ಬಿ.ಎಸ್. ಯಡಿಯೂರಪ್ಪ
ಮುಖ್ಯಮಂತ್ರಿ
ವಿಧಾನ ಸೌಧ
ಬೆಂಗಳೂರು – 560 001                                                                                                                        ದಿನಾಂಕ: 16-09-2009

 

ಶುಭ ಸಂದೇಶ

ಸಾವಿರಾರು ವರ್ಷಗಳ ಇತಿಹಾಸವಿರುವ, ಎಲ್ಲ ವಿದ್ಯೆಗಳ ತೊಟ್ಟಿಲಾಗಿರುವ, ಕನ್ನಡ ಸಂಸ್ಕೃತಿಯ ಖಜಾನೆಯಾಗಿರುವ ಜಾನಪದ ಸಾಹಿತ್ಯ ಹಾಗೂ ಕಲಾ ಪ್ರಕಾರಗಳ ಎಲ್ಲಾ ಆಯಾಮಗಳನ್ನು ಪ್ರತಿಬಿಂಬಿಸುವ ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯ ಸಂಪುಟಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಜನಪದ ಅಕಾಡೆಮಿಯವರು ಹೊರತರುತ್ತಿರುವುದು ಸಂತಸದ ಸಂಗತಿ.

ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತ ಮತಿಗಳ್ ಎಂಬ ವ್ಯಾಖ್ಯಾನ ನಮ್ಮ ಜನಪದ ಸಾಹಿತ್ಯದ ಸಾರವಾಗಿದೆ. ಕನ್ನಡ ನೆಲ-ಜಲ-ಸಂಸ್ಕೃತಿಯ ವಿರಾಟ್ ದರ್ಶನವನ್ನು ನೀಡುವ ಈ ಸಂಪುಟಗಳು, ನಿಜಕ್ಕೂ ನಾಡಿನ ಸಾಹಿತ್ಯಕ ಹಾಗೂ ಜಾನಪದ ಲೋಕಕ್ಕೆ ಒಂದು ಕೊಡುಗೆಯಾಗಲಿವೆ.

ಈ ಯೋಜನೆಗೆ ಶ್ರಮಿಸಿರುವ ಎಲ್ಲರಿಗೂ ಅಭಿನಂದನೆಗಳು. ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯ ಸಂಪುಟ ಯೋಜನೆಗೆ ಶುಭ ಹಾರೈಕೆಗಳು.

(ಬಿ.ಎಸ್. ಯಡಿಯೂರಪ್ಪ)