ಕೇರಾಫ್ ಶ್ರೀ ಗುರುರಾಜ ಕುಲಕರ್ಣಿ
ಮನೆ ನಂ. ೨-೧-೪೧೫, ಬೀದಿ ನಂ. ೪,
ನಲ್ಲಕುಂಟ, ಓ.ಯು. ರೋಡ್
ಹೈದ್ರಾಬಾದ್ – ೫೦೦೦೪೪
ದೂರವಾಣಿ : ೦೪೦-೨೭೬೧೨೧೨೭
ಮೊಬೈಲ್ : ೦೯೮೪೯೬೬೫೭೧೬

ಅರವತ್ತೇಳರ ಪ್ರಾಯದ ಶ್ರೀಮತಿ ರಂಗೂಬಾಯಿ ಗೋಸಲರಾವ್ ಕುಲಕರ್ಣಿ, ರಾಯಚೂರು ಜಿಲ್ಲೆಯ ಗೋನವಾರದಲ್ಲಿ ಜನಿಸಿದರು.

ಬಾಲ್ಯದಿಂದಲೇ ಜಾನಪದ ಶೈಲಿಯ ಸಾಂಪ್ರದಾಯಿಕ ಹಾಡುಗಳಿಗೆ ಮನಸೋತು ಅದನ್ನೇ ಕರಗತ ಮಾಡಿಕೊಂಡು ಅದಕ್ಕೊಂದು ಹೊಸ ದಿಕ್ಕು ತೋರಿಸಿದರು.

ಸಾಂಪ್ರದಾಯಕ ಹಾಡುಗಳ ಧ್ವನಿ ಸುರುಳಿ ಬಿಡುಗಡೆ ಮಾಡಿರುವ ಅವರು ಮದುವೆ, ಪೂಜೆ, ಸಂಭ್ರಮ, ಸಡಗರಗಳ ಬಗ್ಗೆ ಕಂಠ ಪಾಠದ ಹಾಡುಗಳನ್ನು ರಸವತ್ತಾಗಿ ಹೇಳುತ್ತಾರೆ. ಲಂಡನ್ನಿನ ಕನ್ನಡ ಕೂಟದಲ್ಲೂ ಅವರು ತಮ್ಮ ಹಾಡುಗಳ ರಸದೂಟ ಬಡಿಸಿದ್ದಾರೆ.

ಇಂತಹ ಹಿರಿಯ ಕಲಾವಿದರಿಗೆ ಅಕಾಡೆಮಿ ಅಭಿನಂದಿಸಿ ಹರ್ಷಿಸಿದೆ.