[ಮಸಣದೊಂದೆಡೆ. ಕೃಷ್ಣನೂ ವಿದುರನೂ ಮಾತಾಡುತ್ತಿದ್ದಾರೆ.]
ಕೃಷ್ಣ — ವಿದುರಾ, ಕೌರವೇಂದ್ರನನ್ ಕಂಡುಬಂದೆನ್. ಏನ್ ಪೌರುಷವಂತನಾತನ್! ಛಲದೊಳವಂಗೇಣೆಯನ್ ಕಾಣೆನ್.
ವಿದುರ — ಮಹಾಧೀರನ್! ಅಚಲ ಪ್ರತಿಜ್ಞನ್! (ದೂರ ನೋಡಿ) — ಅರಲ್ಲಿ ಇತ್ತಲೈತರು ತಿಹರ್?
ಕೃಷ್ಣ — (ನೋಡುತ್ತ) ಏನ್ ಚಿತ್ರಮಯಂ ಈ ಶ್ಮಶಾನಂ! — ಸಹದೇವ ನಾತನ್! — ಕುಂತಿಯಲ್ಲವೆ ಆಕೆ?
ವಿದುರ — ಅಹುದೆಂದೇ ತೋರ್ದಪುದು. ಏನನೋ ಪುಡುಕುತಿರ್ಪಂತೆ ತೋರ್ಪುದಲ್ತೆ?
ಕೃಷ್ಣ — ಕೂಸಂ ತೊಟ್ಟಿಲಿಂ ತೆಗೆದೊಗೆದ ತಾಯಿ, ಮಸಣದೊಳ್ ಕಾಣಲ್ಕೆ ಬಂದಿರ್ಪಳ್, ತನ್ನ ನಚ್ಚಿನ ಕುವರನನ್!
ವಿದುರ — (ಆಶ್ಚರ್ಯದಿಂದ) ನೀನ್ ಪೇಳ್ವುದೇನ್? ಆರನ್ ಕಾಣಲ್ಕೆ ಬಂದಿರ್ಪಳ್?
ಕೃಷ್ಣ — ಮತ್ತಾರನ್? ರಣಧೀರನ್ ದಾನಶೂರನ್ ಕರ್ಣನನ್!
ವಿದುರ — ಕರ್ಣನ್! ಕುಂತಿಯ ಪುತ್ರನ್ ! ಏನ್ ಮಾತಿದು, ಕೃಷ್ಣಾ?
ಕೃಷ್ಣ — ನೀನರಿದುದಿಲ್ಲ. ಮೇಲ್ಗತೆಯ ಎರ್ದೆಯೊಳೆನಿತು ಒಳಗತೆಗಳಾಡುತಿಹವೆಂಬುದನ್ ನೀನರಿದುದಿಲ್ಲ; ಇತ್ತ ಬಾ, ಪೇಳ್ವೆನೆಲ್ಲಮನ್. ಆಲಿಸವರಾಡುತಿರ್ಪಾ ನುಡಿಗಳನ್.
ವಿದುರ — ಇಂದೇನ್ ಆಶ್ಚರ್ಯದ ಮೇಲಾಶ್ಚರ್ಯಂ!
ಕೃಷ್ಣ — ಇಂದೆಲ್ಲರ್ಗಂ ಪಸುಗೆಯ ಪೊಳ್ತು. ಬಾ, ಕೆಲಸಾರ್ವಂ.
(ವಿದುರನೂ ಕೃಷ್ಣನೂ ಮರೆಯಾಗುತ್ತಾರೆ. ಸಹದೇವನೂ ಕುಂತಿಯೂ ಹೆಣಗಳನ್ನು ಪರೀಕ್ಷಿಸುತ್ತ ಬರುತ್ತಾರೆ.)
ಸಹದೇವ — ಇತ್ತಲಿತ್ತಲ್, ತಾಯೆ.
ಕುಂತಿ — ಮಗೂ, ಎಂತಹ ಬಸಿರೆನ್ನದು? ಅಂದು ಸುಡುಗಾಡಂ ಬೆಸಲೆಯಾದೀ ಬಸಿರ್, ಇಂದು ಸೂಡಿನ ಬೆಂಕಿಯಿಂ ಬೇಗುದಿಗೊಳ್ಳುತಿಹುದಲ್ಲಾ!
ಸಹದೇವ — (ತಿಳಿದೂ ತಿಳಿಯದವನಂತೆ) ತಾಯೆ, ನೀವಾರನ್ ಇಂತುಟರಸುವಿರಿ? ಪೇಳಲೊಲ್ಲಿರೇನ್ ಎನಗಂ? ತಿಳುಪಿದೊಡಾತನನ್ ಬೇಗದಿಂ ತೋರಲೆಳಸುವೆನ್. ನೀವರಸುವನ್ ಪೆಸರಾಂತ ಬೀರನೊ? ಸಾಮಾನ್ಯ ಭಟನೊ?
ಕುಂತಿ — (ನಿಡುಸುಯ್ದು) ಪೆಸರಾಂತ ವೀರನ್ , ಕಂದಾ. ನೆಲದರಿಕೆಯ ಕಲಿಯಾತನ್! ಕೀರ್ತಿಕಾಂತಿಯಿಂ ಸೂರ್ಯದೇವನ್ ಮೀರಿಹ ನಾತನ್! ರಣದೊಳ್ ರೋಷಭೀಷಣ ಕಲ್ಕಿಯಂ ತೋರ್ದ ನಾತನ್! ದಾನಮಂ ಬಿಡುಗೈಯಿಂ ಬೀರಿದವ ನಾತನ್!
ಸಹದೇವ — ಆರದು? ದಾನಶೂರನ್ ಕರ್ಣನೇನ್?
ಕುಂತಿ — (ಬಿಕ್ಕಿ ಬಿಕ್ಕಿ ಅಳುತ್ತ) ಅಹುದು, ಮಗೂ, ಕರ್ಣನ್! ಆ ಎನ್ನ ಕೌಮಾರ ಪ್ರಣಯದಿಂದೊಗೆತಂದ ಎನ್ನ ಕಣ್ಮಣಿ ಕರ್ಣನ್! ಪಿರಿಯ ಮಗನ್! ನಿಮಗೆಲ್ಲರ್ಗಂ ಪಿರಿಯನ್!
ಸಹದೇವ — (ಅಚ್ಚರಿಯಂ ನತಿಸಿ) ತಾಯೆ,ನೀಂ ಪೇಳ್ವುದಿದೇನ್? ನಿಮಗೆ ಮಗನೆಂತು ಕರ್ಣನ್?
ಕುಂತಿ — ಮಗೂ, ನೊಂದ ಬಸಿರಂ ಕೆಣಕದಿರ್! ಎನ್ನೊಡಲೊಳ್ ನರಕ ಮನೆಳ್ಚರಿಸದಿರ್! — ತೋರಯ್, ಕರ್ಣನನ್ ತೋರಯ್!
(ಸಹದೇವನು ಸ್ವಲ್ಪ ಮುಂದೆ ಹೋಗಿ ಕರ್ಣನ ದೇಹವನ್ನು ನೋಡಿ ಇನಿತಳುಕಿ ನಿಂತು ಕೈ ಬೆರಳಿನಿಂದ ತೋರಿಸುತ್ತಾನೆ. ಕುಂತಿ ಗೋಳಿಡುತ್ತ ಕಳಚಿಕೊಂಡು ಬೀಳುತ್ತಾಳೆ ಕರ್ಣನ ಶವದ ಮೇಲೆ.)
ಸಹದೇವ — ಏನ್ ಕರಾಳ ಲೀಲೆಯಿದು! (ತಲೆಗೊಡಹಿ ಧೀರವಾಗುತ್ತಾನೆ.)
ಕುಂತಿ — ಅಯ್ಯೊ, ಕಂದಯ್ಯ, ಏನಾಗಿ ಪೋಗಿರ್ಪಯ್!
ಹೆತ್ತು ಹೊಳೆಗಿತ್ತ ನಿನ್ನನ್
ಸತ್ತ ಸುಡುಗಾಡಿನೊಳ್ ಮತ್ತೆ ಮುದ್ದಿಪಂತಾಯ್ತೆ?
ಕನ್ನೆತನದಾ ಲೀಲೆ ಕಣ್ಣನಿರಿವಂತಾಯ್ತೆ!
ನಿನ್ನನೀ ಪಾಡಿಗೀಡುಮಾಡಿದ ಪಾಪಿಯನ್
ಮನ್ನಿಸೈ — ಗುರುದೇವ, ಗುರುದೇವ,
ಓ ದೂರ್ವಾಸ,
ನೀನಿತ್ತ ವರಂ ಪೆತ್ತ ಪಣ್ಣನಿದನೀಕ್ಷೆಸಯ್!
ಕಣ್ತುಂಬಿ ಕಾಣಯ್
ನಿನ್ನ ಕಿಡಿಯುರುಪಿ ಮಸಣಂಗೈದ ತೋಂಟಮನ್!
ಭಾರತಮನಿಂತು ಮಸಣಮಂ ಮಾಡಲೆಂದೇ
ನಿನ್ನನ್ ನಾನ್ ಪೆತ್ತೆನಲ್ತೆ?
ಓ ಎನ್ನೆದೆಯ ಮಗುವೇ,
ಓ ಎನ್ನ ಬಯಕೆಗಿಡಿಯೇ,
ಮರಳಿ ನೀನೆನ್ನ್ ಬಸಿರಿಂ ಬಾರೆಯಾ? ಪೇಳೈ! —
ಓ ಕಂದಾ, ನಿನ್ನ ಮಿತ್ರನ್ ಕೌರವೇಂದ್ರನಲ್ತು
ನಾನೆ ಕಾರಣಮಲ್ತೆ ಈ ಮಾರಿಯೌತಣಕೆ,
ಈ ಕುರುಕ್ಷೇತ್ರಸಮರದೀ ಮಾರೀಯೌತಣಕೆ?
ಓ ಗಂಗಾಮಾತೆ, ನಿರ್ಮಲಾಂತಃಕರಣೆ,
ನಾನಂದು ನಿನಗೆ ಕೈಯೆಡೆಯಿತ್ತ ಕಂದನನ್
ಇಂದು ಬಾರಾ, ನೋಡಾ, ಇಲ್ಲಿ ಏನಾಗಿರ್ಪನ್!
ಪಾಪಿಷ್ಠೆ ಪೆತ್ತೀತನಂ ಅಂದು ನೀನ್ ಪೊರೆದೆ;
ನೀನಿಂದುಂ ಪೊರೆಯಲಾರೆಯಾ, ಓ ಪುಣ್ಯಮಯಿ! —
ಮಗೂ , ಮಗೂ, ನಾಂ ಗೈದ ಮೊದಲ ತಪ್ಪಿಗೆ ಬಿದಿ
ನಿನ್ನನೇತರ್ಕೆ ಬೇಳ್ದುದಿಂತು?
ಎನ್ನ ಪಾಪಕೆ ನಿನ್ನ ಜೀವನಂ ಬಲಿಯಾಯ್ತೆ?
ಅರಸುಗಳ ಬಳಿಯೊಳೆ ಬಂದ ನಿನ್ನನ್ ನಾನ್
ಸೂತಕುಲದೊಳ್ ತಿರುಗುವಂತೆಸಗಿದೆನ್;
ಮನ್ನಿಸಯ್; ಅಪರಾಧಮಂ ಮನ್ನಿಸಯ್! —
ಓ ಕಂದಾ, ನೀನಂದು ಹಸ್ತಿನಾವತಿಯೊಳ್,
ಪಾಂಡವರ್ ಕೌರವರ್ ಬಿಲ್ಬಿಜ್ಜೆಯಂ ಮೆರೆವ
ಪೊಳ್ತಿನೊಳ್ ನಿನ್ನ ಕೈಚಳಕಮಂ ತೋರಲೆಂದು
ರಂಗಕೈತಂದಾಗಳ್ ನಾಂ ನೋಡುತ್ತೆ ಹಿಗ್ಗಿದೆನ್;
ಎನ್ನ ತಪ್ಪನ್ ನೆನೆದು ನಡುಗಿದೆನ್!
ನೆರೆದ ಬೀರರ್ ನಿನ್ನನ್ ಸೂತಕುಲದವನೆಂದು
ತೆಗಳೆ, ನೀನ್ ಮೊಗಮನಿಳಿಕೆಗೈದಯ್!
ನಾನದನ್ ಕಂಡೊಡನೆ ಮುಚ್ಚೆವೋದೆನ್.
ಅಗಳಾದೊಡಮಾನ್ ನನ್ನಿಯಂ ಪೊರಗೆಡಪಿ
ಮರಳಿ ನಿನ್ನನ್ ಪಡೆಯಬಹುದಿತ್ತು. ಆದೊಡಂ,
ಜನಪದದಪವಾದಂ ಬರ್ಕುಂ ಎಂಬ ಪುಸಿನಾಣಿ
ಎರ್ದೆಯೊಳುರ್ಕಿದ ಮಗುವಿನಳ್ಕರಂ ಮಳ್ಗಿಸಿದೆನ್!
ಆಳಿಸಿದೆನ್! ಅಯ್ಯೋ ನಿನ್ನ ಬಾಳನಳಿಸಿದೆನ್!
ಓ ಕೃಷ್ಣಾ, ನಿನ್ನ ನುಡಿಯನ್ ಕೇಳ್ದು ಕೆಟ್ಟೆನ್!
ನನ್ನ ಮಗುವನ್ ನಾನೆ ಸುಲಿದು ಕೊಂದೆನಲ್ತೆ!
ಅಯ್ಯೋ ನಿನ್ನಾಣತಿಯನೆಸಗಲೆಂದುಜ್ಜುಗಿಸಿ
“ತೊಟ್ಟ ಸರಳನ್ ಮರಳಿ ತೊಡದಿರ್” ಎಂದು
ಸೂರುಳಂ ಗೈವಂತೆ ಮಾಡಿದೆನ್!
ನನ್ನ ಮಗುವನ್ ನಾನೆ ಮಿಳ್ತುವಿಗೀಡುಮಾಡಿದೆನ್!
ಓ ಬಿದಿಯೆ, ಸುಡು ಎನ್ನ ತಾಯ್ತನಮಂ!
ಮಗನೇ, ಅರಿತದಬಲೆಯನೆಲ್ಲರುಂ ಇಂತು
ವಂಚಿಸಿದರಲ್ತೆ? ನಿನ್ನನ್ ಕೊಂದರಲ್ತೆ?
ನೀನುಂ ಇಂತೆನ್ನಂ ವಂಚಿಸಿ ಎತ್ತ ಪೋದಯ್?
ಓ ಪಾರ್ಥ, ಹೆತ್ತವಳ ಕಣ್ಣನಿಂತಿರಿವರೇನ್?
ಓ ಕಂದಾ! ಓ ಕರ್ಣಾ! ಅಯ್ಯೋ!
(ದೃಶ್ಯ ಬದಲಾಯಿಸುತ್ತದೆ.)t/ �Te1@��yt-family:”Times New Roman”,”serif”‘>, ಏನೂರುಭಂಗಂ; ಏನಪಮಾನಂ!
ಸಂಜಯ — ಧೃತರಾಷ್ಟ್ರ, ನೋಡೀ ಎಡೆಯೊಳೆ ಪೊರಳ್ದು ನೋಯುತಿರ್ಪನ್ ಕುರುಕುಲ ಸಾರ್ವಭೌಮನ್.
ಧೃತರಾಷ್ಟ್ರ — ಅಪ್ಪಾ, ಮಗೂ, ಎಲ್ಲಿರ್ಪಯ್?
ಗಾಂಧಾರಿ — ಅಯ್ಯೋ ಮಗೂ!
ಭಾನುಮತಿ — ಅಯ್ಯೋ! ಅಯ್ಯೋ!
(ಎಲ್ಲರೂ ಕೌರವನಮೇಲೆ ಬಿದ್ದು ಗೋಳಾಡುತ್ತರೆ . ಆ ಭಯಂಕರವಾದ ಶ್ಮಶಾನ ಮೌನದಲ್ಲಿ ಆ ರೋದನಧ್ವನಿ ಕಡಲ ಮೊರೆಯಾಗಿ ಹಬ್ಬುತ್ತದೆ.)
Leave A Comment