ಬೂದುಗುಂಬಳದ ಬೆಲೆ ಎಂದೂ ಕಡಿಮೆಯಾದದ್ದೇ ಇಲ್ಲ.  ೫ರಿಂದ ೮ ಕಿಲೋಗ್ರಾಂ ತೂಗುವ ಸಾಧಾರಣ ಗಾತ್ರದ ಬೂದುಗುಂಬಳಕ್ಕೆ ಕನಿಷ್ಠ ೩೦ ರೂಪಾಯಿಗಳು.  ಮಠ, ದೇವಸ್ಥಾನಗಳಲ್ಲಿ ಇವು ಖಾಯಂ.  ಸಾಂಬಾರು, ಮಜ್ಜಿಗೆಹುಳಿ, ಕಾಯಿಹುಳಿಗಳು ಬಹಳ ರುಚಿ.  ಹಾಗೇ ಹಲ್ವಾ, ದಂರೂಟ್‌ಗಳೂ ಬಾಯಲ್ಲಿ ನೀರು ತರಿಸುತ್ತವೆ.

ಉತ್ತರದ ರಾಜ್ಯಗಳಲ್ಲಿ ಇದರ ಜ್ಯೂಸ್‌ ಪ್ರಖ್ಯಾತ.  ಬೂದುಗುಂಬಳದ ಹೆಸರೇ ಪೇಟಾ.  ಪೇಟಾ ಜ್ಯೂಸ್‌ ಹೊಟ್ಟೆಯನ್ನು ಕರಗಿಸುತ್ತದೆ ಎನ್ನುವ ವಿಶ್ವಾಸ, ಅನುಭವ.  ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಉದ್ದ ಲೋಟದಲ್ಲಿ ಪೇಟಾ ಜ್ಯೂಸ್‌ ಕುಡಿದರೆ ಗ್ಯಾಸ್‌ ಟ್ರಬಲ್‌ ದೂರ.  ಮಧ್ಯಾಹ್ನ ಊಟದವರೆಗೆ ಯಾವ ಆಹಾರ ಸೇವಿಸದಿದ್ದರೆ ಹೊಟ್ಟೆಯೂ ಕರಗುತ್ತದೆ.  ಊರಿಗೆ ಬಂದಾಗ ಹೋಳಿಗೆ ತಿಂದು ಎರಡು ಇಂಚು ದೊಡ್ಡದಾದ ಹೊಟ್ಟೆಯನ್ನು ದೆಹಲಿಯ ಪ್ರಖ್ಯಾತ ವಕೀಲರಾಗಿದ್ದ ದಿ| ಕೆ.ಆರ್‍. ನಾಗರಾಜ್‌ ಕರಗಿಸುತ್ತಿದ್ದುದು ಪೇಟಾ ಜ್ಯೂಸ್‌ನಿಂದ. 

ಬೆಳಗ್ಗೆ ವ್ಯಾಯಾಮ, ವಾಕಿಂಗ್‌ ಮುಗಿಸಿ ಬಂದವರು ಬೂದುಗುಂಬಳವನ್ನು ಸಣ್ಣ ಚೂರುಗಳನ್ನಾಗಿ ಮಾಡಿ ಜ್ಯೂಸ್‌ ಮಾಡಿಕೊಂಡು, ಸಕ್ಕರೆ ಹಾಕದೇ ಕುಡಿಯಬೇಕು.  ಊಟದವರೆಗೆ ಬೇರೇನೂ ತಿನ್ನಬಾರದು.  ಹಸಿವೆನಿಸಿದರೆ ಜ್ಯೂಸನ್ನೇ ಕುಡಿಯಬೇಕು.

ಬೂದುಗುಂಬಳ ಎಲ್ಲಾ ಕಾಲದಲ್ಲೂ ಸಿಗುವ ಬಳ್ಳಿ ತರಕಾರಿ.  ಮಳೆಗಾಲದಲ್ಲಿ ಬೀಜ ಹಾಕಿ ಒಂದಿಷ್ಟು ಕೊಟ್ಟಿಗೆ ಗೊಬ್ಬರ ಹಾಕಿದರೆ ಸಾಕು.  ಬಳ್ಳಿಯು ಚಪ್ಪರಕ್ಕೆ ತಾನೇ ಹಬ್ಬಿಕೊಳ್ಳುತ್ತದೆ.  ಬೇಸಿಗೆಯಲ್ಲಾದರೆ ದಿನಾ ನೀರು ಹಾಕಬೇಕು.  ಲಾಲ್‌ಬಾಗ್‌ನಲ್ಲಿ ಉತ್ತಮ ತಳಿಯ ಬೀಜ ಸಿಗುತ್ತದೆ.  ಸ್ಥಳೀಯವಾಗಿಯೂ ಹುಡುಕಬಹುದು.  ಹೊಲದಲ್ಲಿ ಬೆಳೆಯುವ ರೀತಿ ವಿಭಿನ್ನ.

ಹೊಲದಲ್ಲಿ ಚಿಕ್ಕಗುಂಡಿಗಳನ್ನು ಮಾಡಿ ಗೊಬ್ಬರ ತುಂಬಿಸಬೇಕು.  ಅದರಲ್ಲಿ ನಾಲ್ಕಾರು ಬೀಜಗಳನ್ನು ಬಿತ್ತಬೇಕು.  ಮಳೆಯಿಲ್ಲದಿದ್ದರೆ ನೀರುಣಿಸಬೇಕು.  ನೆಲದಲ್ಲಿ ಹಬ್ಬಿಸಿದರೂ ಆದೀತು.  ಚಪ್ಪರವನ್ನೂ ಹಾಕಿ ಹಬ್ಬಿಸಬಹುದು.  ಕಾಯಿ ಬಿಡುವ ಪ್ರಮಾಣ ವಾತಾವರಣವನ್ನು ಅವಲಂಬಿಸಿದೆ.  ಬಳ್ಳಿಯೊಂದು ಮೂರರಿಂದ ಹತ್ತು ಕಾಯಿಗಳವರೆಗೆ ಬಿಡುತ್ತದೆ. ರೋಗಬಾಧೆ ಇಲ್ಲ.

ಮನೆಬಳಕೆಗಾದರೆ ಆರು ತಿಂಗಳವರೆಗೆ ಇಡಬಹುದು.  ಇಲ್ಲದಿದ್ದರೆ ಕೊಯ್ದಕೂಡಲೇ ಮಾರಾಟ ಮಾಡಬೇಕು.  ಬೇಸಿಗೆಯಲ್ಲಿ ತೇವಾಂಶ ಬಹುಬೇಗ ಆರಿಹೋಗಿ ಕಾಯಿ ಬೆಂಡಿನಂತಾಗಿ ನೀರಸವಾಗುತ್ತದೆ.  ಕೊಳೆಯುವ ಸಾಧ್ಯತೆ ಕಡಿಮೆ.

ಎಳೆಕಾಯಿ ಹಸಿರಾಗಿದ್ದು ನುಣುಪಾಗಿರುತ್ತದೆ.  ಮೈಯೆಲ್ಲಾ ಒರಟಾಗಿ ಬೂದಿ ಬೂದಿ ತುಂಬಿದ್ದರೆ ಕಾಯಿ ಬೆಳೆದಿದೆ ಎಂದರ್ಥ.  ಇಂತಹ ಕಾಯಿಯ ಸಿಪ್ಪೆ ದಪ್ಪ.  ಗಟ್ಟಿ.

ಅದಕ್ಕಾಗಿ ಸಾಗಾಣಿಕೆ ಸುಲಭ.  ನಾಲ್ಕು ದಿನ ಇಟ್ಟು ಮಾರಾಟ ಮಾಡಬಹುದು.

ಬೆಂಗಳೂರಿನ ಉಷಾ ಹಾಗೂ ಬಾಲಕೃಷ್ಣ ಹೆಗಡೆಯವರಿಗೆ ಅಂಗಳದಲ್ಲಿ ಕೈತೋಟ ಮಾಡುವ ಉತ್ಸಾಹ.  ಬೂದುಗುಂಬಳ ಬೀಜ ಬಿತ್ತಿದರು.  ಬಳ್ಳಿಯನ್ನು ಟೆರೇಸ್‌ಗೆ ಹಬ್ಬಿಸಲು ಯೋಚಿಸಿದರು.  ಅದು ಚಚ್ಚಕ್ಕೆ ಹಾಕಿಸಿದ್ದ ಗ್ರಿಲ್‌ನ ಸಂದಿಗೊಂದಿಗಳಲ್ಲಿ ನುಗ್ಗುತ್ತ ಬೆಳೆಯಿತು.  ಗ್ರಿಲ್‌ ಅನ್ನೇ ಹಬ್ಬಿಕೊಂಡಿತು.

ಸೆಗಣಿ ಹುಡುಕಿ ತಂದು ನೀರಿನಲ್ಲಿ ಕದಡಿ ಹಾಕುವುದೇ ಗೊಬ್ಬರ.  ಬಳ್ಳಿ ಸೊಕ್ಕಿ ಬೆಳೆಯಿತು.  ಹೂವಾಗಿ ಕಾಯಿ ಬಿಟ್ಟಿತು.  ಸಾಕಷ್ಟು ಉದುರಿ, ಉದುರಿ ಮೂರು ಮಿಡಿಗಳು ದೊಡ್ಡದಾಗತೊಡಗಿದವು.  ದಿನಗಳೆದಂತೆ ಕಾಯಿಗಳು ಮಿತಿಮೀರಿ ಬೆಳೆಯತೊಡಗಿದವು.  ಅವುಗಳ ಬೆಳವಣಿಗೆ ನೋಡುವುದೇ ಒಂದು ಕೆಲಸವಾಗಿತ್ತು.  ಅದೇ ಒಂದು ಸಮಸ್ಯೆಯಾಗಬಹುದು ಎಂದು ಆಗ ತಿಳಿಯಲಿಲ್ಲ.

ಕಾಯಿ ಬೆಳೆದು ಬಳ್ಳಿ ಬಾಡಿತು.  ಚಚ್ಚದ ಮೇಲಿದ್ದ ಕಾಯಿಗಳನ್ನು ಇಳಿಸಲು ಹೋದರೆ ಒಂದಿಂಚೂ ಕದಲಲಿಲ್ಲ.  ಇಳಿಸುವುದು ಹೇಗೆ? ಎರಡು ಜನ ಸೇರಿ ಮೇಲೆತ್ತಲು ಸಾಧ್ಯವಾಯಿತು.  ಬೀಳಿಸದೆ ಇಳಿಸುವ ಧೈರ್ಯ ಬರಲಿಲ್ಲ.  ಬಂದವರೆಲ್ಲಾ ಒಂದೊಂದು ಸಲಹೆ ನೀಡಿದರು.

ಅಂತೂ ಕಾಯಿಗಳನ್ನು ಇಳಿಸಲು ಉಷಾರ ತಂದೆ ಹೆಗಡೆ ಸುಬ್ರಾಯರೇ ಊರಿನಿಂದ ಬಂದರು.  ಕಾಯಿಗಳನ್ನು ಗೋಣಿಚೀಲದಲ್ಲಿ ತುಂಬಿ ಹಗ್ಗ ಕಟ್ಟಿ ನಿಧಾನ ಜಾರಿಸಿ ಇಳಿಸಿದರು.

ಕಾಯಿಗಳನ್ನು ಒಯ್ಯಲು ಯಾರೂ ಸಿದ್ಧರಿಲ್ಲ.  ಮಾರೋಣವೆಂದರೆ ಕೊಳ್ಳುವವರಿಲ್ಲ.  ಬೂದುಗುಂಬಳವನ್ನು ಉಚಿತವಾಗಿ ಪಡೆಯಬಾರದೆಂಬ ಸಂಪ್ರದಾಯ.  ಮನೆಯೊಳಗಿಡಲು ಜಾಗ ಸಾಲದು.  ಮಂಚದ ಅಡಿಯಲ್ಲೂ ಹಿಡಿಸದು.  ನಾಗೊಂದಿಗೆ ಮೇಲೂ ಕೂರದು.  ಹೀಗೆ ಕಾಯಿಗಳು ಸಮಸ್ಯೆಗಳಾದವು.  ಕತ್ತರಿಸಿ ಅಡುಗೆ ಮಾಡೋಣವೆಂದರೆ ಒಂದು ಕಾಯಿ ೨೦ ದಿನಗಳಿಗಾಗುವಷ್ಟು ದೊಡ್ಡದು.  ಚಿಕ್ಕದರ ತೂಕ ೧೮ ಕಿಲೋಗ್ರಾಂ.  ಉಳಿದೆರಡೂ ೩೬ಕಿಲೋಗ್ರಾಂ ಹಾಗೂ ೩೨ ಕಿಲೋಗ್ರಾಂ ಭಾರವಾಗಿದ್ದವು.  ಚಿಕ್ಕದನ್ನು ದಂರೂಟ್‌ ಮಾಡಿ ಬಂದವರಿಗೆಲ್ಲಾ ನೀಡಿ ಅಂತೂ ೧೫ ದಿನಕ್ಕೆ ಖಾಲಿಯಾಯಿತು.

ಉಳಿದೆರಡನ್ನು ಊರಿಗೆ ಒಯ್ಯಲು ತೀರ್ಮಾನ.  ಆಚೀಚೆಯವರನ್ನು ಕರೆಸಿ ಕಾರಿಗೆ ತುಂಬಿಸಿ ಆಯಿತು.  ದಾರಿಯಲ್ಲಿ ಕಾರು ಪಂಕ್ಷರ್‌!!  ಟೈರ್‌ ಬದಲಿಸಲು ಡಿಕ್ಕಿಯಲ್ಲಿ ಬೂದುಗುಂಬಳಗಳ ಅಡಿಯಲ್ಲಿದ್ದ ಟೈರ್‌ ಬೇಕು.  ಟೈರ್‌ ಮೇಲಿಟ್ಟ ಕಾಯಿಗಳನ್ನು ಇಳಿಸಲು ಯಾರೂ ಒಪ್ಪಲಿಲ್ಲ.  ಮೈಗೆ ಬೂದಿ ಹತ್ತುವುದೆಂಬ ಚಿಂತೆ. ಕೆಲವರು ಪ್ರಯತ್ನಿಸಿದರೂ ಸೋತುಹೋದರು.  ಅಂತೂ ಇಳಿಸಿದ್ದಾಯಿತು.  ಟೈರ್‌ ಬದಲಿಸಿದ್ದಾಯಿತು.  ಮತ್ತೆ ಇಡುವ ರಾಮಾಯಣ.  ಹೀಗೆ ರಸ್ತೆಯ ಮಧ್ಯೆ ನಾಲ್ಕು ತಾಸು ಅದೊಂದು ಅಚ್ಚರಿಯ ಕೇಂದ್ರವಾಗಿತ್ತು.

ಊರಲ್ಲಿಯೂ ಅಡುಗೆ ಮಾಡುವವರಿಲ್ಲದೆ ತೇವಾಂಶ ಕಡಿಮೆಯಾಗುತ್ತಾ ಬಂತು.  ಕತ್ತರಿಸಿ ಊರಿಗೆಲ್ಲಾ ಹಂಚಿದರು.  ಬೀಜವನ್ನು ಜೋಪಾನವಾಗಿಟ್ಟರು.  ಅದೇ ವರ್ಷ ಮಳೆಗಾಲದಲ್ಲಿ ತೋಟದಲ್ಲಿ ಬಿತ್ತಿದರು.  ಒಂದು ಬೀಜವೂ ಮೊಳಕೆಯೊಡೆಯಲಿಲ್ಲ.  ಕಾರಣ ಬೀಜದೊಳಗಿನ ತೇವಾಂಶ ಕಡಿಮೆಯಾಗಿತ್ತು.  ಹಾಗೂ ತೋಟದ ಮಣ್ಣು ಬೀಜ ಮೊಳಕೆಯೊಡೆಯಲು ಬೇಕಾದಷ್ಟು ಫಲವತ್ತಾಗಿರದೇ ಗಟ್ಟಿಯಾಗಿತ್ತು.

ಕುಂಬಳದ ಕೃಷಿ ಹೇಗೆ?

ಸೆಪ್ಟೆಂಬರ್‌ ಮತ್ತು ಜನವರಿ ತಿಂಗಳುಗಳು ಬೀಜ ಬಿತ್ತನೆ ಕಾಲಡಿಸೆಂಬರ್‌ ಮತ್ತು ಏಪ್ರಿಲ್‌ನಲ್ಲಿ ಕಟಾವುಅಂದರೆ ಮೂರೂವರೆ ತಿಂಗಳ ಬೆಳೆಎಕರೆಗೆ ೨೦೦ ಕ್ವಿಂಟಾಲ್‌ ಇಳುವರಿ ಗ್ಯಾರಂಟಿಒಂದು ಒಳ್ಳೆಯ ಬಲಿತ ಕಾಯಲ್ಲಿರುವ ಬೀಜ ಒಂದು ಎಕರೆಗೆ ಹೆಚ್ಚಾಗುತ್ತದೆಅಂದರೆ ಒಂದು ಎಕರೆಗೆ ಸುಮಾರು ೨೦೦ಗ್ರಾಂ ಬೀಜ ಬೇಕಾಗುತ್ತದೆಗದ್ದೆಯಲ್ಲಿ ಬೆಳೆಯುವುದಾದರೆ ಏರುಮಡಿ ಮಾಡಿ ಬೀಜ ಬಿತ್ತನೆ ಮಾಡಬೇಕುಪ್ರತಿ ಏರುಮಡಿಗೂ ಸುಮಾರು ಐದು ಬುಟ್ಟಿ ಕೊಟ್ಟಿಗೆ ಗೊಬ್ಬರ ಬೆರೆಸಿದರೆ ಮತ್ತೆ ಗೊಬ್ಬರ ನೀಡಬೇಕಾಗಿಲ್ಲಬಳ್ಳಿಯನ್ನು ಹಾಗೇ ನೆಲದಲ್ಲಿ ಹಬ್ಬಲು ಬಿಡಬೇಕುಬೇಸಿಗೆಯ ಬೆಳೆಗೆ ಯಾವುದೇ ಕೀಟಗಳ ಕಾಟ ಇರುವುದಿಲ್ಲಆದರೂ ಹೊಲದಲ್ಲಿ ಅಲ್ಲಲ್ಲಿ ಚೆಂಡುಹೂವಿನ ಗಿಡಗಳನ್ನು, ದಂಟಿನ ಹರಿವೆಗಿಡಗಳನ್ನೂ ಬೆಳೆಯುವುದು ಒಳ್ಳೆಯದುಹೂವು ಬರುವ ಕಾಲಕ್ಕೆ ಗಮನಿಸಿದರೆ ಹೂವೆಲ್ಲಾ ಹೀಚು ಕಟ್ಟುವುದೋ, ಇಲ್ಲವೋ ತಿಳಿಯುತ್ತದೆಒಮ್ಮೊಮ್ಮೆ ಹೂವುಗಳು ಹೀಚಾಗದಿದ್ದರೆ… [ಕುಂಬಳ ಮಿಡಿಯಾಗದಿದ್ದರೆ] ಬಳ್ಳಿಯ ಸಮೀಪ ಐದುಗ್ರಾಂ ಇಂಗನ್ನು ಹಾಕಬೇಕು ಎನ್ನುವ ಸಲಹೆ ಕುಂದಾಪುರದ ಮುತ್ತಪ್ಪಶೆಟ್ಟಿಯವರು ನೀಡುತ್ತಾರೆಹೊಮ್ಮಂಡದ ಬೆಳೆಗೆ ಅಂದರೆ ಸೆಪ್ಟೆಂಬರ್‌/ಜನವರಿಯಲ್ಲಿ ಬೆಳೆವ ಬೆಳೆಗೆ ವಾರಕ್ಕೊಮ್ಮೆ ತುಂತುರು ನೀರಾವರಿ ಮಾಡಬೇಕುಅಂಗಳ, ಹಿತ್ತಿಲು, ಮಾಡುಗಳಲ್ಲೂ ಕುಂಬಳ ಬೆಳೆಯಬಹುದುಇದಕ್ಕಾಗಿ ಪ್ರತ್ಯೇಕ ಕೃಷಿ ವಿಧಾನವೆಂಬುದಿಲ್ಲ.

ಮಾರುಕಟ್ಟೆ: ಬೂದುಗುಂಬಳಕಾಯನ್ನು ಶನಿಯ ತರಕಾರಿ ಎನ್ನುವುದು ನಂಬಿಕೆಅದಕ್ಕಾಗಿ ಯಾರೂ ಕದಿಯುವುದಿಲ್ಲವಾಹನಗಳ ಪೂಜೆಗೆ, ಹೊಸಮನೆ, ಅಂಗಡಿ ಪೂಜೆಗೆ, ಜಾತ್ರೆಗಳಲ್ಲಿ ಬಲಿ ಅನ್ನ ಹಾಕಲು ಉಪಯೋಗಿಸುತ್ತಾರೆಮಠ ಹಾಗೂ ದೇವಸ್ಥಾನಗಳಲ್ಲಿ ಇವುಗಳನ್ನು ಸಂಗ್ರಹಿಸಿಡುತ್ತಾರೆಬೇಕಾದಾಗ ಅಡುಗೆಗೆ ಬಳಸುತ್ತಾರೆಉಳಿದಂತೆ ಬೂದುಗುಂಬಳಕ್ಕೆ ಉತ್ತರಪ್ರದೇಶದ ಆಗ್ರಾ ಪಟ್ಟಣದಲ್ಲಿ ಬಲು ಹಕ್ಕೊತ್ತಾಯವಿದೆಕುಂದಾಪುರ ಹಾಗೂ ತೀರ್ಥಹಳ್ಳಿಗಳ ಅನೇಕ ರೈತರು ಉತ್ತರಪ್ರದೇಶದ ವ್ಯಾಪಾರಿಗಳಿಗೋಸ್ಕರವೇ ಬೆಳೆಯುತ್ತಾರೆಇಸವಿ ೨೦೧೧ರಲ್ಲಿ ೧೮೦೦ ಲೋಡ್‌ಗಳಷ್ಟು ಬೂದುಗುಂಬಳಕಾಯನ್ನು ನೀಡಿದ್ದಾರೆಒಂದು ಕ್ವಿಂಟಾಲ್‌ಗೆ ೫೦೦ ರೂಪಾಯಿಗಳು.

ಇಷ್ಟೆಲ್ಲಾ ಪ್ರಮಾಣದಲ್ಲಿ ಆಗ್ರಾಕ್ಕೆ ಹೋಗುವ ಕಾರಣ “ಆಗ್ರಾಪೇಠಾ”ಇದೊಂದು ರೀತಿಯ ಸಿಹಿತಿಂಡಿಮೆತ್ತಗಿನ ಕಲ್ಲುಸಕ್ಕರೆಯಂತಿರುತ್ತದೆಇದರ ತಯಾರಿಕೆ ಕ್ರಮ ಹೀಗಿದೆ.

ಬೇಕಾದ ಪದಾರ್ಥಗಳು: ಬೀಜ ಹಾಗೂ ಸಿಪ್ಪೆ ತೆಗೆದ ನಾಲ್ಕು ಇಂಚು ದಪ್ಪವಾದ ಒಂದು ಕಿಲೋಗ್ರಾಂ ಬೂದುಗುಂಬಳದ ಹೋಳುಗಳುಬಿಳಿ ಸುಣ್ಣ ೧೦ಗ್ರಾಂಆಲಂ ಅಥವಾ ಪಟಕ ಐದು ಗ್ರಾಂ. ಒಂದು ಕಿಲೋಗ್ರಾಂ ಸಕ್ಕರೆ.

ಬೆಣ್ಣೆಯಂತಹ ಸುಣ್ಣವನ್ನು ಎರಡು ಲೀಟರ್‌ ನೀರಿನಲ್ಲಿ ಸೇರಿಸಿ ಸೋಸಿಕೊಳ್ಳಬೇಕುಅದಕ್ಕೆ ಕುಂಬಳದ ಹೋಳುಗಳನ್ನು ಹಾಕಿ ನೆನೆಯಲು ಬಿಡಬೇಕುಸುಮಾರು ಎರಡು ತಾಸುಗಳು ನೆನೆದ ಹೋಳನ್ನು ತೆಗೆದು ಶುದ್ಧನೀರಿನಲ್ಲಿ ತೊಳೆಯಬೇಕು.

ಆಲಂ/ಪಟಕವನ್ನು ಒಂದು ಲೋಟ ನೀರಿನಲ್ಲಿ ಹಾಕಿ ಕರಗಿಸಬೇಕುಹೀಗೆ ಆಲಂಭರಿತ ನೀರನ್ನು ತೊಳೆದ ಕುಂಬಳಹೋಳುಗಳ ಮೇಲೆ ಚಿಮುಕಿಸಬೇಕುಸುಮಾರು ೧೦ ನಿಮಿಷದ ನಂತರ ಕುಂಬಳದ ಹೋಳನ ನೀರನ್ನು ಬಸಿದು ಬೇಯಿಸಲು ಇಡಬೇಕುಹೋಳುಗಳು ಮೆತ್ತಗಾಗುತ್ತಿದ್ದಂತೆ ಇಳಿಸಿ ತಣಿಯಲು ಬಿಡಬೇಕು ಮುಕ್ಕಾಲು ಕಿಲೋಗ್ರಾಂ ಸಕ್ಕರೆಯನ್ನು ಕುದಿಸಿ ನಾರು ಪಾಕ ಮಾಡಬೇಕುತಣಿಸಿದ ಸಕ್ಕರೆಪಾಕಕ್ಕೆ ತಣಿದ ಕುಂಬಳಹೋಳುಗಳನ್ನು ಹಾಕಬೇಕುಒಂದು ರಾತ್ರಿ ಹೋಳುಗಳು ಪಾಕ ಹೀರಿಕೊಳ್ಳಲು ಬಿಡಬೇಕುಮತ್ತೆ ಹೋಳುಗಳನ್ನೆಲ್ಲಾ ತೆಗೆದು ಉಳಿದ ಸಕ್ಕರೆ ಪಾಕಕ್ಕೆ ೧೦೦ ಗ್ರಾಂ ಸಕ್ಕರೆ ಸೇರಿಸಿ ಸ್ವಲ್ಪ ನೀರು ಹಾಕಿ ಮತ್ತೆ ಸಕ್ಕರೆ ಪಾಕ ತಯಾರಿಸಿ ತಣಿಯಲು ಬಿಡಬೇಕುಅದಕ್ಕೆ ಮತ್ತೆ ಸಕ್ಕರೆ ಹೀರಿಕೊಂಡ ಹೋಳುಗಳನ್ನು ಹಾಕಿ ರಾತ್ರಿಯೆಲ್ಲಾ ಮುಚ್ಚಿಡಬೇಕುಮರುದಿನ ಹೋಳುಗಳನ್ನೆಲ್ಲಾ ತೆಗೆದು ಉಳಿದ ಸಕ್ಕರೆ ಬೆರೆಸಿ ನೀರು ಸೇರಿಸಿ ಪಾಕ ಮಾಡಬೇಕುತಣಿದ ಪಾಕಕ್ಕೆ ತೆಗೆದ ಹೋಳುಗಳನ್ನು ಮತ್ತೆ ಹಾಕಿ ರಾತ್ರಿಯೆಲ್ಲಾ ಹೀರಿಕೊಳ್ಳಲು ಬಿಡಬೇಕುಈ ರೀತಿ ಕೆಲವರು ಮೂರು ಬಾರಿ ಮಾಡುತ್ತಾರೆಕೆಲವರು ಏಳು ಬಾರಿ ಮಾಡುತ್ತಾರೆ.

ಸಕ್ಕರೆ ಪಾಕ ಹೀರಿಕೊಂಡ ಹೋಳುಗಳನ್ನು ಬಿಸಿಲಿನಲ್ಲಿ ಒಣಗಿಸಬೇಕುಆಗ ಒಣಗಿದ ಆಗ್ರಾ ಪೇಟಾ ಸವಿಯಲು ಸಿದ್ಧಪಾಕಸಹಿತವೂ ತಿನ್ನಬಹುದುಬಿಳಿಯ ಬಣ್ಣದ ಬದಲಾಗಿ ಬೇರೆ ಬೇರೆ ಬಣ್ಣ ಸೇರಿಸುವಿಕೆ, ದ್ರಾಕ್ಷಿ, ಗೋಡಂಬಿ, ಬದಾಮಿಗಳನ್ನು ಸೇರಿಸುವಿಕೆ ಹೀಗೆ ವ್ಯಾಪಾರೀಸೂತ್ರಗಳನ್ನು ಅನುಸರಿಸಬಹುದುಸುವಾಸನೆಗಳನ್ನೂ ಬೆರೆಸಬಹುದು.