ಬರಿದೆ ನೀ ಹುಡಿಕಾಡ ಬ್ಯಾಡ
ನಿನ್ನ ಒಡಲೊಳಗೆ ಇರುವುದು ತಿಳಿಯೊ ನೀ ಮೂಢ    || ಬರಿದೆ ||

ಬುಡ ಮೇಲಣದ ವೃಕ್ಷದೊಳಗೆ ಅಲ್ಲಿ
ಕಡುಸಣ್ಣ ಕೆಲಸದ ನಡಗೂಡಿನೊಳಗೆ

ಇದರ ಬೆಡಗ ನೀ ತಿಳಿಯೊ ಗುರುಪಾದದೊಳಗೆ
ಇಂದ್ರನ ಛಾಪದಂತಿಹುದು ಇದು

ಮಂದಾರ ಕುಸುಮದ ಮಧ್ಯೆದೊಳಿಹುದು
ಕೋಟಿ ಚಂದ್ರ ಸೂರ್ಯನ ಪ್ರಭೆಯು ಜರಿಯುತಲಿಹುದು

ಅಣುವಿಗೆ ಅಣುವಾಗಿಹುದು ತನ್ನ ಬಲವಾದ
ಅಣುಗಳ ಸೆಳೆದುಕೊಂಬಿಹುದು

ಹಿತ್ತಾಲ ಗಿಡವಾಗಿಹುದು ಮತ್ತೆ ನೋಡಲು ಅದು
ಶಿವ ತತ್ತ್ವವಾಗಿಹುದು
ಇದರ ಅರ್ಥವ ರೇವಣಸಿದ್ಧನೋಡಿಹುದು.