ಅಂ ಅಃ

ಮೊದಲ ಭಾಗಕ್ಕೆ ಬಳಸಲಾದ ಈ ವರ್ಣಮಾಲೆಯನ್ನು ಡಾ. ಶಿ.ಚ. ನಂದಿಮಠ ಅವರ ‘ಕನ್ನಡ ವ್ಯಾಕರಣ ದರ್ಪಣ’ ಕೃತಿಯಿಂದ ಆಯ್ಕೆ ಮಾಡಿಕೊಂಡು ಇಲ್ಲಿ ಬಳಸಿಕೊಳ್ಳಲಾಗಿದೆ.

ಇವುಗಳನ್ನು ತೆಗೆದುಕೊಂಡ ಸಂದರ್ಭದ ಹಿನ್ನೆಲೆಯಲ್ಲಿ ಅವುಗಳನ್ನು ಮೊದಲಿಗೆ ವಿಂಗಡಿಸಿಕೊಂಡು ತದನಂತರ ಸಂಯೋಜಿಸಲಾಗಿದೆ. ಈ ವಿಂಗಡಣೆಯನ್ನೂ ಭಾಷಾಶಾಸ್ತ್ರಕ್ಕೆ ಅಥವಾ ವ್ಯಾಕರಣಕ್ಕೆ ಅನುಗುಣವಾಗಿಯೇ ಮಾಡಲಾಗಿದೆ. ಅವುಗಳನ್ನು ಮುಂದಿನ ಪುಟದಲ್ಲಿ ನೀಡಲಾಗಿದೆ.

೧       –         ೧೩     =       ಸ್ವರಗಳು
೧೪     –         ೧೫     =       ಯೋಗವಾಹಗಳು
೧೬     –         ೪೯     =       ವ್ಯಂಜನಾಕ್ಷರಗಳು
(೧೬    –         ೪೦     =       ವರ್ಗೀಯ ವ್ಯಂಜನಗಳು
೪೧     –         ೪೯     =       ಅವರ್ಗೀಯ ವ್ಯಂಜನಗಳು) – ಇವುಗಳನ್ನು ಕ್ರಮವಾಗಿ

೧, ೩, ೫, ೭, ೮, ೧೧ = ಹ್ರಸ್ವ ಸ್ವರಗಳು
೨, ೪, ೬, ೯, ೧೦, ೧೨, ೧೩ = ದೀರ್ಘಸ್ವರಗಳು
೧೪, ೧೫ = ಅನುಸ್ವಾರ ಮತ್ತು ವಿಸರ್ಗ
೧೬, ೧೮, ೨೧, ೨೩, ೨೬, ೨೮, ೩೧, ೩೩, ೩೬, ೩೮ = ಅಲ್ಪಪ್ರಾಣಗಳು
೧೭, ೧೯, ೨೨, ೨೪, ೨೭, ೨೯, ೩೨, ೩೪, ೩೭, ೩೯ = ಮಹಾಪ್ರಾಣಗಳು
೨೦, ೨೫, ೩೦, ೩೫, ೪೦ = ಅನುನಾಸಿಕಗಳು
೪೧, ೪೨, ೪೩, ೪೪, ೪೫, ೪೬, ೪೭, ೪೮, ೪೯ = ಅವರ್ಗೀಯ ವ್ಯಂಜನಗಳು ಎಂದು ವಿಂಗಡಿಸಿ ಇಲ್ಲಿ ಬಳಸಿಕೊಳ್ಳಲಾಗಿದೆ.

ಈ ಮೇಲೆ ತಿಳಿಸಿದಂತೆ ಇವುಗಳಿಗೆ ಕ್ರಮವಾಗಿ ಸಂಖ್ಯೆಗಳನ್ನು ನೀಡುತ್ತಾ ಬರಲಾಗಿದೆ. ಅವು ಹೀಗಿವೆ.

ಅ = 1 ಆ = 2 ಇ = 3 ಈ = 4 ಉ = 5 ಊ = 6 ಋ = 7 ಎ = 8 ಏ = 9
ಐ = 10 ಒ = 11 ಓ = 12 ಔ = 13 ಅಂ = 14 ಅಃ = 15
ಕ = 16 ಖ = 17 ಗ = 18 ಘ = 19 ಙ = 20
ಚ = 21 ಛ = 22 ಜ = 23 ಝ = 24 ಞ = 25
ಟ = 26 ಠ = 27 ಡ = 28 ಢ = 29 ಣ = 30
ತ = 31 ಥ = 32 ದ = 33 ಧ = 34 ನ = 35
ಪ = 36 ಫ = 37 ಬ = 38 ಭ = 39 ಮ = 40
ಯ = 41 ರ = 42 ಲ = 43 ವ = 44 ಶ = 45 ಷ = 46 ಸ = 47 ಹ = 48 ಳ = 49

ಪ್ರಸ್ತುತ ಅಕ್ಷರ ಅಥವಾ ವರ್ಣಮಾಲೆಯನ್ನು ಅನುಸರಿಸಿ ರಚಿಸಲ್ಪಟ್ಟ ಪ್ರಶ್ನೆಗಳಲ್ಲಿ ಗುಂಪಿಗೆ ಸೇರದ ಪದವನ್ನು ಗುರುತಿಸುವ ವಿಧಾನಕ್ಕೆ, ಈ ಕೆಳಗೆ ಸುಮಾರು ನಾಲ್ಕು ವಿಧಾನಗಳನ್ನು ಅಭ್ಯಾಸದ ಅನುಕೂಲಕ್ಕಾಗಿ ಇಲ್ಲಿ ಉದಾಹರಿಸಲಾಗಿದೆ. ಅವು,

 1. a) ಟ ಡ b) ಢ ತ c)  ಥ ಧ    d)  ನ ಫ    e) ಬ ಭ
  2. a) ಟ ಳ    b)  ಠ ಹ    c) ಡ ಷ    d) ಢ ಶ    e) ಣ ವ
  3. a) ಟ ಠ ಡ    b) ಡ ಢ ಣ    c) ಣ ತ ಥ    d) ಥ ದ ನ    e) ನ ಪ ಫ
  4. a) ಟ ಢ    b) ಣ ಥ    c) ದ ಪ    d) ಫ ಮ    e) ಯ ವ

ಇವುಗಳಲ್ಲಿ ಒಟ್ಟು ಐದು ಒಳ ವಿಂಗಡಣೆಗಳು ಇದ್ದು ಅವುಗಳಲ್ಲಿ ಸಾಮಾನ್ಯವಾದ ಕೆಲವು ಅಂಶಗಳಿವೆ. ಒಟ್ಟಾರೆಯಾಗಿ ಅವುಗಳನ್ನು ಗಮನಿಸಿದಾಗ ಮಾತ್ರ ಗುಂಪಿಗೆ ಸೇರದ ಪದ ಯಾವುದೆಂಬುದರ ಅರಿವಾಗುತ್ತದೆ.

ಉದಾಹರಣೆಗೆ ಕ್ರಮಸಂಖ್ಯೆ 1ನ್ನು ತೆಗೆದುಕೊಳ್ಳಿ. ಇಲ್ಲಿ ‘ಟ’ ಮತ್ತು ‘ಡ’ಗಳ ನಡುವೆ ಒಂದು ಅಕ್ಷರದ ಅಂತರವಿದೆ. ಟಡ, ಢತ, ಥಧ, ನಫ, ಇವುಗಳಲ್ಲಿ ಕ್ರಮವಾಗಿ, ಠ, ಣ, ದ, ಪ, ಅಕ್ಷರಗಳನ್ನು ಕೈಬಿಡಲಾಗಿದೆ. ಆದರೆ ಈ ಕ್ರಮಕ್ಕೆ ಸೇರದ ಪದವೆಂದರೆ e) ಬ ಭ, ಏಕೆಂದರೆ ಇಲ್ಲಿ ‘ಬ ಮ’ ಎಂದಿರಬೇಕು. ಆದರೆ ‘ಬ ಭ’ವನ್ನು ಒಂದು ಅಕ್ಷರದ ಅಂತರವಿಲ್ಲದಂತೆ ಕೊಟ್ಟು, ಅಂತರವಿಲ್ಲದಂತೆ ತೋರಿಸಲಾಗಿದೆ. ಹಾಗಾಗಿ ಇಲ್ಲಿ ಗುಂಪಿಗೆ ಸೇರದ ಪದ ‘ಬ ಭ’.

ಕ್ರಮಸಂಖ್ಯೆ ೨ರಲ್ಲಿ ಟ ಮತ್ತು ಳ ನಡುವೆ ೨೨ ಅಕ್ಷರಗಳ ಅಂತರವಿದೆ. ಅವು ಕ್ರಮವಾಗಿ ಕಡಮೆಯಾಗುತ್ತಾ ಹೋಗುತ್ತವೆ. ಇದನ್ನು ಕ್ರಮವಾಗಿ ಸಂಖ್ಯೆಯಲ್ಲಯೂ ಸೂಚಿಸಬಹುದು.

ಉದಾಹರಣೆಗೆ :
a)         ಟ       26        ಳ       49        ಹಾಗೆಯೇ
b)         ಠ        27        ಹ       48
c)         ಡ       28        ಷ       46
d)         ಢ       29        ಶ        45
e)         ಣ       30        ವ       44

ಇಲ್ಲಿ ಡ 28 ಸ 47 ಬಂದರಷ್ಟೇ ಸರಿ. ಆದರೆ ಇದನ್ನು ಗುಂಪಿಗೆ ಸೇರಿಸದೆ ‘ಸ’ 47 ಬದಲಿಗೆ ‘ಷ’ 46ರನ್ನು ನೀಡಲಾಗಿದೆ. ಆದ ಕಾರಣ c) ಡ ಷ ಗುಂಪಿಗೆ ಸೇರದ ಪದ. ಇಲ್ಲಿ ಸಂಖ್ಯೆ ಕ್ರಮವಾಗಿ ಹೆಚ್ಚುತ್ತಲೂ ಹೋಗಬಹುದು, ಕಡಿಮೆಯಾಗುತ್ತಲೂ ಹೋಗಬಹುದು. ಇವುಗಳನ್ನು ಮೇಲಿಂದ ಕೆಳಗೆ ಹೋಗುವಂತೆ ಪರಿಗಣಿಸಬೇಕು.

ಇದರಂತೆಯೇ ಕ್ರಮಸಂಖ್ಯೆ 3ರನ್ನು ಪರಿಶೀಲಿಸುವುದಾದರೆ ಇಲ್ಲಿ ಬಳಸಲ್ಪಟ್ಟಿರುವ ಎಲ್ಲಾ ಅಕ್ಷರಗಳು ಕ್ರಮವಾಗಿ 3 ಅಕ್ಷರಗಳಿಂದ ಕೂಡಿದೆ. ಅವುಗಳಲ್ಲಿ ಅಂತರವಿಲ್ಲದಂತೆ ಎಲ್ಲಾ ಅಕ್ಷರಗಳೂ ಸಾಲಾಗಿ ಇದ್ದು ಕೊನೆಯ ಅಕ್ಷರವನ್ನು ಎರಡನೇ ಒಳವರ್ಗದಲ್ಲಿ ಮತ್ತೆ ಸೇರಿಸಲಾಗಿದೆ.

 1. a) ಟ       ಠ        ಡ       =       26,       27,
  b)         ಡ       ಢ       ಣ       =       28,       29,       30.
  c)       ಣ       ತ       ಥ       =       30,       31,       32.
  d)       ಥ       ದ       ನ       =       32,       33,       35.
  e)       ನ       ಪ       ಫ       =       35,       36,       37.

ಇವುಗಳು ಕ್ರಮವಾಗಿ ಹೀಗೆ ಬಂದಿವೆ.

ಇಲ್ಲಿ ಗುಂಪಿಗೆ ಸೇರದ ಪದ d) ಥ ದ ನ. ಕಾರಣ ಥ ದ ಧ ಎಂದಿರಬೇಕಾದ ಸ್ಥಳದಲ್ಲಿ ‘ಧ’ ಬದಲಿಗೆ ‘ನ’ ವನ್ನು ಬಳಸಲಾಗಿದೆ. ಹಾಗಾಗಿ ಇದು ಗುಂಪಿಗೆ ಸೇರದ ಪದ.

ಕೊನೆಯದಾಗಿ 4ನೇ ಉದಾಹರಣೆಯಲ್ಲಿ
a)       ಟ       ಢ       =       26,       29.
b)         ಣ       ಥ       =       30,       32.
c)       ದ       ಪ       =       33,       36.
d)       ಫ       ಮ      =       37,       40.
e)       ಯ      ವ       =       41,       44.ಗಳನ್ನು ಕ್ರಮವಾಗಿ ತೆಗೆದುಕೊಳ್ಳಲಾಗಿದೆ.

ಇಲ್ಲಿ ಎರಡು ಅಕ್ಷರಗಳ ಅಂತರವನ್ನು ಕಾಣಬಹುದು. ಕ್ರಮವಾಗಿ ಟಢ, ದಪ, ಫಮ, ಯವ, ಇವುಗಳು ಎರಡು ಅಕ್ಷರದ ಅಂತರವನ್ನು ಒಳಗೊಂಡಿದ್ದರೆ, ಒಳವರ್ಗ, b) ಣ ಥ ಕೇವಲ ಒಂದು ಅಕ್ಷರದ ಅಂತರವನ್ನಷ್ಟೇ ಒಳಗೊಂಡಿದೆ. ಉದಾಹರಣೆಗೆ ‘ಣ ದ’ ಇರಬೇಕಾದಲ್ಲಿ ‘ಣ ಥ’ ಎಂದಿದೆ. ಹಾಗಾಗಿ ಇದು ಗುಂಪಿಗೆ ಸೇರದ ಪದ.

ಹೀಗೆ ಈ ಅಭ್ಯಾಸದಲ್ಲಿ ಅಕ್ಷರ ಅಥವಾ ವರ್ಣಮಾಲೆಯನ್ನು ಅನುಸರಿಸಿ ಗುಂಪಿಗೆ ಸೇರದ ಪದವನ್ನು ರಚಿಸಲಾಗಿದೆ. ಒಟ್ಟಾರೆಯಾಗಿ ಅ ಯಿಂದ ಳ ವರೆಗಿನ ವರ್ಣಮಾಲೆಯ ಸಹಾಯದಿಂದ ಇದನ್ನು ರಚಿಸಲಾಗಿದೆ.

 

ಅಕ್ಷರ ಅಥವಾ ವರ್ಣಮಾಲೆಯ ಸ್ಥಾನವನ್ನು ಅನುಸರಿಸಿ ರಚಿಸಲ್ಪಟ್ಟ ಪ್ರಶ್ನೆಗಳು

ಅಭ್ಯಾಸ1

1. a) ಅ ಇ b) ಈ ಊ c) ಋ ಏ d) ಐ ಓ e) ಔ ಅಂ
2. a) ಅ ಳ b) ಆ ಹ c) ಇ ಷ d) ಈ ಶ e) ಉ ವ
3. a) ಅ ಆ ಇ b) ಇ ಈ ಉ c) ಉ ಊ ಋ d) ಋ ಏ ಐ e) ಐ ಒ ಓ
4. a) ಅ ಈ b) ಉ ಎ c) ಏ ಓ d) ಔ ಕ e) ಖ ಘ
5. a) ಕ ಗ b) ಚ ಜ c) ಟ ಡ d) ತ ದ e) ಪ ಮ
6. a) ಕ ಯ b) ಖ ರ c) ಗ ಲ d) ಘ ಶ e) ಙ ಷ
7. a) ಕ ಖ ಘ b) ಘ ಙ ಚ c) ಚ ಛ ಜ d) ಜ ಝ ಞ e) ಞ ಟ ಠ
8. a) ಕ ಘ b) ಚ ಞ c) ಟ ಢ d) ತ ಧ e) ಪ ಭ
9. a) ಆ ಈ b) ಉ ಋ c) ಎ ಒ d) ಖ ಘ e) ಛ ಝ
10. a) ಆ ಮ b) ಇ ಭ c) ಈ ಫ d) ಉ ಪ e) ಊ ನ
11. a) ಆ ಇ ಈ b) ಈ ಉ ಋ c) ಋ ಎ ಏ d) ಏ ಐ ಒ e) ಒ ಓ ಔ
12. a) ಆ ಉ b) ಊ ಏ c) ಐ ಔ d) ಅಂ ಗ e) ಘ ಛ
13. a) ಖ ಘ b) ಛ ಜ c) ಠ ಢ d) ಥ ಧ e) ಫ ಭ
14. a) ಖ ಯ b) ಗ ಲ c) ಘ ವ d) ಙ ಶ e) ಚ ಷ
15. a) ಖ ಗ ಘ b) ಘ ಙ ಛ c) ಛ ಜ ಝ d) ಝ ಞ ಟ e) ಟ ಠ ಡ
16. a) ಖ ಙ b) ಛ ಞ c) ಠ ಢ d) ಥ ನ e) ಫ ಮ
17. a) ಇ ಉ b) ಋ ಎ c) ಏ ಒ d) ಓ ಅಂ e) ಅಃ ಖ
18. a) ಇ ಳ b) ಈ ಹ c) ಉ ಸ d) ಊ ಶ e) ಋ ವ
19. a) ಇ ಈ ಊ b) ಊ ಋ ಎ c) ಎ ಏ ಐ d) ಐ ಒ ಓ e) ಓ ಔ ಅಂ
20. a) ಇ ಊ b) ಋ ಐ c) ಒ ಔ d) ಅಂ ಖ e) ಗ ಚ
21. a) ಗ ಙ b) ಜ ಞ c) ಡ ಣ d) ದ ಧ e) ಬ ಮ
22. a) ಗ ಯ b) ಘ ರ c) ಙ ವ d) ಚ ಶ e) ಛ ಷ
23. a) ಗ ಘ ಙ b) ಙ ಚ ಜ c) ಜ ಝ ಞ d) ಞ ಟ ಠ e) ಠ ಡ ಢ
24. a) ಗ ಚ b) ಜ ಟ c) ಠ ಣ d) ತ ಧ e) ನ ಬ
25. a) ಈ ಊ b) ಋ ಏ c) ಐ ಓ d) ಔ ಅಃ e) ಕ ಖ
26. a) ಈ ಸ b) ಉ ಷ c) ಊ ವ d) ಋ ಲ e) ಎ ರ
27. a) ಈ ಉ ಣ b) ಣ ತ ಥ c) ಥ ದ ಧ d) ಧ ನ ಪ e) ಪ ಫ ಬ
28. a) ಈ ಋ b) ಎ ಐ c) ಒ ಅಂ d) ಅಃ ಗ e) ಘ ಛ
29. a) ಘ ಚ b) ಛ ಢ c) ಣ ಥ d) ದ ನ e) ಪ ಬ
30. a) ಘ ಯ b) ಙ ರ c) ಚ ಲ d) ಛ ಷ e) ಜ ಸ
31. a) ಘ ಙ ಚ b) ಚ ಛ ಜ c) ಜ ಝ ಟ d) ಟ ಠ ಡ e) ಡ ಢ ಣ
32. a) ಘ ಛ b) ಜ ಫ c) ಬ ಯ d) ರ ಶ e) ಷ ಳ
33. a) ಉ ಋ b) ಎ ಮ c) ಯ ಲ d) ವ ಷ e) ಸ ಳ
34. a) ಉ ಳ b) ಊ ಹ c) ಋ ಷ d) ಎ ಶ e) ಏ ವ
35. a) ಉ ಊ ಮ b) ಮ ಯ ರ c) ರ ಲ ವ d) ವ ಶ ಷ e) ಷ ಸ ಹ
36. a) ಉ ಘ b) ಙ ಜ c) ಝ ಠ d) ಡ ತ e) ಥ ನ
37. a) ಚ ಜ b) ಝ ಟ c) ಠ ರ d) ಲ ಶ e) ಷ ಹ
38. a) ಚ ಳ b) ಛ ಹ c) ಜ ವ d) ಝ ಲ e) ಞ ರ
39. a) ಚ ಛ ಜ b) ಜ ಝ ಠ c) ಠ ಡ ಢ d) ಢ ಣ ತ e) ತ ಥ ದ
40. a) ಚ ಝ b) ಞ ಡ c) ಢ ಥ d) ದ ಪ e) ಫ ಬ

* ಡಾ. ಶಿ.ಚ. ನಂದಿಮಠ. ‘ಕನ್ನಡ ವ್ಯಾಕರಣ ದರ್ಪಣ’ ಪುಟ-೦೩, ವಿದ್ಯಾ ಸಂಶೋಧನ ಶಾಖೆ, ಪಠ್ಯಪುಸ್ತಕಗಳ ಇಲಾಖೆ, ಮೈಸೂರು ಸರ್ಕಾರ, ೧೯೭೦