. ನಾಟ್ಯ

ನಾಟ್ಯವೆಂಬ ಕಲಾಪ್ರಕಾರವು ಇಂದು ತನ್ನ ಮೂಲಾರ್ಥವನ್ನು ಕಳೆದುಕೊಂಡು ಈಗ ಶಿಥಿಲಾರ್ಥದಲ್ಲಿ ಪ್ರಯೋಗಗೊಳ್ಳುತ್ತಿದೆ. ಆದುದರಿಂದ ನಾಟ್ಯ, ನರ್ತನ, ನೃತ್ಯ ಮತ್ತು ನೃತ್ತ ಈ ಶಬ್ದಗಳ ಶಾಸ್ತ್ರೀಯ ಅರ್ಥವನ್ನು ಸ್ಪಷ್ಟಗೊಳಿಸುವುದು ಉಚಿತವಾಗಿದೆ. ಅದು “ನಟ್‌” ಎಂಬ ಭಾದಿಗಣದ ಪರಸ್ಮೈ ಚಪದಿಯಾದ ದಿವಾದಿಗಣದ ಪರಸ್ಮೆಧಾತುಗಳಿಂದ ಕುಣಿ, ಆಡು ಎಂಬ ಅರ್ಥಗಳಲ್ಲಿ ವಿಕಾಸವಾಗಿದೆ. ಇವುಗಳ ಪೈಕಿ “ನೃತ್” ಎಂಬುದು ವೇದದಷ್ಟೆ ಪ್ರಾಚೀನವಾಗಿದ್ದು ಉಷಸ್‌ಇಂದ್ರ, ಅಶ್ವಿನಿ ಮುಂತಾದ ದೇವತೆಗಳನ್ನು “ನೃತೂ”  (ಕ್ರೀಡೆಗಾಗಿ ಕುಣಿಯುವವರು) ಎಂದು ವ್ಯವಹರಿಸಲಾಗಿದೆ. “ನಟ್‌” ಥಾತುವು ಇದಕ್ಕಿಂತ ಅರ್ವಾಚೀನವಾದುದು “ನೃತ್‌” ಥಾತುವಿನ ಅಪಭ್ರಂಶವಾಗಿರಬಹುದೆಂದು ಕೋಶಕಾರರು ಅಭಿಪ್ರಾಯಪಡುತ್ತಾರೆ. ನಾಟ್ಯ ನೃತ್ಯಗಳನ್ನು ಹೆಚ್ಚು ಕಡಿಮೆ ಸಮಾನಾರ್ಥಕಗಳೆಂದು ಕಾವ್ಯಗಳಲ್ಲಿ ಬಳಸಿದ್ದರು ಅವುಗಳ ಶಾಸ್ತ್ರೀಯ ಅರ್ಥಗಳೇ ಇಲ್ಲಿ ಪ್ರಸಕ್ತವೂ ಉಚಿತವೂ ಆಗಿದೆ. ಈ ಶಾಸ್ತ್ರದಲ್ಲಿ ಇಂದಿಗೂ ಭರತಮುನಿ, ನಂದಿಕೇಶ್ವರ, ಶಾರ್ಙ್ಗದೇವ, ಸರ್ವಜ್ಞ, ಸೋಮೇಶ್ವರ, ಶಾರದಾತನಯ, ಕುಂಭಕರ್ಣ, ಜಾಯಸೇನಾಪತಿ ಇತ್ಯಾದಿಗಳೇ ಪ್ರಾಮಾಣಿಕರಾಗಿದ್ದಾರೆ. ಇವರುಗಳ ಪೈಕಿ ಭರತಮುನಿ, ನಂದಿಕೇಶ್ವರ ,ಮತ್ತು ಶಾಙ್ಗ ದೇವರುಗಳು ಅಭಿಪ್ರಾಯಗಳನ್ನು ಮಾತ್ರ ಸಂಗ್ರಹಗೊಳಿಸಿ ಬರೆಯಬಹುದು.

ನಾಟ್ಯ ಸ್ವರೂಪ: ಅಭಿನಯ

ನಾಟ್ಯಕಲೆಯ ಸ್ವರೂಪವನ್ನು ಭರತಮುನಿಯೇ ಮೊದಲಾದ ಶಾಸ್ತ್ರಕಾರರು ಹೀಗೆ ವರ್ಣಿಸಿದ್ದಾರೆ : ೧. ಅದನ್ನು ಸೃಷ್ಟಿಸಿ ಹೇಳಿದ್ದು ಚತುರ್ಮುಖ ಬ್ರಹ್ಮ ೨. ಎಲ್ಲ ವೇದಗಳಿಂದಲೂ ಸಂಗ್ರಹಿಸಿ ಅದನ್ನು ಐದನೆಯ ವೇದವಾಗಿ ಮಾಡಿದನು. ೩. ಅದು ಶ್ರವ್ಯವಾದ ಮತ್ತು ದೃಶ್ಯವಾದ ಕ್ರೀಡೆಯಾಗಿದ್ದು ಯಾರು ಯಾರಿಗೆ ಯಾವ ಯಾವ ಕೊರತೆಯಿತ್ತೋ ಅದನ್ನೆಲ್ಲ ತುಂಬಿಸಿಕೊಡುವ ಸಾಮರ್ಥ್ಯವನ್ನು ಪಡೆದಿತ್ತು. ೪. ಅದರಲ್ಲಿ ಇಲ್ಲದಿದ್ದ ಕಲೆಗಳಾಗಲಿ ವಿಜ್ಞಾನವಾಗಲಿ ವಿದ್ಯೆಗಳಾಗಲಿ ಬೇರೆ ಎಲ್ಲೂ ಇರಲಿಲ್ಲ. ಹೀಗೆ ಅದು ಸಮಗ್ರ ಕಲಾ ಸಮಷ್ಟಿಯಾಗಿತ್ತು. ೫. ಅದು ಮೂರು ಲೋಕಗಳಲ್ಲಿರುವ ಎಲ್ಲರ ನಡೆನುಡಿಗಳ ಅನುಕೀರ್ತನವಾಗಿತ್ತು. ನಾನಾ ಜನರ ನಾನಾ ಅವಸ್ಥೆಗಳ ಭಾವಗಳ ರಂಜನೀಯವಾದ ಚಿತ್ರಣವಾಗಿತ್ತು. ೬. ಹೀಗೆ ಅದು ಎಲ್ಲರಿಗೂ ಎಂದರೆ ವೇದ ಬಾಹಿರರಿಗೂ ಅನ್ವಯಗೊಂಡಿತ್ತು. ಎಂದರೆ ವರ್ಣಾಶ್ರಮಗಳ ಭೇದವಿಲ್ಲದೆ ಎಲ್ಲರೂ ಅದನ್ನು ಸವಿದು ಸುಖಿಸುವುದಾಗಿತ್ತು. ೭. ಈ ಕಲೆಯ ಪ್ರಯೋಗಕ್ಕೆ ಆಂಗಿಕ, ವಾಚಿ, ಆಹಾರ್ಯ ಮತ್ತು ಸಾತ್ವಿಕ ಎಂಬ ನಾಲ್ಕು ಅಭಿನಯ ಪ್ರಕಾರಗಳು ಆಧಾರವಾಗಿವೆ. ಅಭಿನಯವೆಂದರೆ ಅಭಿನಯಿಸುವವರ ಮನಸ್ಸಿನಲ್ಲಿರುವ ಆಲೋಚನೆ, ಭಾವ, ಕಲ್ಪನೆ, ರಸ ಮುಂತಾದವುಗಳನ್ನು ಶ್ರೋತೃ-ಪ್ರೇಕ್ಷಕರ ಎದುರಿಗೆ ತಂದು ನಿಲ್ಲಿಸುವ ಕ್ರಿಯೆ. ಆಂಗಿಕಾಭಿನಯವೆಂದರೆ ದೇಹದ ಅಂಗ, ಉಪಾಂಗ, ಪ್ರತ್ಯಂಗ- ಇವುಗಳ ಸೌಂದರ್ಯಾತ್ಮಕ ವಿಕ್ಷೇಪಗಳಿಂದ ಎಂದರೆ ಚಲನವಲನಗಳಿಂದ ಅಭಿಪ್ರಾಯವನ್ನು ಇಂಗಿತಗೊಳಿಸುವುದು. ವಾಚಿಕಾಭಿನಯವೆಂದರೆ ಮಾತುಗಳ ಮೂಲಕ ಅಭಿಪ್ರಾಯವನ್ನು ಪ್ರಕಟಪಡಿಸುವುದು. ಆಹಾರವೆಂದರೆ ಆಯಾ ಪಾತ್ರಕ್ಕೆ ಉಚಿತವಾದ ವೇಷಭೂಷಣಗಳನ್ನು ಧರಿಸಿ ಆಯಾ ಪತ್ರಾವೇ ಎದುರಿಗೆ ನಿಂತಿರುವ ಹಾಗೆ ಭಾಸಗೊಳಿಸುವುದು. ಸಾತ್ವಿಕಾಭಿನಯವೆಂದರೆ ತಾನು ಅಭಿನಯಿಸುತ್ತಿರುವ ಪಾತ್ರ ಮನಸ್ಸಿನಲ್ಲಿ ಹುಟ್ಟುವ ಭಾವ, ಭಾವನೆ, ಕಲ್ಪನೆ, ರಸ ಮುಂತಾದ ಮನಸ್ಸಿನ ಚೇಷ್ಟೇಗಳನ್ನು (ಚೇಷ್ಟೆಯೆಂದರೆ ಅಭಿವ್ಯಕ್ತಪಡಿಸುವ ರೀತಿ) ಶ್ರೋತೃ ಪ್ರೇಕ್ಷಕರಿಗೆ ಸಂವಹನೆಗೊಳಿಸುವಂತೆ ತನ್ನನ್ನು ತೊಡಗಿಸಿಕೊಳ್ಳುವುದು. ಈ ಪ್ರಯೋಗದ ಮುಖ್ಯ ಉದ್ದೇಶವೆಂದರೆ ಈ ಕಥಾವಸ್ತುವಿನಲ್ಲಿ ಅಡಕವಾಗಿರುವ ರಸಭಾವಗಳನ್ನು ಶ್ರೋತೃ-ಪ್ರಕೇಕ್ಷಕರಿಗೆ ಸಂವಹನೆಗೊಳಿಸುವುದು. ರಸವು ಆಯಾ ಪ್ರಯೋಗದಲ್ಲಿ ಪಾತ್ರಗಳ ಭಾಗವಹಿಸುವ ಭೌತಿಕ ಸನ್ನಿವೇಶಗಳು (ವಿಭಾವ) ಅದರ ಪ್ರಭಾವದಿಂದ ಶರೀರದ ಸ್ಥಿತಿಯಲ್ಲಿ ಉಂಟಾಗುವ ಬದಲಾವಣೆಗಳು ಎಂದರೆ ಶಾರೀಕರ ಅಭಿವ್ಯಕ್ತಿ (ಅನುಭವ), ಸ್ಥಾಯಿ (ಇಡೀ ಪ್ರಯೋಗದಲ್ಲಿ ಸ್ಥಾಯಿಯಾಗಿ ನಿಲ್ಲುವ ಮಾನಸಿಕ ಸ್ಥಿತಿ ಅಥವಾ ಪ್ರವೃತಿ) ಮತ್ತು ಈ ಅನುಭವದ ನಡುವೆ ಸುಳಿದುಹೋಗುವ ಇತರ ಮಾನಸಿಕ ಸ್ಥಿತಿಗಳು ( ಸಂಚಾರಿ ಅಥವಾ ವ್ಯಭಿಚಾರಿ) ಈ ನಾಲ್ಕು ವಿಧದ ಮಾನಸಿಕ ಪರಿಣಾಮಗಳು ಒಟ್ಟುಗೂಡಿ ಉತ್ಪಾದಿಸುವ ಅನುಭವ ರಸವು ಶೃಂಗಾರ, ವೀರ, ಕರುಣಾ, ಹಾಸ್ಯ, ಅದ್ಭುತ, ಭಯಾನಕ ರೌದ್ರ ಮತ್ತು ಭೀಭತ್ಸವೆಂದು ಎಂಟು ಬಗೆ. ಕೆಲವರು ಶಾಂತವೆಂಬ ಒಂಭತ್ತನೆಯ ರಸವನ್ನು ಹೇಳುವುದುಂಟು. ನಾಟ್ಯ ಪ್ರಯೋಗದಿಂದ ಉಂಟಾಗುವ ಈ ರಸಗಳು ಲೌಕಿಕ ರಸಗಳಿಗೆ ಸಮಾನಾಂತರವಾದವುಗಳು. ಆದರೆ ಅವುಗಳಿಂದ ಭಿನ್ನವಾಗಿರುತ್ತದೆ. ಹೇಗೆಂದರೆ ಲೌಕಿಕವಾಗಿ ಅನುಭವಿಸುವ ರಸಗಳು ಆಯಾ ಬಾಹ್ಯ ನಿಜ ಸನ್ನಿವೇಶಗಳಿಂದ ಪ್ರೇರಣೆಗೊಂಡು ವಾಸ್ತವವಾದ ಅನುಭವಗಳಾಗಿರುತ್ತದೆ. ಅವುಗಳ ಮಾನಸಿಕ ಹಾಗೂ ದೈಹಿಕವಾದ ಅನುಭವವೇ ಅವುಗಳ ಪ್ರಯೋಜನ ಮತ್ತು ಉದ್ದೇಶ: ಆದರೆ ನಾಟ್ಯ ಪ್ರಯೋಗದಿಂದ ರಸಾನುಭವ ಅಲೌಕಿಕವಾಗಿರುತ್ತದೆ. ಎಂದರೆ ಆಯಾ ಅನುಭವಗಳ ಛಾಯಾಮಾತ್ರನಾಗಿದ್ದು ಲೌಕಿಕ ಪ್ರಯೋಜನದಿಂದ ಹೊರತಾಗಿರುತ್ತವೆ; ಬದಲು ಪ್ರಯೋಗದ ರಸವು ಯಾವುದೇ ಆಗಿರಲಿ, ಅದರ ಅನುಭವವು ವಾಸ್ತವವಾಗಿರುವುದರ ಬದಲು ಅದರಿಂದ ಆನಂದಾನುಭೂತಿಯೇ ಅಂತಿಮವಾದ ಮತ್ತು ಮುಖ್ಯವಾದ ಪ್ರಯೋಜನವಾಗಿರುತ್ತದೆ. ಯಾವುದಾದರೊಂದು ರಸದ ಅಭಿವ್ಯಕ್ತಿಯು ನಟನ ಚತುರ್ವಿಧಾಬಿನಯಗಳಿಂದ ಹುಟ್ಟಿದರೂ ಸಹೃದಯನಲ್ಲಿ ಅದೇ ಅಥವಾ ಸದೃಶವಾದ ಅನುಭವವು ಉಂಟಾಗಲು ಕಾರಣವೇನೆಂದರೆ ಇಂತಹ ರಸಗಳು ಎಲ್ಲ ಮಾನವ ಮಾನಸದಲ್ಲಿ ಸಹ ಪ್ರವೃತ್ತಿಯಿಂದಲೂ ಸಾಧಾರಣರೂಪದಿಂದಲೂ ಇರುತ್ತದೆ. ಇವುಗಳ ಪ್ರಚೋದನೆಗೆ ಬೇಕಾಗುವ ಸನ್ನಿವೇಶ-ಸಂದರ್ಭಗಳು ದೊರೆತಾಗ ಅವು ಅಲೌಕಿಕ ರೂಪದಲ್ಲಿ ಪ್ರತೀತವಾಗುತ್ತವೆ. ಈ ಪ್ರಕ್ರಿಯೆಗೆ ಸಾಧಾರಣೀಕರಣವೆಂದು ಹೆಸರು. ಭರತನು ಮಾನಸಿಕವಾದ ರಸಾನುಭವಕ್ಕೆ ಇಂದ್ರಿಯಾಂತರವಾದ ನಾಲಿಗೆಯಲ್ಲಿ ದೃಷ್ಟಾಂತವೊಂದನ್ನು ನೀಡುತ್ತಾನೆ ಎರಡಕ್ಕೂ ಸಾದೃಶ್ಯಾಂಶವು ರುಚಿಯೇ. ಭೋಜನದಲ್ಲಿ ಮುಖ್ಯವಸ್ತುವಾದ ಅನ್ನದೊಡನೆ (ಸ್ಥಾಯಿ ಭಾವ) ವ್ಯಂಜನಗಳನ್ನು (ವಿಭಾವ, ಅನುಭಾವ, ಸಂಚಾರಿ ಭಾವಗಳನ್ನು ಕಲಿಸಿಕೊಂಡು ತಿಂದರೆ ಮಿಶ್ರವಾದ ರುಚಿಯ (ನಿಷ್ಪತ್ತಿ) ಅನುಭವವಾಗುವಂತೆ ನಾಟ್ಯದಲ್ಲಿ ರಸದ ಅನುಭವವಿರುತ್ತದೆ. ಈ ದೃಷ್ಟಾಂತವನ್ನು ಇನ್ನಷ್ಟು ವಿಸ್ತರಿಸಬಹುದು. ನಾಟ್ಯದಲ್ಲಿ ಮುಖ್ಯವಾದ ಒಂದುರಸವು ತಾತ್ಪರ್ಯವಾಗಿದ್ದು ಅಭಿನಯಗಳಿಂದ ಸಂವಹನಗೊಂಡು  ಉಳಿದ ಪಾತ್ರಗಳ ವಿವಿಧಾಭಿನಯಗಳಿಂದ ಹುಟ್ಟುವ ಬೇರೆ ಬೇರೆ ರಸಗಳಿಂದ ಪುಷ್ಟವಾಗುತ್ತದೆ. ಈ ಪುಷ್ಟಿಯು ಸಾಧೃಶ್ಯದಿಂದಲೂ ವೈದೃಶ್ಯದಿಂದಲೂ (ಉದಾ:- ಶ್ರೀರಾಮನಿಗೆ ಸೀತೆ ಲಕ್ಷಣ ಹನುಮಂತ ಸಾಧೃಶ್ಯಕ್ಕೆ) ಮಾರೀಚ ರಾವಣ, ಕುಂಭಕರ್ಣ (ವೈದೃಶ್ಯ) ಉಂಟಾಗುತ್ತದೆ.

ನಾಟ್ಯದ ನಾಲ್ಕು ಅಭಿನಯ ಪ್ರಕಾರಗಳಲ್ಲಿ ವಾಚಿಕವೇ ಮುಖ್ಯವಾದದು. ಉಳಿದವುಗಳು ಅದಕ್ಕೆ ಪೋಷಕಗಳು (ಮೂಕಾಭಿನಯವನ್ನು ಭಾರತೀಯ ನಾಟ್ಯರಂಗಕ್ಕೆ ಇತ್ತೀಚೆಗಷ್ಟೆ ಅಮದಾದದು). ನಾಟ್ಯವೆಂದರೆ ಭರತಮುನಿಯು ಹೇಳಿದ ಡಿಮ, ಭಾಣ, ಈ ಹಾಮೃಗ, ಸಮವಕಾರ ಇತ್ಯಾದಿ ದಶರೂಪಕಗಳಿಗೂ (ನಂತರದ ಕಾಲದಲ್ಲಿ ಕೋಹಲನು ನಿರೂಪಿಸಿದ ಉಪರೂಪಕಗಳಿಗೆ) ಮಾತ್ರ ಅನ್ವಯವಾಗುತ್ತಿದ್ದ ಶಬ್ದ ಎಂಬುದನ್ನು ಇಲ್ಲಿ ಸ್ಪಷ್ಟಪಡಿಸಬೇಕು. ನೃತ್ಯ ಮತ್ತು ನರ್ತನಗಳಿಗೆ ಬೇರೆ ಲಕ್ಷಣಗಳು ಲಕ್ಷ್ಯ ಸಾಮಾಗ್ರಿಗಳು ಇವೆ. ಇವುಗಳ, ಈಗಿನ ನಾಟಕಾದಿ ಪ್ರಯೋಗಗಳಿಗೆ ಸ್ಥೂಲವಾಗಿ ಅನ್ವಯಿಸುತ್ತದೆ. ಈ ಅರ್ಥದಲ್ಲಿ ಭರತನಾಟ್ಯ ಎಂಬ ಹೆಸರು ಇಂದು ಪ್ರಚಾರದಲ್ಲಿರುವ ನೃತ್ತ ನೃತ್ಯ ಪ್ರಕಾರಗಳ ಸಮಷ್ಟಿಗೆ ಸಲ್ಲುವುದಿಲ್ಲ. ಭರತನಾಟ್ಯವೆಂಬ ಆಧುನಿಕ ಅಭಿನಯಾತ್ಮಕ ಕಲೆಯಲ್ಲಿ ನೃತ್ಯದ ಬಂಧಗಳೂ ಇವೆ, ಆದರೆ ರೂಪಕ ಎಂಬ ಅರ್ಥವ್ಯಾಪ್ತಿಯುಳ್ಳ ಯಾವ ಪ್ರಕಾರವೂ ಅದರಲಿಲ್ಲ. ಸಂಗೀತವು  (ಗೀತವಾದ್ಯಗಳು) ಅದರ ಅವಿಭಾಜ್ಯ ಅಂಗ. ರೂಪಕಗಳಲ್ಲಿ ಸಂಗೀತವೂ ನೃತ್ಯಗಳೂ ಇರಬೇಕೆಂಬ ನಿಯಮವೇನೂ ಇರಲಿಲ್ಲ; ಕೆಲವು ರೂಪಕಗಳಲ್ಲಿ ಮಾತ್ರ ಗೀತವಾದ್ಯಗಳ ಪ್ರಯೋಗವುಂಟು- ಆದರೆ ಕೇವಲ ಆನುಷಂಗಿಕವಾಗಿ, ಕಥಾ ಸಂವಿಧಾನದ ಅಂಗವಾಗಿ ಅಲ್ಲ. ಅಷ್ಟೇ ಅಲ್ಲ ಭರತನು ನೃತ್ಯಕ್ಕೆ ಆಧಾರಭೂತವಾದ ಕಾರಣಗಳು ನಾಟ್ಯಕ್ಕೆ ಹೇಗೆ ಪ್ರಯೋಜಕವೆಂದು ಮುನಿಗಳು ಪ್ರಶ್ನಿಸಿದಾಗ, ಅದು ಜನಗಳಿಗೆ ಅದೆತನದಿಂದ ಬೇಸರವಾಗದಿರಲು ಮತ್ತು ಶೋಭಾವಹವಾಗಿ ಮಾತ್ರ ಉಪಯುಕ್ತ ಎಂದು ವಿವರಿಸಿದ್ದಾನೆ.

ಭರತನಾಟ್ಯವು ಪ್ರಾಚೀನವೇ?

ಭರತನಾಟ್ಯ ಎಂಬ ಹೆಸರು ಕನ್ನಡ ಭಾಷೆಯಲ್ಲಿ ಮೊತ್ತಮೊದಲು ಕಂಡುಬರುವುದು ಕ್ರಿ.ಶ. ಹದಿನಾರನೆಯ ಶತಮಾನದಲ್ಲಿ ಪುರಂದರದಾಸರು ತಮ್ಮ ಆಡಿದನೋ ರಂಗ ಎಂಬ ಹಾಡಿನಲ್ಲಿ ” ರಂಭೆ ಊರ್ವಶಿಯರು ಭರತನಾಟ್ಯವ ನಟಿಸೇ ಎಂಬಲ್ಲಿ ಈ ಮಾತನ್ನು ಬಳಸಿದ್ದಾರೆ. ಈ ಮಾತು ಇದಕ್ಕಿಂದ ಮುಂಚೆ ಯಾವ ದ್ರಾವಿಡ ಭಾಷೆಗಳಲ್ಲಿಯೂ ಕಂಡುಬರುವುದಿಲ್ಲ. ಖ್ಯಾತ ನರ್ತಕಿ ದಿ|| ರುಕ್ಷ್ಮಿಣಿದೇವಿ ಅರುಂಡೇಲರು ಇಪ್ಪತ್ತನೆಯ ಶತಮಾನದ ಪೂರ್ವಾರ್ಧದಲ್ಲಿ “ಸಾದಿರ್” ನಾಚ್‌” ಇತ್ಯಾದಿಯಾಗಿ ಪ್ರಸಿದ್ಧವಾಗಿದ್ದ ವೇಶ್ಯಾ ನರ್ತನ ಕಲೆಗೆ ಭರತನಾಟ್ಯವೆಂದು ಕರೆದರು. ತಮಿಳುಬಾಂಧವರ ಅಬ್ಬರದ ಪ್ರಚಾರದಿಂದಾಗಿ ಇದೇ ಈ ಕಲೆಗೆ ಪ್ರಥಮ ನಾಮಕರಣವೆಂದು ರೂಢಿಸಿ ಪುರಂದರದಾಸರು ನೇಪಥ್ಯಕ್ಕೆ ಸರಿಯುವಂತಾಯಿತು. ಅವರು ಹೇಳಿರುವ ಮಾತುಗಳಲ್ಲಿಯೂ ಭರತನಾಟ್ಯವೆಂಬುದು ಈಗ ಈ ಹೆಸರಿನಲ್ಲಿ ಪ್ರಚುದ್ಧವಾಗಿರುವ ಕಲಾಪ್ರಕಾರಕ್ಕೆ ಅನ್ವಯಿಸುತ್ತದೆಂದು ನಿರ್ವಿವಾದವಾಗಿ ಹೇಳಲು ಬರುವಿದಲ್ಲ ರಂಭೆ ಮತ್ತು ಊರ್ವಶಿಯ ಇಂದ್ರನ ಆಸ್ಥಾನದಲ್ಲಿನ ಗಣಿಕೆಯರು, ನರ್ತಕಿಯರು ಎಂಬ ಪ್ರೇರಣೋಕ್ತಿಗಳಿಂದ ಮಾತ್ರ ಈ ಮಾತಿಗೆ ಈ ಅರ್ಥವನ್ನು ಕಲ್ಪಿಸಿಕೊಂಡಿದ್ದೇವೆ. ಆದರೆ ನಟನೆ ಎಂಬ ಶಬ್ದಕ್ಕೆ ನಾಟಕದಂತಹ ಪ್ರಯೋಗವೆಂಬ ಅರ್ಥವನ್ನೇ ಇಟ್ಟುಕೊಂಡರೆ ಅವರು ಮಾಡಿದ್ದು ಭರತಮುನಿಯ ಅರ್ಥದ ನಾಟ್ಯವೇ ಆಗುತ್ತದೆ; ಇಂದಿನ ಭರತನಾಟ್ಯವಲ್ಲ. ಆದುದರಿಂದ ಕೆಲವು ಆಧುನಿಕರು ಈ ಕಲೆಗೆ ಭರತನೃತ್ಯವೆಂಬ ಹೆಸರನ್ನು ಕೊಡುತ್ತಾರೆ. ಆದರೆ, ಮುಂದೆ ಸೂಚಿಸಲಾಗುವಂತೆ ಭರತಶಬ್ದಕ್ಕೆ ಭರತಮುನಿ ಎಂಬ ಅರ್ಥವನ್ನು ಕಲ್ಪಿಸಲಾಗುವುದಿಲ್ಲ. ಅಂತೂ ಇಂದಿನ ಭರತನಾಟ್ಯ ಶಬ್ದಕ್ಕೆ ಭರತ (ಮುನಿ) ಮತ್ತು ನಾಟ್ಯ ಎಂಬ ಎರಡು ಶಬ್ದಗಳೂ ಅನನ್ವಿತಗಳೇ ಆಗಿ ಉಳಿಯುತ್ತದೆ.

ಅದರಲ್ಲೂ ಶಾರ್ಜ್ಞಾದೇವನು ನಾಟ್ಯವನ್ನು
ನಾಟಕಸ್ಥಿತ ವಾಕ್ಯಾರ್ಥ ಪದಾರ್ಥಭಿನಯಾತ್ಮಕಮ್‌|
ತದಾದ್ಯ ಭರತೇನೋಶ್ತಂ ರಸಭಾವಸಮನ್ವಿತಮ್‌,
ನಾಟ್ಯಂ ತನ್ಯಾಟಕೇಷ್ಟೇವೋಪಯುಕ್ತಂ……..||

(ಸಂಗೀತ ರತ್ನಾಕರ ೭.೩೩, ೩೪ ನಾಟಕದಲ್ಲಿ ವಾಕ್ಯಾರ್ಥಗಳನ್ನು/ಪದಾರ್ಥಗಳನ್ನು ಅಭಿನಯಿಸುವಂತಹದು. ಹಿಂದೆ ಆದಿಭರತನು ಹೇಳಿರುವ ರಸಭಾವಗಳನ್ನು ಕೂಡಿಕೊಂಡಿರುವುದು, ನಾಟಕಗಳಲ್ಲಿ ಮಾತ್ರ ಪ್ರಯೋಗಿಸಬೇಕಾದುದು. ನಾಟ್ಯ (ಎಂಬ ಶಬ್ದ) ಎಂದು ನಿರೂಪಸಿರುವಾಗ ಇಂದಿನ ನೃತ್ಯ ಪ್ರಕಾರವನ್ನು ಭರತನಾಟ್ಯವೆಂದೂ ಕರೆಯುವುದು ಅನನ್ವಿತ ನಾಮಕರಣದ ಪರಮಾವಧಿ!

“ಯೋಗಾದ್‌ರೂಢೀರ್ಬಲಿಯಸೀ ಉಚಿತವಾದ ಅರ್ಥವುಳ್ಳ ಮಾತಿಗಿಂತ ರೂಢಿಯಲ್ಲಿರುವ ಮಾತಿಗೆ ಒಲವು ಹೆಚ್ಚು ಹೀಗಾಗಿ ಈ ಲೇಖನದಲ್ಲಿ ಭರತನಾಟ್ಯ ಶಬ್ದಕ್ಕೆ ಬಳಕೆಯಲ್ಲಿರುವ ಅರ್ಥವನ್ನೇ ಇಟ್ಟುಕೊಂಡಿದ್ದೇನೆ.

ನೃತ್ತವು ಸರ್ವಾಭಿನಯವರ್ಜಿತ

ಇನ್ನು ನೃತ್ತವೆಂದರೆ ಅಗೋಪಾಂಗಪ್ರತ್ಯಂಗಗಳ ವಿಕ್ಷೇಪವು ಮಾತ್ರ. ಎಂದರೆ ಮಾತಿನ ವಾಗರ್ಥದ ಹಂಗನ್ನು ಪೂರ್ತಿ ತೊರೆದು ದೈಹಿಕ ಚಲನೆಯಿಂದ ಮಾತ್ರ ಸೌಂದರ್ಯಾರ್ಥವನ್ನು ಪ್ರತೀತಿಗೊಳಿಸುವಂತಹ ಕಲೆ, ಅಭಿನಯವಿಲ್ಲದ್ದು ಎಂದರೆ ಇಲ್ಲಿ ಮಾತಿನಲ್ಲಿ ನಿಷ್ಟವಲ್ಲದ ಅರ್ಥವನ್ನು ಅಂಗಪ್ರತ್ಯಂಗಾದಿಗಳ ಚೇಷ್ಟೆಗಳಿಂದ ತೋರಿಸುವುದು ಎಂಬುದು ಇಲ್ಲಿ ಅರ್ಥ. “ಸರ್ವಾಭಿನಯವರ್ಜಿತಂ” ಎಂದನ್ನು ವರ್ಣಿಸಿರುವಲ್ಲಿ ಆಂಗಿಕಾಭಿನಯವೂ ಇಲ್ಲ ಎಂದು ಅರ್ಥಯಿಸುವುದು ಹೇಗೆ ಎಂಬ ಪ್ರಶ್ನೆಯು ಏಳುತ್ತಿದೆ. ನಾಟ್ಯವು ವಾಚಿಕಾಭಿನಯ ಪ್ರಧಾನವಾದುದರಿಂದ ನೃತ್ಯದಲ್ಲಿರುವ ಆಂಗಿಕಾಭಿನಯವು ವಾಗರ್ಥವನ್ನು ಸೂಚಿಸದೆ ಇರುವಂತಹುದು ಎಂದು ತಿಳಿದುಕೊಳ್ಳಬೇಕು. ವಾಗರ್ಥದ ಪ್ರಸಕ್ತಿಯೇ ಇದರಲ್ಲಿ ಇಲ್ಲವಾದುದರಿಂದ ವಾಚಿಕಾಭಿನಯವೂ ಇಲ್ಲ. ಸಾತ್ವಿಕಾಭಿನಯವೆಂದರೆ ಶೃಂಗಾರವೀರರು ಹಾಗೂ ರಸಗಳನ್ನು ಅಭಿನಯಸುವುದು ನೃತ್ಯದಲ್ಲಿ ಶರೀರದ ಮೂಲಕ ಸೌಂದರ್ಯವನ್ನು ಹೆಚ್ಚಿಸುವ ಲೋಪದೋಷಗಳನ್ನು ಮುಚ್ಚಿಬಿಡುವ ಆಹಾರ್ಯವು ಆಪೇಕ್ಷಣಿಯವೇ, ಆದರೆ ರಾಮ, ಕೃಷ್ಟಣ, ದ್ರೌಪದಿ, ಸೀತೆ ಮುಂತಾದ ಪಾತ್ರಗಳನ್ನು ಸೂಚಿಸುವ ಅಥವಾ ನೆನಪಿಸುವ ಆಹಾರ್ಯವು ಇಲ್ಲಿ ವರ್ಜ್ಯವೆಂಬುದು ಈ ಮಾತಿನ ತಾತ್ಪರ್ಯವೆಂದು ತಿಳಿಯಬೇಕು. ಇಂದಿನ ಅಲರಿಪ್ಪು ಹಿಂದಿನ ಕಾಲದ ನಿರರ್ಥಕ ಶುದ್ದ ಕೈವಾಧ ಮುಂತಾದ ಪ್ರಬಂಧಗಳು ನೃತ್ತಕ್ಕಾಗಿ ಏರ್ಪಟ್ಟಿವೆ ಎಂದು ಉದಾಹರಿಸಬಹದು.

ನೃತ್ತ:

ನಂದಿಕೇಶ್ವರನು ನೃತ್ತವನ್ನು “ಭಾವಾಭಿನಯಹೀನಂ” ಎಂದೂ ನೃತ್ಯವನ್ನು “ರಸಭಾವ ವ್ಯಂಜಿನಾದಿಯುಕ್ತಂ” ಎಂದೂ ಅಭಿನಯದರ್ಪಣದಲ್ಲಿ ನಿರೂಪಿಸುತ್ತಾನೆ. ಆಧುನಿಕನೃತ್ತ- ನೃತ್ಯಕರ್ಮಿಗಳು ಈ ನಿರೂಪಣೆಯನ್ನೇ ಅವಲಂಬಿಸಿಕೊಂಡಿದ್ದಾರೆ. ನೃತ್ತ ಮತ್ತು ನೃತ್ಯಗಳಲ್ಲಿ ಭೇದವನ್ನು ಹೀಗೆ ತಿಳಿಯುತ್ತಾರೆ. ಇಲ್ಲಿ ಭಾವವೆಂದರೆ ಮಾನಸಿಕ ಪ್ರಕ್ರಿಯೆ. ವಸ್ತು ನಿಷ್ಟ್ರವಾದ ಜಗತ್ತು ಮನಸ್ಸಿನ ಮೇಲೆ ಬೀರುವ ಪ್ರಭಾವ, ಪ್ರೇರಣೆ, ಪ್ರಚೋದನೆಗಳು ಪರಿಣಾಮ ನೃತ್ತವು ಇವುಗಳನ್ನು ಒಳಗೊಳ್ಳುವುದಿಲ್ಲವೆಂದರೆ ವಸ್ತು ವಿಷಯಗಳ ಸೂಚನೆ ಪ್ರತಿಪಾದನೆಯಿಲ್ಲದ ಶಾರೀರಿಕ ಚೇಷ್ಟೆಗಳು, ಸೌಂದರ್ಯ ಕೃತಿಯನ್ನು ಉತ್ಪಾದಿಸಿ ಸೌಂದ್ಯರ್ಯಾರ್ಥವನ್ನು ಅನುಭವಿಸುವುದು. ಇದಕ್ಕೆ ದೇಹವು ಮಾಧ್ಯಮವಾಗಿರುತ್ತದೆ. ನೃತ್ತ ಹಸ್ತಗಳು ಪಾದ ವಿನ್ಯಾಸಗಳು, ದೃಷ್ಟಿಗಳು, ಚಾರಿಗಳು, ಮಂಡಲಗಳು, ಭ್ರಮರಿಗಳು, ಭಂಗಿಗಳು, ಚಲನೆಯಲ್ಲಿ ವಿವಿಧಾಕೃತಿಗಳ ವಿನ್ಯಾಸ ಮುಂತಾದವುಗಳನ್ನು ಇಲ್ಲಿ ಈ ಉದ್ದೇಶಕ್ಕೆಂದೇ ಬಳಸಲಾಗುತ್ತದೆ.

ನೃತ್ಯ:

ನೃತ್ಯವೆಂದರೆ ಆಂಗಿಕಾಭಿನಯಗಳಿಂದ ಸೂತ್ರ ಭಾವಗಳನ್ನು ಮಾತ್ರ ಅಭಿವ್ಯಕ್ತಗೊಳಿಸುವುದು ಇಲ್ಲಿ ಮಾತ್ರ ಎಂಬ ಮಾತನ್ನು ಎರಡು ಸಲ ಉದ್ದೇಶಪೂರ್ವಕವಾಗಿ ಶಾರ್ಙ್ಗದೇವನು ಬಳಸುತ್ತಾನೆ. ಮತ್ತು ಅದನ್ನು ಅವನು ವಾಖ್ಯಾನಕಾರನಾದ ಕಲ್ಲಿನಾಥನು ತಮ್ಮ ಸಂಗೀತ ಕಲಾನಿಧಿಯಲ್ಲಿ ವಿಸ್ತರಿಸುತ್ತಾನೆ. ಮೊದಲನೆಯದಾಗಿ ಅಂಗಿಕಾದಿ ಅಭಿನಯಗಳಿಂದ ಅಲ್ಲ ಎಂಬುದನ್ನು ಗಮನಿಸಬೇಕು. ಎಂದರೆ ಉಳಿದ ವಾಚಿಕ, ಆಹಾರ್ಯ ಮತ್ತು ಸಾತ್ವಿಕಾಭಿನಯಗಳು ಇಲ್ಲಿ ಅಪ್ರಸ್ತುತ. ಆಹಾರ್ಯವು ಯಾವುದಾದರೊಂದು ಪಾತ್ರಕ್ಕೆ ಉಚಿತವಾದ, ಪ್ರಾತಿನಿಧಿಕವಾದ ವೇಷಭೂಷಣಗಳು ಎಂಬ ಅರ್ಥದಲ್ಲಿ ಇಲ್ಲಿ ಆಪ್ರಸಕ್ತ, ಅನಾವಶ್ಯಕ; ದೇಹ ಸೌಂದರ್ಯಕ್ಕೆ ಉಪಕಾರಕವಾದ, ಪ್ರಯೋಜನಕರ ಎಂಬ ಅರ್ಥದಲ್ಲಿ ಪ್ರಸ್ತುತ ಅವಶ್ಯಕ ಮತ್ತು ಉಚಿತ. ಈ ಮಾತನ್ನು ಸೇರಿಸುವುದು ನಾನು. (ಕಲ್ಲಿನಾಥ ಮತ್ತು ಶಾರ್ಜ್ಞದೇವರುಗಳು ಈ ಬಗ್ಗೆ ಮೌನವಾಗಿದ್ದಾರೆ.) ವಾಚಿಕಾಭಿನಯವು  ಇಲ್ಲ ಎಂದರೆ ಮಾತುಗಳಿಲ್ಲ ಆದರೆ ಮಾತುಗಳ ಅಭಿನಯವಿದೆ ಎಂಬುದು ಇಲ್ಲಿ. ಅಭಿಸಂಧಿ. ಸಾತ್ವಿಕಾಭಿನಯವಿಲ್ಲವೆಂದರೆ ನಾಟಕಾದಿಗಳಲ್ಲಿ ಇರುವಂತೆ ಅಲ್ಲ. ಏಕೆಂದರೆ ಅಲ್ಲಿ ವಾಚಿಕಾಭಿನಯವೇ ಪ್ರದಾನ. ಆಂಗಿಕಾಭಿನಯವು ಅದಕ್ಕೆ ಅಂಗ, ಉಪಕಾರಕ, ಆದರೆ ನೃತ್ಯದಲ್ಲಿ ಇದು ತಿರುಗುಮುರುಗಾಗಿದೆ. ಇನ್ನು ಆಂಗಿಕಾಭಿನಯಗಳಿಂದ ಎಂಬ ಬಹುವಚನ ಎಂದರೆ ಏನು? ಆಂಗಿಕಾಭಿನಯವು ಶಾಖಾ, ಅಂಕುರ, ಮತ್ತು ಸೂಚೀ ಎಂದು ಮೂರು ವಿಧ. ಶಾಖೆ ಎಂದರೆ ಕೈ. ಚಿತ್ರವಿಚಿತ್ರವಾಗಿರುವ ವಿನ್ಯಾಸಕ್ಕೆ ಶಾಖಾ ಎಂದು ಹೆಸರು. ಕುಣಿತದಲ್ಲಿ ಹಿಂದೆ ಬಂದ ಅರ್ಥವನ್ನು ಅನುಸ್ಯೂತವಾಗಿ ಮುಂದುವರಿಸಿ ಅದನ್ನು ವಿಸ್ತರಿಸುವುದಕ್ಕೆ ಅಂಕುರವೆಂದು ಹೆಸರು. ಮುಂದೆ ಬರಲಿರುವ ಅರ್ಥವನ್ನು ಮೊದಲೇ ಸೂಚಿಸುವ ಆಂಗಿಕಾಭಿನಯಕ್ಕೆ ಸೂಚೀ ಎಂದು ಹೆಸರು ಇನ್ನು “ಭಾವಗಳಿಂದ ಮಾತ್ರ” ಎನ್ನುವಲ್ಲಿ ಮಾತ್ರ ಎಂಬ ಪದಕ್ಕೆ ಏನು ಅರ್ಥ. ಇದಕ್ಕೆ ಶಾಸ್ತ್ರೀಯ ಅರ್ಥವನ್ನು ಸಿಂಹ ಭೂಪಾಲನೂ ಕಲ್ಲಿನಾಥನು ಬೇರೆ ಬೇರೆಯಾಗಿಯೇ ಹೊರಡಿಸುತ್ತಾರೆ. “ಭಾವ” ಎಂದರೆ ರಸಪ್ರತೀತಿ ಪ್ರಯೋಜನಕವಾದ ಸ್ಥಾಯಿ ಮತ್ತು ಸಂಚಾರಿ ಭಾವಗಳನ್ನು ಮಾತ್ರ ಉಪಯೋಗಿಸುವುದು ಎನ್ನುವದು ಸಿಂಹಭೂಪಾಲನ ಮತ ಆದರೆ ಆಂಗೀಕಾಭಿನಯೈರೇನ ಎಂಬಲ್ಲಿನ ಬಹುವಚನಕ್ಕೆ ನಿಗದ ವ್ಯಾಖ್ಯೆಯನ್ನು ಮಾಡಿದ್ದಾನೆ.

ಕಲ್ಲಿನಾಥನು ಪ್ರಯಾಸಸಾಧ್ಯವಾದ ಅರ್ಥವನ್ನು ಹೊರಿಡಿಸಿದ್ದಾನೆ. ಅವನಂತೆ ಆಂಗಿಕಾಭಿನಯ ಎನ್ನುವುದನ್ನು ಉಪಲಕ್ಷಣವೆಂದಿಟ್ಟುಕೊಂಡು ಆಂಗಿಕವಾಚಿಕ ಮತ್ತು ಸಾತ್ವಿಕಗಳನ್ನು ಮಾತ್ರ ಇಟ್ಟುಕೊಂಡು ಆಹಾರ್ಯಾಭಿನಯವನ್ನು ನಿವೃತ್ತಿಗೊಳಿಸಬೇಕು; ಒಂದರ ನಿವೃತ್ತಿ, ಮೂರರ ಪ್ರವೃತ್ತಿ ಎಂಬ ಅವಧಾರಣೆಗೆಂದೇ “ಮಾತ್ರ” ಎಂಬ ಮಾತನ್ನು ಶಾರ್ಜ್ಞಾದೇವನು ಬಳಸಿದ್ದಾನೆ. ಈ ಅವಧಾರಣೆಯೇ ಏಕಾಗಬೇಕು? ಏಕೆಂದರೆ ಉಳಿದ ಮೂರ ನಿವೃತ್ತಿಯ ಪ್ರಶ್ನೆಯೇ ಏಳುವುದಿಲ್ಲ. ವಾಚಿಕವನ್ನು ಬಿಟ್ಟರೆ ಆಂಗಿಕಾಭಿನಯವನ್ನು ಅವಲಂಬನವೇ ಇಲ್ಲ; ಹೀಗಾಗಿ ಅಪ್ರವೃತ್ತಿಯೇ ಎಂದರೆ ನಿವೃತ್ತಿಯೆನಿಸುತ್ತದೆ. ಸಾತ್ವಿಕಾಭಿನಯವು ಅಂಗಾದಿಗಳಲ್ಲಿ ತಾನೇ ಪ್ರಕಟವಾಗಬೇಕು? ಸಾತ್ವಿಕಾಬಿನಯವು ಅಂತಃಕರಣ ಚತುಷ್ಟದಲ್ಲಿ/ ಅಂತಃಕರಣ ತ್ರಯದಲ್ಲಿ ಹುಟ್ಟುವಂತಹುದು. ಹೀಗೆ ಅದು ಆಂಗಿಕವಲ್ಲದಿದ್ದರೆ ತಾನು ನಿವೃತ್ತವಾಗುತ್ತದೆ. ಉಳಿದಂತೆ ಆಹಾರ್ಯವಾದರೋ ಬಹಿರಂಗವಾದುದು. ಅದರಿಂದ ಭಾವದ ಅಥವಾ ಅರ್ಥದ ಪ್ರತೀತಿಗೆ ಯಾವ ಪ್ರಯೋಜನವೂ ಇರದು. ಆದುದರಿಂದ ಬಿಟ್ಟರೆ ಇದನ್ನೇ ಬಿಡಬೇಕು. ಇದು ಕಲ್ಲಿನಾಥನ ವಿವರಣೆ. ಆದರೆ ಶಾರ್ಙ್ಗದೇವನ ಮತಕ್ಕೆ ವಿರುದ್ದವಾದುದು, ಎಂದು ಹೇಳಿದರೆ ಸಾಕು.

ಭಾವ

ಇನ್ನು ಭಾವವೆಂದರೆ ಏನು? ಮಾತಿಗೆ ಆಗುವಿಕೆ, ಇರುವಿಕೆ, ಉತ್ಪನ್ನವಾಗುವಿಕೆ ಎಂಬ ಕ್ರಿಯಾರ್ಥಗಳನ್ನು ಪ್ರಜ್ಞೆ ಆಲೋಚನೆ, ಅರಿವು ತಾಪನ, ಉದ್ರೇಕ ಉದ್ವೇಗ, ಶೃಂಗಾರಾದಿ ಅನುಭವಗಳು ಎಂಬ ಅರ್ಥಗಳು ಇಲ್ಲಿ ಪ್ರಸಕ್ತವಾಗಿವೆ. ಸೌಂದರ್ಯ ಮೀಮಾಂಸಾ ಪ್ರಸಕ್ತಿಯಲ್ಲಿ ಈ ಶಬ್ದಕ್ಕೆ ಸೌಂದರ್ಯಾರ್ಥದ ಉತ್ಪತ್ತಿ ನಿರ್ವಹಣೆ ಮತ್ತು ಗ್ರಹಣವೆಂದೂ ವಾಗರ್ಥದ ಅಥವಾ ಇತರ ರೀತಿಯ ಅರ್ಥದ ಸಾರವೆಂದೂ ಇದನ್ನು ಮಾತು, ಮುಖದ ಬಣ್ಣ (ಮುಖರಾಗ) ಅಂಗವೀಕ್ಷೇಪ, ಮತ್ತು ಸಾತ್ವಿಕಾಭಿನಯ ಇವುಗಳಿಂದ ಪ್ರಕಟಗೊಳಿಸಬಹುದು ಎಂಬುದು ಭಾವ ಶಬ್ದದ ಪರಿಭಾಷೆ, ಕವಿಯ ಅಂತರಂಗದ ಭಾವವನ್ನು (ನಾಟಕಕಾರ, ವಾಗ್ಗೇಯಕಾರ ಮೊದಲಾದವರು ಹೇಳಬೇಕೆಂದಿರುವ ಅರ್ಥದ ಸಾರವನ್ನು) ಮೇಲೆ ಹೇಳಿದ ವಿಧಾನಗಳಿಂದ ಉತ್ಪಾದಿಸಿ, ನಿರ್ವಹಿಸಿ ಗ್ರಹಿಸುವುದೇ (ಭಾವಯನ್) ಭಾವವೆಂದು ಹೆಸರು. ಈ ಅರ್ಥವು ಭರತ ಮುನಿಯಲ್ಲೇ ಇದೆ. (ನಾಟ್ಯಶಾಸ್ತ್ರ ೭,೨)

ನರ್ತನ:

ನರ್ತನವೆಂಬುದು ಒಂದು ಸಮುಚ್ಚಯ ನಾಮ; ಶಾರ್ಙ್ಗದೇವನ ಪ್ರಕಾರ ಅದು ನಾಟ್ಯ, ನೃತ್ತ ಮತ್ತು ನೃತ್ಯವೆಂಬ ಮೂರು ಬಗೆಯೆನ್ನುತ್ತಾನೆ. ಇನ್ನು ಕೆಲವರು ಇವುಗಳ ಅವಾಂತರ ಭೇದಗಳನ್ನು ಪ್ರತ್ಯೇಕವಾಗಿ ಉಲ್ಲೇಖಿಸುತ್ತಾರೆ. ಸೋಮೇಶ್ವರನು ನರ್ತನವು ನಾಟ್ಯ, ಲಾಸ್ಯ, ತಾಂಡವ, ಲಘು, ವಿಷಮ ಮತ್ತು ವಿಕಟ ಎಂಬ ಆರು ಬಗೆಯಾಗಿಯೂ ಶಾರದಾತನಯನು ತಾಂಡವ, ಲಾಸ್ಯ ನಾಟ್ಯ, ನೃತ ಮತ್ತು ನರ್ತನ ಎಂಬ ಐದು ಪ್ರತ್ಯೇಕ ಪ್ರಕಾರಗಳಾಗಿಯೂ ಹೇಳಿದರೆ ಇತರರು ನೃತ್ತ ಮತ್ತು ನೃತ್ಯಗಳಲ್ಲಿ ತಾಂಡವ ಮತ್ತು ಲಾಸ್ಯಗಳು ಒಳಭೇದಗಳೆಂದು ತಿಳಿಯುತ್ತಾರೆ. ಈ ದೃಷ್ಟಿಯಿಂದ ಶಾರ್ಙ್ಗದೇವನು ತನ್ನ ಸಂಗೀತರತ್ನಾಕರದ ಕೊನೆಯ ಅಧ್ಯಾಯವನ್ನು ನರ್ತನಾಧ್ಯಾಯವೆಂದು ಕರೆದಿರುವುದು ಉಚಿತವೂ ಅಭ್ಯಾಸಾರ್ಹವೂ ಆಗಿದೆ. ನರ್ತನವು ತಾಪಕರ್ತನವೆಂದು ಎಂದರೆ ಆಧ್ಯಾತ್ಮಿಕ, ಆದಿಭೌತಿಕ ಮತ್ತು ಆಧಿದೈವಿಕವೆಂಬ ಮೂರು ತಾಪಗಳನ್ನು ಕತ್ತರಿಸಿ ತೆಗೆದುಹಾಕುತ್ತದೆ. ಸಂತಾಪ, ಮನೋದ್ವೇಗ ಮುಂತಾದ ಮನೋವಿಕಾರಗಳನ್ನು ಶಮನಗೊಳಿಸುವಂತಹದು ಎಂದು ಅವನು ಹೇಳುವುದು ಗಮನಾರ್ಹವಾಗಿದೆ. ಈ ಮಾತನ್ನು ಭರತಮುನಿಯು ನಾಟ್ಯಕ್ಕೆ ಅನ್ವಯಿಸಿ ಹೇಳಿದ್ದಾನೆ.

. ಶಾಸ್ತ್ರ

ಶಾಸ್ತ್ರ ಎಂಬ ಪದಕ್ಕೆ ನಾನಾರ್ಥಗಳುಂಟು. ಇವುಗಳೆಲ್ಲದರ ತಾತ್ಪರ್ಯವು ಒಂದೇ ಆಗಿದ್ದರೂ ದೃಷ್ಟಿಭೇದದಿಂದ ನಾನಾರ್ಥಗಳು ಹುಟ್ಟಿಕೊಳ್ಳುತ್ತವೆ. ಹೀಗೆ ಪ್ರಮಾಣ, ಪ್ರಮೇಯ, ನಯನ ನ್ಯಾಯ, ಅನುಮಾನ, ಸಂಶಯ, ಪೂರ್ವಪಕ್ಷ ಸಿದ್ದಾಂತ ಮುಂತಾದವುಗಳನ್ನು ಯಾವುದಾದರೊಂದು ಜ್ಞಾನಕೋಶದಲ್ಲಿ ಉಪದೇಶಿಸುವ ವಿಧಾನಕ್ಕೆ ಶಾಸ್ತ್ರವೆಂದು ಹೆಸರು (ಉದಾ- ನ್ಯಾಯವಾರ್ತಿಕ) ೨. ಯಾವುದಾದರೊಂದು ವಿಶೇಷಜ್ಞಾನವನ್ನು ಅಧ್ಯಾಪನ ಕೊಡುವ ಗ್ರಂಥ (ಉದಾ-ವೈಶೇಷಿಕದರ್ಶನ) ೩. ಋಗ್, ಯುಜುಸ್, ಸಾಮ, ಅಥರ್ವ ಎಂಬ ವೇದಗಳು ಉಪನಿಷತ್ತುಗಳು, ರಾಮಾಯಣ ಮಹಾಭಾರತ ಇತ್ಯಾದಿ ಮೋಕ್ಷೋಪದೇಶ ಗ್ರಂಥಗಳು ೪. ಶಾಸನವನ್ನು ಮಾಡಿ ಕಾಪಾಡುವಂತಹ, ವಿಧಿ ನಿಷೇಧ ಪೂರ್ವಕ ಜ್ಞಾನ, ೫. ಇಂತಹ ಶಾಸ್ತ್ರವು ಸಚ್ಛಾಸ್ತ್ರ ಅಸಚ್ಪ್ರತ್ರ ಎಂದು ಎರಡು ವಿಧ ಸಜ್ಞಸ್ತ್ರವೆಂದರೆ ಹಿತವಾದುದನ್ನು ಅನುಶಾಸನ ಮಾಡುವ (ರಾಜಾಜ್ಞೆಯಂತೆ ನಿಬಂಧ ಪಡಿಸುವ) ಗ್ರಂಥ. ಅಸಚ್ಚಾಸ್ತ್ರವೆಂದರೆ ವೇದವಿರುದ್ಧವಾದವುಗಳು, ಉದಾ- ಬೌದ್ಧ, ಚಾರ್ವಾಕ ಇತ್ಯಾದಿ ಮತಗಳು ೫. ತಾಮಸಬುದ್ಧಿಯನ್ನು ಆಸ್ವಾದಿಸುವ ಪಾಶುಪತ ಶೈವ, ವೈಶೇಷಿಕ, ಸಾಂಖ್ಯ ಪೂರ್ವಮಿಮಾಂಸೆ (ನಿರೀಶ್ವರ ಸಾಂಖ್ಯ, ಇತ್ಯಾದಿ ಎಂದು ಪುರಾಣದಲ್ಲಿ ಹೇಳಿದೆ.)