ಶ್ರೀಪತಿಯೆನೆ ನೆಗೞ್ದಂಗೆ ಮ
ಹೀಪತಿ ಬೆಸಗೊಂಡಮಾೞ್ಕೆಯಿಂ ಪೇೞ್ದಂ ಸಂ
ಕ್ಷೇಪದಿನನೂನವಚನಾ
ಳಾಪದಿನಾಗಳ್‌ ಸರಸ್ವತೀ ಮುಖ ಮುಕುರಂ || ೦೧ ||

ವ || ಈ ಕನ್ಯಾರತ್ನಮೀ ಭವಕ್ಕಾಱನೆಯ ಭವದೊಳೀಯಿರ್ದಗ್ನಿಭೂತಿರಿಷಿಯರಿಂ ಕಿಱೆಯಂ ವಾಯುಭೂತಿಯೆಂಬಂ ದ್ವಿಜಾತ್ಮಜನಿವರೊಡನೆಮ್ಮ ಸಮೀಪದೊಳ್‌ ಸಕಲಶಾಸ್ತ್ರಂಗಳನೋದಿದಿಂ ಬೞೆಯಮೆಮ್ಮೊಳಾದ ಮಾನಕಷಾಯದಿಂ ಬೆಳ್ಗತ್ತೆಯುಂ ಪೇಪಂದಿಯುಂ ನಾಯುಮಾಗಿ ಮತ್ತಮೀ ಚಂಪಾಪುರದೊಳ್‌ ಮಾದೆಂಗಕುಲದೊಳ್‌ ಜಾತ್ಯಂಧಕಿಯಾಗಿ ಪುಟ್ಟಿ ಬೆಳೆದೀ ವ್ರತಿಗಳ ಬೋಧನೆಯಿಂದಣುವ್ರತಂಗಳಂ ಕೈಕೊಂಡು ಬೞಿಕ್ಕ ಭೋಗಾಸಕ್ತೆಯಾಗಿ ನಿದಾನಂಗೆಯ್ದು ನಿಮ್ಮ ಪುರೋಹಿತನಪ್ಪ ನಾಗಶರ್ಮಂಗಳಂ ತ್ರಿವೇದಿಗಂ ಮಗಳಾಗಿ ಪುಟ್ಟಿದೊಡೆ ನಾಗರ್ಗೆ ಪರಸಿ ಪಡೆದೆಮೆಂದಜ್ಞಾನದಿಂ ನಾಗಶ್ರೀಯೆಂದು ಪೆಸರನಿಟ್ಟು ನಾಗರೆ ಕುಲದೈವಮಾಗೆಕೊಂಡಾಡುತ್ತುಮಿರ್ದೀಗಳೀ ನಾಗಶ್ರೀಯುಮೀ ಮುಮಕ್ಷುಗಳನಿಂದಿಲ್ಲಿ ನೀರೀಕ್ಷಿಸುವುದುಂ ಕರ್ಮಕ್ಷಯೋಪಶಮದಿಂ ಜಾತಿಸ್ಮರೆಯಾಗಿ ತದ್ಭವಪ್ರತ್ಯಯದಿಂ ಭವಸ್ಮರೂಪಗುಂ ಸದ್ಧರ್ಮಸ್ವರೂಪಮುಮುಂ ಸವಿಸ್ತರಮೆಮ್ಮಲ್ಲಿ ಕೇಳ್ದು ತಿಳಿದು ಸಕಲಸತ್ತ್ವಹಿಂತಂಗಳಪ್ಪ ಪರಮಶ್ರಾವಕವ್ರತಂಗಳಂ ಕೈಕೊಂಡು ಮನೆಗವೋಪುದುಮೀ ವಿರ್ಪ್ರೋತ್ತಮಂ ನಾಮಪ್ಪೊಡೆ ವರ್ಣೋತ್ತಮರ್‌ ನಮಗತ್ತಲಾರುಮಿಲ್ಲಾ ವ್ರತಂಗಂಳನಾ ವ್ರತಿಗೆ ಮಗುಳೆ ಕೊಟ್ಟುಬರ್ಪಮೆಂದು ಮಗಳನೊಡಗೊಂಡಾತ್ಮೀಯಸ್ಥಾನದಿಂ ನಾಗಸ್ಥಾನಕ್ಕಾಗಿ ಬರ್ಪಾಗಳ್‌ ಪಂಚಮಹಾಪಾತಕಫಲದಿಂ ಪಂಚತ್ವಮಂ ಪೊರ್ದಿದ ಮನುಷ್ಯರಂ ಕಂಡು ತಂದೆಯಂ ಬೆಸಗೊಂಡು ಪಂಚಾಣುವ್ರತಂಗಳಂ ಪೇೞುತ್ತಮೆಮ್ಮಲ್ಲಿಗೆ ವಂದು ವಂದಿಸಿ ಕುಳ್ಳಿರ್ಪುದುಮೀ ನಾಗಶರ್ಮಂ ಸಿಗ್ಗಾಗಿ ಪೋಗೆ ನಿಮ್ಮನೊಡಗೊಂಡು ಬಂದೋಡೀ ಕೂಸು ತಾನಾಭವದೋದಿದೋದುಗಳೀಗಳ್‌ ಜಲಕ್ಕನಾದುವಪ್ಪುದಱೆಂ ವೇದವೇದಾಂತಾದಿ ಸಮಸ್ತ ಶಾಸ್ತ್ರಗಳನೀಗಳಿಲ್ಲಿ ನಿರೂಪಣೆಗೆಯ್ದಳಿವರ ವೃತ್ತಾಂತಮೀಯಂದಮೆಂಬುದುಂ ನಿಟಿಳತಟಘಟಿತಕರಪುಟಕಮಳ ಮುಕುಲಯುಕ್ತನಾಗಿ

ಪರಮಜಿನೇಶ್ವರ ತತ್ವ |
ಸ್ವರೂಪಮಂ ವಿಗತತಾಪಮಂ ಮೋಕ್ಷಸುಖಾ ||
ಕರಮಂ ಮುನಿ ನಮಗೀಗಳ್‌ |
ನಿರೂಪಣಂ ಗೆಯ್ಯಿಮೆಂದು ಬಿನ್ನವಿಸುವುದುಂ || ೦೨ ||

ಕಿಱೆದಱೊಳಶೇಷತತ್ವಮ |
ನಱೆವಂತಿರೆ ಸೂಕ್ತಮಾಗೆ ಮಿಥ್ಯಾತ್ವತಮಂ ||
ಪಱೆಪಟ್ಟು ಮುಟ್ಟುಗೆಟ್ಟ
ಳ್ಕುಱೆ ಜನಪತಿಗಱೆವ ತೆಱದಿ ಮುನಿಪತಿ ನುಡಿದಂ || ೦೩ ||

ತರದಿಂ ಜೀವಮಜೀವಮಾಸ್ರವಮಘವ್ಯಾಪಾರಬಂಧಂ ಸುಸಂ |
ವರಮಾ ನಿರ್ಜರೆ ಮೋಕ್ಷಮೆಂದು ಸಲೆ ತತ್ವಂ ಸಪ್ತಭೇಧಂ ಜಿನೇ |
ಶ್ವರವಕ್ತ್ರಾಬ್ಬವಿನಿರ್ಗತಂ ಸಕಲಪಾಪಾಟೋಪತಾಪಹಂ |
ಪರಮಾನಂತಸಖೈಕಸಂಪದಕರಂ ತಾನುಕ್ಕುಮುರ್ವೀಶ್ವರಾ || ೦೪ ||

ವ || ಅಲ್ಲಿ ಪರೋಕ್ಷಜ್ಞಾನಮೆನಿಸಿ ದ್ರವ್ಯಂಗಳೊಳ್‌ ಕೆಲವೆ ಪರ್ಯ್ಗಾಯಂಗಳನೆ ಕೈಕೊಂಡನಿಂದ್ರಿಯೇಂದ್ರಿಯಜಮಾಗಿ ಬರ್ಪಾದ್ರವಗ್ರಹಾದಿ ವಿಭೇದದಿಂ ಮೂನೂಱ ಮೂವತ್ತಾಱು ವಿಕಲ್ಪದಿಂ ನೆಱೆದು ನಿಂದಾಭಿನಿಬೋಧಕಜ್ಞಾನಮುಮಾ ಸ್ಥಿತಿಯೊಳಂಗಾಂಗ ಬಾಹ್ಯಭಾವಿತಾನಂತ ವಿಷಯದಿಂ ದ್ವ್ಯನೇಕದ್ವಾದಶವಿಕಲ್ಪ ಮಪ್ಪ ಶ್ರುತಜ್ಞಾನಮುಂ ವಿಕಳ ಪ್ರತ್ಯಕ್ಷದಿನದೊಂದು ವಿಸ್ತೀರ್ಣಮಾಗಿ ಪುದ್ಗಲ ಮರ್ಯಾದೋಕ್ತಮೆನಿಸಿ ದೇವನಾರಕರ್ಗೆ ಭವಪ್ರತ್ಯಯಮಾಗಿ ಮನುಷ್ಯತಿರ್ಯಗ್ಜೀವಕ್ಕೆ ಕ್ಷಯೋಪಶಮನಿಮಿತ್ತಮಾಗಿ ಹೀಯಮಾನವರ್ಧಮಾನಾವಸ್ಥಿತಾನುಗಾಮ್ಯನನುಗಾಮಿ ಸ್ವರೂಪದಿಂವಷಟ್ಟ್ರಕಾರಮಪ್ಪ ದೇಶಪರಮಸರ್ವಾಧಿಜ್ಞಾನಮುಂ ಪುದ್ಗಲಸಂಪ್ರಭೇದದಲು ಸರ್ವಾವಧಿಜ್ಞಾನಾಂತಿ ಮಭಾಗಮನೆ ಕೈಕೊಂಡು ನೃಕ್ಷೇತ್ರ ವಿಷಯದಿಂ ಪರಮನಃ ಸ್ಥಿತಾರ್ಥ ಗ್ರಹಣಧಾರಣಸಮರ್ಥ ಮನಃಪರಿ ವಿದ್ಯಾಮಂತ್ರ ಮಹಿತಗುಣದಿಂ ನೆಱೆದು ವಿಶುದ್ಧ್ಯಪ್ರತಿಪಾತಾಭ್ಯ ವಿಶೇಷದಿಂ ಋಜು ವಿಪುಲ ಮತಿವಿಕಲ್ಪದಿಂ ದ್ವಿಪ್ರಭೇದಮಪ್ಪ ಮನಃ ಪರ್ಯುಯಜ್ಞಾನಮುಂ ಕ್ಷಾಯಿಕಮುಮೇಕಮುಮನಂತಮುಂ ತ್ರಿಕಾಲ ಸರ್ವಾಥ್ಯಯುಗಪದವಭಾಸಮು ಮಜ್ಞಾನಘಟಿತ ತಮಃ ಷಟಲ ವಿಘಟನಪಟುವುಂಘಾತಿಕರ್ಮ್ಗ ಘಾತೋತ್ಪತ್ತಿ ಹೇತುವುಂ ಸಕಲಪ್ರತ್ಯಕ್ಷಮುಪ್ಪ ಸಕಲ ವಿಮಲ ಕೇವಲಜ್ಞಾನಮುಮೆಂಬೀ ಸಂಜ್ಞಾನಪಂಚಕಮುಂ ಮತ್ಯಜ್ಞಾನಂ ಶ್ರುತಜ್ಞಾನಂ ವಿಭಂಗಜ್ಞಾನಮುಮೆಂಬ ಅಜ್ಞಾನ ತ್ರಿತಯಮುಂ ಇಂತು ಸಂಜ್ಞಾನಬೇದಭಿನ್ನದಿನೆಂಟುತೆಱನಪ್ಪುದು ತಾಂ ಜ್ಞಾನೋಪಯೋಗ ಮೆಂಬುದು ಚಕ್ಷುರಚಕ್ಷುರವಧಿ ಕೇವಲದರ್ಸನಮೆಂದು ಚತುರ್ವಿಕಲ್ಪಮನುಳ್ಳುದು ದರ್ಶಮನೋಪಯೋಗಮೆಂಬುದು ಇಂತೀ ಜ್ಞಾನದರ್ಶನೋಪಯೋಗ ಲಕ್ಷಣಮಾಗೆ ಸುಕೃತಕರ್ಮೋಪಾರ್ಜಿತನುಂ ತತ್ಫಳಭ್ಣಾಜನನುಂ ಮೂರ್ತಾಮೂರ್ತಾಲಕ್ಷಣನುಂ ಸ್ವಶರೀರಮಾತ್ರನುಂ ಸಂಹರಣವಿಸರ್ಪಣ ಧರ್ಮನುಮುತ್ಪಾದ ವ್ಯಯದ್ರವ್ಯಾತ್ಮಕನುಂ ಕರ್ಮನೋಕರ್ಮಾದಿ ಸಂಬಂಧನುಂ ಸ್ವಸಂವೇಧ್ಯನುಮೂರ್ಧ್ವಗತಿ ಸ್ವಭಾವನ ಪ್ರಮಿತಗುಣಮಪ್ಪನಸಂಖ್ಯೇಯ ಪ್ರದೇಶನುಮನಂತ ಜ್ಞಾನಾದಿಗುಣನುಮನಂತಾನು ಭವಬಾಗಿಯುಮನಾದ್ಯನಿಧನ ಸ್ವಭಾವಮಪ್ಪುದು ಜೀವನಾ ಜೀವನನಾವುಪಾಯದಿನು ಪಲಕ್ಷಿಸಲ್‌ ಬರ್ಕುಮೆಂದೊಡೆ ಭಾವೋಪಲಕ್ಷಕಂ ಜೀವನೆಂಬುದು ಆವಾವುವೆಂದೊಡೆ ಔದಯಿಕಭಾವಂ ಔಪಶಮಿಕ ಭಾವಂ ಕ್ಷಾಯಿಕಭಾವಂ ಕ್ಷಾಯೋಪಶಮಿಕಭಾವಂ ಪಾರಿಣಾಮಿಕ ಭಾವಮೆಂದಿಂತು ಭಾವಮಯ್ದುತೆಱನಕ್ಕುಮಲ್ಲಿ

ಕ್ರಮದಿಂದಿರ್ತ್ತೆಱನಕ್ಕುಮೌಪಶಮಮೊಂಬತ್ತಕ್ಕುಮಾ ಕ್ಷಾಯಿಕ |
ಕ್ರಮಮಷ್ಟಾದಶಮಾ ಕ್ಷಯೋಪಶಮಮಿರ್ಪತ್ತೊಂದು ಭೇದಂ ಗುಣಾ |
ಗಮಮೌದೈಕಮೆ ಪಾರಿಣಾಮಿಕ ವಿಭೇದಂ ಮೂಱುಭೇದಂ ನೃಪೋ |
ತ್ತಮ ನೀಂ ಭಾವಿಸು ಭಾವಿತಾತ್ಮನೆನಿಸಿರ್ದಾ ಪಂಚಭಾವಂಗಳಂ || ೦೫ ||

ಅಕ್ಕರ || ಪಪಶಮಭಾಮಂ ಸಮ್ಯಕಂ ಚಾರಿತ್ರಮೆಂದಿವು ತಾವೌಪಾಶಕಭಾವದಝೆ ವಿಕಲ್ಪ |
ವಿಪುಲಕ್ಷಾಯಿಕ ಸಮ್ಯಕ್ತ್ವ ಚಾರಿತ್ರ ಜ್ಞಾನ ದರ್ಶನ ಲಾಭ ಬೋಗೋಪಭೋಗ ವೀರ್ಯಮಿಂತಿ ಭಾವಿಸಲು ಕ್ಷಾಯಿಕಭಾವವಿಕಲ್ಪಮಕ್ಕುಂ |
ಮಾಪ್ರಿಷಿಧರ ಭಾವದಿಂ ಭಾವಿಸು ನೀನಿದಂ ಜಿನತತ್ವಸದ್ಭಾವಮಂತರದಿಂ ವೇದತ ಸಮ್ಯತ್ತಮಂತೆ
ಸರಾಗಚಾರಿತ್ರಮುಂ ಮೇಲೆನಿಸಿ ನಿರುತಂ ಸಂಯಮಾಸಂಯಮಂ ಮತಿಶ್ರುತಾ ವಧಿಮನಃ ಪರ್ಯಯಮತ್ಯಜ್ಞಾನಂ |
ಪರಿವಿಭಂಗಶ್ರುತಾಜ್ಞಾನಂ ಚಕ್ಷುರಚಕ್ಷುರವಧಿಬೇದದರ್ಶನಮುಂ ದಾನಲಾಭ ಭೋಗೋಪಭೋಗವೀರ್ಯಮೆಂದಿವು ಮಿಸಭಾವದವಿಕಲ್ಪಂ || (?)

ಗತಿಮೆಯ್ವೆತ್ತ ಕಷಾಯಲಿಂಗತತಿ ಮಿಥ್ಯಾದರ್ಶನ ಜ್ಞಾನಮ |
ಪ್ರತಿಮಾಸಂಯತೆ ತಾನಸಿದ್ಧತೆ ನಿತಾಂತಂ ಲೇಶ್ಯೆಯೆಂದಿರ್ಪತೊಂ
ದುತೆಱಂ ಕೋವಿದರಿರ್ದು ಭಾವಿಸುವೊಡಿನ್ನೌದಯ್ಯಭಾವಂ ವಿಚಾ |
ರತೆಯಿಂದಾರಯೆ ಪಾರಿಣಾಮಮದು ಜೀವಭವ್ಯಭವ್ಯತ್ರಯಂ || ೦೬ ||

ವ || ಇಂತೀ ಪೇೞ್ದ ಪಂಚಭಾವಂಗಳಿನುಪಲಕ್ಷಿಸೆಪಟ್ಟ ಜೀವಂ ಸಂಸಾರಿಯುಂ ಮುಕ್ತನುಮೆಂದೆರಡು ತೆಱನಕ್ಕುಮಾ ಸಂಸಾರಿಯುಂ ಸ್ಥಾವರತ್ರಸವಿಕಲ್ಪ ದ್ವಿವಿಧ ಮಕ್ಕುಮಲ್ಲಿ ಸ್ಪರ್ಶಮೆಂದೇಕೇಂದ್ರಿಯದಿಂ ಪೃಥಿವ್ಯಪ್ತೇಜೋವಾಯುವನಸ್ಪತಿ ಕಾಯಿಕಮೆಂದು ಸೂಕ್ಷ್ಮಬಾದರ ಸ್ವರೂಪದಿಂ ಸ್ಥಾವರಪಂಚಪ್ರಕಾರಮಕ್ಕುಂ ಸ್ಪರ್ಶನ ರಸನ ಘ್ರಾಣ ಚಕ್ಷು ಶ್ರೋತ್ರೇಂದಿಯಂಗಳೇಕೈಕವೃದ್ಧಿಯಿಂ ಕ್ರಿಮಿಪಿಪೀಲಿಕಾಭ್ರಮರ ಮನುಷ್ಯಾದಿ ವಿಭೇದಮಾಗಿ ದ್ವೀಂದ್ರಿಯಾದಿ ತ್ರಸಂಗಳ್‌ ದ್ವಿಂದ್ರಿಯತ್ರೀಂದ್ರಿಯ ಚತುರಿಂದ್ರಿಯಂಗಳುಂ ಪಂಚೇಂದ್ರಿಯಂಗಳುಂ ವಿಕಲೇಂದ್ರಿಯಂಗಳುಂ ಸಕಳೇಂದ್ರಿಯಂಗಳಕ್ಕುಂ ಆ ಪಮ್ಚೇಂದ್ರಿಯಮುಂ ಸಂಜ್ಞಿಯಸಂಜ್ಞಿಯೆಂಬ ಬೇದದಿಂದಿತ್ತೆಱನಕ್ಕುಂ ಆಹಾರಶರೀರೆಂದ್ರಿಯೋಚ್ಛ್ವಾಸ ಭಾಷಾಮನಮೆಂಬ ಷಟ್ಟರ್ಯಾಪ್ತಿಗಳ್‌ ಪಂಚಸ್ಥಾವರಕ್ಕಮಸಂಜ್ಞಿಗಂ ಚತುಃಪಂಚ ಮಾತ್ರಮಕ್ಕುಂ ಸಂಜ್ಞಿ ಜೀವಂ ಷಟ್ಟರ್ಯಾಪ್ತಕಮಕ್ಕುಂ ಪಂಚೇಂದ್ರಿಯಪ್ರಾಣಂ ಮನೋವಾಕ್ಕಾಯಬಲ ಪ್ರಾಣಮಾಯುಃ ಪ್ರಾಣಮುಮುಚ್ಛ್ವಾಸನಿಶ್ವಾಸಪ್ರಾಣಮುಮೆಂಬ ದಸಾಪ್ರಾಣಂಗಳೇ ಕೇಂದ್ರಿಯಾದಿಗಳ್ಗೆ ಚತುಷ್ಷಟ್ಸಪ್ತಾಷ್ಟನವದಶ ಪ್ರಾಣಪ್ಪಮಾಣಮಕ್ಕುಮೆಂದು ನಿಶ್ಚಯಂಗೆಯ್ವುದು

ನೆಗೞ್ದಾಹಾರಂ ಭಯಮೊ |
ಳ್ಪಗೆಟ್ಟ ಮೈಥನಪರಿಗ್ರಹಂಗಳ್‌ ಸಂಸಾ ||
ರಿಗಳೊಳ್‌ ಸಾಮಾನ್ಯದಿನೆ |
ಯ್ದುಗುಂ ನಿರಂತರಮಶೇಷವಸುಧಾಧೀಶಾ || ೦೭ ||

ಶೀತೋಷ್ಣವಿವೃತಸಂವೃತ |
ಚೀತಾತೇತಪ್ರಮಿಶ್ವಭೇದದೆ ನವಸಂ ||
ಖ್ಯಾತಂ ತದ್ಯೋನಿಸಮು |
ದ್ಭೂತಂ ಗರ್ಭೋಪಪಾದಸಮ್ಮೂರ್ಚ್ಛನೆಗಳ್‌ || ೦೮ ||

ಮಾತೇಂ ಜರಾಯುಜಾಂಡಜ |
ಪೋತಂಗಳ್‌ ಗರ್ಭಸಂಭವಂ ದ್ಯೌನಿರಯೋ ||
ದ್ಭೂತಮುಪಪಾದಜಂ ವಿ |
ಖ್ಯಾತಂ ಸಮ್ಮೂರ್ಛಿತಂಗಳುೞೆದುವಶೇಷಂ || ೦೯ ||

ಸಕಳೋರ್ವೀಪತಿ ನೀಂ ಬಗೆ |
ದು ಕೇಳನುಕ್ರಮದಿನಯ್ದು ಭೇದದಿನೌದಾ ||
ರಿಕವೈಕ್ರೀಯಕಮಾಹಾ |
ರಕ ತೈಜಸಕಾರ್ಮಣಂಗಳಿವು ತನುವೆನಿಕುಂ || ೧೦ ||

ಮಾನವತಿರ್ಯಗ್ಜಾತಿಗೆ |
ತಾನೌದಾರಿಕಮಮರ್ತ್ಯನಾರಕಯುಗ್ಮ ||
ಸ್ಥಾನಕ್ಕೆ ವೈಕ್ರಿಯಾಂಕಂ |
ತಾನಾಹಾರಂ ಪ್ರಮತ್ತಸಂಯತನೆಡೆಯೊಳ್‌ || ೧೧ ||

ಅನುಪಮ ತೈಜಸಕಾರ್ಮಣ |
ತನುಗಳ್‌ ಜೀವನೊಳನಾದಿಸಂಬಂಧಂ ನೆ ||
ಟ್ಟನೆ ತೈಜಸವೈಕ್ರಿಯಕಂ |
ತನು ಋದ್ಧಿಪ್ರಾಪ್ತರೆಡೆಯೊಳಂ ಸಮನಿಸುಗುಂ || ೧೨ ||

ದೇವರೊಳಾಗಿರ್ಕುಂ ಪುಂ |
ಸ್ತ್ರೀವೇದಂ ನಿರಯಜನಿತಸಮ್ಮೂರ್ಛಿತರೊಳ್‌ ||
ಭಾವಿಸೆ ಷಂಡಕವೇದಂ |
ತಾವುೞೆದವರೊಳ್‌ ತ್ರಿವೇದಮುಂ ಸಂಭವಿಕುಂ || ೧೩ ||

ಧೃತನಿರಯಜಾರ್ಯವರಚರ |
ಮತನು ದಿವೋದ್ಭೂತನನಪವರ್ತ್ಯಾಯುಷ್ಯ ||
ಸ್ಥಿತರುೞೆದ ಸಕಲತತ್ವ |
ಪ್ರತತಿಗಳುಪಸಂಹೃತಾಪವರ್ತ್ಯಾಯುಷ್ಯರ್‌ || ೧೪ ||

ವ || ಮುಕ್ತಜೀವನಪ್ಪೊಡೇಕ ಪ್ರಕಾರನುಮನಾಕಾರನುಮಶರೀರಾಕಾರದಿಂ ಕಿಂಚಿದೂನನುಂ ಅನುಪಮಾನನುಮವಾಙ್ಮಾನ ಸಗೋಚರನುಮನಸ್ಕನುಮನಂತ ಚತುಷ್ಟಯಾಸ್ಪದನುಮಷ್ಟಾದಶದೋಷ ವರ್ಜಿತನುಮಪುನರ್ಜಾತನುಮಕ್ಷಯನು ಮಕ್ಕುಮೆಂದುಜೀವತತ್ವಮಂ ಸಮುಚ್ಚಯವಚನದಿಂ ಸವಿಸ್ತರಂ ಬೆಸಸಿ ಬೞೆಯಂ ಮೂರ್ತಸ್ವರೂಪದಿಂ ರಸಗಂಧವರ್ಣಶಬ್ದ ಬಂಧ ಸೂಕ್ಷ್ಮಸ್ಥೌಲ್ಯ ಸಂಸ್ಥಾನಭೇದ ತನುಃಚ್ಛಾಯಾತಪೋದ್ಯೋತವಂತಮಾಗಿ ಶರೀರವಾಙ್ಮಾನಃಪ್ರಾಣಾಪಾನ ಸುಖದುಃಖ ಜೀವಿತಮರಣೋಪಗ್ರಹಪ್ರಾಪ್ತಿ ಶಕ್ತಿಸಂಯುತಾಚೈತನ್ಯಮಪ್ಪುದ ಜೀವತತ್ವಮೆಂಬುದು

ಯೋಗತ್ರಿಯನಿಯೋಗಸ |
ಮಾಗಮಮದಾಸ್ರವಮಶುಭಶುಭಯೋಗಸಮಾ ||
ಯೋಗದಿನಶುಭಶುಭಾಸ್ರವ |
ಮಾಗಿ ಜಿನಾಗಮದೊಳಿರ್ತ್ತೆಱಂ ತಾನಕ್ಕುಂ || ೧೫ ||

ಜ್ಞಾನಿಗಳೊಳ್‌ ತತ್ವದೊಳಭಿ |
ಮಾನಿಗಳೊಳ್‌ ಗುರುಗಳೊಳ್‌ ಸಮಾತ್ಸರ್ಯಮಪ ||
ಧ್ಯಾನಮಹರ್ಷಮವಿನಯಂ |
ಜ್ಞಾನದೃಗಾವರಣದಾಸ್ರವಕ್ಕೆ ನಿಮಿತ್ತಂ || ೧೬ ||

ಕ್ಷಮೆಯುಂ ಕಾರುಣ್ಯಮುಮು |
ತ್ತಮಮಧ್ಯಮಪಾತ್ರದಾನಮುಂ ನಿರುಪಮ ಶೌ ||
ಚಮುಮಖಿಳಸಂಯಾಮಾಸಂ |
ಯಮಮುಂ ಸದ್ವೇದ್ಯದಾಸ್ರವಂ ತಾನಕ್ಕುಂ || ೧೭ ||

ತಾಪಾಕ್ರಂದನ ಶೋಕಮ |
ಹಾಪರಿದೇವನ ವಿಷಾದಮನಮಿವನನ್ಯಾ ||
ತ್ಮೋಪಗತವೆನಿಸಿ ಪಾಪಾ |
ಟೋಪಾಶುಭವೇದನೀಯದಾಸ್ರವಮಕ್ಕುಂ || ೧೮ ||

ಪರಮಾತ್ಮಂ ಪರಮಾಗಮಂ ಪರಮಚಾತುರ್ವರ್ಣ್ಯಮಾರ್ಹಂತ್ಯಮು |
ದ್ಧುರ ಸದ್ಧರ್ಮಮಿವಂ ತಿರಸ್ಕರಿಸೆ ಸಾರ್ಗುಂ ದೃಷ್ಟಿಮೋಹಾಸ್ರವಂ |
ಖರಕೋಪಾದಿಕಷಾಯದುಬ್ಬರಿಕೆಯಿಂ ಚಾರಿತ್ರಮೋಹಾಸ್ರವಂ |
ದೊರೆಕೊಳ್ಗುಂ ಸಮಸಂದ ಸತ್ವನಿಕುರುಂಬಕ್ಕೆಂಬುದಂ ನಂಬು ನೀಂ || ೧೯ ||

ಅತಿಸಾವದ್ಯಪರಿಗ್ರಹಪ್ರಚಯದಿಂ ಸ್ವಭ್ರಾಸ್ರವಂ ಸಾರ್ಗುಮ |
ನ್ವಿತಮಾಯಾವಿಕೃತಿಪ್ರಪಂಚದೊದವಿಂ ತಿರ್ಯಗ್ಭವಾಯುಷ್ಯಮು |
ದ್ಧೃತಮಕ್ಕುಂ ಲಘುಮೂರ್ಛೆಯಿಂ ಮೃದುಪರೀಣಾಮಸ್ವಾಭಾವೋದಿತೋ |
ರ್ಜಿತಪಲ್ಗುತ್ವದಿನಕ್ಕುಮನ್ವಿತಮನುಷ್ಯಾಯುಷ್ಯದೊಂದಾಸ್ರವಂ || ೨೦ ||

ತರದಿಂದ ಕಾಮನಿರ್ಜರೆ |
ಸರಾಗಸಂಯಮಗುಣಂ ಸ್ವಭಾವಮೃದುತ್ವಂ ||
ಪರಿವರ್ತಿಪ ಬಾಳತಪ |
ಶ್ಚರಿತ್ರಮಿವು ದಿವಿಜರಾಯುಗಾಸ್ರವಮಕ್ಕುಂ || ೨೧ ||

ಯೋಗದ ಕುಟಿಲತೆ ತಾನಶು |
ಭಾಗಮುಮಪ್ಪಶುಭನಾಮಮಂ ಯೋಗಸಮಾ ||
ಯೋಗರುಜುತ್ವಂ ಶುಭನಾ |
ಮಾಗಮಮುಂ ಜಿನಮತೋಕ್ತಿಯಿಂ ಜನಿಯಿಸುಗುಂ || ೨೨ ||

ಅಕ್ಕರ || ಪರಮದರ್ಸಾನವಿಶುದ್ಧಿ ಸದ್ವಿನಯಸಂಪನ್ನತೆ ಸಂಶುದ್ಧಶೀಲವ್ರತಂ |
ವರತಪೋಮಾರ್ಗಂ ತ್ಯಾಗಂ ಸಾಧುಸಮಾಚಾರಂ ಚಾರುವರ್ಣಂಗಳೋಳ್‌ ವೈಯ್ಯಾಪೃತ್ಯಂ |
ಮರುಹದಾಚಾರ್ಯಶ್ರುತ ಬಹುಶ್ರುತಭಕ್ತಿಸಂವೇಗ ಸಂಜ್ಞಾನಮಾವಶ್ಯಕಂ
ಸ್ಥಿರಧರ್ಮವಾತ್ಸಲ್ಯಂ ಧರ್ಮಪ್ರಭಾವನೆ ತೀರ್ಥಕೃನ್ನಾಮಕಾಸ್ರವಕಾರಣಾಂ || ೨೩ ||

ತನಗಿಲ್ಲದಂತುಟಂ ತಾ |
ನೆ ನೆಗೞ್ಚುವ ಪೆರಗುಣಂಗಳಂ ಮುಚ್ಚುವ ತ ||
ನ್ನ ನೆ ಪೊಗೞ್ವ ಲೋಗರಂ ಪೞಿ |
ವ ನೀಚನೊಳ್‌ ನೀಚಗೋತ್ರವಾಸ್ರವಮಕ್ಕುಂ || ೨೪ ||

ಸ್ವಗುಣಪ್ರಚ್ಛಾದನಮ |
ನ್ಯಗುಣಾವಿಷ್ಕರಣ ಮಾತ್ಮದೂಶಣಮನ್ನೋ ||
ಪಗಮ ಪುರಸ್ಕಾರಮಪಾ |
ರಗುಣಗಣಂಗುಚ್ಚಗೋತ್ರದಾಸ್ರವಮಕ್ಕುಂ || ೨೫ ||

ಪಲತೆಱದಿಂ ಲೋಗರ್ದಾ |
ನಲಾಭಭೋಗೋಪಬೋಗವೀರ್ಯಾದಿಗಳಂ ||
ಸಲಿಸುವೆಡೆಡೆಗೆವಾಯ್ದುಂ |
ಬೞೆಸಂದೊಂಗಂತರಾಯಮನುಬಂಧಿಸುಗುಂ || ೨೬ ||

ವ || ಎಂದಾಸ್ರವತತ್ವಮಂ ಸ್ವರೂಪದಿಂ ಪೇೞೆ ಕೇಳ್ದು

ಕ್ರಮದಿಂ ಮಿಥ್ಯಾ ತ್ವಮಸಂ |
ಯಮ ಪ್ರಮಾದಂ ಕಷಾಯಯೋಗಂಗಳ್‌ ||
ಕ್ರಮಹೇತುವಾಗಿ ಜೀವನೊ |
ಳಮರ್ಗುಂ ಬಂಧಂ ತಮಂಧದುರಿತಸ್ಕಂದಂ || ೨೭ ||

ವ || ಅಂತು ಜೀವನೊಳ್‌ ಕ್ಷೀರನೀರನ್ಯಾಯಮಾಗಿ ಕರ್ಮಯೋಗ್ಯಂಗಳಪ್ಪ ಪುದ್ಗಲಂಗೊಳ್‌ ಪರಸ್ಪರಪ್ರದೇಶೋಪಸೃಷ್ಟಿಯಂ ಸಮಸಂದು ಪರಿಣಮಿಸುವ ಬಂಧಂ ಪ್ರಕೃತಿತ್ಯನುಭಾಗ ಪ್ರದೇಶಪ್ರ ವಿಭಾಗದಿಂ ಚತುರ್ವಿಧಮಕ್ಕುಮಲ್ಲಿ ಮೂಲ ಪ್ರಕೃತಿಗಳೆಂಟುಮಂ ಬಾದರಸ್ವರೂಪದಿಂ ನೂಱನಾಲ್ವತ್ತೆಂಟು ವಿಕಲ್ಪಮಾದುತ್ತರ ಪ್ರಕೃತಿಗಳು ಮನೊಳಕೊಂಡನುಬಂಧಿಸುವ ಬಂಧಂ ಪ್ರಕೃತಿಬಂಧಮೆಂಬುದಕ್ಕುಂ

ಅಕ್ಕರ || ಜ್ಞಾನದರ್ಶನವರಣವೇದ್ಯಾಂತರಾಯುಂಗಳೊಮೂವತ್ತು ಕೋಟಾಕೋಟಿ |
ತಾನೆರ್ಪ್ಪತ್ತುಕೋಟಿಕೋಟಿಸ್ಥಿತಿ ಮೋಹನೀಯದೊಳೊಂದಿ ಸಂಬಂಧಿಸುಗಂ |
ಜೈನಮತದೊಳಿರ್ಪ್ಪತ್ತುಕೋಟಿಕೋಟಿ ನಾಮಗೋತ್ರಂಗಳೊಳ್‌ ಸಾಗರರೋಪಮಂ |
ನೀನಿಂದು ನಂಬು ಮೂವತ್ತು ಮೂಱೂಯುಷ್ಕರ್ಮದೊಳುತ್ಕೃಷ್ಪಸ್ಥಿತಿಯೆನುಕ್ಕುಂ || || ೨೮ ||

ಮಿಕಿರ್ದ ವೇದನೀಯದೊ |
ಖಕ್ಕುಂ ಪನ್ನೆರೞ್ಮುಹೂರ್ತಮೆಂಟುಮುಹೂರ್ತ ||
ಲೆಕ್ಕಕ್ಕೆ ನಾಮಗೋತ್ರದೊ |
ಳಕ್ಕುಂ ಪೆಱವಱೊಳನುತ್ತರಾಂತಮೂಹೂರ್ತಂ || ೨೯ ||

ಪುದಿದ ಶಿಥಿಲಪರಿಣಾಮದೊ |
ಳೊದವಿದ ದುರಿತಾನುಗತಮದನುಭಾಗಮೆನಿ ||
ಪ್ಪುದು ಶರ್ಕರಾದುಕಿಂಪಾ |
ಕದುರ್ವಿಪಾಕಪ್ರಭಾವ ಶಕ್ತಿಪ್ರತಿಮಂ || ೩೦ ||

ಕ್ಷಿತಿರಸಮಂ ರವಿದುತಿ ನಿಜದ್ಯುತಿಯಿಂ ತೆಗೆವಂತೆ ನೋೞ್ಪೊಡ |
ನ್ವಿತಮೆನೆ ಕಾಯ್ದಗುಂಡು ಜಲಮಂ ಸ್ಥಲದಿಂ ತೆಗೆವಂತೆ ಜೀವನ |
ಪ್ರತಿಹತಕರ್ಮಯೋಗ್ಯಬಹುಪುದ್ಗಲಮಂ ಸಕಲಪ್ರದೇಶಸಂ |
ಗತಿಯಿನನಾರತಂ ತೆಗೆಯುತಿರ್ಪನೆಗೞ್ದ ಚತುರ್ಥಬಂಧನಂ || ೩೧ ||

ವ || ಎಂದು ಬಂಧತತ್ವಮಂ ಸಂಬಂಧಿಸಿ

ಜಿನಪತಿಮತದಿಂದಂ ಯೋ |
ಗನಿರೋಧಂ ತನ್ನೊಳೇಸೆಯೆ ಕರ್ಮಾಸ್ರವಮಂ ||
ಜನಿಯಿಸಲೀಸದೆ ಸದ್ಗುಣ |
ದಿನಂತವಂ ತಗೆವುದದುವೆ ಸಂವರಮಕ್ಕುಂ || ೩೨ ||

ಕೃಪೆಯಿಂ ಚಾರುಚರಿತ್ರದಿಂ ಸಮಿತಿಯಿಂ ಸದ್ಧರ್ಮದಿಂ ಗುಪ್ತಿಯಿಂ |
ತಪದಿಂ ನಿರ್ಜರೆಯಕ್ಕುಮೌಪಶಮಿಕಂ ಸನ್ಮಿಶ್ರಮೌದಯ್ಕವೆಂ |
ಬ ಪೃಥಗ್ಭಾವದ ಮಿಕ್ಕಭವ್ಯತೆಯ ಕೇಡಿಂದಕ್ಕುಮಕ್ಷೂಣ ಮೋ |
ಕ್ಷಪದಿಂ ಮುಕ್ತಿಪದಂ ನಿರಾಮಯಪದಂ ನಿರ್ವಾಣಸೌಖ್ಯಾಸ್ಪದಂ || ೩೩ ||

ಇದು ಸಿದ್ಧಾಂತೋರುನೀರಾಕರಜನಿತಮಿದಾಭೀಳದುಸ್ಸಾರಸಂಸಾ |
ರದುರಂಕ್ಷಿತ್ಯುಗ್ರದಾವಪ್ರಶಮನಕರಣಂ ಪ್ರೀಣಿತಪ್ರಾಣಿ ತಾನೆಂ |
ಬುದನಾಗಳ್‌ ಯೋಗಿನಾಥಾನನಕಮಲವಿನಿರ್ಮುಕ್ತಮಂ ಶ್ರೋತ್ರಸತ್ಪಾ |
ತ್ರದೆ ಪೀರ್ದಂ ತತ್ವಪೀಯೂಷಮನುದಿತಮಹೋತ್ಸಾಹದಿಂ ಚಂದ್ರವಾಹಂ || ೩೪ ||

ಆಗಳ್‌ ತತ್ವಾರ್ಥಸದ್ಭಾವಮನನುನಯದಿಂ ಕೇಳ್ದು ಕೈಕೊಳ್ವುದುಂ ಸಂ |
ವೇಗಂ ಕೈಗಣ್ಮೆ ಸಮ್ಯಗ್ನಯನವಿಭವಮಂ ತಾಳ್ದಿ ತದ್ವೇಗದೊಳ್‌ ನಿ |
ರ್ವೇಗಂ ತನ್ನಂತರಂಗಕ್ಕೊಡರಿಸೆ ಸಮತಾಭಾವದಿಂ ಸರ್ವಸಂಗ |
ತ್ಯಾಗಕ್ಕುದ್ಯುಕ್ತನಾದಂ ಮುದಮೊದವೆ ಮಹೋದಾರಗಂಭೀರನಾದಂ || ೩೫ ||