[ಅದೇ ಮಸಣದ ಮತ್ತೊಂದೆಡೆ. ಕತ್ತಲಲ್ಲಿ ವಿಕಾರಾಕೃತಿಯುಳ್ಳ ಮರುಳುಗಳೆರಡು ಭಯಗೊಂಡು ಬಿರುಬಿರನೆ ಬರುತ್ತವೆ. ಹಿಂದೆ ಹಿಂದೆ ನೋಡಿ ಕಿಟ್ಟನೆ ಚೀರುತ್ತವೆ.]

೧ನೆ ಮರುಳು — ಅಕ್ಕ, ನನಗಿನ್ನುಂ ಆ ಹಾಳು ದುರ್ಯೊಧನನ್ ಮತ್ತೆಲ್ಲಿ ಗದೆವೀಸಿ ಬರುವನೋ ಎಂದಳ್ಕು! ಮಾನವರ್ ಕೊಲೆಗೆ ಕೈಯಿಡೆ ಮಾರಿಯನ್ ಮೀರ್ದಪರ್.

೨ನೆ ಮರುಳು — ತಂಗೆ, ತೆಗೆ ತೆಗೆ ಪುಸಿಯಳ್ಕನ್! ಇನ್ನೆಲ್ಲಿಯ ದುರ್ಯೋಧನನ್! ಭೀಮನ ಗದೆಯ ಪೆಟ್ಟಿನಿಂ ಯೈಶಂಪಾಯನ ಕೊಳದ ತಡಿಯೊಳು ತೊಡೆಯೊಡೆದು ಪಟ್ಟಿಹನ್.

೧ನೆ ಮರುಳು — ಅಂತಾಗಲೆ ಬೇಕು ಆ ದುರುಳಂಗೆ!

೨ನೆ ಮರುಳು — ವಿಧಿವಿಳಸನದಿಂ ಅಂತಾದುದು; ಇಲ್ಲದಿರೆ ಭೀಮಂಗದುವೆ ಪಾಡಾಗುತ್ತಿತ್ತು. ನಾನಲ್ಲಿಯೆ ನಿಂತು ನೋಡಿದೆನು ಅವರ ಗದಾಯುದ್ಧಮಂ. — ಕೌರವನು ಸೋತು ಸೋತವನಲ್ಲ; ಭೀಮನು ಗೆದ್ದು ಗೆದ್ದವನಲ್ಲ.

೧ನೆ ಮರುಳು (ದೂರ ನೋಡಿ) ಅಕ್ಕ, ಇದೇನ್ ಮಾನವರ ಮರುಳಾಟಂ ಎಮ್ಮ ಮರುಳ್ತನಮುಮಂ ಗೆಲುವಂತಿರ್ಪುದು!

೨ನೆ ಮರುಳು — ನಿಶ್ಚಯಂ; ನಮಗೆ ಒಂದಿನಿತು ನಿಲಲುಂ ಎಡೆಯಿಲ್ಲ. ಮಾನವರ ಮಂದೆಯೇ ಮಸಣಮಂ ಮುತ್ತಿಹುದು.

೧ನೆ ಮರುಳು — ಎಮ್ಮ ಇರುಳಲೆತಮಂ ತಾಮೆ ಪಡೆದು ನಕ್ತಂಚರಿಗಳಾದಮ್ತೆ ತೋರುವುದು.

೨ನೆ ಮರುಳು — ಈ ಎಡೆಯೊಳಾರುಂ ತೋರ್ಪುದಿಲ್ಲ. ಇಲ್ಲಿನಿತು ನಿಂತು ಬಳಲ್ಕೆಗಳೆದು ಮುಂತೆರಳುವಂ. — ತಂಗೆ, ಏಂ ಭಯಂಕರಂ ಈ ಕುರುಕ್ಷೇತ್ರ ಸಂಗ್ರಾಮರಂಗಂ? ಮರುಳ್ಗಂ ಮರುಳ್ವಿಡಿದು ಪೋಪಂತೆ ಕೊಲೆ ಕಳೆಯೇರಿರ್ಪುದು.

೧ನೆ ಮರುಳು — ಪಿಂತಣ್ಗೆ ಮತ್ತಾವ ಕಾಳೆಗದೊಳುಂ ಇಂತಪ್ಪ ಬೀರಮುಂ ಇಂತಪ್ಪ ಕೊಲೆಯುಮಂ ನಾನ್ ಪಾರ್ದರಿಯೆನ್.

೨ನೆ ಮರುಳು — ಏನ್ ಮಚ್ಚರವೊ? ಏನ್ ಕಾಳೆಗದ ಪುರ್ಚೊ ಈ ಕೀಳ್ಮಾನಿಸರ್ಗೆ! ಇವರನಾನುಂ ಪೇಸುವೆನ್!

೧ನೆ ಮರುಳು (ಭಯದಿಂದ ) ಅಕ್ಕ, ಅತ್ತ ನೋಡಲ್ಲಿ!

೨ನೆ ಮರುಳು — ಮರುಳೊ? ಮಾನವಳೊ?

೧ನೆ ಮರುಳು — ಮರುಳಲ್ತು. ಮರುಳು ಇಂತಗುರ್ವುವಡೆದು ತೋರ್ಪುದಿಲ್ಲಾವಗಂ! ಆವಳೊ ನರೆದಲೆಯ ಮುದಿಯಳಲ್ತೆ?

೨ನೆ ಮರುಳು — ತಂಗೆ, ಕೆದರಿರ್ಪ ನರೆನೆವಿರಿನಿಂದೇನ್ ರೌದ್ರಮಾಗಿಹಳ್? ಪೆಣಗಳ ನಡುನಡುವೆ ಅದೇನನ್ ಬಾಗಿ ಬಾಗಿ ಅರಸುತಿಹಳ್?

೧ನೆ ಮರುಳು — ತನ್ನಣುಗನನ್ ಪುಡುಕುತಿರ್ಪಂತೆ ತೋರ್ದಪುದು. ಅಗೊ, ಪಾವನಮಪ್ಪ ತಾಯ ಒಲ್ಮೆವೆಳಗು ಪರಿವೇಷದಂತೆ ಆಕೆಯನ್ ಬಳಸಿ ಪೆಣದಿನಿಗಳಂ ಪೊಯ್ದೋಡಿ ಸುತ್ತಿಹುದು! ಇತ್ತಣ್ಗೆ ಬಳಿಸಾರಿ ಬರ್ಪಳ್! ಬಾರಕ್ಕಾ, ಮರೆಯಾಗುವಂ!

(ಮರುಳುಗಳು ಮಾಯಾವಾಗುತ್ತವೆ. ಹಣ್ಣು ಹಣ್ಣು ಮುದುಕಿಯೊಬ್ಬಳು ತನ್ನ ಮಗನನ್ನು ಹುಡುಕುತ್ತ ದೊಣ್ಣೆಯೂರಿಕೊಂಡು ಮೆಲ್ಲನೆ ಬರುತ್ತಾಳೆ. ಅಕೆಯ ಮಗನು ಕೌರವ ಪಕ್ಷದಲ್ಲಿ ನಿಂತು ಹೊಡೆದಾಡಿ ಮಡಿದ ಕಾಲಾಳುಗಳಲ್ಲಿ ಒಬ್ಬನು . ಬಂದ ಮುದುಕಿ ನಿಂತು ಸುತ್ತಲೂ ನೋಡಿ ನಿಡುಸುಯ್ದು ನಿರ್ವಿಣ್ಣ ಭಾವವನ್ನು ಪ್ರದರ್ಶಿಸುತ್ತಾಳೆ. ಆಕೆಯ ಮಾತುಗಳು ಆಯಾಸದಿಂದ ಅಸ್ಪಷ್ಟ. ನಡುನಡುವೆಅಯ್ಯೋ, ಉಸ್ಎಂಬ ಪದಗಳಿಂದ ವಿಶ್ರಾಂತಿ ತೆಗೆದುಕೊಳ್ಳುತ್ತಾಳೆ.)

ಮುದುಕಿ — ತೊಳಲಿದನಿತುಂ ಬಿತ್ತರಿಸುತಿಹುದಲ್ಲಾ ಈ ಪಾಳು ಪೆರ್ಮಸಣಂ! ಮುದಿತನಂ ಬರೆವರೆ ಜವ್ವನದ ಕಿರಿಯ ತಿರೆ ಬಿತ್ತರಮಾಗಿ ಪಿರಿ ದಪ್ಪುದೆ ಸಾಜಂ! ಅಯ್ಯೋ, ಎನ್ನ ಮಗನೆತ್ತ ಪೋದನೋ ಎಲ್ಲಿಹನೋ ಕಾಣೆನಲ್ಲಾ.  ತೊಳಲಿ ತೊಳಲಿ ಬಾಗಿ  ಬಾಗಿ ಹೆಣಗಳು ನೋಡಿ ನೋಡಿ ಎನ್ನ ನಡು ಬೇನೆಯಿಂ ಸಿಡಿಯುತಿದೆ. (ಸೊಂಟದ ಮೇಲೆ ಕೈಯಿಟ್ಟು ಬೇನೆಯನ್ನು ಮುಖಭಂಗಿಯಿಂದ ಪ್ರದರ್ಶಿಸುತ್ತಾಳೆ.)  ಕರೆದು ಕರೆದು  ಕೂಗಿಕೂಗಿ ಎನ್ನ ಕೊರಲು ಒಣಗಿಹುದು. (ನಿಟ್ಟುಸಿರೆಳೆದು ಕುಳಿತುಕೊಂಡು ಶ್ಮಶಾನದ ವಿಸ್ತಾರವನ್ನೆಲ್ಲಾ ದೃಷ್ಟಿಸಿಉಸ್ಎನ್ನುತ್ತಾಳೆ.)  ಇದೇನು ಕೊಲೆಯಾಟಮೋ ಇಳೆಯ ಎನ್ನ ಕಂದರಿಗೆ ನಾನರಿಯೆನ್! (ತಲೆಯ ಮೇಲೆ ಕೈ ಹೊತ್ತುಕೊಂಡು ದೀರ್ಘವಾಗಿ ಆಲೋಚಿಸುತ್ತಾಳೆ.)  ಅಯ್ಯೋ ಮಗೂ! ನಿಚ್ಚಮುಂ ಬೈಗುವೊಳ್ತಿನಲಿ ಗುಡಿಸಲ್ಗೆ ಬಂದು ನಾನಿತ್ತ ಕೈತುತ್ತುಗಳಂ ಮೆಲ್ಲುತ್ತ ಅಂದಂದಿನ ರಣವಾರ್ತೆಯಂ ಪೇಳುತಿರ್ದುವನ್ ಇಂದೇತಕೆ ತಳುವಿದೆಯೊ? ನಿನಗೋಸುಗಂ ನಲ್ಲುಣಿಸಂ ಸಮೆದು ನೀನೈತರ್ಪ ಬಟ್ಟೆಯನೆ ನಿಟ್ಟಿಸುತ ಬಾಗಿಲೊಳೆ ಕುಳಿತು ಕಾದೆನ್. ಈಗಳೈತರ್ಪನ್ ಆಗಳೈತರ್ಪನ ಇನ್ನೇನೈತರ್ಪನ್ ಎಂದು ಹಾರೈಸುತಿರೆ ನೇಸರನ್ನೆಗಂ ಪಡುವಣ ಬಾನ್ದೆದೆಯೊಳು ಬೈಗುಗೆಂಪಂ ಚೆಲ್ಲಿ ಒಯ್ಯನೆ ಮುಳುಗಿದುದು. ಕಳ್ತಲೆಯ ಮರ್ಬು ತಿರೆಯೊಳುಂ ಮೇಣೆನ್ನೆರ್ದೆಯೊಳುಂ ಒರ್ಮೆಯೆ ಪರ್ಬಿದುದು. — ಅಯ್ಯೋ ಇನ್ನೇನನ್ ಮಾಳ್ಪೆನ್? ಇನ್ನೆತ್ತಣ್ಗೆಪೋದಪೆನ್? (ಕರೆಯುತ್ತಾಳೆ.)  ಓ ಎನ್ನ ಕಂದಾ, ನಾರಾಯಣಾ! ನೀನೆಲ್ಲಿರ್ಪಯ್! ಬಳಿಗೆ ಬಾರಯ್! ನಿನ್ನಜ್ಜಿಯನ್ ಸಂತವಿಡಯ್! ಎನಗಿನ್ನಾರಿರರ್ಪರ್? ಎನಗೆ ನೀನೆ ಕಣ್! ನೀನೆ ಬಾಯ್! ನೀನೆ ಎರ್ದೆ! ನೀನೆ ಜೀವಂ! (ರೋದಿಸುತ್ತಾಳೆ.) ಕಂದಾ, ನಾರಾಯಣಾ! ನಾರಾಯಣಾ!

(ಕೃಷ್ಣನು ತನ್ನ ಭಕ್ತಶ್ರೇಷ್ಠನಾದ ವಿದುರನೊಡಗೂಡಿ ಅಲ್ಲಿಗೆ ಬರುತ್ತಾನೆ. ರಾತ್ರಿ ಆತನು ತೆರಪಿಲ್ಲದೆ ಕುರುಕ್ಷೇತ್ರ ಶ್ಮಶಾನದಲ್ಲಿ ಸಂಚರಿಸಿ ಸಾಯುವವರಿಗೆ ಮುಕ್ತಿಯನೀಡಾಡುವ ಮಹಾಕಾರ್ಯದಲ್ಲಿ ತೊಡಗಿದ್ದಾನೆ. ಮುದುಕಿ ಅಲ್ಲಿಗೆ ಬಂದ ಮಾರುವೇಷದ ಕೃಷ್ಣನನ್ನು ನೋಡಿ ಕೇಳುತ್ತಾಳೆ.)

ಮುದುಕಿ — ಅಪ್ಪಾ ಮಕ್ಕಳಿರಾ, ಎನ್ನ ನಾರಾಯಣನ್ ಎಲ್ಲಿರ್ಪನೆಂದು ತೋರ್ಪಿರಾ

ಕೃಷ್ಣ (ಮೃದು ಮಧುರ ಧ್ವನಿಯಿಂದ) ನಿನ್ನ ನಾರಾಯಣನ್ ಆರ್, ಅಜ್ಜಿ?

ಮುದುಕಿ — ನನ್ನ ನಾರಾಯಣನನ್ ಅರಿಯದವನ್ ನೀನೆಂತಹ ಕಿರಿಯವನೊ! ನಮ್ಮವರೊಳಂ ಮೇಣರಿಗಳೊಳಂ ನನ್ನ ನಾರಾಯಣನ ಬಲ್ಮೆಯಂ ತಿಳಿಯದರೊಳರೇ?

ಕೃಷ್ಣ (ಸ್ವಲ್ಪ ಆಲೋಚಿಸಿದವನಂತೆ ನಟಿಸಿ)  ಬಲ್ಲೆನ್, ತಾಯೆ, ಬಲ್ಲೆನ್. ಮನ್ನಿಸು ತಪ್ಪನ್. ನಿನ್ನ ನಾರಾಯಣನ್ ಈ ದಿಕ್ಕಿನೊಳೆ ಮಲಗಿಹನ್. ಪೋಗಿ ಕಾಣ್, ಅಜ್ಜಿ!

ಮುದುಕಿ (ಆಶ್ಚರ್ಯದಿಂದ ) ಮಲಗಿಹನ್? ಏಕೆ ಮಲಗಿಹನ್?

ಕೃಷ್ಣ — ಏತಕೊ, ತಾಯೆ, ಆನರಿಯೆನ್. ಆನ್ ಬರ್ಪ ವೇಳೆಯೊಳ್ ನಿನ್ನನೇ ಕೂಗುತಿರ್ದನ್.

ಮುದುಕಿ (ಕೃಷ್ಣನ ಕಡೆಗೆ ಕೈನೀಡಿ) ಮಗೂ, ಬಾ ಇಲ್ಲಿ. ಎನ್ನನ್ ಮೇಗತ್ತಿ ನಿಲ್ಲಿಸು. (ಕೃಷ್ಣನು ಆದರದಿಂದ ಎತ್ತಿ ನಿಲ್ಲಿಸುತ್ತಾನೆ. ) ಏನಪ್ಪಾ ನಿನ್ನ ಕೈಗುಣಂ! ಎನ್ನ ಬಳಲ್ಕೆಯನಿತುಮಂ ದೂರ ಮಾಗಿ ಮೆಯ್ಗಿನಿತು ಬಲ್ಮೆ ಮೈದೋರಿಹುದು!

ಕೃಷ್ಣ (ಮುಗುಳ್ನಗೆಯಿಂದ)  ಜವ್ವನದ ಸಾನ್ನಿಧ್ಯಮೆ ಜವ್ವನಮಂ ತಂದಪ್ಪುದು, ಅಜ್ಜಿ.

ಮುದುಕಿ — ಮಗೂ, ನಿನಗೊಳ್ಳಿತಕ್ಕೆ! (ತೆರಳುತ್ತಾಳೆ.)

ವಿದುರ — ವಾಸುದೇವ, ಏನ್ ಲೀಲೆ? ಏನ್ ಮಾಯೆಯಿದು ನಿನತು? ಮುಕ್ತಿಗೆ ಮಹಾದ್ವಾರಮಾಗಿರ್ಪುದೀ ಪೊಳ್ತು
ಈ ಕುರುಕ್ಷೇತ್ರ್ ಶ್ಮಶಾನಂ!

ಕೃಷ್ಣ — ವಿದುರ, ಇಂದೆನಗೆ
ಬಿಡುವಿಲ್ಲ. ಆಲಿಸು! ಮೃತ್ಯುಮುಖರಾದವರ್
ತಿಳಿಯದೆಯೊ ಮೇಣ್ ತಿಳಿದೊ ಕರೆಯುತಿರ್ಪರೆನ್ನನ್.
ಆರಾದೊಡಂ ಆವ ನೆವದಿನಾದೊಡಂ ಎನ್ನ
ಗಣನೆಯಿಲ್ಲದ ನಾಮಗಳೊಳೊಂದನಾದೊಡಂ
ಮರಣಕಾಲದೊಳುಸುರಿದರೆ ಎನ್ನನಿತ್ತಪೆನ್.
ಇಂದಾನ್ ಸಾವರೆಲ್ಲರ ಬಳಿಯೊಳಂ ಇರ್ದು
ಪಕ್ಷಪಾತಂ ಗೈಯದೆಯೆ ಭವದ ಬಂಧನವ
ತುಂಡರಿಸಿ, ಬಿಕ್ಕುವೆನ್ ಬಿಡುಗಡೆಯ ಹಬ್ಬಮನ್!

ವಿದುರ — ದೀನ ಸಂರಕ್ಷಕನೆ, ದುರ್ಜನರ್ ಸಜ್ಜನರ್
ಎಂಬ ತರತಮ ಭಾವಮಿಲ್ಲದೆಯೆ ಎಲ್ಲರ್ಗೆ
ಪದವಿಯೊಂದನೆ ಕೊಟ್ಟು ಪೊರವೆಯೇನ್?

ಕೃಷ್ಣ — ಭಕ್ತವರ, ಕೇಳ್: ಸನ್ನಿವೇಶಂ ದೊರೆಯೆ
ದುರ್ಮಾರ್ಗದೊಳ್ ಕಾಲಿಡಲರಿಯದ ಸಜ್ಜನರ್
ಈ ಲೋಕದಲ್ಲಿಲ್ಲ; ಮೇಣ್ ಸನ್ಮಾರ್ಗದೊಳ್
ಬೀಳಲಾರದ ದುರ್ಜನರ್ ಸೃಷ್ಟಿಯೊಳಗಿಲ್ಲ.
ದೇಶಕಾಲಗಳಿಂದೆ ಬದ್ಧವಾಗಿಹ ನೀತಿ
ಎರಡುಮಂ ಮೀರಿರ್ಪ ಮುಕ್ತಿಗೇನ್ ಹೋಣೆಯಹುದೆ?
ಅಂತರಂಗದ ಮೂಲತತ್ವಮನರಿಯದಿಹ
ಕುಬ್ಬದೃಷ್ಟಿಯ ನರರ್ ತೆಗಳುವರ್, ನೂಂಕುವರ್
ಎಂದಾನ್, ಎಲ್ಲಮಂ ತಿಳಿದಾನುಂ ಅಂತೆಸಗೆ
ನನ್ನಿಗೇ ಕುಂದಹುದು. ಎನಗೆ ದ್ವೇಷಿಗಳಿಲ್ಲ;
ಪ್ರಿಯರುಮಿಲ್ಲ; ಎನ್ನ ದಿಟ್ಟಿಗೆ ಎಲ್ಲರೊಂದೇ!

ವಿದುರ — ಪರಮ ಕರುಣಾಕರ,
ವೇದಗಳ್, ಶಾಸ್ತ್ರಗಳ್, ಆಗಮ ಪುರಾಣಗಳ್
ಸಜ್ಜನತೆ, ದುರ್ಜನತೆ, ಧರ್ಮಂ, ಅಧರ್ಮಂ,
ನೀತಿ, ಅನೀತಿ, ಪಾಪಪುಣ್ಯಗಳೆಂಬ,
ಸ್ವರ್ಗ ನರಕಗಳೆಂಬ ತಾರತಮ್ಯವನೊರೆದು
ವಿಧಿನಿಷೇಧಂಗಳಂ ಬೊಧಿಸಿರ್ಪವದೇಕೆ?

ಕೃಷ್ಣ (ಗಗನವನ್ನು ನೋಡಿ ಸ್ವಲ್ಪ ಹೊತ್ತು ಸುಮ್ಮನಿದ್ದು)
ಭಕ್ತಿಯೋಗಿಯೆ, ವಿದುರ, ವೇದಶಾಸ್ತ್ರಗಳೆಲ್ಲ
ಎನ್ನೊಂದಂಶದ ವಾಣಿ; ಪೂರ್ಣವಾಣಿಯಲ್ಯು.
ವೇದಗಳಿಂತಲುಂ, ಶಾಸ್ತ್ರಗಳಿಗಿಂತಲುಂ,
ಯೋಗಿ ಮುನಿಗಳಿಗಿಂತಲುಂ ಪಿರಿದು ಎನ್ನದೆಯ
ಬಿತ್ತರಂ. ವೇದಂಗಳೆಡೆಗುಡದ, ಶಾಸ್ತ್ರಗಳ್
ಬಳಿ ಸೇರಿಸಿದ, ಸಿದ್ಧಯೋಗಿಗಳ್ ಕೊಳ್ಳದಾ
ಪಾಪಿಗಳಿಗೆನ್ನೆರ್ದೆಯೊಳೆಡೆಯಿಹುದು; ಸೊಗಮಿಹುದು.
ಎನಗೆ ಬೇಡದವರಾರಿಲ್ಲ; ತಾವಿಹುದು
ಎನ್ನೊಡಲೊಳೆಲ್ಲರ್ಗೆ. ರಹಸ್ಯಮಿದನಾಲಿಸಯ್:
ಎನ್ನೊಳ್ ನಿಷೇಧವೆಂಬುದೆ ಇಲ್ಲ; ನೀತಿಯುಂ,
ಸತ್ಯಮುಂ, ಧರ್ಮಮುಂ ಮೆಯ್ಯೊಡವೆಗಳೆನಗೆ;
ಎನ್ನಂ ಬಿಗಿವ ಶೃಂಖಲೆಗಳೆಲ್ಲ. ಭಕ್ತವರ,
ಆನ್ ಬರಿಯ ತತ್ವಗಳ ಗುಂಪಲ್ಲ; ಮೇಣಾನ್
ಬರಿಯ ವ್ಯಕ್ತಿಯುಮಲ್ಲ: ರಸಪೂರ್ಣಮಾಗಿರ್ಪ
ಜಗದಾದಿ ಚೈತನ್ಯ ವ್ಯಕ್ತಿತ್ವಮೆಂದರಿ!
ಕ್ಷುದ್ರಮಹ ನಿಯಮಗಳಿಗಿಂತಲುಂ ದೊಡ್ಡವನ್;
ಶುಷ್ಕಮಹ ತತ್ವಗಳಿಗಿಂತಲುಂ ರಸಮಯನ್;
ನರೆತಿರ್ಪ ನೀರಿಗಿಂತಲುಮಾನ್ ಮೊದಲವನ್!
ನಾಟಕದ ರಂಗದಲಿ ರಾಜಮಂತ್ರಿಗಳೆಂಬ,
ಸೈನಿಕರ್ ಸೇನಾನಿ ಪ್ರಜೆಗಳೆಂದೆಂಬ,
ಸಜ್ಜನರ್ ದುರ್ಜನರ್ ಪಾಪಿಗಳೆಂದೆಂಬ
ಭೇದಮಂ ಲೀಲೆಗೋಸುಗಮಾಗಿ ನಾನುಲಿವೆನ್.
ಲೀಲೆ ಮುಗಿಯಲ್ಕೆಲ್ಲರೊಂದಾಗಿ ಪೋದಪರ್!
ನಾಟಕದ ಕಳ್ಳನನ್ ಪಿಡಿದು ಸೆರೆಮನೆಗುಯ್ಯೆ
ಏನಾಟಮಾದಪುದು! (ದೂರಭಗವನ್ ವಾಸುದೇವ‘ ‘
ಎಂಬ ಸದ್ದಾಗುವುದು.) ಕೇಳದೋ, ಭಕ್ತವರ!
ಚಿತ್ರಸ್ವಪ್ನವನೊಡೆಯುವಂ ಬಾ, ಪೋಗುವಂ.

(ಕೃಷ್ಣನು ಗಂಭೀರವಾಗಿ ತೆರಳುತ್ತಾನೆ. ಹಿಂದೆ ವಿದುರನು ಅಂತರ್ಮುಖಿಯಾಗಿ ಅನೈಚ್ಛಿಕವಾಗಿಯೆ ಹೋಗುತ್ತಾನೆ.) f�Mmo@��ytheme-font:minor-fareast; mso-ansi-language:EN-US;mso-fareast-language:EN-US;mso-bidi-language:KN’> ಕೌರವರು ಜೊತೆಯಾಗಿ
ಲೀಲೆಯಲಿ ಬಳೆಯುತಿರೆ ಭೀಮ ದುರ್ಯೋಧನರ
ಮುನಿಸಿನಾ ತಾಮಸಿಕೆ ಮಿಗಿಲಾಯ್ತು. ಪಾಂಡವರು
ಕೌರವರು ಚಾಪಾಗಮಚಾರ್ಯ ದ್ರೋಣನಲಿ
ಶಸ್ತ್ರಶಾಸ್ತ್ರಾಭ್ಯಾಸವನು ಮಾಡುತಿಹರೀಗ.
ಕುಂತಿದೇವಿಯ ಹಿರಿಯಮಗನಾದ ಕರ್ಣನು
ರಾಧೇಯನಾಗಿ ಪರುಶುರಾಮರ ಕೂಡಿ
ಬಿಲ್ವಿದ್ಯೆನು ಕಲಿಯುತಿಹನು. ನೋಡಲ್ಲಿ;
ಮುನಿವರ ಎಲೆವನೆಯ ಬಳಿಯ ಹೊರಬಯಲಿನಲಿ
ತಾಯಿ ಗಂಗೆಯು ಕೊಟ್ಟ ಬಿಲ್ಲನೆಂತೆತ್ತುವನು! ami8 �Uug@��yನಗೇಕಮ್ಮಾ ಹೆದರಿಕೆ?
(ರಾಧೆಯೂ ಸೂತನೂ ಒಬ್ಬರನ್ನೊಬ್ಬರು ನೋಡುವರು. ಕರ್ಣನು ಬಿಲ್ಲಿಗೆ ಅಂಬನ್ನು ಹೂಡಿ ಸೇದಿ ಎಳೆಯುವನು.)

 

ಸೂತ — ಸಾಕು! ಸಾಕು, ಮಗೂ ಹೆಚ್ಚು ಏಳೆಯಬೇಡ!
(ಕರ್ಣನು ಕಿವಿಯವರೆಗೂ ಎಳೆದು ಒಂದು ಬಾಣವನ್ನು ಬಿಡುತ್ತಾನೆ.)

ರಾಧೆ — ಅಯ್ಯೊ, ಅಲ್ಲಿ ನೋಡಿ! ಆ ಮರದ ದೊಡ್ಡ ಕೊಂಬೆ ಮುರಿದು ಬಿತ್ತು.

ಸೂತ (ಸಂತೋಷದಿಂದ ಕರ್ಣನನ್ನು ಅಪ್ಪಿಕೊಂಡು) ಕಂದಾ, ನೀನೆನ್ನ ಜೀವನದ ರತ್ನ!

ರಾಧೆ — ಅವನು ಬಿಲ್ಲು ವಿದ್ಯೆ ಕಲಿಯಲು ಹೋಗುತ್ತಾನಂತೆ.

ಸೂತ — ಅದಕ್ಕೆ ನನ್ನ ತಡೆಯೇನು? ಅವನು ಕಲಿಯದಿದ್ದರೆ ಇನ್ಯಾರು ಕಲಿಯುವರು?

ಕರ್ಣ (ಸಂತೋಷದಿಂದ)
ಅಪ್ಪಾ, ಈ ಬಿಲ್ಲು ಬತ್ತಳಿಕೆಗಳನ್ನೂ ತೆಗೆದುಕೊಂಡು ನಾಳೆಯೇ ಹರಡುವೆನು.

ಸೂತ — ಆಗಲಿ ಮಗೂ. ಮನೆಗೆ ಹೋಗಿ ಎಲ್ಲವನ್ನೂ ಆಲೋಚಿಸೋಣ.

(ಎಲ್ಲರೂ ಹೊರಡುವರು)

(ಪರದೆ ಬೀಳುವುದು.)