ಜನನ : ೧೯೧೯ ರಲ್ಲಿ

ಶಿಕ್ಷಣ : ಆಸ್ಥಾನ ವಿದ್ವಾನ್ ಗದಿಗೆವ್ವ ಗವಾಯಿಗಳ ಮಾರ್ಗದರ್ಶನದಲ್ಲಿ ಸಂಗೀತಾಭ್ಯಾಸ, ಮುಂದೆ ಗದುಗಿನ ವೀರೇಶ್ವರ ಪುಣ್ಯಾಶ್ರಮ ಸೇರಿ ಅಲ್ಲಿ ಪಂ. ಪಂಚಾಕ್ಷರೀ ಗವಾಯಿಗಳು ಮತ್ತು ಡಾ|| ಪುಟ್ಟರಾಜ ಗವಾಯಿಗಳ ಮಾರ್ಗದರ್ಶನದಲ್ಲಿ ಸಂಗೀತ ಹಾಗೂ ಕಥಾ ಕೀರ್ತನ ಕಲೆಯಲ್ಲೂ ಪಾಂಡಿತ್ಯ ಗಳಿಸಿದರು.

ಕ್ಷೇತ್ರ ಸಾಧನೆ : ಜನ್ಮಾಂಧರಾದ ಶಿವಮೂರ್ತಿ ಶಾಸ್ತ್ರಿಗಳು ತಮ್ಮ ಅಂಧತ್ವವನ್ನೇ ಬಂಡವಾಳವನ್ನಾಗಿಸಿ, ಬಾಹ್ಯ ಚಕ್ಷು ಮುಚ್ಚಿದ್ದರೂ ಅಂತಃ ಚಕ್ಷುವನ್ನು ತೆರೆದು ತಮ್ಮ ಉತ್ತಮ ಕಂಠಶ್ರೀಯಿಂದ ಅನೇಕ ರೀತಿಯ ಶಿವ ಕಥೆಗಳನ್ನು ಮಾಡುತ್ತಾ ರಾಜ್ಯದಾದ್ಯಂತ ಸಂಚಾರ ಮಾಡಿ ಅನೇಕ ಧಾರ್ಮಿಕ ಸ್ಥಳಗಳಲ್ಲಿ ಮಠ-ಮಂದಿರಗಳಲ್ಲಿ ಭಗವಂತನ ಸನ್ನಿಧಾನದಲ್ಲಿ ಮಠಾಧೀಶರ ಸಮ್ಮುಖದಲ್ಲಿ ಸಾರ್ವಜನಿಕ ವೇದಿಕೆಗಳಲ್ಲಿ ಕಥಾ ಕೀರ್ತನೆಗಳನ್ನು ನಡೆಸಿ ಜನಮನ ಗೆದ್ದವರು. ಅನೇಕ ಶಿಷ್ಯ ಸಂಪತ್ತನ್ನೂ ಹೊಂದಿರುವ ಶಾಸ್ತ್ರಿಗಳು ಮಕ್ಕಳಿಗೆ ಸಂಗೀತ ಹಾಗೂ ಕಥಾ ಕೀರ್ತನ ಕಲೆಗಳಲ್ಲಿ ಶಿಕ್ಷಣ ನೀಡುತ್ತಿದ್ದಾರೆ.

ಪ್ರಶಸ್ತಿ – ಪುರಸ್ಕಾರಗಳು : ಅನೇಕ ಸಂಘ ಸಂಸ್ಥೆಗಳು – ಮಠಾಧಿಪತಿಗಳಿಂದ ಗೌರವಿಸಲ್ಪಟ್ಟಿರುತ್ತಾರೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೨೦೦೦-೦೧ ರ ಸಾಲಿನ ’ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.