ಪಲ್ಲವಿ : ಶ್ಯಾಮಸುಂದರ ಮದನಗೋಪ ರಾಧಾಗೋವಿಂದ-
ಶಂಖ ಚಕ್ರ ಪೀತಾಂಬರ ರಾಧಾಗೋವಿಂದ

ಚರಣ :  ಮಂಗಳಚರಿತ ಮೋಹನಾಂಗ ರಾಧಾ ಗೋವಿಂದ-
ಖಡ್ಗಹಸ್ತ ಭೂಷಣ ರಾಧಾಗೊವಿಂದ

ಸುಂದರಾಂಗ ಸೌಮ್ಯವದನ ರಾಧಾಗೋವಿಂದ-
ಚರಣಕಮಲ ಕೋಮಲ ರಾಧಾಗೋವಿಂದ

ದಮಶಮಾದಿ ದಾಯಕ ರಾಧಾ ಗೋವಿಂದ-
ಕ್ರಮಪದಗತಿ ಶೋಭಿತ ರಾಧಾ ಗೋವಿಂದ

ರಮಾರಮಣ ಶ್ರೀಕೃಷ್ಣ ರಾಧಾ ಗೋವಿಂದ-
ಪೀತವಸ್ತ್ರ ರಂಜಿತ ರಾಧಾಗೋವಿಂದ

ಮಲಹಾರಿ ಮನೋಹರ ರಾಧಾಗೋವಿಂದ-
ತಾಂಬೂಲಪೂರಿತ ಮುಖ ರಾಧಾಗೋವಿಂದ

ದಯಾಪೂರ‍್ಣಹೃದಯ ದೇವ ರಾಧಾ ಗೋವಿಂದ-
ಬಲರಾಮ ಸೋದರ ರಾಧಾ ಗೋವಿಂದ

ನವನೀತ ಚೋರ ಕೃಷ್ಣ ರಾಧಾ ಗೋವಿಂದ-
ರಮ್ಯದೇಹ ಶಾಂತಚಿತ್ತ ರಾಧಾ ಗೋವಿಂದ

ಗೋರಕ್ಷಕ ಗೋವರ‍್ಧನ ರಾಧಾ ಗೋವಿಂದ-
ರಾಕ್ಷಸ ವಿಧ್ವಂಸಕ ರಾಧಾ ಗೋವಿಂದ

ಪರಮಪುರುಷ ಸಚ್ಚಿದಾನಂದ ರಾಧಾ ಗೋವಿಂದ-
ಧಾರ‍್ಮಿಕಜನ ಜಯಕರ ರಾಧಾ ಗೋವಿಂದ