ಹಿಲ್ ರೋಡ್,
ಮಡಕೇರಿ,
ಕೊಡಗು ಜಿಲ್ಲೆ.
ಮೊಬೈಲ್ : ೯೪೪೯೩ ೩೪೪೧೫

ಕೊಡವ ಸಾಂಸ್ಕೃತಿಕ ಲೋಕದ ಹಿರಿಯ ನೃತ್ಯ ಕಲಾವಿದೆ ಶ್ರೀಮತಿ ರಾಣಿ ಮಾಚಯ್ಯ, ಮಡಿಕೇರಿಯವರಾಗಿದ್ದು, ತಮ್ಮ ಎಳೆ ವಯಸ್ಸಿನಲ್ಲೇ ಕೊಡವ ಸಂಸ್ಕೃತಿಯೆಡೆಗೆ ಆಕರ್ಷಿತರಾದವರು.

ಕೊಡಗು-ಮಡಿಕೇರಿಗಳಲ್ಲಿ ಜನಪ್ರಿಯ ನೃತ್ಯ ಪ್ರದರ್ಶನ ಹಾಗೂ ಜಾನಪದ ಕಲೆಯ ಸಂಕೇತವಾಗಿರುವ ‘ಉಮ್ಮತ್ತಾಟ್’ವನ್ನು ಅತ್ಯಂತ ಪ್ರಖ್ಯಾತಗೊಳಿಸುವಲ್ಲಿ ಹಗಲಿರುಳು ಶ್ರಮಿಸಿದವರು.

ವಿಷ್ಣು, ಮೋಹಿನಿ ರೂಪ ಧರಿಸಿ ಅಮೃತ ಹಂಚುವಾಗಿನ ನೃತ್ಯವೇ ಉಮ್ಮತ್ತಾಟ್ ಎಂದು ಪ್ರಸಿದ್ಧಿ ಪಡೆದಿದೆ. ನೆರೆ ರಾಜ್ಯಗಳಲ್ಲಿ ಈ ಕಲೆ ಪ್ರದರ್ಶಿಸಿರುವ ರಾಣಿ ಮಾಚಯ್ಯ ಕನ್ನಡ ನಾಡಿನ ಜಾನಪದ ಲೋಕಕ್ಕೆ ಉತ್ತಮ ಕೊಡುಗೆ ನೀಡಿದವರು.

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ತನ್ನ ಬೆಳ್ಳಿ ಹಬ್ಬದ ಪ್ರಯುಕ್ತ ಅವರನ್ನು ಗೌರವಿಸಿದೆ.