ಎಲ್ಲವನೆ ದೇವರೆಲ್ಲವನೆ
ಸ್ವಾಮೆಲ್ಲವನೆ ಶಿವನೆಲ್ಲವನೆ
ಅಲ್ಲವನಿಲ್ಲವನೆಲ್ಲವನೆ
ಮಲ್ಲಿಗೆವನದಲಿ ತಳಿಗಿದನೆ

ಎಲ್ಲವನೆ ದೇವರೆಲ್ಲವನೆ
ಎಲ್ಲವನೆ ಶಿವನೆಲ್ಲವನೆ
ಮೂರುಕಣ್ಣಿನವನೆಲ್ಲವನೆ
ಈ ಮುಕ್ಕಣ್ಣೇಶ್ವರನೆಲ್ಲವನೆ
ಅಲ್ಲವನಿಲ್ಲವನೆಲ್ಲವನೆ
ಅವ್ನು ತೆಂಗಿನ ಮರದಡಿ ತಳಿಗಿದನೆ

ಎಲ್ಲವನೆ ದೇವರೆಲ್ಲವನೆ ಸ್ವಾಮಿ
ಎಲ್ಲವನೆ ಶಿವನೆಲ್ಲವನೆ
ಅಲ್ಲವನಿಲ್ಲವನಿಲ್ಲವನೆ
ಸಂಪಿಗೆ ವನದಲಿ ತಳಿಗಿದನೆ

ಎಲ್ಲವನೆ ದೇವರೆಲ್ಲವನೆ
ಎಲ್ಲವನೆ ಶಿವನೆಲ್ಲವನೆ

ಆರುಕಣ್ಣಿನವನೆಲ್ಲವನೆ
ನಮ್ಮ ಆದಿಯ ಭೈರವನೆಲ್ಲವನೆ
ಎಲ್ಲವನೆ ದೇವರೆಲ್ಲವನೆ
ಎಲ್ಲವನೆ ಶಿವನೆಲ್ಲವನೆ

ಎಂಟು ಕಣ್ಣಿನವನೆಲ್ಲವನೆ
ನಮ್ಮ ಗಂಟೆಯ ಭೈರವನೆಲ್ಲವನೆ
ಅಲ್ಲವನಿಲ್ಲವನೆಲ್ಲವನೆ
ಅವ ನೆಲ್ಲಿಯ ವನದಲಿ ತಳುಗಿದನೆ

ಎಲ್ಲವನೆ ದೇವರೆಲ್ಲವನೆ
ಸ್ವಾಮೆಲ್ಲವನೆ ಶಿವನೆಲ್ಲವನೆ
ಹಾ ಕೋಲೆ ರನ್ನದ ಕೋಲಣ್ಣ ಕೋಲೆ
ಚಿನ್ನದ ಕೋಲಣ್ಣ ಇವಡಿತ್ತ ಇವಡತ್ತ
ಜುಂತಕದಾಳಿ ಜುಂತಕದಾಳಿ