ಬಲಚಕ್ರದ ಕೆಂಪು ಕಾವಿ ಬಣ್ಣದ ರೇಖಾ ರೂಪ ಸಮೂಹ. ಹೊಸ ಶಿಲಾಯುಗ ಬಾದಾಮಿ ಚಾಲುಕ್ಯ ಪೂರ್ವ ಹಾಗೂ ಅನಂತರದ ಕಾಲ.
ಬಲಚಕ್ರ : ಮನುಷ್ಯ – ಪ್ರಾಣಿ ರೇಖಾ ಚಿತ್ರಗಳು. ಸಾಂಕೇತಿಕ ರೇಖಾ ರೂಪಗಳೂ ಇವೆ. ಹೊಸ ಶಿಲಾಯುಗದ ಕಾಲ.
ಬಲಚಕ್ರದ ಶಿಲಾಶ್ರಯದೊಳಗಿಂದ ಪಶ್ಚಿಮಕ್ಕೆ ಕಾಣುವ ಹೊರನೋಟ
ಕಮಲಾಪುರ ವಿದ್ಯಾರಣ್ಯದ ಪರಿಸರದ ಹೊಸ ಶಿಲಾಯುಗದ ಚಿತ್ರ ಈ ಕಡವೆ ಕಾವ್ಯಮಯಲಯ ಗಮನಿಸಿ. ಇದೊಂದು ಒಂಟಿ ಕಲ್ಲು ಗುಂಡು, ಗುಂಡಿನ ಕೆಳಗಿನ ಬಂಡೆಯಲ್ಲಿ ಎರಡು ಎತ್ತುಗಳ ಹಾಗೂ ಇನ್ನೊಂದು ರೂಪದ ಕುಟ್ಟಿದ ಚಿತ್ರಗಳಿವೆ. ಕಡವೆ ತಲೆಯ ಎಡಭಾಗದಲ್ಲಿ ಬಿಳಿಯ ಬಣ್ಣದ ರೇಖಾ ರೂಪಗಳೂ ಇವೆ.
ಕೋಲಾರ ಜಿಲ್ಲೆಯ ಟೇಕಲ್ ಬೆಟ್ಟ ಸಾಲಿನ ಬಿಳಿಯ ಬಣ್ಣದ ರೇಖಾಚಿತ್ರಗಳು, ಬೃಹತ್ ಶಿಲಾಯುಗ – ಇತಿಹಾಸ ಕಾಲಗಳ ಚಿತ್ರಗಳು ಈ ಭಾಗದ ಕೆಲವು ಶಿಲಾಶ್ರಯಗಳಲ್ಲಿವೆ. ಟೇಕಲ್ ರೈಲು ನಿಲ್ದಾಣಕ್ಕೆ ಹತ್ತಿರ ಇರುವ ಶಿಲಾಶ್ರಯವೊಂದರಲ್ಲಿ ಕೊರೆದ ಹಸ್ತದ ರೂಪಗಳಿವೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಘಟ್ಟ ಮಾದಮಂಗಲದ ಶಿಲಾಶ್ರಯ ಇತಿಹಾಸ ಪೂರ್ವ ಚಿತ್ರಗಳು, ಬಹುತೇಕ ಸಾಂಕೇತಿಕ ರೂಪಗಳಿವು.
ಹಾಸನ ಜಿಲ್ಲೆಯ ಚೌಕವ್ಯೂಹದ ಬಹುಶಃ ಇತಿಹಾಸ ಕಾಲದ ಭೂ-ಆಕೃತಿ ಇದು. ಹಲವು ಶಿಲಾಶ್ರಯಗಳ ನಡುವೆ ಇರುವ ವಿಶಾಲ ಬಯಲಿನ ಬದಿ ಈ ರೂಪ ದೃಶ್ಯ ಸೃಷ್ಟಿಗೊಂಡಿದೆ.
ಆಂಧ್ರಪ್ರದೇಶದ ಕಂಗುಂದಿಯ ಶಿಲಾಶ್ರಯವೊಂದರಿಂದ ಹೊರನೋಟ ಕಾಣುವುದು ಹೀಗೆ. ಇತಿಹಾಸ ಕಾಲವೇ ಅಲ್ಲದೆ ಇತಿಹಾಸಪೂರ್ವ ಶಿಲಾಶ್ರಯಗಳೂ ಇಲ್ಲಿವೆ.
ಆಂಧ್ರಪ್ರದೇಶದ ಕಂಗುಂದಿಯ ಇತಿಹಾಸ ಬೃಹತ್ ಶಿಲಾಶ್ರಯವೊಂದರ ರೇಖಾಚಿತ್ರಗಳು. ೨೦೧೦ರಲ್ಲಿ ಈ ಚಿತ್ರ ಸಮೂಹ ಈ ಲೇಖಕನ ಹುಡುಕಾಟದಲ್ಲಿ ಕಾಣಿಸಿಕೊಂಡವು. ಮತ್ತೊಂದು ಶಿಲಾಶ್ರಯದಲ್ಲಿ ಮಾಂತ್ರಿಕ ಆಚರಣೆಯ ಕೆಂಪು ಬಣ್ಣದ ಮಾನವ ರೂಪಗಳೇ ಅಲ್ಲದ ಹಲವು ಸಾಂಕೇತಿಕ, ಅಲಂಕೃತ ಚಿತ್ರಗಳೂ ಇವೆ.
ರಾಯಚೂರು ಹತ್ತಿರದ ಬೈಲ್ಮರ್ಚೇಡ್ ಶಿಲಾಶ್ರಯದ ಸುಂದರ ಚಿತ್ರಗಳು. ಕೆಂಗಾವಿ ಬಣ್ಣದ ಈ ಚಿತ್ರಗಳು ಮಧ್ಯಯುಗಕ್ಕೆ ಸೇರಿವೆ. ಇದೊಂದು ‘ಗೋಗ್ರಹಣ’ದ ಚಿತ್ರ
ಮಾನ್ವಿಯ ವಿಜಯನಗರ ಸಾಮ್ರಾಜ್ಯದ ಸಂದರ್ಭದ ಮೆರವಣಿಗೆಯೊಂದರ ಚಿತ್ರ ಸಾಲಿನ ಒಂತು ತುಣುಕು. ಈ ಶಿಲಾಶ್ರಯಕ್ಕೆ ಮಾನ್ವಿಯ ಜನ ‘ರಂಗೋಲಿಪಡಿ’ ಎಂದೇ ಕರೆಯುತ್ತಾರೆ.
ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.
Leave A Comment