ಶಿವ ತಂದಿಕ್ಕಿದ ಬೇಗೆ ಇದು
ತವಕದಿ ನಿಲ್ಲುವುದು ಹೇಗೆ ಭುವನದಿ ಬಂದಿತು
ಹೇಗೆ ನರ ಮನುಜರು ಬಾಳುವುದು ಇನ್ಯಾಗೆ || ಶಿವ ||
ಕರಿಯಾ ಹಸುವಿನ ಮುಂದೆ ಕಲ್ಲು
ತಿರಿದುಂಬೋ ಕೋಣನ ಮುಂದೆ ಹುಲ್ಲು
ಅರುವಿನ ಜ್ಞಾನಿಗೆ ನೆಲ್ಲೊ ಇದನರಿಯದ
ಅಜ್ಞಾನಿಗೆ ಆರ್ಕದ ಜೊಳ್ಳು || ಶಿವ ||
ಮನ್ನಾಣೆ ಮಾತುಗಳೆಲ್ಲಾ ಶಿವ
ಅನ್ಯಾಯ ಮಾಯವಾಯ್ತಲ್ಲ
ಚಿನ್ನೆ ಬೆಳ್ಳಿ ಹಣವೆಲ್ಲ ಇನ್ನು
ತಿನ್ನವರ ಪಾಲಾಯ್ತಲ್ಲ || ಶಿವ ||
ಬಾಳು ಬದುಕು ಬಂಡಾಟ
ಬಾಳುವರಿಗೆ ಇದು ಕಡೆಯಾಟ
ಕಾಲಿನ ದೂತರ ಕಾಟ ಇದ
ಕಳೆದುಳಿಯುವುದೇ ಶಿವನ ಕೈವಸ || ಶಿವ ||
ಲೆಕ್ಕವಿಲ್ಲದ ತೆರಿಗೆಯಾತು ಸೀಮೆ
ಒಕ್ಕಲಿಗ ಉಪವಾಸ ಬಂತು
ದಿಕ್ಕೆಂಟು ಮಾಲೆ ಬಂದಾಯ್ತು ಅಲ್ಲಿ
ದಿಕ್ಕಲ್ಲಿ ಸರಸಾಟ ಕಿರಿದಾಯ್ತು || ಶಿವ ||
ತೆರಿಗೆ ಹೊರಿಗೆಗಳೆಲ್ಲಾ ಇದು
ದೊರೆಗಳು ಮಾಡಿದ್ದೆಲ್ಲಾ
ನರರಿಗೆ ಉಬ್ಬಸವಲ್ಲೊ ಶಿವ
ತಾನೊಬ್ಬನೆ ಬಲ್ಲಾ || ಶಿವ ||
ನಂದ ನಂದನದೊಳಗೆ ಶಿವ ಶರಣರು
ಬರುವರು ಧರೆಗೆ ಇಂತ ನಿಧಿಕರೆಲ್ಲಾ
ಹೊರಗೆ ನಮ್ಮ ಇಂಧುಧರನ ಕೃಪೆ ಭಕ್ತರಿಗೆ || ಶಿವ ||
Leave A Comment