[ಮುದುಕಿ ಮಗನನ್ನು ಎಲ್ಲಿಯೂ ಕಾಣದೆ ಬಳಲಿ ಬರ್ತ್ತಾಳೆ.]

ಮುದುಕಿ — ಇದೇನ್ ಮಾರಿಯಾಟಂ? ಇನಿತು ಜನಂ ತಿರುಗುತಿರ್ಪ ಈ ಕತ್ತಲೆಯ ಬಯಲಿನೊಳ್ ನನ್ನನ್ ಕೇಳ್ವರೆ ಇಲ್ಲ. ಎಲ್ಲರುಂ ಪುಡುಕು ತಿರ್ಪರೆ ಪೊರೆತು, ತೋರ್ಪರನ್ ಕಾಣೆನ್. ಓ ನಾರಾಯಣಾ, ಎಲ್ಲಿರುವಯ್? ನುಡಿಯಯ್ — ಮಕ್ಕಳಿಲ್ಲದ ಮುದುಕರನ್ ಕೇಳ್ವರಾರ್? ಮಗೂ, ನೀನ್ ನನ್ನೊಡನಿರಲ್ ಎಲ್ಲರ್ಗಂ ನಾನ್ ನಚ್ಚಿನವಳಾಗಿರ್ದೆನ್. ನೀನ್ ತುಳಿಲಾಳೆಂದು ತಿಳಿದು ದೊರೆಯ ಸೇನಾಧಿಕಾರಿ ಗಳುಂ ನನ್ನೆಡೆಗೆ ಬಂದು ನೂರಾರು ಸವಿನುಡಿಗಳಿಂ, ಕವಡಾಸೆಗಳಿಂ ಬೆನ್ನನ್ ತಟ್ಟಿ ಬೋಳೈಸಿ, ದೇಶಾಭಿಮಾನಂ ಸ್ವಾಮಿಭಕ್ತಿ ಧರ್ಮನಿಷ್ಠೆ ಕ್ಷಾತ್ರಧರ್ಮಂ ಮೊದಲಹ ಸಮಯಕ್ಕೊದಗುವ ಉಪಾಯವೇದಾಂತಮಂ ಪೇಳ್ದು ನಿನ್ನನ್ ಕೊಂಡೊಯ್ದರ್. ನಾನುಂ ಮಾತಿಗೆ ಮರುಳಾದೆನ್. ಈಗಳೆಲ್ಲಿ ಆ ತತ್ತ್ವಂಗಳುಂ, ಆ ಆಧಿಕಾರಿಗಳುಂ, ಆ ಭಕ್ತಿಧರ್ಮಾಭಿಮಾನಂ ಗಳುಂ? ಎಲ್ಲ ಬರುಪುಸಿಯಲ್ತೆ? ತಿಳಿಯದವರ್ಗೆ ತಿಳಿದವರೊಡ್ಡುವ ಬಲೆಯುರುಳ್ಗಣ್ಣಿಗಳಲ್ತೆ? ಅಂತುಂ ಶ್ರೀಮಂತರ ಕಲಹಾಗ್ನಿಗೆ ಯಜ್ಞಪಶುಗಳೆಮ್ಮಂತಹ ದರಿದ್ರರಲ್ತೆ?
(ಮುದುಕಿ ತಲೆಯ ಮೇಲೆ ಕೈಹೊತ್ತುಕೊಂಡು ಕುಳಿತು ಚಿಂತಿಸುತ್ತಾಳೆ. ಮಾತೆಯೂ ಕಂದನೂ ಪ್ರವೇಶಿಸುತ್ತಾರೆ.)

ಕಂದ — ಅಮ್ಮಾ, ನಾನಿನ್ನು ನಡೆಯಲಾರೆ!

ಮಾತೆ — ಬಾ ಮಗೂ, ಎತ್ತಿಕೊಳ್ವೆನ್. (ಎತ್ತಿಕೊಂಡು ಮುಂದೆ ನಡೆದು ಮುದುಕಿಯನ್ನು ಕಂಡು) ಯಾರಲ್ಲಿ? (ಹತ್ತಿರ ಹೋಗಿ ನೋಡಿ) ಅಜ್ಜೀ, ಇದೇಕೆಲ್ಲಿ ಕುಳಿತಿರುವೆ?

ಮುದುಕಿ (ತಲೆಯೆತ್ತಿ ನೋಡಿ) ತಾಯಿ,ನನ್ನ ಮಗು ನಾರಾಯಣನನ್ ಹುಡುಕಿ ಹುಡುಕಿ ಸೋತು ಸುಣ್ಣವಾದೆ. ಅಯ್ಯೋ ಎಲ್ಲಿರ್ಪನೋ ಏನೋ? ಪೇಳ್ವರಿಲ್ಲ, ಕೇಳ್ವರಿಲ್ಲ; ನನ್ನಗಿನ್ನೇನ್ ಗತಿ? ಪೇಳಮ್ಮಾ! ಕಡೆಗಾಲದೊಳ್ ಕಲ್ಲೆಡವಿದಂತಾಯ್ತು. (ಕೂಸನ್ನು ನೋಡಿ) ತಾಯಿ, ಈ ಮಗುವನೇಕೆ ಇಲ್ಲಿಗೆಳೆತಂದಿರುವೆ? ಈ ರಾತ್ರಿಯ ರುದ್ರ ಭೂಮಿಗೆ?

ಮಾತೆ — ಅಜ್ಜೀ, ಗುಡಿಸಲೊಳಾರುಮಿಲ್ಲ; ಇವನನ್ ಬಿಟ್ಟರೆನಗಿನ್ನಾರುಂ ಗತಿಯಿಲ್ಲ. ಕದನ ಕೈತಂದ ನನ್ನ ಪತಿಯನರಸಿ ಬಂದಿಹೆನು. — ಈ ಹೆಬ್ಬಯಲಿನ ಹೆಣದ ಬಣಬೆಯೊಳು ಕಾಣಸೆದೇನುಂ!

ಮುದುಕಿ — ನಿನ್ನ ಪತಿ ಆರ ಕಡೆಯವನ್?

ಮಾತೆ — ಪಾಂಡವರ ಪಕ್ಷದವನ್. — ನಿನ್ನ ಪುತ್ರನ್?

ಮುದುಕಿ — ಕೌರವನವನ್.

ಮಾತೆ — ನಿನ್ನ ಮಗನೆನ್ನ ಪತಿಗೆ ಪಗೆಯಾಗಿರ್ದನೇನ್?

ಮುದುಕಿ — ಆರಿಗಾರು ಪಗೆ? ನಿನಗಾನ್ ಪಗೆಯೆ?

ಮಾತೆ — ಉಂಟೇ?

ಮುದುಕಿ — ನಮ್ಮವೋಲಿಹ ಬಡಜನಂಗಳೆಲ್ಲ ಮಂಕುಗಳಮ್ಮಾ. ಪಾಂಡವರ್ ಕೌರವರ್ ನೆಲಕೆ ಪೊಯ್ದಾಡಿದರೆ ನಮ್ಮ ಮಕ್ಕಳ್ ಅವರಿವರಂ ಕೆಳೆಗೊಂಡು ನಿಂತು ಹೆಮ್ಮೆಗೆ ಬಡಿದಾಡಿ ಮಡಿಯುವರ್. — ನನ್ನ ಮಗುಗೆ ನಿನ್ನಾತನಮೇಲೆ ಪಗೆಯೇನ್? — ನಾವಿರ್ವರುಂ ದುಃಖಾರ್ತರಮ್ಮಾ! ಬಾ, ಹುಡುಕಿ ನೋಡುವಂ.

(ಇಬ್ಬರೂ ಹೆಣಗಳ ನಡುವೆ ಕತ್ತಲಲ್ಲಿ ಸ್ವಲ್ಪ ಸ್ವಲ್ಪ ದೂರದಲ್ಲಿಯೆ ತಿರುಗುತ್ತ ಹುಡುಕುತ್ತಾರೆ. ಒಂದೆಡೆ ಮಾತೆ ನಿಂತು ಚೀರಿ ಮಗುವನ್ನು ಕೆಳಗಿಳಿಸಿ ರೋದಿಸುತ್ತಾಳೆ. ಅಲ್ಲಿ ಇಬ್ಬರು ಭಟರು ಒಬ್ಬರನ್ನೊಬ್ಬರು ಭರ್ಜಿಗಳಿಂದ ತಿವಿದು ಮಡಿದಿದ್ದಾರೆ. ಒಬ್ಬನು ಮುದುಕಿಯ ಮಗನು . ಮತ್ತೊಬ್ಬನುಮಾತೆ ಪತಿ. ಮುದುಕಿ ರೋದನವನ್ನು ಆಲಿಸಿ ಓಡಿಬರುತ್ತಾಳೆ.)

ಮುದುಕಿ — ಏನಾಯ್ತು ಮಗಳೇ?

ಮಾತೆ — ಅಯ್ಯೋ, ಅಜ್ಜಿ, ನೋಡಿಲ್ಲಿ : ನನ್ನ ಪತಿಯನ್ ಈ ಪಾಪಿ ತಿವಿದು ಕೊಂದಿಹನ್. ಅಯ್ಯೋ

ಮುದುಕಿ — ಅಯ್ಯೋ, ಅಯ್ಯೋ, ನನ್ನ ಮಗನನ್ ನಿನ್ನ ಪತಿ ತಿವಿದು ಕೊಂದಿಹನಲ್ಲಮ್ಮಾ! — ಅಯ್ಯೋ,
ಪಾಂಡವರು ಹಾಳಾಗಲಿ!

ಮಾತೆ — ಅಯ್ಯೋ, ಕೌರವರು ಹಾಳಾಗಲಿ!
(ಇಬ್ಬರೂ ಬಿದ್ದು ಗೋಳಿಡುತ್ತಾರೆ.) r� +&oruX%�height:normal;mso-pagination: none;mso-layout-grid-align:none;text-autospace:none’>ಭೀಮ — ಈತನೀಗಳ್‌ ಎನಗೆ ಮೆಚ್ಚಿನ ಬೀರನ್‌!
ಬಾಳಿನೊಳ್‌ ಎಂತುಟೋ ಅಂತೆಯೇ ಸಾವಿನೊಳುಂ
ನೋವಿನೊಳುಂ ಎರ್ದೆಗಿಡದೆ ಪಗೆಯಂ ಸಾಧಿಪನೆ
ಸಹಜ ವೀರನ್‌! ಮಿಕ್ಕವರ್ ಕೃತ್ರಿಮದ ವೀರರ್!

 

(ದೃಶ್ಯ ಕಣ್ಮರೆಯಾಗುತ್ತದೆ.)