ಒಮ್ಮೆ ಛತ್ರಪತಿ ಶಿವಾಜಿ ಮಹಾರಾಜರು ಈ ಪ್ರದೇಶಕ್ಕೆ ಬವಂದಾಗ, ಕತ್ತಲಾಗಿದ್ದರಿಂದ ರಾತ್ರಿ ಬಿಡಾರ ಬಿಟ್ಟರು. ಮಲಗಿದ ಸ್ವಲ್ಪ ಸಮಯದಲ್ಲೇ ಆತನ ಇಷ್ಟದೇವ ಕನಸಿನಲ್ಲಿ ಕಾಣಿಸಿಕೊಂಡು ಈ ಪ್ರದೇಶದಲ್ಲಿ ಈ ರಾತ್ರಿ ಬಿಡಾರಹೂಡುವುದು ಬೇಡ, ಪಕ್ಕದ ಹಳ್ಳಿಗೆ ಹೋಗು ಎಂದು ಹೇಳಿದ ಕೂಡಲೆ ಎಚ್ಚೆತ್ತು, ಪಕ್ಕದ ಇದ್ಲೂಡು ಹಳ್ಳಿಗೆ ಹೋದರು, ಬೆಳಿಗ್ಗೆ ಬಂದು ಬಂದು ಆ ಸ್ಳಳ ನೋಡಿದಾಗ, ಸಿಡಿಲು ಬಡಿದು ಆ ಪ್ರದೇಶವು ಸುಟ್ಟಿತ್ತು., ಆಗ ಮಹಾರಾಜರು ಸಿಡಿಲಿನ ಅಪಾಯದಿಂದ ಪಾರಾದ ಸ್ಥಳ ಎಂದು ಹೇಳಿ ಆ ಪ್ರದೇಶಕ್ಕೆ ಸಿಡಿಲಿನ ಘಟ್ಟ ಎಂದು ಕರೆದು, ಬರುಬರುತ್ತಾ “ಶಿಡ್ಲಘಟ್ಟ” ಎಂದು ಹೆಸರಾಗಿದೆ.

ರಾಮಲಿಂಗನ ಬೋಡು:

ತಾಲ್ಲೂಕು ಕೇಂದ್ರದಿಂದ : ೧೫ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೨೩ ಕಿ.ಮೀ

24_Kolar

ಶಿಡ್ಲಘಟ್ಟದಿಂದ ಬಶೆಟ್ಟಹಳ್ಳಿಗೆ ಹೋದರೆ ಅಲ್ಲಿಂದ ಕಾಣುವ ಬೆಟ್ಟಗಳ ಸಾಲೇ “ರಾಮಲಿಂಗನ ಬೋಡು” ಶ್ರೀರಾಮಚಂದ್ರ, ಸೀತಾ, ಲಕ್ಷ ಣ ಸಮೇತ ಇಲ್ಲಿಗೆ ಬಂದು ಈ ಬೆಟ್ಟದಲ್ಲಿ ಒಂದು ರಾತ್ರಿ ಇದ್ದು, ಮಾರನೇ ದಿವಸ ಬೆಳಿಗ್ಗೆ ಸ್ನಾನ ಮಾಡಲು ಅಕ್ಕ ಪಕ್ಕದಲ್ಲಿ ನೀರು ಸಿಗದಿದ್ದಾಗ, ತನ್ನ ಶಕ್ತಿಯಿಂದ ರಾಮ, ಸೀತಾ, ಲಕ್ಷ ಣ ಎಂಬ ನೀರಿನ ಕುಂಡಗಳನ್ನು (ದೊಣಿ) ಸೃಷ್ಠಿಸಿ, ಸ್ನಾನದ ನಂತರ ಒಂದು “ಲಿಂಗವನ್ನು” ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ಹೊರಟರಂತೆ. ಅಂದಿನಿಂದ ಆ ಲಿಂಗವನ್ನು “ರಾಮಲಿಂಗೇಶ್ವರ” ಎಂದು ನಾಮಕರಣ ಮಾಡಿ ದೇವಾಲಯವು ಸಿದ್ಧವಾಗಿದೆ. ಇಲ್ಲಿರುವ ಹೊಂಡಗಳಲ್ಲಿ ಸ್ನಾನ ಮಾಡಿದರೆ ಚರ್ಮದ ಕಾಯಿಲೆಗಳಿಗೆ ತುಂಬಾ ಒಳ್ಳೆಯದು ಎಂಬ ಬಾವನೆ ಬೆಳೆದು ಬಂದಿದೆ. ಒಟ್ಟಾರೆ ಪ್ರಕೃತಿಯ ಸೊಬಗನ್ನು ನೋಡುವ ಸುಂದರ ಪ್ರವಾಸಿ ಸ್ಥಳವಾಗಿದೆ.

 

ತಲಕಾಯಲ ಬೆಟ್ಟ ಅಥವಾ ಮಸ್ತಕಾಚಲ:

ತಾಲ್ಲೂಕು ಕೇಂದ್ರದಿಂದ : ೧೮ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೩೬ ಕಿ.ಮೀ

25_Kolar

ಮುತು ರಾಯ ಎಂಬ ವ್ಯಕ್ತಿ ಒಳ್ಳೆಯ ಕಾಲದಲ್ಲಿ ಬೆಳೆದರೂ, ತನ್ನ ಜೊತೆಗಾರರಿಂದ ತಲೆ ಕಡಿದು ದರೋಡೆಗಾರನಾಗಿದ್ದ. ಆಗ ನಾರದರು ಈತನು ಕಾಯುವ ದಾರಿಯಲ್ಲೆ ಆಭರಣಗಳನ್ನು ಧರಿಸಿ ಆತನ ಎದುರಾದರು. ಮುತ್ತುರಾಯ ಕೂಡಲೆ ದರೋಡೆಗೆ ಮುಂದಾದಾಗ ನಿನ್ನ ಈ ಪಾಪ ಪುಣ್ಯದಲ್ಲಿ ನಿನ್ನ ಕುಟುಂಬದವರು ಪುಣ್ಯ ಮಾತ್ರ ಸ್ವೀಕರಿಸುತ್ತಾರೆ, ಪಾಪದಲ್ಲಿ ಅವರು ಪಾಲು ಸ್ವೀಕರಿಸುವುದಿಲ್ಲ ಎಂದು ಮನವರಿಕೆ ಮಾಡಿಕೊಟ್ಟು, ಮೋಕ್ಷ ಸಾಧಿಸುವಂತೆ ಪ್ರೇರೇಪಿಸಿದರು. ಆತನಿಗೆ ಮರಾ ಎಂಬ ಮೂಲಮಂತ್ರ ಹೇಳಿಕೊಟ್ಟು ಬರು ಬರುತ್ತಾ “ರಾಮ ” ಎಂದು  ಹೇಳುವಂತೆ ಮಾಡಿ ಈ ಮುತ್ತುರಾಯನಿಗೆ “ವಾಲ್ಮೀಕಿ” ಎಂದು ನಾಮಕರಣ ಮಾಡಿ ಅವರಿಂದ ಅದ್ಭುತವಾದ “ರಾಮಾಯಣ” ರಚಿತವಾದ ಸ್ಥಳ ಇದಾಗಿದೆ.

ಇಲ್ಲಿರುವ ದೇವಾಲಯದಲ್ಲಿ ಶ್ರೀ ವೆಂಕಟರಾಮಣ ಸ್ವಾಮಿ ಇದ್ದು ಇದನ್ನು ಬೊಮ್ಮಪ್ಪ ಎಂಬುವವರು ಜೀರ್ಣೋದ್ಧಾರಗೊಳಿಸಿದ್ದಾರೆ. ಇಲ್ಲಿ “ಪಾದಾಲಬಂಡ”  “ಮಡುವು”(ನೀರು ನಿಂತ ಹಳ್ಳ) ಬಹಳ ಹೆಸರು ಪಡೆದಿದೆ. ಈ ಬೆಟ್ಟವು ಮೇಲಿನಿಂದ ನೋಡಿದಾಗ ಮಾನವನ ತಲೆಯಂತಿದೆ ಎಂದು ಕೈವಾರದ ಯೋಗಿ ನಾರೇಯಣರು ಹೇಳುತ್ತಾ ಇದನ್ನು ಮಸ್ತಕಾಚಲ ಎಂದು ಕರೆದಿದ್ದಾರೆ.