ಮುಂದೆ ಬರುವುದು ಮುನ್ನಾದ ಶಿವರಾತ್ರಿ
ಎಂದಿಗೆ ಬಂದೀತೆ ಅಭಿಷೇಕ ಜೇನುತುಪ್ಪ
ಮಾಲಿಂಗಗೊಸ್ತ್ರ ಧರಿಸೋದು ॥
ಗಂಗೆ ಗೌರಿ ಹಬ್ಬ ಮುಂದೆ ದೀವಳಿಗೆ ಹಬ್ಬ
ಎಂದಿಗೆ ಬಂದೀತೆ ಶಿವರಾತ್ರಿ ಚುಂಚನಗಿರಿಯ
ಮಾಲಿಂಗಗೊಸ್ತ್ರ ಧರಿಸೋದು ॥
ವರುಷಕೆ ಬರುದೊಂದು ಹರುಷವ ಶಿವರಾತ್ರಿ
ಅರವತ್ತು ಗಾವುದವ ನಡಕೊಂಡು ಭೈರುವ
ನಿನ್ನ ಗಿರಿಹತ್ತಿ ನಾವು ಬರುವೇವು ॥
ಅರವತ್ತು ಗಾವುದು ಕುರುವಿಟ್ಟು ನಾವ್ ಬಂದೊ
ನಿನ್ನ ಜಡೆಗೆ ತಂದೇವು ಜವನವ ಜಾಜಿಹೂವ
ನಿನ್ನ ಕಿರುಜಡೆಯನೆಲ್ಲಿ ಆವಿಸೀದೆ ॥
ಆಲದ ಮರಕೆ ಎರ್ಯಾನೆ ಸರಸರನೆ
ಹತ್ತಿ ನೋಡ್ಯಾನೆ ದಿರುಳಿಯ ಜೇರಹಳ್ಳಿ
ಸಾಲು ದೀವಟಿಗೆ ಬರುವೋದ ॥
ಆಲದ ಮರಕೆ ಏರ್ಯಾನೆ ಸರ್ಪಾನ
ಹತ್ತಿ ನೋಡ್ಯಾನೆ ದಿರುಳಿಯ ಜೀರಹಳ್ಳಿ
ಹಣ್ಣಿನಗೊಡೆ ಬರುವೋದ ॥
* * *
Leave A Comment