ಹುಟ್ಟಿನಿಂದಲೇ ಕೇಳುವ ಭಾಗ್ಯದಿಂದ ವಂಚಿತಳಾಗಿದ್ದರೂ, ಬ್ಯಾಡ್ಮಿಂಟನ್ ಕ್ರೀಡೆಯ ಖ್ಯಾತಿಯ ಪ್ರತಿಭಾಶಾಲಿ ಕರ್ನಾಟಕದ ಹೆಮ್ಮೆಯ ಸುಪುತ್ರಿ ಶ್ರೀಮತಿ ರಂಜಿನಿ ರಾಮಾನುಜಂ.
ಕೇಳುವ ಶಕ್ತಿಯನ್ನು ಕಳೆದುಕೊಂಡ ಕ್ರೀಡಾಪಟುಗಳ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಶ್ರೀಮತಿ ರಂಜಿನಿ ಸತತ ಎರಡು ಬಾರಿಯೂ ಚಿನ್ನದ ಪದಕಗಳ ವಿಜೇತೆ, ”ಸೈಲೆಂಟ್ ಒಲಿಂಪಿಕ್ಸ್’ ಎಂಬ ಅಭಿದಾನದ ಅಂತರಾಷ್ಟ್ರೀಯ ತಂಡಗಳು ಭಾಗವಹಿಸಿದ ೧೮ನೆಯ ಜಾಗತಿಕ ಕ್ರೀಡಾಮೇಳದಲ್ಲಿ ಭಾರತವು ಚಿನ್ನದ ಪದಕದೊಂದಿಗೆ ಅದ್ಭುತ ವಿಜಯ ಸಂಪಾದಿಸಿದಾಗ, ತಂಡವನ್ನು ಪ್ರತಿನಿಧಿಸಿದವರು ಶ್ರೀಮತಿ ರಂಜಿನಿ.
ಸೈಲೆಂಟ್ ಒಲಿಂಪಿಕ್ಸ್‌ನ ಏಕವ್ಯಕ್ತಿ ನಡುವಿನ ಸ್ಪರ್ಧೆಯಲ್ಲಿ ಭಾರತಕ್ಕೆ ಮೊಟ್ಟಮೊದಲ ಪದಕ ತಂದಿತ್ತ ವಿಶ್ವದ ನಂ. ೨ನೇ ಆಟಗಾರ್ತಿ ಶ್ರೀಮತಿ ರಂಜಿನಿ.
2
ಇಟಲಿಯ ಬ್ರಿಕ್ಸನ್ ನಗರದಲ್ಲಿ ೧೯೯೮ರಲ್ಲಿ ನಡೆದ ಸ್ಪರ್ಧೆಯಲ್ಲಿ ಹಾಗೂ ತೈವಾನ್ ದೇಶದ ತೈಪೆಯಲ್ಲಿ ೨೦೦೦ದಲ್ಲಿ ನಡೆದ ಪಂದ್ಯಾವಳಿಯಲ್ಲಿ ಸಿಂಗಲ್ಸ್ ಮತ್ತು ಡಬ್ಬಲ್ಸ್ ಎರಡೂ ಪ್ರಶಸ್ತಿಯನ್ನು ಭಾರತಕ್ಕೆ ತಂದುಕೊಟ್ಟ ಕೀರ್ತಿವಂತೆ ಶ್ರೀಮತಿ ರಂಜಿನಿ. ಬ್ಯಾಡ್ಮಿಂಟನ್ ಕ್ರೀಡಾಲೋಕವನ್ನು ಪ್ರವೇಶಿಸಿದ ನಾಲ್ಕು ವರ್ಷಗಳ ಅನತಿ ಕಾಲದಲ್ಲಿಯೇ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ನಾಲ್ಕು ಚಿನ್ನ, ೪ ರಜತ, ಒಂದು ಕಂಚಿನ ಪದಕಗಳನ್ನು ಗೆದ್ದುಕೊಟ್ಟ ಭಾರತದ ಕ್ರೀಡಾ ಲೋಕದ ಉಜ್ವಲತಾರೆ ಶ್ರೀಮತಿ ರಂಜಿನಿ. ಅರ್ಜುನ ಪ್ರಶಸ್ತಿ ಏಕಲವ್ಯ ಪ್ರಶಸ್ತಿ ಪಡೆದ ಈ ಕ್ರೀಡಾಪಟು ಅಂಗವಿಕಲರ ಬಾಳಿನ ಆಶಾದೀಪ.