ಸಿರಿಯ ಮೆರೆದ ಸೀರ್ಯಾ

ಕೋಟೆ - ಹೊರಾಂಗಣ

ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ೪ ಈ ನಗರದಲ್ಲಿ ಹಾದುಹೋಗಿದೆ. ೧೩-೪೧ ಡಿಗ್ರಿ ಉತ್ತರ ಅಕ್ಷಾಂಶ. ೭೬-೫೪ ಡಿಗ್ರಿ ಪೂರ್ವ ರೇಖಾಂಶದಲ್ಲಿ ನೆಲೆಹೊಂದಿರುವ ಸಿರಾ ತಾಲ್ಲೂಕಿನ ವಿಸ್ತೀರ್ಣ ೧೫೪೯ ಚ.ಕಿ.ಮೀ. ಜಿಲ್ಲೆಯ ಹತ್ತು ತಾಲ್ಲೂಕುಗಳಿಗಿಂತ, ಸಿರಾ ತಗ್ಗು ಪ್ರದೇಶವಾಗಿದ್ದು, ಸಮುದ್ರ ಮಟ್ಟಕ್ಕಿಂತ ೬೬೧.೪.೨ ಮೀ. ಎತ್ತರದಲ್ಲಿದೆ ಹಾಗೂ ಉತ್ತಮ ವಾತಾವರಣ ಹೊಂದಿದೆ. ಇದು ದಿನಾಂಕ ೩೧.೧೨.೨೦೦೬ ರಂದು, ಸಿರಾ ಪುರಸಭೆ ನಗರಸಭೆಯಾಗಿ ಪರಿವರ್ತನೆಯಾಗಿದೆ.

ಮಧ್ಯ ಹಳೆಯ ಶಿಲಾಯುಗದ ಪ್ರಾಗಿತಿಹಾಸವನ್ನು ಹೊಂದಿರುವ ಸಿರಾ ಗಂಗರು, ರಾಷ್ಟ್ರಕೂಟರು, ಕಲ್ಯಾಣಿ ಚಾಲುಕ್ಯರು, ನೊಳಂಬರು, ಪಲ್ಲವರು, ಚೋಳರು, ಹೊಯ್ಸಳರು, ವಿಜಯನಗರದ ಅರಸರು, ಆದಿಲ್ ಷಾಹಿಗಳು, ಬಿಜಾಪುರದ ಸುಲ್ತಾನರು, ಮೊಗಲರು, ಮರಾಠರು, ಮೈಸೂರು ಅರಸರು ಮುಂತಾದ ರಾಜ ಮನೆತನಗಳ ಆಳ್ವಿಕೆಗೆ ಒಳಪಟ್ಟಿತ್ತು. ವಿಜಯಾಗರ ಸಾಮ್ರಾಜ್ಯದ ಸಾಮಂತರಾಗಿದ್ದ ಹರತಿ ತಿಪ್ಪನಾಯ್ಕರ ವಂಶಸ್ಥರಾದ ಕರೇರಂಗಪ್ಪನಾಯಕ

[ಕಸ್ತೂರಿ ರಂಗಪ್ಪನಾಯಕ] ಗೊಲ್ಲರ ದೇವಣ್ಣ ಮತ್ತು ಸಿರಿಯಣ್ಣನಿತ್ತ ದ್ರವ್ಯದಿಂದ ಕೋಟೆ ನಿರ್ಮಾಣ ಮಾಡಿಸಿ ಸಿರಿಯನ್ ಕೋಟೆ > ಸಿರಿಯ ಕೋಟೆ > ಸಿರಾ ಕೋಟೆ ಎಂಬ ಹೆಸರು ಪಡೆದಿದೆ.

ಒಳಾಂಗಣ

ಹುಲಿಮುಖದ ಹೆಬ್ಬಾಗಿಲು, ಎರಡನೆಯ ದಿಡ್ಡಿಬಾಗಿಲು ಹಿಂದೂ ಶೈಲಿಯ ಕೆತ್ತನೆಯನ್ನು ಹೊಂದಿದೆ. ಪ್ರವೇಶ ದ್ವಾರವು ಅಷ್ಟ ಕೋನಾಕೃತಿಯಲ್ಲಿದ್ದು, ಕ್ರಿ.ಶ. ೧೬೩೮ ರಲ್ಲಿ ಪೌಜ್ ದಾರ್ ಮಲ್ಲಿಕ್ ರೆಹಾನನ ಕಾಲದಲ್ಲಿ ಕೋಟೆ ಪೂರ್ಣಗೊಂಡು ಪೇಟೆಯ ನಿರ್ಮಾಣವಾಗಿತ್ತು. ದಿಲಾವರ್ ಖಾನ್ ನ ಆಳ್ವಿಕೆಯ ಕಾಲದಲ್ಲಿ ಅವನು ವಾಸವಾಗಿದ್ದ ಅರಮನೆ ಮತ್ತು ಆತ ನಿರ್ಮಾಣ ಮಾಡಿದ್ದ ಖಾನ್ ಭಾಗ್ ನ ಸೌಂದರ್ಯಕ್ಕೆ ಮಾರುಹೋಗಿ ಹೈದರನು ಶ್ರೀರಂಗಪಟ್ಟಣ ಹಾಗೂ ಬೆಂಗಳೂರಿನಲ್ಲಿ ಅದೇ ಮಾದರಿಯ ಅರಮನೆಗಳನ್ನು ಕಟ್ಟಿಸಿರುವುದಾಗಿಯೂ ಬೆಂಗಳೂರಿನ ಲಾಲ್ ಬಾಗ್, ಖಾನ್ ಭಾಗ್ ನ ಪಡಿಯಚ್ಚಾಗಿದೆ. ಈ ನೆಲದುರ್ಗ ಬೆಂಗಳೂರಿನ ನೆಲದುರ್ಗಕ್ಕೆ ಮಾದರಿಯಾಗಿದೆ. ದಿನಾಂಕ ೧೫.೦೧.೨೦೦೯ ರಂದು ಶಿರಾ ಕೋಟೆಯನ್ನು ರಾಜ್ಯ(*****)

 

ಬರಗೂರು ಆಂಜನೇಯಸ್ವಾಮಿ ದೇವಸ್ಥಾನ:

ದೂರ ಎಷ್ಟು?
ತಾಲ್ಲೂಕು : ಶಿರಾ
ತಾಲ್ಲೂಕು ಕೇಂದ್ರದಿಂದ: ೨೭ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೭೭ ಕಿ.ಮೀ

ಶಿರಾದಿಂದ ೨೫ ಕಿ.ಮೀ ದೂರದಲ್ಲಿರುವ ಬರಗೂರಿನಲ್ಲಿ ೫ ಅಡಿ ಉದ್ದ, ೪ ಅಡಿ ಅಗಲದ ಬಂಡೆಯಲ್ಲಿ ವೀರಾಂಜನೇಯನ ವಿಗ್ರಹ ಮನಮೋಹಕವಾಗಿದೆ. ಆಂಜನೇಯನು ಕೈ ಎತ್ತಿ ಕಠಾರಿ ಹಿಡಿದಿರುವುದರಿಂದ ಇದು ವಿಜಯನಗರದ ಕಾಲದ್ದಾಗಿದೆ ಎಂದು ಊಹಿಸಲಾಗಿದೆ. ಪೂರ್ಣ ದೇವಸ್ಥಾನ ಹಾಗೂ ಮೇಲ್ಛಾವಣಿ ಬಂಡೆಗಲ್ಲಿನಿಂದ ಮಾಡಲ್ಪಟ್ಟಿದ್ದು, ವಿಮಾನವು (ಗೋಪುರ) ವಿಜಯನಗರೋತ್ತರವಾಗಿದ್ದು, ಭಗ್ನವಾಗಿದೆ. ದೇವಸ್ಥಾನದ ಅರ್ಧ ಮಂಟಪದ ಮೇಲ್ಭಾಗದಲ್ಲಿ ದೇವಕೋಷ್ಠಕಗಳಿದ್ದು, ನಾಲ್ಕು ಮೂಲೆಗಳಲ್ಲಿಯೂ ಕರ್ಣ ಕೂಟಗಳಿವೆ.

ಬರಗೂರಿನಲ್ಲಿ ನೊಳಂಬರ ಅರಸ ಮಹೇಂದ್ರ ಬಾಣರನ್ನು ಗೆದ್ದ ನೆನಪಿಗಾಗಿ ಈಶ್ವರ ದೇವಾಲಯವನ್ನು ನಿರ್ಮಿಸಿದ್ದಾನೆ. ಅದರ ಅವಶೇಷಗಳನ್ನು ಗಮನಿಸಬಹುದು. ಚೋಳರ ಆಡಳಿತ ಕಾಲದಲ್ಲಿ ಮಹಾಘಟಿಕವಾಗಿದ್ದ ಬರಗೂರು, ಇತಿಹಾಸದಲ್ಲಿ ತನ್ನದೇ ಛಾಪು ಮೂಡಿಸಿದೆ.

 

ಮದ್ದಕ್ಕನಹಳ್ಳಿ ಗ್ರಾನೈಟ್ ಕ್ವಾರಿ

ದೂರ ಎಷ್ಟು?
ತಾಲ್ಲೂಕು : ಶಿರಾ
ತಾಲ್ಲೂಕು ಕೇಂದ್ರದಿಂದ: ೨೭ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೭೭ ಕಿ.ಮೀ

 ಶಿರಾ ತಾಲ್ಲೂಕಿನ ನೀರಳಗುಡ್ಡ, ಹುಯಿಲ್ ದೊರೆ, ಗಾಣದಹುಣಸೆ ಮತ್ತು ಹುಣಸೇಹಳ್ಳಿ ಬಳ್ಳಿ ಸುಣ್ಣದಕಲ್ಲಿನ ಖನಿಜ ನಿಕ್ಷೇಪವಿದೆ. ಇದು ಸುಮಾರು ೨೦ ವರ್ಷಗಳವರೆಗೆ ಸಿಮೆಂಟ್ ಹಾಗೂ ಗಾರೆ ತಯಾರಿಕೆಗೆ ಪೂರಕವಾಗುವ ಅತ್ಯಂತ ಉಪಯುಕ್ತವೆನಿಸುವ ಮಣ್ಣು ಮತ್ತು ಕ್ಯಾಲ್ಸಿಯಂ ಮಿಶ್ರಿತ ಮೃದು ಶಿಲೆಯಾಗಿದೆ ಎಂದು ಭೂಗರ್ಭ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ತರೂರು ಗೇಟ್, ಕುಂಟೇಗೌಡನಹಳ್ಳಿ ಮತ್ತು ಬೀರಬೊಮ್ಮನಹಳ್ಳಿ ಬಳಿ ಕುರಂದದ ಕಲ್ಲು ಅಥವಾ ಕೋರಂಡಂ [ಗಡಸು ತನದಲ್ಲಿ ವಜ್ರಕ್ಕೆ ಎರಡನೆಯದಾದ] ಖನಿಜ ನಿಕ್ಷೇಪವಿದೆ. ಅಜೇನಹಳ್ಳಿಯ ಬಳಿ ಚಿನ್ನದ ನಿಕ್ಷೇಪವಿದ್ದು [ಸುಮಾರು ೨೫ ವರ್ಷಗಳವರೆಗೆ ತೆಗೆಯಬಹುದಾದಷ್ಟು] ೬.೭೭೦೦೦ ಟನ್ ನಷ್ಟು ಚಿನ್ನ ಸಿಗುತ್ತದೆಂದು ಅಂದಾಜು. ಸುಮಾರು ೨೫೦ ಎಕರೆ ವಿಸ್ತೀರ್ಣದಲ್ಲಿ ಈ ನಿಕ್ಷೇಪವಿದೆ.

 

ಮಲ್ಲಿಕ್ ರೆಹಾನ್ ದರ್ಗಾ:

 ಹಿಂದೂ ಮೊಘಲ್ ಸಂಸ್ಕೃತಿಯ ಸಿರಾದಲ್ಲಿ ಧಾರ್ಮಿಕ ಸಮ್ಮಿಲನದ ಕುರುಹಾಗಿ ಮಲ್ಲಿಕ್ ರೆಹಾನ್ ದರ್ಗಾವಿದೆ. ಶ್ರೀಮಂತರಲ್ಲಿ ಶ್ರೀಮಂತ, ಶಕ್ತಿವಂತರಲ್ಲಿ ಶಕ್ತಿವಂತ, ಹಾಗೂ ದೇವರ ಸ್ನೇಹಿತರಾಗಿದ್ದರು ಎಂದು ಶಾಸನಗಳಲ್ಲಿ ಸ್ತುತಿಸಲ್ಪಟ್ಟಿರುವ ಮಲ್ಲಿಕ್ ರೆಹಾನನ ಸ್ಮಾರಕ. ಕ್ರಿ.ಶ. ೧೬೩೭ ರಿಂದ ೧೬೫೧ ರವರೆಗೆ ಸಿರಾದ ಪೌಜುದಾರನಾಗಿದ್ದನು. ಈತನು ತನ್ನ ಮರಣಾನಂತರ ಇಲ್ಲಿಯೇ ಸಮಾಧಿಯಾಗಬೇಕೆಂಬ ಸ್ವ-ಇಚ್ಚೆಯಿಂದ ಸಾಯುವ ಮೊದಲೇ ಈ ದರ್ಗಾ ನಿರ್ಮಾಣ ಮಾಡಿಸಿದ್ದನು. ಈ ದರ್ಗಾ ಚಚ್ಚೌಕಾಕೃತಿಯ ಕಟ್ಟಡವಾಗಿದ್ದು ಮೇಲ್ಭಾಗದಲ್ಲಿ ಭಾರಿ ಗುಮ್ಮಟವನ್ನು ಹೊಂದಿದೆ. ಗುಮ್ಮಟದ ೪ ಮೂಲೆಯಲ್ಲಿ ೪ ಗೋಪುರಗಳು ಪರ್ಶಿಯನ್ ಶೈಲಿಯೂ, ಲೋಹಕಗಳು ಹಿಂದೂ ಶೈಲಿಯಲ್ಲಿಯೂ, ನಿರ್ಮಿತವಾಗಿದೆ. ಈ ಗೋಪುರ ಸ್ಥಂಭಗಳು ೮ ಅಡಿಗಳಷ್ಟು ಎತ್ತರವಾಗಿವೆ. ಘೋರಿಯ ಮೇಲೆ ಹತ್ತಲು ಪೂರ್ವ-ಉತ್ತರ-ದಕ್ಷಿಣ ದಿಕ್ಕಿಗೆ ಮೆಟ್ಟಿಲುಗಳಿವೆ. ದರ್ಗಾದ ಒಳಗೆ ಮಲಿಕ್ ರೆಹಾನನ ಘೋರಿ ಇದೆ. ಈ ಘೋರಿಯ ನಾಲ್ಕು ದಿಕ್ಕಿಗೂ ಕಮಾನುಗಳಿವೆ ಯಾವಾಗಲೂ ಮೂರು ಬಾಗಿಲು ತೆರೆದಿದ್ದು, ಒಂದು ಬಾಗಿಲು ಮುಚ್ಚಿರುತ್ತಾರೆ. ಮುಚ್ಚಿದ ಬಾಗಿಲನ್ನು ’ಉರುಸ್’ ಸಂದರ್ಭದಲ್ಲಿ ಗಂಧ ಏರಿಸುವ ದಿನ ಮಾತ್ರ ತೆರೆದಿರುತ್ತಾರೆ. ಇದರಂತೆಯೇ ಗಂಡಿಹಳ್ಳಿ ಮಠದ ಉರುಸ್ ನಲ್ಲಿಯೂ ಹಿಂದೂ-ಮುಸ್ಲಿಂರು ಸೌಹಾರ್ದದಿಂದ ಭಾಗವಹಿಸುತ್ತಾರೆ.

 

ಜಾಮೀಯಾ ಮಸೀದಿ:

ಕ್ರಿ.ಶ.೧೬೮೬ ರಲ್ಲಿ ಮೊಘಲರ ಸುಬೇದಾರ್ ಆಗಿ ನೇಮಕಗೊಂಡಿದ್ದ ಖಾಸಿಂಖಾನನ ಕಾಲದಲ್ಲಿ ಷೇಕ್ ಫರೀದ್ ರವರಿಂದ ಜಾಮೀಯಾ ಮಸೀದಿಯನ್ನು ನಿರ್ಮಾಣ ಮಾಡಲಾಯಿತು ಇದು ದೆಹಲಿಯ ಜಾಮಿಯಾ ಮಸೀದಿಯ ಪಡಿಯಚ್ಚು ಎಂದು ಕರೆಯಲಾಗಿದೆ. ನವೆಂಬರ್ ೧೯೫೮ ರಲ್ಲಿ ಮಲ್ಲಿಕ್ ರೆಹಾ ದರ್ಗಾ ಮತ್ತು ಜಾಮಿಯಾ ಮಸೀದಿಯನ್ನು ರಾಷ್ಟ್ರೀಯ ಸ್ಮಾರಕಗಳಾಗಿ ಭಾರತೀಯ ಸರ್ಕಾರದ ಪುರಾತತ್ವ ಇಲಾಖೆ ಘೋಷಿಸಿದೆ.

 

ಶ್ರೀಉಗ್ರೇಗೌಡ ಸ್ಮಾರಕ ಜಿಲ್ಲಾ ಕೃಷಿ ತರಬೇತಿ ಕೇಂದ್ರ

ದೂರ ಎಷ್ಟು?
ತಾಲ್ಲೂಕು : ಶಿರಾ
ತಾಲ್ಲೂಕು ಕೇಂದ್ರದಿಂದ: ೧೦ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೪೦ ಕಿ.ಮೀ

ಶ್ರೀಕೃಷ್ಣ ರಾಜೇಂದ್ರ ವ್ಯವಸಾಯ ಪಾಠಶಾಲೆ, ಶಿರಾ ತಾಲ್ಲೂಕಿನ ಶೈಕ್ಷಣಿಕ ಪ್ರಗತಿಯ ಹಾಗೂ ಇಲ್ಲಿನ ಜನತೆಯ ದಾನಗುಣ, ತ್ಯಾಗಬುದ್ದಿಯ ದ್ಯೋತಕವೂ ಆಗಿದೆ. ಆಧುನಿಕ ಕೃಷಿ ಶಿಲ್ಪ ದಿವಂಗತ ಉಗ್ರೇಗೌಡರು ತಮ್ಮ ಸ್ವಯಾರ್ಜಿತ ಆಸ್ತಿಯಲ್ಲಿ ಅಗ್ರಿಕಲ್ಚರಲ್ ಅಸಿಸ್ಟೆಂಟ್ ಪೀಲ್ಡ್ ಆಫೀಸರ್ ಟ್ರೈನಿಂಗ್ ಇನ್ಸಟಿಟ್ಯೂಟ್ ಎಂದು ಪ್ರಾರಂಭವಾದ, ಈ ಸಂಸ್ಥೆಗಾಗಿ ಸುಮಾರು ೫೭-೦೦ ಎಕರೆ ಭೂಮಿಯನ್ನು ಗಂಡು ಸಂತತಿಯಿಲ್ಲದ ಉಗ್ರೇಗೌಡರು ದಾನಪತ್ರ ಮಾಡಿಸಿದ್ದರು. ಈ ಶಾಲೆಗೆ ದಿನಾಂಕ ೨೩.೦೮.೧೯೨೨ ರಲ್ಲಿ ಶ್ರೀಕೃಷ್ಣ ರಾಜೇಂದ್ರ ವ್ಯವಸಾಯ ಪಾಠಶಾಲೆ ಎಂದು ಪುನರ್ ನಾಮಕರಣವಾಗಿದೆ. ೧೯೭೨-೭೩ ರಿಂದ ಈಚೆಗೆ ಶ್ರೀ ಕೃಷ್ಣ ರಾಜೇಂದ್ರ ವ್ಯವಸಾಯ ಪಾಠಶಾಲೆಯು ಶ್ರೀ ಉಗ್ರೇಗೌಡ ಸ್ಮಾರಕ ಜಿಲ್ಲಾ ಕೃಷಿ ತರಬೇತಿ ಕೇಂದ್ರವಾಗಿ ಮಾರ್ಪಾಟು ಹೊಂದಿ ಮೈಸೂರು ರಸ್ತೆಯಲ್ಲಿ ೫೭-೦೦ ಎಕರೆ ವಿಸ್ತೀರ್ಣದಲ್ಲಿ ಕಾರ್ಯೋನ್ಮುಖವಾಗಿದೆ. ದಿನಾಂಕ ೬-೦೮-೧೯೧೨ ನೇ ಇಸವಿಯಲ್ಲಿ ಶ್ರೀ ಉಗ್ರೇಗೌಡರು ಮೈಸೂರು ಸರ್ಕಾರದ ವಶಕ್ಕೆ ಅರ್ಪಿಸಿರುತ್ತಾರೆ.

ಈ ಕೃಷಿ ತರಬೇತಿ ಕೇಂದ್ರದಲ್ಲಿ ಒಂದು ವರ್ಷಕ್ಕೆ ರೈತ ಮಹಿಳೆ, ರೈತ ಪುರುಷ, ಮತ್ತು ಕ್ಷೇತ್ರ ಸಿಬ್ಬಂದಿಯೂ ಸೇರಿದಂತೆ ೧೫೦೦ ಜನರಿಗೆ ತರಬೇತಿ ನೀಡಲಾಗುತ್ತಿದೆ. ವಿಶೇಷವಾಗಿ ರೈತ ಮಹಿಳೆಯರಿಗೆ ಹೈನುಗಾರಿಕೆ, ತೋಟಗಾರಿಕೆ, ಜೇನು ಸಾಕಾಣೆ, ಕೃಷಿ ಉದ್ದಿಮೆ, ಮತ್ತು ಕೃಷಿ ಸಂರಕ್ಷಣಾ ಘಟಕದ ತರಬೇತಿ ನೀಡಲಾಗುತ್ತದೆ. ಇಲ್ಲಿ ಬೀಜೋತ್ಪಾದನಾ ಘಟಕ ಹಾಗೂ ಎರೆಹುಳು ಸಾಕಾಣೆ ಮತ್ತು ಗೊಬ್ಬರ ತಯಾರಿಕಾ ಘಟಕಗಳು ಇವೆ.

ದಿವಂಗತ ಉಗ್ರೇಗೌಡರು ದಾನ ನೀಡಿರುವ ೪.೦೬ ಗುಂಟೆ ಭೂ ವಿಸ್ತೀರ್ಣದಲ್ಲಿ ಸರ್ಕಾರಿ ಶಿಕ್ಷಕರ ತರಬೇತಿ ಕೇಂದ್ರ ದಿನಾಂಕ ೧೦.೧೦.೧೯೬೧ ರಲ್ಲಿ ಪ್ರಾರಂಭವಾಗಿ ಕಾರ್ಯನಿರ್ವಹಿಸುತ್ತಿದೆ. ವಿನೋಭಾಭಾವೆಯವರ ಭೂದಾನ ಚಳುವಳಿಯಲ್ಲಿ ಉಗ್ರೇಗೌಡರು ತಮ್ಮ ಜೊತೆಗೆ ಅನೇಕ ಮಹನೀಯರನ್ನು ಸೇರಿಸಿಕೊಂಡು ಪ್ರಾಥಮಿಕ ಶಾಲೆಗಾಗಿ ಭೂದಾನ ನೀಡಿದ್ದಾರೆ. ಕೃಷ್ಣ ರಾಜೇಂದ್ರ ಬಹದ್ದೂರ್ ರವರು ಇವರಿಗೆ ೧೯೨೨ ರಲ್ಲಿ ’ಆಧುನಿಕ ಕೃಷಿ ಶಿಲ್ಪಿ’ ಎಂದು ಬಿರುದನ್ನಿತ್ತು ಚಿನ್ನದ ಪದಕವನ್ನು ಕೊಟ್ಟು ಗೌರವಿಸಿರುವುದು ವಿಶ್ವ ಕೋಶದಲ್ಲಿ ದಾಖಲೆಯಾಗಿದೆ. ಇಂತಹ ದಾನಿಗಳು ಬಾಳಿದ ನಾಡಿನಲ್ಲಿ ಶೈಕ್ಷಣಿಕ ಪ್ರಗತಿಗೆ ಕೊರತೆಯಿಲ್ಲ.

 

ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಸ್ಪಟಿಕಪುರಿ ಕ್ಷೇತ್ರ

(ಪಟ್ಟನಾಯಕನಹಳ್ಳಿ)

ದೂರ ಎಷ್ಟು?
ತಾಲ್ಲೂಕು : ಶಿರಾ
ತಾಲ್ಲೂಕು ಕೇಂದ್ರದಿಂದ: ೧೨ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೬೨ ಕಿ.ಮೀ

 ಕ್ರಿ.ಪೂ. ೧೮೩೫ ಈಚೆಗೆ ೧ನೇ ನಂಜವಧೂತರಿಂದ ಸ್ಥಾಪಿಸಲ್ಪಟ್ಟಿದೆ. ಪ್ರಸಿದ್ದ ಶಿವ ದೇವಾಲಯ ಈ ಕ್ಷೇತ್ರದ ಹಿರಿಮೆ. ೧೨,೧೩ನೇ ಶತಮಾನದ ಈ ದೇಗುಲ ಹೊಯ್ಸಳರ ಕಾಲದ್ದೆಂದು ಗುರುತಿಸಲ್ಪಟ್ಟಿದೆ. ಈ ದೇವಾಲಯದ ಶಿವಲಿಂಗ ಹಾಗೂ ಶಿವಲಿಂಗದ ಎದುರಿನ ನಂದಿಯ ವಿಗ್ರಹ ನಯನ ಮನೋಹರವಾಗಿದೆ. ಸಾಲಿಗ್ರಾಮ ಸಹಿತ ನವಗ್ರಹಗಳು, ವಿನಾಯಕ, ಸೂರ್ಯಾನಾರಾಯಣ, ಲಕ್ಷ್ಮೀನಾರಾಯಣ, ಭಕ್ತಾಂಜನೇಯ, ಶ್ರೀ ದತ್ತಾತ್ರೇಯ ಮುಂತಾದ ವಿಗ್ರಹಗಳು ಶಿಲ್ಪಕಲೆ ಮನೋಹರವಾಗಿದೆ.

ಪ್ರಸ್ತುತ ಶ್ರೀ ಶ್ರೀ ಶ್ರೀ ನಂಜಾವಧೂತ ಸ್ವಾಮೀಜಿಯವರ ನೇತೃತ್ವದಲ್ಲಿ ಒಂದು ಪ್ರವಾಸಿ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರವಾಗಿ ಪ್ರಖ್ಯಾತವಾಗಿದೆ.

ದೂರ ಎಷ್ಟು?
ತಾಲ್ಲೂಕು : ಶಿರಾ
ತಾಲ್ಲೂಕು ಕೇಂದ್ರದಿಂದ: ೧೨ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೬೨ ಕಿ.ಮೀ

 

ಈ ಶಾಲೆಯು ಶಿರಾ ತಾಲ್ಲೂಕಿನ ಮಾದರಿ ಶಾಲೆಯಾಗಿದ್ದು, ಶಾಲಾ ಪರಿಸರ ನಲಿ-ಕಲಿ ಮಕ್ಕಳ ಕಲಿಕೆಯ ಗುಣಮಟ್ಟ, ವಿಶೇಷವಾದ ಕಲಿಕೋಪಕರಣ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯಗಳ ನಿರ್ವಹಣೆ ಮುಂತಾದವು ಉನ್ನತ ಮಟ್ಟದಲ್ಲಿವೆ.

 

ಸೃಷ್ಟಿಯ ವೈಚಿತ್ರ:

ದೂರ ಎಷ್ಟು?
ತಾಲ್ಲೂಕು : ಶಿರಾ
ತಾಲ್ಲೂಕು ಕೇಂದ್ರದಿಂದ: ೧೫ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೬೫ ಕಿ.ಮೀ

ತೊಗರಗುಂಟೆ ಸಂರಕ್ಷಿತ ಆಲದ ಮರ

ತಾವರೆಕೆರೆ ೧೦೧ ಸುಳೀ ಈಚಲ ಮರ

ಸುಮಾರು ೫ ಎಕರೆ ವಿಸ್ತೀರ್ಣದಲ್ಲಿ ಹಬ್ಬಿರುವ ಆಲದ ಮರವನ್ನು ಶ್ರೀಅಮ್ಮಾಜಿ ದೇವಸ್ಥಾನದ ಟ್ರಸ್ಟ್ ವತಿಯಿಂದ ಸಂರಕ್ಷಿಸಲಾಗಿದೆ. ಇಲ್ಲಿ ಏಳು ಮಂದಿ ಅಕ್ಕತಂಗಿಯರಾದ ಏಳ್ ಮಂದಕ್ಕನವರು, ವರ್ಷಕ್ಕೊಮ್ಮೆ ಬಂದು ವಿಶ್ರಾಂತಿ ಪಡೆದುಕೊಳ್ಳುತ್ತಾರೆ ಎಂದು ಪ್ರತೀತಿ.

೧೦೧ ಸುಳಿ ಈಚಲ ಮರಕ್ಕೆ ಪ್ರದಕ್ಷಿಣೆಹಾಕಿ ಅದರ ಬಳೀ ಇರುವ ಬೋರ್ ವೆಲ್ ನೀರು ಕುಡಿಯುವುದರಿಂದ ಖಾಯಿಲೆಗಳು ಗುಣವಾಗುತ್ತವೆ ಎಂಬ ನಂಬಿಕೆ, ವಾಡಿಕೆ ಇದೆ.

 

ಕಗ್ಗಲಡು ಪಕ್ಷಿಧಾಮ

ದೂರ ಎಷ್ಟು?
ತಾಲ್ಲೂಕು : ಶಿರಾ
ತಾಲ್ಲೂಕು ಕೇಂದ್ರದಿಂದ: ೫ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೫೫ ಕಿ.ಮೀ

ಪ್ರತಿವರ್ಷ ಡಿಸೆಂಬರ್ ಅಂತ್ಯ ಅಥವಾ ಜನವರಿ ಮೊದಲ ವಾರದಲ್ಲಿ ಇಲ್ಲಿಗೆ ಪಕ್ಷಿಗಳೂ ಆಗಮಿಸುತ್ತವೆ. ಈ ಭಾರಿ ಮಾರ್ಚ್ ತಿಂಗಳಲ್ಲಿ ಆಗಮಿಸಿವೆ. ಪ್ರಾರಂಭದಲ್ಲಿ ಕೆಲ ಪಕ್ಷಿಗಳೂ ಮಾತ್ರ ಬಂದು ಹೋಗಿ ನಂತರ ಹೆಣ್ಣೂ ಪಕ್ಷಿಗಳ ಜೊತೆಯಲ್ಲಿ ಬಂದು ಸಂತಾನಾಭಿವೃದ್ದಿಗಾಗಿ ಗೂಡು ಕಟ್ಟಿ ಕಗ್ಗಲಡು ಗ್ರಾಮದ ಹುಣಸೇಮರಗಳಲ್ಲಿ ನೆಲೆಸುತ್ತವೆ. ಶ್ರೀಲಂಕಾ, ಮಲೇಶಿಯಾ, ಬರ್ಮಾ, ಬಂಗ್ಲಾ, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾದಿಂದ ವಿಶ್ವದ ವಿವಿಧ ಪ್ರಭೇದಗಳಾದ “ಗ್ರೇಹಾರನ್, ಪೇಯಿಂಟೆಡ್ ಸ್ಪಾರ್ಕ್, ಬ್ರಾಹ್ಮಿನಿ ಡಕ್, ಪಿನ್ ಟೈಲ್ ಡಕ್, ಡ್ಯಾಬ್ ಚಿಕ್, ಸ್ಪೂನ್ ಬಿಲ್, ಮತ್ತು ಐಬಿಸ್” ಜಾತಿಯ ಪಕ್ಷಿಗಳು ಇಲ್ಲಿಗೆ ವಲಸೆ ಬಂದು ಸುಮಾರು ೬ ತಿಂಗಳ ಕಾಲ ನೆಲೆಸಿರುತ್ತವೆ. ಸಂತಾನಾಭಿವೃದ್ದಿ ಪೂರೈಸಿಕೊಂಡು ಮರಿಗಳ ರೆಕ್ಕೆ ಬಲಿತು ಹಾರಲು ಕಲಿತ ನಂತರ ತಮ್ಮ ತಮ್ಮ ಸ್ವದೇಶಗಳಿಗೆ ಹಿಂದಿರುಗುತ್ತವೆ. ಸುಮರು ೧೬ ವರ್ಷಗಳಿಂದಲೂ ಕಗ್ಗಲಡು ಸುಂದರ ಪಕ್ಷಿಧಾಮವಾಗಿದೆ ಊರೊಳಗಿನ ಹಾಗೂ ಆಸುಪಾಸಿನ ಹುಣಸೇಮರಗಳಲ್ಲಿ ಇವು ಗೂಡು ಕಟ್ಟಿಕೊಂಡು ವಾಸಿಸುತ್ತವೆ. ಹೆಣ್ಣು ಹಕ್ಕಿ ಮೊಟ್ಟೆ ಇಟ್ಟು ಕಾವು ಕೊಟ್ಟು ಮತಿಗಳ ಸಂರಕ್ಷಣೆಗೆ ತೊಡಗಿದಾಗ ಗಂಡು ಹಕ್ಕಿಯು ಆಹಾರ ಪೂರೈಕೆ ಮಾಡುತ್ತದೆ. ಗಂಡು ಹಕ್ಕಿ ಗೂಡಿನಲ್ಲಿನ ಮರಿಗಳ ಸಂರಕ್ಷಣೆಯಲ್ಲಿ ಕ್ರಿಯಾಶೀಲವಾದಾಗ ಹೆಣ್ಣು ಹಕ್ಕಿ ಆಹಾರಕ್ಕೆ ಹೋಗುತ್ತದೆ. ಸುಮಾರು ೨೧ ದಿನಗಳಿಗೆ ಮೊಟ್ಟೆ ಒಡೆದು ಮರಿಗಳು ಹೊರಬರುತ್ತವೆ. ಕಗ್ಗಲಡುವಿನ ಕೆರೆ ಶಿರಾದ ಚಿಕ್ಕಕೆರೆ, ದೊಡ್ಡಕೆರೆ, ಹಿರಿಯೂರು ತಾಲ್ಲೂಕಿನ ಗಾಯಿತ್ರಿ ಜಲಾಶಯ, ವಾಣಿವಿಲಾಸ ಸಾಗರ, ಹಾಗೂ ಶಿರಾ ತಾಲ್ಲೂಕಿನ ಇತರೆ ಕೆರೆಗಳಿಗೆ, ಸುಮಾರು ೫೦ ಕಿ.ಮೀ. ದೂರದವರೆಗೂ ಹಾರಿ ಆಹಾರ ಸಂಗ್ರಹಿಸುತ್ತವೆ.