ದೆಹಲಿಯಲ್ಲಿ ಹುಟ್ಟಿ ಮುಂಬೈನಲ್ಲಿ ವ್ಯಾಸಂಗ ಮಾಡಿ ಈಗ ಬೆಂಗಳೂರಿನಲ್ಲಿ ನೆಲೆಸಿರುವ ಅರುಂಧತಿ ನಾಗ್ ರಂಗಭೂಮಿಯಲ್ಲಿ ಕ್ರಿಯಾಶೀಲರು.
ಕೈಫಿ ಆಜ್ಞೆ, ಬಾಲ್ರಾಜ್ ಸಹಾನಿ, ಎಂ. ಎಸ್. ಸತ್ಯು, ಎ.ಕೆ. ಹಾನಗಲ್ ಅವರ ಹಿರಿತನವಿದ್ದ ‘ಇಪ್ಪಾ’ ರಂಗಶಾಲೆಯನ್ನು ಹದಿನಾರರ ಹರೆಯದಲ್ಲೇ ಸೇರಿಕೊಂಡ ಅರುಂಧತಿ ಮರಾಠಿ ಹಾಗೂ ಗುಜರಾತಿ ಹವ್ಯಾಸಿ ರಂಗಭೂಮಿಯಲ್ಲಿ ಪ್ರಸಿದ್ಧ ನಟಿ.
ನಟ ಶಂಕರ್ನಾಗ್ ಜೀವನ ಸಂಗಾತಿಯಾದ ಬಳಿಕ ಕರ್ನಾಟಕಕ್ಕೆ ಬಂದು ನೆಲೆಸಿದ ಅರುಂಧತಿ ಕನ್ನಡ ನಾಟಕಗಳಲ್ಲಿ ಅಭಿನಯಿಸಲಾರಂಭಿಸಿದರು.
ನಾಟಕ, ಚಲನಚಿತ್ರಗಳಲ್ಲಿ ಅಭಿನಯಿಸಿರುವ ಆರುಂಧತಿ ಕಿರುತೆರೆಯ ‘ಮಾಲ್ಗುಡಿ ಡೇಸ್’ ಧಾರಾವಾಹಿಗೆ ಶಂಕರ್ನಾಗ್ ಜೊತೆ ಹಿಂದಿ ಸಂಭಾಷಣೆ ರಚಿಸಿದರು.
ಶಂಕರ್ನಾಗ್ ನಿರ್ಮಿಸಿದ ಹಲವು ಕನ್ನಡ ಚಿತ್ರಗಳ ವಸ್ತ್ರಾಲಂಕಾರ ವ್ಯವಸ್ಥೆ ನೋಡಿಕೊಂಡ ಅರುಂಧತಿನಾಗ್ ‘ರಂಗಶಂಕರ’ದ ಹಿಂದಿನ ಶಕ್ತಿ.
Categories
ಶ್ರೀಮತಿ ಅರುಂಧತಿನಾಗ್
