ನವೋದಯದ ಕಿರಣಲೀಲೆ
ಕನ್ನಡದೀ ನೆಲದ ಮೇಲೆ
ಶುಭೋದಯವ ತೆರೆದಿದೆ –

ನದನದಿಗಳ ನೀರಿನಲ್ಲಿ
ಗಿರಿವನಗಳ ಮುಡಿಗಳಲ್ಲಿ
ಶಿಲ್ಪ ಕಲಾ ಗಾನ ಕಾವ್ಯ
ಗುಡಿಗೋಪುರ ಶಿಖರದಲ್ಲಿ –

ಮುಗ್ಧ ಜಾನಪದಗಳಲ್ಲಿ
ದಗ್ಧ ನಗರ ಗೊಂದಲದಲಿ
ಯಂತ್ರ ತಂತ್ರದಟ್ಟಹಾಸ
ಚಕ್ರಗತಿಯ ಪ್ರಗತಿಯಲ್ಲಿ

ಹಳಬರಲ್ಲಿ ಹೊಸಬರಲ್ಲಿ
ಹಿರಿಯರಲ್ಲಿ ಕಿರಿಯರಲ್ಲಿ
ಹೊಸ ಚೇತನುದುತ್ಸಾಹದ
ಚಿಲುಮೆ ಚಿಮ್ಮುವೆದೆಗಳಲ್ಲಿ.