂಬುವಂ ಬಗೆವೀ ತಾ
ತ್ಪರ್ಯದಿನೇನುಂ ಬಗೆಯದೆ
ಶೌರ್ಯಸ್ಥಿತನಾಗಿ ಬಟ್ಟೆಯೊಳ್ ಮುನಿ ನಡೆದಂ            || ೧೭ ||

ಕಡಕುಂ ಪರಲ್ಗಳುಂ ಮೆ
ಲ್ಲಡಿಗಳನೆಡೆಯುಡುಗದೊತ್ತಿದೆಡೆಯಿಂ ನೆತ್ತರ್
ಬಿಡದೆಚ್ಚು ಪಾಯೆ ಸಂಯಮಿ
ನಡೆದು ಮಹಾಕಾಳದೊಳಗನಾಗಳ್ ಪೊಕ್ಕಂ     || ೧೮ ||

ವ || ಅಂತಾ ಮಹಾನುಭಾವನಾ ಮಹಾಕಾಳದೊಳ್ ಸುಪ್ರಾಸುಕ ಪ್ರದೇಶಮಂ ಕಂಡು ಯೋಗಯೋಗ್ಯಪ್ರದೇಶಮಪ್ಪುದಂದೇಕಾಗ್ರಚಿತ್ತದೊಳೇಕ ಪಾರ್ಶ್ವದೊಳ್ ಮೆಯ್ಯನಿಕ್ಕಿ ನಿಟಿಳತಟಘಟಿತಕರಪುಟಯುಗಲನುಂ ಧರ್ಮಧ್ಯಾನೋಪಯೋಗನುಮಾಗೆ ವೀರಪ್ರಯೋಗಮನವಿಧಿಯಿಂ ವಿರಸ್ತಯ್ಯಾತಳಗತನಾಗಿರ್ದನನ್ನೆಗಮಿತ್ತಲಾ ಮಣಿಮಾಡದ ನೆಲೆಯೊಳ್ ಸುಕುಮಾರಸ್ವಾಮಿಯೊಡನೆ ಪವಡಿಸಿದ ಮನೋಹರಿಯೆಂಬ ನಯನಮನೋಹರಿ ಬೆಳಗಾದಾಗಲೆಚ್ಚರ್ತು ನಿಜಮನೋವಲ್ಲಭನಂ ಕಾಣದೆ ಕೆಟ್ಟೆ [ನೆಂದು] ಬಾಯ್ವಿಟ್ಟು ಪರಿಚಾರಕಿಯರಂ ಕರೆದು ಮಾಡದೋವರಿಗಳೊಳೆಲ್ಲಮಱಸಿ ಕಾಣದೆ ಗದ್ಗದ ಕಂಠೆಯಾಗಿ ಯಶೋಭದ್ರೆಗಱಿಪಿದಾಗಳ್

ತನಗಾಕಸ್ಮಿಕ ಶಂಕೆ ತನ್ನ ಮನದೊಳ್ ಮುಂಪುಟ್ಟೆ ತತ್ಕಾಂತೆಯಂ
ದಿನಿರುಳ್ ಚಿಂತಿಸಿ ನಿದ್ದೆಗೆಟ್ಟು ಮತಿಗೆಟ್ಟಿರ್ದಂತಿದಂ ಕೇಳ್ದು ತ
ಟ್ಟನೆ ಮೂರ್ಛಾಗತೆಯಾಗೆ ಬಂಧುಜನಮೆಲ್ಲಂ ಬಂದು ಶೀತಾಂಬುವಂ
ಘನಮಾಗಲ್ತಳಿದಾಗಳೆಚ್ಚಱಿಸಲಂತೆಚ್ಚತ್ತು ವಿಶ್ರಾಂತಿಯಿಂ          || ೧೯ ||

ವ || ಸೊಸೆವಿರೆಲ್ಲರುಮನೊಡಗೊಂಡು ಬಳ್ಳಿಮಾಡಂಗಳೊಳೆಲ್ಲಮಱಸಿ ಕರುಮಾಡಮನೇಱಿ ನೋಡುವಾಗಳಾತ್ಮೀಯ ವೈಶ್ಯವಂಶಧ್ವಜಂ ದುರಿತಾ ರಾತಿವಿಜಯದಿಂದೆತ್ತಿಸಿದ ವಿಜಯಧ್ವಜದಂತೆ ಮಿಳಿರ್ದು ಪೊಳೆವ ದುಕೂಲದ ವಿಚಿತ್ರವಸ್ತ್ರಮಾಲೆಯಂ ಭೋಂಕನೆ ಕಂಡು

ಇೞಿದಿಲ್ಲಿಂದಮೆ ಪೋದನೆಂದು ಮನದೊಳ್ನಿಶ್ಚಯಿಸಿ ತಾಂ ಮಾಡದಿಂ
ದಿೞಿದಾತ್ಮೀಯ ಸಹಾಯವರ್ಗಸಹಿತಂ ತನ್ನಂದನೋದ್ದೇಶದೊಳ್
ತೊೞಲುತ್ತುಂ ತರುಗುಲ್ಮರಾಜಿಗಲೊಳೆಲ್ಲಂ ನೋಡಿ ಶೋಂಕಾಕುಲಾ
ವಿಳೆಯಾದಲ್ ಪ್ರಿಯಪುತ್ರಮೋಹವಶದಿಂದೇನಾಗರೇಗೆಯ್ಯರೋ   || ೨೦ ||

ವ || ಅಗಳಾ ಮೂವತ್ತಿರ್ವರ್ಕಾಂತೆಯರುಮಾತ್ಮೀಯ ಪತಿವಿಯೋಗೊದ್ವೇಗದಿಂ ಶೋಖಾಕ್ರಾಂತೆಯರಾಗಿ ಮೆಯ್ಯಱಿಯದೆ

ಎಳೆಮಾವೇ ಲತೆಯೇ ತಮಾಳಚಯಮೇ ಪೆಣ್ಣಂಚೆಯೇ ಕೊಂಚೆಯೇ
ವಿಲಸಚ್ಚಂಪಕಮೇ ಲಸತ್ಪುಳಿನಮೇ ಪುನ್ನಾಗಮೇ ಪೂಗಮೇ
ಕೊಳನೇ ಪಂಕಜಮೇ ನಮೇರುಕುಜಮೇ ಬಾಱ್ಜೊಂಪಮೇ ಕೋಗಿಲೇ
ಗಿಳಿಯೇ ಕಂಡಿರೆ ಪೇೞಿಮೆಮ್ಮಪತಿಯಂ ಶ್ರೀರೂಪಕಂದರ್ಪನಂ      || ೨೧ ||

ವ || ಎಂದು ವನತರುಲತಾವನಚರಂಗಳಂ ಕಂಡತಿಪ್ರಲಾಪಂಗೆಯ್ವಾಗಳ್ ಬಂಧುಜನಮುಂ ಪರಿಜನಮುಂ ನೆರೆದು ಬಂದು ಬನ್ನಿಮಿನ್ನುಮಱಸುವಮೆಂದು ಪುರಪ್ರ[ಕ್ಷೋ] ಭಮಾಗೆ ಪುರದೊಳಗೆ ತೊೞಲ್ದಱಸುತ್ತುಂ

ಸುರರಾಜವಿಭವನಂ ಕಂ |
ಡಿರೆ ರೂಪಮನೋರಾಜನಂ ಕಂಡಿರೆ ಭಾ
ಸ್ಕರತೇಜನನೀಗಳ್ಕಂ
ಡಿರೆ ಗುಣಿಯಂ ಭವ್ಯಸೇವ್ಯಚಿಂತಾಮಣಿಯಂ   || ೨೨ ||

ವರಪುಣ್ಯಾಧಾರನಂ ಕಂಡಿರೆ ಗುಣಧರನಂ ಕಂಡಿರೇ ಭೋಗಿಯಂ ಕಂ
ಡಿರೆ ಲಕ್ಷ್ಮೀಕಾಂತನಂ ಕಂಡಿರೆ ವಿಶದಯಶೋರಾಶಿಂ ಕಂಡಿರೇ ಸೌಂ
ದರದಿವ್ಯಾಕಾರನಂ ಕಂಡಿರೆ ಸುಖಮಯನಂ ಕಂಡಿರೇ ರೂಪವಿದ್ಯಾ
ಧರನಂ ನೀಮಾರುಮೇಂ ಕಂಡಿರೆ ಮನಸಿಜನಂ ಕಂಡಿರೇ ಪೇೞಿಮೀಗಳ್ ||

ವ || ಎಂದು ಪುರಜನಂಗಳಂ ಬೆಸಗೊಳುತ್ತುಮಾತ್ಮೀಯಾವಾಸಕ್ಕೆ ಮಗುೞೆವರ್ಪಾಗಳ್

ಉದಿತಶಶಾಂಕನಿಲ್ಲದಿರುಳಂತೆ ವಿನೂನವಸಂತರಾಜನಿ
ಲ್ಲದ ವನಲಕ್ಷಿಯಂತೆ ದಿವಿಜೇಶ್ವರನಿಲ್ಲದ ಸಗ್ಗದಂತೆ ಚೆ
ಲ್ವೊದವಿದ ಪದ್ಮಮಿಲ್ಲದ ಸರೋವರದಂತೆ ಜನಕ್ಕೆ ಬಿನ್ನನಿ
ರ್ದುದು ಸುಕುಮಾರನಿಲ್ಲದೆ ಪಲರ್ನೆರೆದಿರ್ದೊಡಮಾಗಳಾ ಗೃಹಂ || ೨೪ ||

ವ || ಅಂತು ಬಿನ್ನನಿರ್ದು ಕುರುಮಾಡಮಂ ಕಂಡು ಮಗನಂ ಕಾಣದಾ ಬಾಳೆ ಕಾದ ಪುಡಿಯೊಳ್ ಬಿರ್ದೆಳವಾಳೆಯಂತೆ ಬಂಬಳ ಬಾಡಿ ತಿಱಿದಿಕ್ಕಿದ ತಳಿರಂತೆ ಕೊಗ್ಗನೆ ಕರಗಿ ಶೋಕಾವೇಗತತ್ಪರೆಯಾಗಿರ್ಪುದುಂ ಸ್ವಜನಪರಿಜನಂಗಳೆಲ್ಲಂ ಪಸಿವುಂ ನಿದ್ರೆಯುಮೆಂಬ ಚಿಂತೆಯನೇನೆಂದಱಿಯದೆ ಚಿಂತಿಸುತ್ತಂ ಪೊೞಲೊಳಂ ಕೆಲದೂರ್ಗಳೊಳೆಲ್ಲ ಮಱಸುತ್ತಿರ್ದರಿತ್ತಲನ್ನೆಗಮಾ ಸುಕುಮಾರಸ್ವಾಮಿ ಮುನ್ನೆ ವಾಯುಭೂತಿಯಾದಂದಿನ ಭವದತ್ತಿಗೆಯಪ್ಪ ಸೋಮದತ್ತೆ ಸಂಸಾರಕಾಂತಾರದೊಳ್ ತಿಟ್ಟನೆ ತಿರಿದು ನಿದಾನಕಾರಣಮಾಗೆ ಪೆಣ್ನರಿಯಾಗಿ ಮುನ್ನಿನ ತನ್ನೆರಡು ಮಕ್ಕಳುಮಾ ಭವದೊಳ್ ತನಗೆರಡು ಮಱಿಗಳಾಗಿ ಪುಟ್ಟುವುದುಂ ಮಱಿಗಳ್ವೆರಸು ತಿರಿತರುತ್ತುಮಾ ಮಹಾಯೋಗೀಶ್ವರನ ನಡೆದ ಸಜ್ಜೆಯೊಳ್ ಮೃದುಪದತಳಂಗಲೊಡೆದುಚ್ಚಳಿಸಿ ಸೂಸಿದ ನೆತ್ತರ ಧಾರೆಯೊಳ್ ನಾದು ನನೆದಡಿವಜ್ಜೆಯನು ನಾತಂಬಿಡಿದು ಬಂದು ಮಹಾಕಾಳಶ್ಮಶಾನದೊಳಗೆ ಯೋಗ ನಿಯೋಗ ಧ್ಯಾನೋಪಯೋಗದಿಂ ನಿರುದ್ಧಕರಣ ನಿಸ್ಪಂದಶರೀರನಾಗಿ ಮೆಲ್ಲನಡಕಂ ಬೆರಸು ಪಟ್ಟಿರ್ದ ಋಷಿರೂಪಕಮಂ ಕಂಡು ಶಬಮೆಂದೆ ಸಾರ್ದು ತಾನೊಂದುಕಾಲಂ ತನ್ನೆರಡು ಮಱಿಗಳೊಂದು ಕಾಲಂ ಕೂಡೆ ತೋಡಿ ಸೀಳ್ದು ತಿಂಬಾಗಳ್

ನೆಱೆಯೆ ಚತುರ್ದಶಪೂರ್ವಮ
ನಱಿವಱಿತನ ತನಗೆ ನೆಱೆದು ನಿಲೆ ತನ್ನಂ ತಾ
ನಱಿದಿರ್ದುದಱಿಂದಂ ಮೆ
ಯ್ಯಱಿದಿರ್ದುಂ ನೋವನಱಿಯದಿರ್ದಂ ಮುನಿಪಂ        || ೨೫ ||

ಕಂ || ಜೀವಂ ಬೇಱೆ ಶರೀರಂ
ಭಾವಿಸೆ ಬೇಱೆಂಬ ಪರಮತತ್ವಾರ್ಥವ ಸ
ದ್ಭಾವವಿಚಾರಮನರಿವಾ
ಭಾವಾತ್ಮಂ ಮೆಯ್ಯನೋವನೇನರಿದಪನೇ       || ೨೬ ||

…………………………………………………………………………….
…………………………………………………………………………….
…………………………………………………………………………….
ದಿರ್ದೆಡೆ ಯಿನಿರ್ದಧೈರ್ಯದೊಂದಳವದಚ್ಚರಿದಲಾ ಮುನೀಂದ್ರನಾ            || ೨೭ ||

ವ || ಮತ್ತಮಾ ಮಹಾತ್ಮನಧ್ಯಾತ್ಮಮಂ ಮನದೊಳಲವಲಂಬಿಸುತ್ತುಮ ಧ್ರುವಮಶರಣಮೇಕತ್ವಮನ್ಯತ್ವಸಂಸಾರಲೋಕಮಶುಚಿತ್ವಮಾಸ್ರವಸಂವರೆ ನಿರ್ಜರೆ ಧರ್ಮಬೋಧಿಯೆಂಬ ದ್ವಾದಶಾನುಪ್ರೇಕ್ಷೆಗಳಂ ಯಥಾಕ್ರಮದಿಂ ತನುಪ್ರೇಕ್ಷೆಗೆಯ್ದುಂ

ದಿಟವಭ್ರಾಕೃತಿಯೆಂತಂ |
ತುಟೆ ತೊಟ್ಟನೆ ಬಂದ ಬೆಟ್ಟುತೋಱೆ ತಾನೆಂತಂ ||
ತುಟೆ ದಿವಿಜಚಾಪಮೆಂತಂ |
ತುಟೆ ಭವವಿಭವಾಭಿಜಾತ್ಯಮೆಂತುಮನಿತ್ಯಂ     || ೨೮ ||

ಭುವನತ್ರಯಂಗಳೊಳಮೀ |
ಭವಕಾನನದೊಳಗೆ ಸುಳಿವ ಜೀವಂಗಳನಾ ||
ಜವನೆಱೆದುಯ್ವಾಗಳ್ ಕಾ |
ವವರಾರ್ ಶರಣಾರ್ ಜಿನೇಂದ್ರಧರ್ಮಮೆ ಶರಣಂ          || ೨೯ ||

ಅನುಭವಪರ್ಯಾಯದೊಳೊ |
ರ್ವನೆ ಭವಪರ್ಯಾಯಗತಿನಿಕಾಯಂಗಳೊಳೊ ||
ರ್ವನೆ ಗುಣಪರ್ಯಾಯದೊಳೊ |
ರ್ವನೆ ಭಾವಿಸುವಾಗಳೆಂದುಮೊರ್ವನೆ ಜೀವಂ     || ೩೦ ||

ಎನೆಗಾನೆ ನೆಱವು ವಸ್ತುಗ
ಳನೇಕಮೆನ್ನೊಡನೆ ನಿಂದುಮೇನವು ಪೇೞ್ದ
ರ್ಶನಸುಖವೀರ್ಯಜ್ಞಾನಾ |
ತ್ಮನೆ ನಾನೆಂಬಿದುವೆ ತಾನೆ ನೆಗೞ್ದನ್ಯತ್ವಂ        || ೩೧ ||

ನಾನಾವಿಧ ದುರ್ಗಂಧ |
ಸ್ಥಾನಂ ಸಪ್ತವಿಧಧಾತುಗೆಂದುಂ ಜನ್ಮ ||
ಸ್ಥಾನಂ ಕೃತಾಂತಗೇಹಮಿ |
ದೇನಶುಚಿಯೊ ಮಾಯ್ದ ದೇಹಮಾರಯ್ವಾಗಳ್          || ೩೨ ||

ಪ್ರಕಟೇತರದ್ರವ್ಯಕ್ಷೇ |
ತ್ರಕಾಲಭವಭಾವ ಭೇದದಿಂದೆ ವಿಚಿತ್ರಾ ||
ತ್ಮಕಮೆನೆ ಸಂದೀ ಪಂಚ |
ಪ್ರಕಾರ ಸಂಸಾರಮೇನಸಾರಮೊ ನೆನೆಯಲ್      || ೩೩ ||

ಅವಯವದಿನಧೋಮಧ್ಯೋ |
ರ್ಧ್ವ ವಿಭೇದವಿಭಿನ್ನಮಾಗಿ ಸಹಜಸ್ಥಿತಿಯಿಂ ||
ಪವನತ್ರಯಸಂವೇಷ್ಟಿತ |
ಭುವನತ್ರಯಮಿರ್ದ ಮಾರ್ಗಮೇನತಿಶಯಮೋ || ೩೪ ||

ಅಭಿಯೋಗಕರ್ಮಮಾಸ್ರವ |
ವಿಭೇದಮದು ಪುಣ್ಯಪಾಪಕೃತದಿಂದೆ ಶುಭಾ ||
ಶುಭಕರ್ಮಾಸ್ರವಮೆಂಬೆರ |
ಡು ಭೇದಮದುವೆ ಪಂಚಭೇದಮುಮಕ್ಕುಂ      || ೩೫ ||

ನಿರವದ್ಯಮಹಾವ್ರತದಿಂ |
ವರಸಮಿತಿಗಳಿಂ ತ್ರಿಗುಪ್ತಿಯಿಂದಾಸ್ರವಮಂ ||
ದುರಿತಾರಾತಿಗಳಂ ನಿ |
ರ್ಜರಿಸುವ ತಾತ್ಪರ್ಯಮದುವೆ ನಿರ್ಜರೆಯೆನಿಕುಂ           || ೩೬ ||

ಅಭಿವಿನುತ ಧರ್ಮರತಿಯುಂ |
ಸ್ವಭಾವವೈರಾಗ್ಯಭಾವಮುಂ ಸರ್ವಭವಾ ||
ನುಭವವಿರಕ್ತತೆಯುಂ ದು |
ರ್ಲಭಮದು ಭವ್ಯಪ್ರಬೋಧಬೋಧಿಯೆನಿಕ್ಕುಂ            || ೩೭ ||

ಅಕ್ಷೂಣಗುಣಮಹಿಂಸಾ |
ಲಕ್ಷಣಮಕ್ಷಯಮನಂತಮನುಪಮಮಮಲಂ ||
ಮೋಕ್ಷಸುಖಹೇತುಭೂತಂ |
ಸಾಕ್ಷಾತ್ಸದ್ಧರ್ಮಮಾರ್ಮಮಕ್ಕೆಮಗೆಂದುಂ     || ೩೮ ||

ಎಂದಿಂತು ದ್ವಾದಶಾನುಪ್ರೇಕ್ಷಾಸ್ಮರಣಪರಿಣತಾಂತಃಕರಣನನುಸ್ಮರಣಂ ಗೆಯ್ವುತ್ತುಮಕ್ಷುಭಿತಮಹಾವಾರಿನಿದಿಯಿರ್ಪಂತಿರ್ದಾ ಮಹಾತಪೋನಿಧಿಗೆ

ತರದಿಂ ಮೂಱುದಿನಂಬರಂ ಭರದಿನೋರಂತಲ್ಲಿಯುಂ ಮಾಣದಾ
ನರಿಗಳ್ ಸೀೞ್ದು ಸಿಱುಂಬಳಾಡಿ ತಿನೆ ಮತ್ತಾ ಧೈರ್ಯಮಾ ಶೌರ್ಯಮಾ |
ಇರವಾ ಯೋಗನಿಯೋಗಮಾ ಪರಮಧರ್ಮಧ್ಯಾನಮಾ ಜ್ಞಾನಮಾ |
ವರಲೇಶ್ಯಾಗುಣಮಾ ಮಹಾಗುಣಗಣಂಗಕ್ಕುಂ ಪೆಱಂಗಕ್ಕುಮೇ    || ೩೯ ||

ಭುಗುಭುಗನುರ್ಚ್ಚೆ ಪಾಯ್ದು ಸಲೆ ದೇಹರಸಂ ಬಿಡುತೋಡಿತೆಲ್ಲಿಯುಂ |
ಮೊಗರಸಮೋಡಿತಿಲ್ಲ ದಿನಪಾಂಶುಗಳೞ್ವೆ ಶರೀರಯಷ್ಟಿ ತೊ
ಟ್ಟಗೆ ಕಡುಗಂದಿ ಕುಂದೆ ಬಡವಾದುದು ಯೋಗನಿಯೋಗಭಾವದೊಳ್
ಬಗೆ ಬಡವಾದುದಿಲ್ಲ ನೆಗೞ್ದಾ ಸುಕುಮಾರಮಹಾಮುನೀಂದ್ರನಾ || ೪೦ ||

ವ || ಇಂತಾ ಮಹಾನುಭಾವನಾ ಮಹೋಪಸರ್ಗಮನಶ್ರಮದಿಂ ಸೈರಿಸಿ ಸಮ್ಯಗ್ಧರ್ಶನಜ್ಞಾನಚಾರಿತ್ರ ತಪಸಾಂ ಸ್ವೀಕರಣಮಾರಾಧನಾನಾಮಮೆಂಬ ಚತುರ್ವಿಧಾರಾಧನೆಗಳನಾರಾಧಿಸಿ ಪಂಡಿತ ಮುನಿಜನಸ್ತುತ ಚಾರುಚರಣಂ ಪಂಡಿತ ಮರಣದೊಳ್ ವೀರಪ್ರಾಯೋಪಗಮನ ಸಂನ್ಯಸನಸಮಾಧಿಯಿಂ ಧರ್ಮಧ್ಯಾನಸಾಮಗ್ರಿದೊಳ್ ವೀರಪ್ರಾಯೋಪಗಮನ ಸಂನ್ಯಸನಸಮಾಧಿಯಿಂ ಧರ್ಮಧ್ಯಾನಸಾಮಗ್ರಿಯೊಳ್ ಮುನ್ನಮೆ ನೆಱೆದು ಪರಮಪದಮನೆ ಮನದೊಳ್ ನಿಱಿಸಿ ಪರಮಸಮ್ಯಕ್ತ್ವಾನಂತವೀರ್ಯಜ್ಞಾನ- ದರ್ಶನ ಸೂಕ್ಷ್ಮತ್ವಾ ಗುರುಲಘುತ್ವಾವಗಾಹತ್ವಾವ್ಯಾಬಾಧಂಗಳೆಂಬ ಸಿದ್ಧಪರಮೇಷ್ಠಿಗಳಷ್ಟ ಗುಣಂಗಳಂ ನೆನೆಯುತ್ತುಂ ಜ್ಞಾನಾದಿ ಶುಭಪರಿಣಾಮಂಗಳೊಳ್ ನಿರತಿಶಯಶುಕ್ಲಲೇ ಶ್ಯಾವಿಶುದ್ಧಿಯಿಂ ಮೋಹನೀಯಕರ್ಮೋಪಶಮದಿಂ ವಿಶುದ್ಧ್ಯತಿಶಯ ವಿಶೇಷದಿಂದುಪಶಮಶ್ರೇಣಿಯನೇಱಿ ಸಾಮಾಯಿಕಶುದ್ಧಿಸಂಯಮಸಂಪನ್ನನಾಗಿ ಮತ್ತಂ ತಿಱಿತಿಱಿದು ಬೇಗದೊಳಂತರ್ಮುಹೂರ್ತದಿಂ ಪೂರ್ವಾಪರವಿಷಯ ವಿವಿಕ್ತಾರ್ಥವ್ಯಂಜನಯೋಗ ಸಂಕ್ರಮಣಗುಣಲಕ್ಷಣೈಕಲಕ್ಷಿತಮಪ್ಪ ಪೃಥಕ್ತ್ವವಿತರ್ಕವೀಚಾರಾಭಿದಾನಪ್ರಥಮ ಶುಕ್ಲಧ್ಯಾನಾಧೀನಮಾನಸಂ ಸಮಾಹಿತ ಸಮುಪಶಾಂತಗುಣಸ್ಥಾನಸಂಸ್ಥಿತನಾಗಿರ್ಪುದುಮಾ ಸಮಯದೊಳ್ ನಿಜಾಯುಷ್ಯಾಂತಮೆಯ್ದೆವರ್ಪ್ಪುದುಂ

ಪೆಱಗಣಭವಂಗಳೊಳ್ ಮೆ
ಯ್ಯಱಿಯದೆ ಮೆಯ್ಯಿಂದೆ ಕೇಡನೆಯ್ದಿದೆನೆಂಬೀ ||
ಯಱಿವಿಂ ಮೆಯ್ಯ ಮಮತ್ವಂ |
ಪಱಿಪಡೆ ಪಱಿಪಟ್ಟು ಪೋದುದಸು ಮೆಯ್ಯಿಂದಂ        || ೪೧ ||

ವ || ಅಂತು ಪರಿತ್ಯಕ್ತದೇಹನಾಗಿ ಜಂಬೂದ್ವೀಪೋಪಮಾನಪರಿಮಾಣ ವಿಸ್ತಾರಮಾಗಿರ್ದ ಸರ್ವಾರ್ಥಸಿದ್ಧಿಯೊಳನೇಕ ರತ್ನಮರೀಚಿಮಾಳಾಳಂಕೃತ ಪ್ರಸರವಿರಚಿತ ಸುರಶರಾಸನೋಪಮಾನ ನಾನಾನೂನ ಕಲ್ಪವಲ್ಲೀ ವೇಲ್ಲಿತನಮೇರುಮಂದಾರ ಪಾರಿಜಾತ ಸಂತಾನಕ ಹರಿಚಂದನ ವನಪರಿವೃತ ಪರಿಣಚಿತ ವಿಶಾಳಹರಿನೀಳರುಚಿ ರುಚಿರವಿರಚಿತ ನೀಳಾಭ್ರವಿಭ್ರಮಕುಟ್ಟಿಮದೊಳಮಳ ಹರಿನ್ಮಣಿಯಯೂಖರೇಖಾ ಜಟಿಳತೋದಾತ್ತ ಚಿತ್ತಭಿತ್ತಿವಿಭ್ರಾಜಿತ ಪದ್ಮರಾಗ ಗವಾಕ್ಷಜಾಳಾಂಶುಜಾಳಮಂಜರೀರಂಜಿತದೊಳತ್ಯಂತಕಾಂತ ಚಂದ್ರಕಾಂತ ಮಣಿಶಿಳಾಕಳಾಪ್ರಭಾದೀಪಸಪ್ತಕಕ್ಷಾಂತರಾಳದೊಳವಿರಳಾಲಂಬಮಾನ ಪ್ರವಾಳಚ್ಛಾಯಾಚ್ಛಾದಿತ ಸಕಲದಿಗಂತರಾಳ ಮನೋಹರದೊಳನಲ್ಪರತ್ನ ರಚನಾ ವಿಚಿತ್ರೋಪಪಾತತಲ್ಪದೊಳಂತರ್ಮುಹೂರ್ತದೊಳ್ ಷಟ್ಪರ್ಯಾಯಂ ಕೈಕೊಂಡು

ಅನವರತಂ ಮೋಕ್ಷದ ನೆರೆ
ಮನೆಯೆನಿಸಿರ್ದಾ ವಿಮಾನದೊಳ್ ನಿಜಶುಭಭಾ
ವನೆಯಿಂ ಸುಕುಮಾರಮಹಾ
ಮುನೀಂದ್ರನಹಮಿಂದ್ರಪದವಿಯಂ ಕೈಕೊಂಡಂ || ೪೨ ||

ಸಹಜಾತಮಣಿವಿಭೂಷಣ
ಬಹುವಿಧನವಕುಸುಮದಾಮ ದಿವ್ಯಾಂಬರ ಸ
ನ್ಮಹಿಮಾ ಮಹಾವಿಭೂತಿಗ
ಳಹಮಿಂದ್ರಂಗೇಂ ವಿಭೂತಿಯಂ ತಾಳ್ದಿದುವೋ || ೪೩ ||

ನಿರತಿಶಯಶುಕ್ಲಲೇಶ್ಯಾ
ಪರಿಣಾಮಮೆ ಮೂರ್ತಿಗೊಂಡು ಪರಿಣಮಿಸಿದವೋಲ್
ಪರಿಪೂರ್ಣಸುದಾಕರನಿಭ
ಪರಿಕರ ಧವಲಪ್ರಭಾಕರಂ ಕರಮೆಸೆದಂ            || ೪೪ ||

ಪೊಳೆವ ನವಚಂದ್ರಕಾಂತೋ
ಪಳಮಂ ಕಂಡರಿಸಿ ಕಡೆದು ಮಾಡಿದವೋಲ್ ಕ
ಣ್ಗೊಳಿಪ ಬಗೆಗೊಳಿಪ ಗಾಡಿಯ
ವಿಳಾಸದಿಂದೇಂ ವಿಲಾಸಮಂ ತಾಳ್ದಿದನೋ      || ೪೫ ||

ಅನತಿಶಯನಿತ್ಯನವಯೌ
ವನಶೋಭೆಯುಮೊಂದು ಮೊೞದ ದೇಹಮುಮಹಮಿಂ
ದ್ರನೊಲಾದುವು ನಿರ್ಮಲ ಭಾ
ವನೆಯಂ ಭಾವಿಸಿದೊಡಪ್ಪುದಾವುದು ಚೋದ್ಯಂ           || ೪೬ ||

ಎಸಗುವ ವಾಮ ಸುಖಂಗಳ
ದೆಸೆಗೆಸಗದೆ ಮಸಗದೆಸಗದಿರ್ದೆಡೆಯಿಂದಿ
ರ್ದಸದೃಶದಿವಿಜಸುಖಾಮೃತ
ರಸದಿಂ ತನ್ನಿಂದೆ ತಾನೆ ತಣ್ಣನೆ ತಣಿದಂ           || ೪೭ ||

ಪುದಿರ್ದಷ್ಟಗುಣಾಕ್ಕಾ
ಸ್ಪದರಾಗಿಯುಮಿಂದ್ರವಂದ್ಯಪರಜಿನಕಲ್ಯಾ
ಣದ ಮಹಿಮೆಗೆಂದುಮಹಿಮಿಂ
ದ್ರದೇವರಲ್ಲಿಂದೆ ಭಕ್ತಿಯಿಂ ಸ್ತುತಿಯಿಸುವರ್   || ೪೮ ||

ಅಸದೃಶಮೋಕ್ಷಗೃಹಕ್ಕಿದು
ಪೊಸಬಾಗಿಲ್ವಾಡಮೆಂಬ ಮಹಿಮಾಸ್ಪದದಿಂ
ಜಸಮಂ ತಳೆದುದು ಸರ್ವಾ
ರ್ಥಸಿದ್ಧಿ ಭಾಪ್ಪೆನದನ್ತುಟೇಂ ಕೇವಲಮೇ       || ೪೯ ||

ಷಟ್ಪದ || ಅದು ಪರಮಾಸ್ಪದ
ಮದು ಪುಣ್ಯಸಂಪದ
ಮದು ಮಹಾಭ್ಯುದಯವಿಲಾಸಾವಾಸಂ ||
ಅದು ದಿಬ್ಯಮದು ಸೇಬ್ಯ
ಮದು ಸೌಮ್ಯಮದು ರಮ್ಯ
ಮದು ಸುಖಾಧಾರ ಸಂಸಾರಸಾರಂ    || ೫೦ ||

ಅಮರರ ಸುಖಮೆಲ್ಲಮನೊಂ
ದು ಮಾಡಿ ಕೂಡಿದೊಡಮೆಂದುಮಹಮಿಂದ್ರರಸೌ
ಖ್ಯಮನೆಯ್ದೆವಾರವೆನೆ ಮ
ತ್ತೆ ಮನುಜರೇನೆಂದು ಪೊಗೞ್ವರಲ್ಲಿಯ ಸುಖಮಂ       || ೫೧ ||

ತ್ರಿದಶೇಂದ್ರರಸುಖದಳವ
ಲ್ಲದು ನಿರುಪಮಮದು ನಿರಾಕುಳಂ ಮೋಕ್ಷಸುಖ
ಕ್ಕದು ಭಾವಿಸು…………………………………………
………………………………………………………………            || ೫೨ ||

ಮತ್ತಮೀ ಪುರದೊಳ್ ಸುಭದ್ರಂಗಂ ಸರ್ವಯಶೆಗಮಾ ಚಂದ್ರವಾಹನಚರ ಸಾಮಾನಿಕಂ ಜ್ಯೇಷ್ಠನಂದನನಾಗಿ ಪುಟ್ಟಿ ಕುಮಾರಕಾಲದೊಳ್‌ತಪಃಶ್ರೀಯಂ ಕೈಕೊಂಡಾಮೀಗಳ್ ಯಶೋಭದ್ರಾಚಾರ‍್ಯರಾದೆವಾ ತ್ರಿವೇದಿಚಾರಾತ್ಮರಕ್ಷ ಗೀರ್ವಾಣಂ ಪೂರ್ವಭವ ನಿದಾನಕಾರಣದಿನೆಮಗೆ ತಂಗೆವಿರಾಗಿ ಪುಟ್ಟಿ ಸೂರದತ್ತಂಗೆ ಕುಲಾಂಗನೆಯಾಗಿ ನೀಮಾಗಳ್ ಯಶೋಭದ್ರಾಂಬಿಕೆಯಾದೆ ನಿಮಗಂ ಸೂರದತ್ತಂಗಂ ನಾಗಶ್ರೀಚರ ಸಾಮಾನಿಕಾಮರಂ ಬಂದು ಸುಕುಮಾರನಾಗಿ ಪುಟ್ಟುವುದುಂ ನಿಜನಂದನನ ವದನಾರವಿಂದ ವಿಲೋಕನಮಾತ್ರದಿಂ ಜಾತಿಸ್ಮರನಾಗಿ ಸೂರದತ್ತಂ ಶ್ರೀಷೇಣ ಸಂಯಮಿ ಸನ್ನಿಧಾನದೊಳ್ ಜಾತನಾದೊಂ ಸುಕುಮಾರಸ್ವಾಮಿಯುಂ ಲೋಕವಿಭಾಗವ್ಯಾವ………ನದಿನೆಮ್ಮಸಮಕ್ಷದೊಳ್ ದೀಕ್ಷೆಯಂ ಕೈಕೊಂಡು ತಿರ್ಯಗುಪಸರ್ಗಮಂ ನೆಗೞ್ದು ಪಂಚಾಣುತ್ತರಗಳ ನಡುವಣ ಸರ್ವಾರ್ಥ ಸಿದ್ಧಿಯೊಳಹಮಿಂದ್ರ ದೇವನಾದೊನದು ಕಾರಣದಿ………೦ಮಮಾರ್ಪ ಜನ್ಮನಿದಾನದ ಫಲದಿಂದೆ ನಿಮಗೆ ಪುತ್ರ ವಿಮೋಹಂ ತಾನನುಭಂದಿಸಿ ನಿಲೆ ನೀಮೀನೆಪದಿಂದಿರ್ದಿರಲ್ಲದಂದೇಕಿರ್ಪಿರಿ

ಮತಿಗೆಟ್ಟೀ ಸಂಸಾರ
ಸ್ಥಿತಿಯಂ ನಿಮಗಿಂ…………….ರರಿಂ
ದತಿ ದುಃಖಿತರಾಗಲಾಗದಾತಂ
ಕೃತಾರ್ಥನಾಗಿರ್ದನಕ್ಕೆ ನೀಮೞಲದಿರಿಂ ||

ಪೞವಿಸಿ ಶೋಕಂಗೆಯ್ವುದು
ಕೞಿದವರೊಸೆ…………………………..
…………………………………………………..
……ೞಿದಪರಣಮೇೞರೇಕೆ ಶೋಕಂಗೆಯ್ದರ್ ||

ನಡೆದಪುದು ನೋಡುದಪ್ಪ
…………………………………………………..
…………………………………………………..
…………………………………………………..

ಅಮರೇಂದ್ರ ಸುಖಾಂಬುಧಿಗಳ್ ಸಮೇತಂದಪುವೆಂದೊಡೀಗಳೀ ಕಿಂಚನ್ಮಾತ್ಮ ಮನುಷ್ಯ………….ಲವುದ್ಗಮಮಿರ್ಕುಮೆಲಚ್ಚಲಾ…………………ತಿಯಾರ್ಗೆ ನೆರೆದು ಬಂದಿರ್ದ ಜನಂ ತಾಮಾರ್ಗೆ ಬುದ್ಧಿಯಂ ಪೇೞ್ವಾಮಾರ್ಗಾರ್ಗೇಕೆ ನೋೞ್ಪಡೀ ಸಂಸೃತಿಯೊಳ್

ಜನಕಂ ಕಂಯ…………………..ಜೆ ಮುತ್ತನನುಜಂ ಮುತ್ತಬ್ಬೆ ಚಿ ………………….ನೆಗೞ್ದ ಜನಂ….ಣ್ಣನಲಿಯಂ ಮಾನಂ ಬಲಿಕ್ಕತ್ತೆ ಮ ಯ್ದುನನಕ್ಕುಂ ಸೊಸೆಯತ್ತೆಯತ್ತಿಗೆ ಮಗಂ ಮೊಮ್ಮಂ ಕರಂ ಕೂರ್ಮೆಯಂ ಗನೆಯೆಂದಿಂತಿವರಾರು ಮಾರ್ಗ ಬಗೆವರ್……..ವೀರದೊಳ್

ಪಡೆಯದೆ ಮನುಷ್ಯಗತಿಯಂ
ಪಡೆದುಂ ರತ್ನತ್ರಯಂಗಳಂ ಪಡೆಯದೊಡೇ
ಪಡೆಮಾತೊ ಬೇಗ ಮರ್ದುಂ
ಬಡೆದುಂ ಕಲಂಬಡೆಯದಂತೆ ನಿಷ್ಫಲಮಲ್ತೇ ||
………………….
……… ತಪೋಗುಣದಿಂ ಶರೀರಮೞೌಡನೋಂ
ತೊಡಂ ಜನಕೆಲ್ಲಂ ಪಿರಿದರ್ಥಮನಿ
ತ್ತೊಡಮೇಂ ನಿರರ್ಥಕಂ ದರ್ಶನವ್ಯಪೇತಂಗೆಂದುಂ ||

ಎಂದಿಂತು ಸಕಲಸತ್ವ ಹಿತೋಪದೇಶಮಪ್ಪ ಸದ್ಧರ್ಮೋಪದೇಶಮಂ ……. ಸೂಚನಾಮಾತ್ರಮಾಗೆ ಸೂಚಿಸುವುದುಂ ಯಶೋಭದ್ರೆ ನಿರ್ವೇಗಪರಾಯಣೆಯಾಗಿ ಮೂವತ್ತಿರ್ವರ್ ಸೊಸೆವಿರೊಳಗೆ ಗರ್ಭಿಣಿಯಪ್ಪೆಣ್ಬರ್ ಸೊಸೆವಿರ್ಗೆ ಸಮಸ್ತ ಗೃಹಪರಿಚ್ಛೇದಮೆಲ್ಲಮನೊಪ್ಪಿಸಿ ಮತ್ತಿನಿರ್ಪತ್ತುನಾಲ್ವರ್ ಸೊಸೆವಿರುಂ ಮತ್ತಂ ಪಲಂಬರ್ ಪರಿಜನಂಬೆರಸು ಜಿನದೀಕ್ಷೆಯಂ ಕೈಕೊಳ್ವುದುಮಾಕ್ಷಣದೊಳ್ ವೃಷಭಾಂಕ ಮಹಾರಾಜಂ ವೈರಾಗ್ಯಪರನಾಗಿ ನಿಜವಂಶಧ್ವಜನೆನಿಸಿದ ಕನಕಧ್ವಜನ ಮೊಗಮಂ ನೋಡಿ

ವನನಿಧಿ ಪರಿವೃತ ಧಾರಿಣಿ
ಯನೊಪ್ಪುಗೊಳ್ ಮಗನೆ ದೀಕ್ಷೆಯಂ ಕೊಂಡಪೆನಾ
ನೆನೆ ರಾಜ್ಯಮನಾನೊಲ್ಲೆಂ
ಜನಪತಿ ನೀಮೀಗಳಱಿಯಿರಾದುದನಪ್ಪೆಂ ||

ಎಂಬುದು ಮತ್ತಮಾಗ್ರಹಂಗೆಯ್ದು
ಸುತಕೆಲವುಕಾಲಮಿಳೆಯಂ
ಪ್ರತಿಪಾಲಿಸಿ ರಾಜ್ಯಲಕ್ಷ್ಮಿಯಂ ತಳೆವುದು ಸಂ
ತತಿಗೆ ಮಗಂ ಬಡೆದಿಂಬೞಿ
ಕ್ಕೆ ತಪಶ್ಶ್ರೀ ನಿನಗೆ ಕಡೆಯೊಳಿರ್ದಪುದಲ್ತೇ ||

ಎನೆ ಮುನ್ನಿನ ಭವದೊಳ್ ಮಿ
ತ್ರನೆನಾಗಿರ್ದೊಡನೆ ದೀಕ್ಷೆಗೊಂಡೀಗಳ್ ಪು
ತ್ರನೆನಾಗಿ ಸೆಡೆದು ಬಂದೊಡೆ
ಕನಕಧ್ವಜನೆಂಬ ನಾಮಮೆನಗಮರ್ದಪುದೇ ||

ಎಂದು ಸೆರಗುಬೆರಗುಮಂ ಬಗೆಯದೆ ಪರಿಚ್ಛೇದಂಗೆಯ್ದು ಕನಕಧ್ವಜ ನನೆಂತುಮೊಡಂಬಡಿಸಲಾಱದೆ ವೃಷಭಧ್ವಜನೆಂಬ ಕಿಱಿಯಮಗಂಗೆ ಪಟ್ಟಂಗಟ್ಟಿ ಕೀರ್ತಿಧ್ವಜನನಿಸಿದ ಕನಕಧ್ವಜನಂ ಬುದ್ಧಿಸಾಗರ ಪ್ರಭೃತಿ ಮಂತ್ರಿಜನಮುಂ ಪಲರುಮರಸುಮಕ್ಕಳ್ವೆರಸು ಭಟ್ಟಾರಕರ್ಗೆ ಸಾಷ್ಟಾಂಗಮೆಱಗಿ ಪೊಡೆವಟ್ಟು

…………ದಿಚಕ್ರ ಭ್ರಮಣದಿನಿನಿತುಂ ಕಾಲಮಾಮಿನ್ನೆಗಂ ದು
ರ್ಮನನದಿ ದುರ್ಮಾರ್ಗದಿಂ ದುಷ್ಕೃತದಿನಖಿಲ ಸಂಸಾರವಾರಾ
ಸಿ….. ಮಗೆ ಶರಣ್ ನೀಮೆ ನಿರ್ವ್ಯಾಜಮೆಂದಾ
ಮುನಿನಾಥಶ್ರೀಪದಾಂಭೋರುಹ ನಿಕಟದೊ….. ದೀಕ್ಷೆಗೊಂಡಂ ||

……..ನದೊಳು ಸಮಾಧಿವಿಧಿಯಿಂ ಮುಡಿಪಿ ಸೌಧರ್ಮೇಶಾನಕಲ್ಪಂಗಳೊಳ್ ಪುಟ್ಟಿ ಪರಮಸುರಲೋಕ ಮಂದಿರ ಮಣಿಪ್ರದೀಪಾಯಮಾನ …….. ಘೋರವೀರ ತಪಶ್ಚರಣ ಪರಾಯಣರಾಗಿ ಕೈಲಾಸಾಚಲದೊಳ್ ಅಚಲಿತ ಪ್ರತಿಮಾಯೋಗದೊಳಿರ್ದು ಸಕಲ ಕರ್ಮ ನಿರ್ಮೂಲನಂಗೆಯ್ದಾಗಳ್

ವನಿತೆ ಸ್ವಯಂವರ ದೊಳ್ ಪು ರು
ಷನನಱಸಿಕೊಳ್ವತೆದಿಂ ಮುಕ್ತ್ಯಂ….
ಗನೆ ಕೈಕೊಂಡಳ್ ತನ್ಮುನಿ
ಪನನಮರಾನಕ ನಿನಾದಮೊಡನೆಸಗುವಿನಂ ||

ಲೋಕಾಲೋಕಾವಲೋಕ ಪ್ರಕಟನಕರ ಮಾಂಗಲ್ಯ ಕೈವಲ್ಯ ಬೋಧಂ…
ಲೋಕಪ್ರಸಿದ್ಧಂ ಪರಮಪದನಜಾತಂ ತ್ರಿಲೋಕಾಧಿನಾಥಂ
ಲೋಕಾಗ್ರಶ್ರೀನಿವಾಸಂ ನಿರುಪನಜರಂ ತ್ರಿಲೋಕಾಧಿ ಮುಕ್ತಿ
ಶ್ರೀ ಕಾಂತಾಕಾಂತನಾದಂ ಪರಮಜಿನಮತಾಂಭೋಜಿನೀ ರಾಜಹಂಸಂ ||

ಮಿಗೆಮೂಲಸಂಘದೊಳ್ ದೇ
ಶಿಗಣದೊಳ್ ಸಂದ ಕೊಂಡಕುಂದಾನ್ವಯಮಂ
ಜಗತೀ ತಳದೊಳ್ ನೆಗೞಲ್
ನೆಗೞ್ದಿರ್ದರ್ ನೆಗೞ್ದವರ್ಧಮಾನಮುನೀಂದ್ರರ್

ಶರದಭ್ರಕ್ಕೆ ದಿಶಾಗಜಕ್ಕೆ ಹಿಮವತ್ಕುತ್ಕೀಲಕೂಟಕ್ಕೆ ಭಾ
ಸುರ ಕೈಲಾಸನಗಕ್ಕೆ ಸಂದ ದುಗ್ಧಾಂಭೋರಾಶಿ ಶುಂಭತ್ ಸುದಾ
ಕರ ಬಿಂಬಕ್ಕೆಣೆಯಾದ ಸುಂದರತೆಯಿಂದಂ ವರ್ಧಮಾನ…..
(ಅಸಮಗ್ರ)