ಬದುಕಿದ್ದಾಗಲೇ ನಾಲ್ಕು ಜನದ ಹೆಗಲಿನ ಮೇಲೆ
ಹೊರಿಸಿಕೊಂಡು ಹೋಗುವ ಮಹಾಸ್ವಾಮಿಗಳೇ
ಕಾಲಲ್ಲಿ ನಡೆಯಬಾರದೇ?
ಕಾಲಲ್ಲಿ ನಡೆದು, ನಿಮ್ಮ ದೊಡ್ಡಸ್ತಿಕೆ ತೋರಿಸಿ
ಕಾಲಿಗೆ ಬೀಳಿಸಿಕೊಳ್ಳಬಾರದೇ ಶ್ರೀಪಾದರೇ-
ಯಾಕೆ ಇನ್ನೂ ಶತಮಾನಗಳ ಕೊಳೆತ ಕತ್ತಲೆಯ
ಪಲ್ಲಕ್ಕಿಯಲ್ಲೇ ಕೂತು ಝಗ ಝಗಿಸುವಾಸೆ ನಿಮಗೆ?
ಬುದ್ಧಿಯಿಲ್ಲದ ಮಂದೆ, ‘ಅಪ್ಪಣೆ ಬುದ್ಧಿ, ಹೌದು ಬುದ್ಧಿ,
ಇಲ್ಲ ಬುದ್ಧಿ’- ಅನ್ನುತ್ತ ನಿಮನ್ನು ಹೊತ್ತೇ ಬದುಕಬೇಕೆ?
ನೆಲದ ಮೇಲೆ ನಿಂತೇ ಮುಗಿಲೆತ್ತರಕ್ಕೆ ಬೆಳೆದರೆ
ಸ್ವಾಮಿ, ನಿಮ್ಮ ಶ್ರೀಪಾದಕ್ಕೆ ನಮೋ ನಮೋ.