ಅತ್ತ ಇತ್ತ ಹರಿದಾಡುವ ಮನಸಿಗೆ
ಮಚ್ಚಿಲ್ಹೊಡೆದು ನಿಲ್ಲಿಸು ಜಾಣ.

ಕಡುವಿಷಯದಿ ಸಂಸಾರಕೆ ಮರುಗುತ
ಪೊಡವಿ ತಳದಿ ಮಿಡಿಕ್ಯಾಡುವ ಮನಸಿಗೆ
ಮಚ್ಚಿಲ್ಹೊಡೆದು ನಿಲ್ಲಿಸು ಜಾಣ.

ಸಿರಿ ಸಂಪದ ಸೌಭಾಗ್ಯ ತನಗೆ ಬಲು
ಹಿರಿದಾಗಲಿಬೇಕೆಂಬುವ ಮನಸಿಗೆ
ಮಚ್ಚಿಲ್ಹೊಡೆದು ನಿಲ್ಲಿಸು ಜಾಣ.

ವಸುಧೆಯೊಳಗೆ ಶಿಶುನಾಳಾಧೀಶನ
ಹೆಸರು ಮರೆತು ಕೊಸರ್‍ಯಾಡುವ ಮನಸಿಗೆ
ಮಚ್ಚಿಲ್ಹೊಡೆದು ನಿಲ್ಲಿಸು ಜಾಣ.