ಜನನ: ೫-೪-೧೯೪೧-ಗುಲ್ಬರ್ಗಾದಲ್ಲಿ

ಮನೆತನ: ಸಂಗೀತಾಸಕ್ತರ ಮನೆತನ.

ಗುರುಪರಂಪರೆ: ಹೈದರಾಬಾದಿನ ಅವಧೂತ ಬುವಾ ಹಾಗೂ ರಾಮಚಂದ್ರ ಜೋಶಿ ಅವರ ಬಳಿ ಸಂಗೀತ ಶಿಕ್ಷಣ ಹಿಂದೂಸ್ಥಾನಿ ಶೈಲಿಯಲ್ಲಿ ಸುಗಮ ಸಂಗೀತದಲ್ಲಿ ಸ್ವಾಧ್ಯಾಯಿ.

ಸಾಧನೆ: ೧೯೫೭ರಲ್ಲಿ ರಷ್ಯಾದ ಅಧ್ಯಕ್ಷ ಹಾಗೂ ಪ್ರಧಾನಿಗಳ ಮುಂದೆ ಮೊದಲ ಕಾರ್ಯಕ್ರಮ ಭಾರತೀಯ ರೆಡ್‌ಕ್ರಾಸ್, ಗಣೇಶೋತ್ಸವ, ರಾಮೋತ್ಸವ ರಾಜ್ಯೋತ್ಸವಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಅನೇಕ ಕನ್ನಡ ಚಲನಚಿತ್ರಗಳಿಗೆ ಹಿನ್ನೆಲೆ ಗಾಯಕಿಯಾಗಿ ಗೀತೆಗಳನ್ನು ಹಾಡಿದ್ದಾರೆ. ಹೆಚ್.ಎಂ.ವಿ.ಸಂಸ್ಥೆ ಇವರ ಗಾಯನಗಳ ಧ್ವನಿ ಮುದ್ರಿಕೆ.ಧ್ವನಿ ಸುರುಳಿಗಳನ್ನು ಹೊರ ತಂದಿದ್ದಾರೆ. ಭಾವಗೀತೆಗಳೆ ಅಲ್ಲದೆ ವಚನ ಗಾಯನದಲ್ಲೂ ಸಾಕಷ್ಟು ಪರಿಶ್ರಮವಿದೆ.ಸುಗಮ ಸಂಗೀತ ಗಾಯನ ಕಾರ್ಯಕ್ರಮಗಳಿಗಾಗಿ ಸಿಂಗಪೂರ್, ಇಂಗ್ಲೇಂಡ್ ಪ್ರವಾಸ ಮಾಡಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಬೆಂಗಳೂರು ರಾಜಾಜಿನಗರದಲ್ಲಿರುವ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷೆ, ಲಲಿತಕಲಾ ಅಕಾಡೆಮಿಯ ನಿರ್ದೇಶಕಿ, ರೆಡ್‌ಕ್ರಾಸ್ ಸಂಸ್ಥೆಯ ಸದಸ್ಯೆಯಾಗಿ ಸೇವೆ ಸಲ್ಲಿಸಿರುತ್ತಾರೆ. ಕಳೆದ ೪೦ ವರ್ಷಗಳಿಂದ ಸುಮಾರು ೩೦೦೦ಕ್ಕೂ ಮಿಕ್ಕಿ ಕಾರ್ಯಕ್ರಮ ನೀಡಿರುವ ದಾಖಲೆ ಇವರದ್ದು.

ಪ್ರಶಸ್ತಿ-ಸನ್ಮಾನ: ಐ.ಎನ್.ಸಿ.ಯಿಂದ ಬಂಗಾರದ ಪದಕ, ೧೯೫೬ರಲ್ಲಿ ಸ್ವೀಟ್ ವಾಯ್ಸ್‌ ಆಫ್ ಮೈಸೂರ್, ಕರ್ನಾಟಕ ಗಾನಕೋಗಿಲೆ, ೧೯೮೭-೮೮ಸಂಗೀತ ನೃತ್ಯ ಅಕಾಡೆಮಿ ಕರ್ನಾಟಕ ಕಲಾ ತಿಲಕ, ೧೯೯೪ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ೨೦೦೩ರಲ್ಲಿ ಸಂತಶಿಶುನಾಳ ಪ್ರಶಸ್ತಿ ೨೦೦೫ರಲ್ಲಿ ಕಾಳಿಂಗರಾವ್ ಪ್ರಶಸ್ತಿಗಳೇ ಅಲ್ಲದೆ ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನಿಸಲ್ಪಟ್ಟಿದ್ದಾರೆ.