ಕೊಕಟನೂರು ಗ್ರಾಮ
ಅಥಣಿ ತಾಲೂಕು,
ಬೆಳಗಾವಿ ಜಿಲ್ಲೆ.
ಮೊಬೈಲ್ : ೯೮೮೦೬ ೪೩೭೦೮

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟೂರಿನಲ್ಲಿ ಶ್ರೀ ರೇಣುಕಾ ಚೌಡಕಿ ಪದದ ಕಲಾವಿದರ ತಂಡ ಕಟ್ಟಿಕೊಂಡು ರಾಜ್ಯದಲ್ಲಿ ಹೆಸರುವಾಸಿ ಯಾಗಿರುವ ಶ್ರೀಮತಿ ರಾಧಾಬಾಯಿ ಮಾದರ ಅತ್ಯುತ್ತಮ ಜಾನಪದ ಕಲಾವಿದೆ.

ಅಕ್ಷರ ವಿದ್ಯೆ ಒಲಿಯದಿದ್ದರೂ ಸರಸ್ವತಿಯನ್ನು ಆರಾಧಿಸಿ ಜಾನಪದ ಕಲೆಗಾರಿಕೆಯ ಸಿದ್ಧಿ ಪಡೆದುಕೊಂಡ ಅವರು ಚೌಡಕಿ ಪದಗಳಿಗೆ ಹೊಸ ರೂಪ ನೀಡಿದವರು.

ಆಕಾಶವಾಣಿ ಹಾಗೂ ಇನ್ನಿತರ ಪ್ರಚಾರ ಮಾಧ್ಯಮಗಳಲ್ಲಿ ತಮ್ಮ ಕಲೆ ಪ್ರದರ್ಶಿಸಿರುವ ಅವರು ನೆರೆ ರಾಜ್ಯದ ಹಾಗೂ ಕರ್ನಾಟಕದ ಹಲವಾರು ಹಬ್ಬ ಉತ್ಸವಗಳಿಗೆ ತಮ್ಮ ಹಾಡುಗಳಿಂದ ಮೆರಗು ತಂದವರು.

ಇಂತಹ ಜಾನಪದ ಕಲಾವಿದೆಗೆ ಅಕಾಡೆಮಿ ಬೆಳ್ಳಿ ಹಬ್ಬದ ಪ್ರಯುಕ್ತ ಸನ್ಮಾನಿಸುತ್ತದೆ.