ಪರಿಚಯ

ಹಸುರಿನ ಚೆಲುವಿ  ಸಿರಿಯೆ
ಮಾವಿನ ತೋಪಿ ನ ಸಾಲೆ
ಸ್ವಾಗತ ತೋರಣ ಮಾಲೆ
ಇಲ್ಲಿಯ ಸೊಬಗ ನು ಸಾರಿ
ಕೋಗಿಲೆ ಕರೆವುದು  ಹಾಡಿ
ಬನ್ನಿರಿ ಚಿಣ್ಣರೆ ನೋಡಿ

ಶ್ರೀನಿವಾಸಪುರ ತಾಲೂಕು ಕೋಲಾರ ಜಿಲ್ಲೆಯಲ್ಲಿದೆ. ಶ್ರೀನಿವಾಸಪುರ ತಾಲೂಕು ಕೇಂದ್ರ. ಇದು ರಾಜಧಾನಿ ಬೆಂಗಳೂರಿನಿಂದ ಹೊಸಕೋಟೆ-ಕೋಲಾರ-ಮಾರ್ಗವಾಗಿ ಸುಮಾರು ೯೦ ಕಿಲೋಮೀಟರು ದೂರದಲ್ಲಿದೆ. ಹೊಸಕೋಟೆಚಿಂತಾ ಮಣಿ- ಮಾರ್ಗವಾಗಿ ಸುಮಾರು ೮೫ ಕಿಲೋಮೀಟರು ದೂರದಲ್ಲಿದೆ. ಈ ಎರಡು ಮಾರ್ಗಗಳೂ ಅನುಕೂಲಕರವಾಗಿವೆ. ಇದು ಗಡಿ ತಾಲೂಕುಗಳಲ್ಲಿ ಒಂದು. ಆಂಧ್ರದ ಮದನಪಲ್ಲಿ ಮತ್ತು ಪುಂಗನೂರು ತಾಲೂಕುಗಳು ಇದರ ನೆರೆಯಲ್ಲೇ ಇವೆ. ಇದು ದ್ವೈಭಾಷಿಕ (ಕನ್ನಡ, ತೆಲುಗು) ಪ್ರದೇಶ.

ಶ್ರೀನಿವಾಸಪುರದ ಹಿಂದಿನ ಹೆಸರು ಪಾಪನಪಲ್ಲಿ. ಮೈಸೂರು ಸಂಸ್ಥಾ ನದಲ್ಲಿ ದಿವಾನರಾಗಿದ್ದ ಶ್ರೀ ಪೂರ್ಣಯ್ಯನವರು ತಿರುಪತಿ ಯಾತ್ರೆ ಮುಗಿಸಿ ಬರುತ್ತ ಇಲ್ಲಿ ತಂಗಿದ್ದಾಗ ಅವರು ತಮ್ಮ ಮಗ ಶ್ರೀನಿವಾಸನ ನೆನಪಿಗಾಗಿ ಈ ಪಟ್ಟಣಕ್ಕೆ ‘ಶ್ರೀನಿವಾಸಪುರ’ವೆಂದು ಮರು ನಾಮಕರಣ ಮಾಡಿದರಂತೆ. ಅಂದಿನಿಂದ ಪಾಪನಪಲ್ಲಿ ‘ಶ್ರೀನಿವಾಸಪುರವೆಂದು ಹೆಸರಾಯಿತು.

ಶ್ರೀನಿವಾಸಪುರವೆಂದರೆ ಮಾವು ನೆನಪಿಗೆ ಬರುತ್ತದೆ. ಇಲ್ಲಿಯ ಮಾವು ಅತ್ಯಂತ ರುಚಿ. ಇದಕ್ಕೆ ಅಂತಾರಾಜ್ಯ ಮಾರುಕಟ್ಟೆ ಇದೆ. ಮೇ ಅಂತ್ಯದಿಂದ ಪ್ರಾರಂಭವಾಗಿ ಜುಲೈನಲ್ಲಿ ಅಂತ್ಯವಾಗುತ್ತದೆ. ಇದು ಮಾವಿನ ಮಡಿಲು ಎಂಬ ಖ್ಯಾತಿ ಗಳಿಸಿದೆ.

ಇದು ಹಿಂದಿನಿಂದಲೂ ಕನ್ನಡ ನಾಡಿನ ಭಾಗವಾಗಿ ಉಳಿದಿ ದೆ. ಬಹುಜನರ ಮಾತೃಭಾಷೆ ತೆಲುಗಾದರೂ ಎಲ್ಲರೂ ಕನ್ನಡಿಗರೆ. ಕೋಲಾರ ಜಿಲ್ಲೆ sಂμಂ ಸಾಮರಸ್ಯದಲ್ಲಿ ಮೊದಲನೆಯ ಸ್ಥಾನದಲ್ಲಿದೆ. ಅದರಂತೆ ಶ್ರೀನಿವಾಸಪುರವೂ ಇದೆ. ಇಪ್ಪತ್ತನೆಯ ಶತಮಾನದ ಮಧ್ಯ ಭಾಗದವರೆಗೆ ಇಲ್ಲಿ ರಚನೆಗೊಂಡ ಸಾಹಿತ್ಯದ sಂμಇ ತೆಲುಗು. ಇಂಥ ಕವಿಗಳಲ್ಲಿ ಮೊದಲನೆಯವನು ಕ್ರಿಸ್ತಶಕ ೧೭ನೇ ಶತಮಾನದಲ್ಲಿದ್ದ ತಾಡಿಗೋಲ್ನ ಪಾಲವೇಕರಿ ಕದಿರೀಪತಿ. ಇವನು ರಚಿಸಿದ ಚಂಪೂ ಕಾವ್ಯ ‘ಶುಕಸಪ್ತತಿ ಕಥಲು’ ಬಹಳ ಪ್ರಸಿದ್ಧವಾಗಿದೆ. ತೆಲುಗು ಸಾಹಿತ್ಯ ಚರಿತ್ರೆಯಲ್ಲಿ ಸ್ಥಾನಪಡೆದ ಕೋಲಾರ ಜಿಲ್ಲೆಯ ಏಕೈಕ ಕವಿ ಇವನೊಬ್ಬನೆ.

 

ಯರ‍್ರಕೊಂಡ :

ತಾಲ್ಲೂಕು ಕೇಂದ್ರದಿಂದ : ೨೦ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೪೪ ಕಿ.ಮೀ

ಯರ್ರಕೊಂಡ

ಯರ್ರಕೊಂಡ

ಕರ್ಣಾಟಕ-ಆಂಧ್ರದ ಗಡಿಯ ಬೆಟ್ಟ ಸಾಲಿನ ನಡುವೆ ಇರುವ ಓಲ್ದಾರ್ ಕೊಂಡದ ತಪ್ಪಲಿನ ಎತ್ತರವಾದ ವಿಶಾಲ ಗುಡ್ಡದ ಮೇಲೆ ಈ ದೇವಾಲಯ ನೆಲೆಗೊಂಡಿದೆ.

ಓಲ್ದಾರ್ ಗುಡಿ(ಓಹಿಲೇಶ್ವರ ದೇವಾಲಯ)

ಓಲ್ದಾರ್ ಗುಡಿ(ಓಹಿಲೇಶ್ವರ ದೇವಾಲಯ)

ತಾಲೂಕಿನ ಏಕೈಕ ಗಿರಿಧಾಮವೆಂದು ಹೇಳಬಹುದಾದ ಯರ‍್ರಕೊಂಡ ಶ್ರೀನಿವಾಸಪುರ ಮದನಪಲ್ಲಿ ರಸ್ತೆಯ ಸುಣ್ಣಕಲ್ಲು ಕ್ರಾಸಿನ ಸಮೀಪವಿದೆ. ನೂರಾರು ವರುಷಗಳಷ್ಟು ಹಳೆಯದಾದ ’ಜಾಲಾರಿ’ ಮರಗಳ ನಡುವೆ ಪ್ರಸಿದ್ಧ ದೇವತೆ ಗಂಗಮ್ಮನ ಗುಡಿ ಮೆರೆದಿದೆ. ಇದು ಬೆಟ್ಟ ತಪ್ಪಲಿನ ಪ್ರದೇಶವಾಗಿದ್ದು ರಮಣೀಯವಾಗಿದೆ. ಇಲ್ಲಿಗೆ ಸಮೀಪದಲ್ಲಿ ಮಲ್ಲಯ್ಯನ ಗುಡಿ ಇದೆ.

ಯರ‍್ರಕೊಂಡಕ್ಕೆ ಹೋಗಲು ಸುಣ್ಣಕಲ್ಲು ಕ್ರಾಸಿನಿಂದ ಎರಡು ಕಿಲೋಮೀಟರು ಉದ್ದದ ಮಣ್ಣಿನ ರಸ್ತೆಯನ್ನು ಮಾಡಲಾಗಿದೆ. ಇದು ರಕ್ಷಿತ ಕಾಡಿನ ನಡುವೆಯ ದಾರಿ. ಬೆಟ್ಟ ಹತ್ತಲು ಸುಲಭವಾಗುವಂತೆ ಅಲ್ಲಲ್ಲಿ ಕಲ್ಲುಚಪ್ಪಡಿಗಳನ್ನು ಹಾಸಿದೆ. ಪ್ರತಿವರ್ಷ ಜನವರಿ ಒಂದರಂದು ಇಲ್ಲಿ ಜಾತ್ರೆ ನಡೆಯುತ್ತದೆ. ಪ್ರವಾಸಿಗರಿಗೆ ನೀರಿನ ಸೌಕರ್ಯಕ್ಕಾಗಿ ಕೊಳವೆಬಾವಿ ಇದೆ.

 

ಗನಿಬಂಡ :

ತಾಲ್ಲೂಕು ಕೇಂದ್ರದಿಂದ : ೩೦ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೫೪ ಕಿ.ಮೀ

36_Kolar

ರಾಯಲಪಾಡು ಅಡ್ಡಗಲ್ಲು ಮಾರ್ಗದಲ್ಲಿದೆ. ಯರ‍್ರಂವಾರಿಪಲ್ಲಿಯ ಪಕ್ಕದಲ್ಲಿದೆ. ವಿಶಾಲವಾದ ಗುಡ್ಡದ ಮೇಲೆ ವಿಜಯನಗರ ಕಾಲದಲ್ಲಿ ನಿರ್ಮಾಣಗೊಂಡ ವೆಂಕಟರಮಣಸ್ವಾಮಿಯ ವಿಶಾಲ ದೇವಾಲಯವಿದೆ. ಇದು ದೇವರ ಪುಣ್ಯಕ್ಷೇತ್ರ. ಮಹಾದ್ವಾರ, ಮುಖಮಂಟಪವಿದ್ದು ಗರ್ಭಗುಡಿಯಲ್ಲಿ ೪ ಅಡಿಗಳ ಸುಂದರ ವೆಂಕಟರಮಣನ ವಿಗ್ರಹವಿದೆ. ಸ್ತಂಬಗಳ ಮೇಲೆ ರಾಮ, ನರಸಿಂಹಾವತಾರದ ಕೆತ್ತನೆಗಳಿವೆ. ಪಕ್ಕದಲ್ಲೆ ಪದ್ಮಾವತಿ ದೇವಿಯ ಗುಡಿ ಇದೆ. ಇಲ್ಲಿ ಕಲ್ಯಾಣ ಮಂಟಪವನ್ನು ತಿರುಮಲ ತಿರುಪತಿ ದೇವಾಲಯದ ವತಿಯಿಂದ ನಿರ್ಮಿಸಲಾಗಿದೆ. ಪ್ರವಾಸಿಗರಿಗೆ ತೊಂದರೆಯಾಗದಂತೆ ರಸ್ತೆಯನ್ನೂ ನಿರ್ಮಿಸಲಾಗಿದೆ.

 

ತಾಡಿಗೋಳ್ನ ಕೊರಕಲು

ತಾಲ್ಲೂಕು ಕೇಂದ್ರದಿಂದ : ೦೯ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೩೪ ಕಿ.ಮೀ

 

ತಾಡಿಗೋಳ್ನ ಕೊರಕಲು

ತಾಡಿಗೋಳ್ನ ಕೊರಕಲು

ಇದು ಮಳೆ ಮತ್ತು ನಿಸರ್ಗ ನಿರ್ಮಿತ ದೊಂಗರ(ಕೊರಕಲು). ಶ್ರೀನಿವಾಸಪುರ ಮದನಪಲ್ಲಿ ರಸ್ತೆಯಲ್ಲಿರುವ ಮೇಕಲಗಡ್ಡ ಹಾಗೂ ಕದಿರೋಳ್ಳಗಡ್ಡದ ನಡುವೆ ನೈಸರ್ಗಿಕವಾಗಿ ನಿರ್ಮಾಣಗೊಂಡಿದೆ. ಇದು ಬಿಳಿಮಣ್ಣಿನಿಂದ (ಸುದ್ದೆ) ಕೂಡಿದ್ದು, ಹೊಂಬಣ್ಣ ಬೆರಕೆಗೊಂಡಿದೆ.

ಮಳೆ ನೀರಿನ ಹರಿವು ಒಳ ದಿಬ್ಬಗಳ ನಿರ್ಮಾಣಕ್ಕೆ ಕಾರಣವಾಗಿದೆ. ಇದು ತಾಡಿಗೂ ಳ್ ಹಾಗು ಕೋಡಿಪಲ್ಲಿ ದೊಡ್ಡಕೆರೆಗೆ ನೀರು ಹರಿಸುವ ಜಲಾನಯನ ಪ್ರದೇಶವಾಗಿದೆ. ಇದರ ನಡುವೆ ಒಂದು ಚಿಕ್ಕ ಒಡ್ಡುನ್ನು (ಮಡು) ನಿರ್ಮಿಸಲಾಗಿದೆ. ಇಲ್ಲಿ ನೀರು ನಿಲ್ಲುತ್ತದೆಯಾದರು ಕೆನೆಮಣ್ಣು ಈ ನೀರನ್ನು ಭೂಮಿಗೆ ಇಂಗಿಸದು. ಹಾಗಾಗಿ ಬೇಸಗೆಯ ಕೆಲದಿನಗಳವರೆಗೆ ಒಂದಿಷ್ಟು ನೀರು ನಿಂತಿದ್ದು ಧೂಳು ಹಿಡಿದ ಕನ್ನಡಿಯಂತೆ ಕಾಣುತ್ತದೆ. ಈ ಕಣಿವೆಯನ್ನು ಕವಿ ಆರ್.ಚೌಡರೆಡ್ಡಿ ‘ಉತ್ತರ ಪಿನಾಕಿನಿ ಬರೆದ ದೃಶ್ಯಕಾವ್ಯ’ ಎಂದು ಬಣ್ಣಿಸಿದ್ದಾರೆ.

ಸುತ್ತ ಬಿಳಿ, ಹೊನ್ಚೆಲುವಿನ ಮಣ್ಣ ದಿಬ್ಬಗಳು, ಕೊರಕಲಿನ ತಳದಲ್ಲಿ ಮರಳು ಮಿಶ್ರಿತ ಬಿಳಿಮಣ್ಣಿನ ಹಾಸು, ಅಲ್ಲಲ್ಲಿ ಮಣ್ಣ ಕಿಂಡಿಗಳು, ಬೆಳೆದೂ ಬೆಳೆಯದ ಸರ್ವೆ(ಗಾಳಿ)ಮರಗಳು. ಬಯಲು ಸೀಮೆಯ ಸರಳ ನಿಸರ್ಗ ಸೌಂದರ್ಯದ ನೆಲೆಯಾಗಿದೆ ಈ ಕಣಿವೆ. ಸಂಜೆ ಮುಂಜಾಗೆ ಳಲ್ಲಿ ಇದರ ಚೆಲುವು ಮನೋರವಾಗಿ ರಂಜಿಸುತ್ತದೆ.