ಅವ್ವ ಕಡಿತು ಸೇಳು ಕಡಿತು
ಕಡಲೆಂಬ ಕಲ್ಲನೆಲ್ಲಾ ಪಾರಮಾರ್ಥ ಸೇಳ್ ಕಡಿತು || ಅವ್ವ ||

ಆರು ಮನೆ ಬಾಗಿಲು ತೋರುವುದು ಕೊನೆಯಲ್ಲಿ
ಮೂರು ಕಲ್ಲಿನ ಮೇಲೆ ಕಾಣುತಲಿಹುದು

ಮೋಹದ ಮಗನುಟ್ಟಿ ಪ್ರೇಮದ ಹೆಸರಿಟ್ಟು
ಕೋಡಗದ ಗುಮ್ಮೆಂದು ಗುರುಮಂತ್ರ ಜಪಿಸುವಾಗ

ಸ್ಥೂಲ ಸೂತ್ರಗಳೆಂಬ ಕಾರಣ ದೇಹವು
ಮಹಾ ಕಾರಣವೆಂಬೊ ಕಾಲಗತಿಸಿ ಬಂದು

ಕಷ್ಟಸುಖಗಳೆಂಬ ಮುಕ್ತಿಯ ವಸ್ತು
ಶಿಶುನಾಳದೀಶನ ಮೋಕ್ಷವೆಂಬುವ ಸೇಳ್